ಶಕ್ತಿಶಾಲಿ ನರಸಿಂಹ ದೇವರ ವಿಗ್ರಹ ಮುಟ್ಟಿದರೆ ಮನುಷ್ಯನ ಚರ್ಮ ಮುಟ್ಟಿದ ರೀತಿ ಅನುಭವ ಆಗುತ್ತದೆ

ದೇವರು

ಮನುಷ್ಯನ ದೇಹದಂತೆ ಮುಟ್ಟಿದರೆ ಮೃದುವಾದ ದೇಹವನ್ನು ಹೊಂದಿರುವ ಲಕ್ಷ್ಮೀ ನರಸಿಂಹ ಸ್ವಾಮಿ. ನಮ್ಮ ಭಾರತ ದೇಶದಲ್ಲಿ ತುಂಬಾನೇ ದೇವಸ್ಥಾನಗಳಿವೆ ಅದರಲ್ಲಿ ಕೆಲವೊಂದು ದೇವಸ್ಥಾನಗಳು ಅಚ್ಚರಿ ಉಂಟು ಮಾಡುತ್ತವೆ ಇನ್ನು ಕೆಲವು ದೇವಸ್ಥಾನಗಳು ಅದ್ಭುತವಾದ ರಹಸ್ಯಗಳನ್ನು ಒಳಗೊಂಡಿರುತ್ತವೆ. ಅಂತಹ ದೇವಾಲಯಗಳಲ್ಲಿ ಈ ದೇವಾಲಯವು ಸಹ ಒಂದು ಈ ದೇವಾಲಯದ ಗರ್ಭ ಗುಡಿಯೊಳಗಡೆ ಇರುವ ಮೂರ್ತಿ ಒಂದು ಅಚ್ಚರಿಯನ್ನುಂಟು ಮಾಡುತ್ತದೆ ಅದೇನೆಂದರೆ ಆ ಗರ್ಭಗುಡಿಯಲ್ಲಿರುವ ದೇವಸ್ಥಾನದ ಮೂರ್ತಿಯನ್ನು ನಾವು ಮುಟ್ಟಿದರೆ ಅದು ಮೃದುವಾಗಿ ಇರುತ್ತದೆಯಂತೆ ನೀವು ಕೇಳುತ್ತಿರುವುದು ನಿಜ ಇಲ್ಲಿನ ಸ್ಥಳ ಪುರಾಣಗಳು ಹೇಳುವ ಪ್ರಕಾರ ಈ ದೇವಾಲಯ ಸಾವಿರಾರು ವರ್ಷಗಳ ಹಿಂದೆ ಸ್ಥಾಪನೆಯಾಯಿತು ಪ್ರತಿ ದೇವಾಲಯದಲ್ಲೂ ನಾವು ಒಂದು ಕಲ್ಲಿನಿಂದ ಕೆತ್ತಿದ ಮೂರ್ತಿಯನ್ನು ನೋಡುತ್ತೇವೆ ಆದರೆ ಆ ಮೂರ್ತಿ ಮುಟ್ಟಿದಾಗ ಗಟ್ಟಿಯಾಗೆ ಇರುತ್ತದೆ ಆದರೆ ಈ ದೇವಸ್ಥಾನದಲ್ಲಿ ಮೂರ್ತಿ ಮುಟ್ಟಿದರೆ ಮೃದುವಾಗಿ ಇರುತ್ತದೆ ಹೌದು ಇದು ಪ್ರತಿಯೊಬ್ಬರಲ್ಲೂ ಸಹ ಅಚ್ಚರಿಯನ್ನುಂಟು ಮಾಡುತ್ತದೆ.

ಹಾಗಾದರೆ ಈ ದೇವಾಲಯ ಎಲ್ಲಿದೆ ಈ ದೇವಾಲಯದ ವಿಶೇಷತೆಯಾದರು ಏನು ಎನ್ನುವುದರ ಬಗ್ಗೆ ನಾವು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ. ಈ ವಿಚಿತ್ರವಾದ ದೇವಾಲಯವು ತೆಲಂಗಾಣ ರಾಜ್ಯದ ವರಂಗಲ್ ಜಿಲ್ಲೆಯಲ್ಲಿನ ಮಂಗಲಪೇಟ ಮಂಡಲಮ್ ನಲ್ಲಿ ಮಲ್ಲೂರು ಗ್ರಾಮದ ಚಿಕ್ಕದಾದ ಗುಡ್ಡದ ಮೇಲೆ ಇದೆ ಇದೊಂದು ಮಹಮನ್ವಿತವಾದ ದೇವಾಲಯವಾಗಿದೆ ಇದನ್ನು ಶ್ರೀ ಹೇಮಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಅಂತ ಕರೆಯಲಾಗುತ್ತದೆ. ಅದ್ಭುತವಾದ ಬೆಟ್ಟಗಳ ಮಧ್ಯ ಸ್ವಾಮಿ ನೆಲೆಸಿದ್ದಾರೆ ಇದೊಂದು ಸ್ವಯಂಬು ಚರಿತ್ರೆಯನ್ನು ಹೊಂದಿರುವ ದೇವಾಲಯ ಅಂತ ಪ್ರಸಿದ್ಧಿಯನ್ನು ಪಡೆದಿದೆ. ನವ ನರಸಿಂಹಸ್ವಾಮಿ ಕ್ಷೇತ್ರಗಳಲ್ಲಿ ಇದು ಒಂದು ಅಂತ ಹೇಳಲಾಗುತ್ತದೆ. ಈ ಕ್ಷೇತ್ರವು ಅತ್ಯಂತ ಪ್ರಾಚೀನವಾದದ್ದು ಎಂದು ಹೇಳಲಾಗುತ್ತದೆ. ಸುಮಾರು 6 ಶತಮಾನಗಳಿಗಿಂತ ಹಳೆಯದಾದ ದೇವಾಲಯವೆಂದು ನಂಬಲಾಗಿದೆ. 12ನೆ ಶತಮಾನದಲ್ಲಿ ಕಾಕತಿಯ ರಾಜವಂಶಸ್ತರು ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು ಎಂದು ಇದನ್ನು 17 ನೆ ಶತಮಾನದಲ್ಲಿ ನವಾಬರು ಇಲ್ಲಿನ ಸ್ವಾಮಿಗೆ 150 ಕೆಜಿ ಚಿನ್ನದ ಕವಚವನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಈ ದೇವಾಲಯದ ಮೂಲ ವಿಗ್ರಹವು ಸುಮಾರು 9 ಅಡಿ ಎತ್ತರವಿದೆ. ಕಪ್ಪುಕಲ್ಲಿನ ವಿಗ್ರಹ ಇದಾಗಿದೆ ಇದರಲ್ಲಿ ಸ್ವಾಮಿಯ ಕತ್ತಿನ ಭಾಗ ಮಾತ್ರ ನರ ರೂಪದಲ್ಲಿ ಕಾಣಿಸುತ್ತದೆ. ತಲೆಭಾಗ ಮಾತ್ರ ಸಿಂಹದ ರೂಪದಲ್ಲಿ ಕಾಣಿಸುತ್ತದೆ. ಆದರೆ ಹೀಗೆ ಇರಲು ಕಾರಣವೇನೆಂದರೆ ಒಂದು ಕಾಲದಲ್ಲಿ ಹುತ್ತದಲ್ಲಿ ಇದ್ದ ಈ ಸ್ವಾಮಿಯನ್ನು ಭಕ್ತರು ತೆಗೆಯುವ ಸಮಯದಲ್ಲಿ ಸ್ವಲ್ಪ ಈ ಸ್ವಾಮಿಯ ಹಣೆಗೆ ಏಟಾಗಿ ಗಾಯವಾಯಿತಂತೆ ಹಾಗಾಗಿ ಇಂದಿಗೂ ಆ ಪ್ರದೇಶದಲ್ಲಿ ದೇವಾಲಯದ ಅರ್ಚಕರು ಆ ಸ್ಥಳದಲ್ಲಿ ಚಂದನವನ್ನು ಹಚ್ಚುತ್ತಾರೆ. ಹಾಗಾಗಿ ಈ ದೇವಾಲಯದ ವಿಗ್ರಹವು ಎಲ್ಲಿ ಮುಟ್ಟಿದರು ಕೂಡ ಕಲ್ಲನ್ನು ಮುಟ್ಟಿದ ಹಾಗೆ ಅನಿಸುವುದಿಲ್ಲ. ಮತ್ತೆ ಸಜೀವ ಮಾನವನ ಶರೀರವನ್ನು ಮುಟ್ಟಿದರೆ ಹೇಗೆ ಇರುತ್ತದೋ ಅಷ್ಟೇ ಮೃದುವಾಗಿ ಇರುತ್ತದೆಯಂತೆ. ದಕ್ಷಿಣ ಭಾರತ ದೇಶದಲ್ಲಿ ಇರೀತಿಯ ವಿಗ್ರಹವು ಎಲ್ಲಿಯೂ ಸಹ ಇಲ್ಲ ಹಾಗೆ ಎಳ್ಳು ಎಣ್ಣೆಯಿಂದ ಎಲ್ಲಿಯೂ ಸ್ವಾಮಿಗೆ ಅಭಿಷೇಕವನ್ನು ಮಾಡುವುದಿಲ್ಲ ಆದರೆ ಈ ದೇವಾಲಯದಲ್ಲಿ ಮಾತ್ರ ಸ್ವಾಮಿಗೆ ಎಳ್ಳೆಣ್ಣೆಯಿಂದ ಅಭಿಷೇಕವನ್ನು ಮಾಡುತ್ತಾರೆ

ಇದು ಇಲ್ಲಿನ ಮತ್ತೊಂದು ವಿಶೇಷ. ಈ ಪ್ರದೇಶವು ಅರ್ಧ ಚಂದ್ರಾಕೃತಿಯಲ್ಲಿ ಇರುತ್ತದೆ ಹಾಗಾಗಿ ಭರದ್ವಜ ಮಹರ್ಷಿಗಳು ಇದನ್ನು ಹೇಮಾಚಲಮ್ ಎಂಬ ಹೆಸರನ್ನು ಇಟ್ಟರು ಅಂತ ಸಾಕ್ಷಿಗಳು ಸಹ ಇವೆ. ಇಲ್ಲಿ ಚಿಂತಾಮಣಿ ಜಲಧಾರೆಗೆ ಇನ್ನೊಂದು ವಿಶೇಷ ಇದೆ ಇಲ್ಲಿನ ನೀರು ಮೂತ್ರಪಿಂಡ ವ್ಯಾದಿಗಳಿಗೆ ಸೊಂಟಕ್ಕೆ ಸಂಬಂದಿಸಿದ ವ್ಯಾದಿಗಳಿಗೆ ದಿವ್ಯ ಔಷಧಿ ಅಂತ ಹೇಳಲಾಗುತ್ತದೆ. ಇಲ್ಲಿನ ನೀರು ಸಲಕ ರೋಗಕ್ಕೆ ಔಷಧಿ ಅಂತ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಗುಡ್ಡದ ಮೇಲಿಂದ ಮರಗಳ ಮಧ್ಯ ಜಲಧಾರೆಯಾಗಿಸಿರುವ ಈ ನೀರು ಎಲ್ಲಿಂದ ಬರ್ತಾ ಇದೆ ಅಂತ ಇಂದಿನವರೆಗೂ ಯಾರಿಗೂ ಕಂಡುಹಿಡಿಯಲು ಆಗಿಲ್ಲ ಈ ವಿಧವಾಗಿ ಇಲ್ಲಿ ನೆಲಸಿರುವ ಶ್ರೀ ಹೇಮಾಚಲ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಯಾವುದೇ ಸಮಸ್ಯೆಗಳು ಇದ್ದರು ಒಂದೇ ಒಂದು ಕರೆ ಪರಿಹಾರ ನಿಶ್ಚಿತ 99453 39940 

Leave a Reply

Your email address will not be published.