ಜೇನು ಶುದ್ಧವೋ ಕಲಬೆರಕೆಯೋ ತಿಳಿಯಲು ಪರೀಕ್ಷೆ ಮಾಡುವುದು ಹೀಗೆ

ಮನೆ ಮದ್ದು

ಜೇನು ಶುದ್ದವೋ ಅಶುದ್ದವೋ ಎಂದು ತಿಳಿಯಲು ಈ ಪರೀಕ್ಷೆ ಮಾಡಿದ್ರೆ ಸಾಕು. ಅದೇನು ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಜೇನನ್ನು ಹಲವಾರು ರೀತಿಯಲ್ಲಿ ಕಲಬೆರಕೆ ಮಾಡಿ ಗ್ರಾಹಕರನ್ನು ಯಾಮಾರಿಸುತ್ತಾರೆ ವಿಶೇಷವಾಗಿ ಬೆಲ್ಲ ಅಥವಾ ಸಕ್ಕರೆ ಪಾಕವನ್ನು ಮಿಶ್ರಣವಾಗಿ ಅದಕ್ಕೆ ಒಂದು ಹತ್ತು ಪರ್ಸೆಂಟ್ ಅಷ್ಟು ಜೇನುತುಪ್ಪ ಬೆರೆಸಿ ಮಾರುತ್ತಾರೆ. ಇದರಲ್ಲಿ ಕೆಲವು ರಾಸಾಯನಿಕ ಕೂಡ ಮಿಕ್ಸ್ ಮಾಡುತ್ತಾರೆ ಎಂದು ಕೂಡ ಹೇಳುತ್ತಾರೆ ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಜೇನು ಸೇರಿಸುವ ಮುನ್ನ ಅದು ಶುದ್ಧ ಅಥವಾ ಕಲಬೆರಕೆ ಆಗಿದೆಯೋ ಎಂದು ಪರೀಕ್ಷೆ ಮಾಡುವುದು ಉತ್ತಮ. ನಿಮ್ಮಲ್ಲಿರುವ ಜೇನಿನ ಒಂದು ಹನಿಯನ್ನೂ ಒಂದು ಖಾಲಿ ಕಾಗದದ ಮೇಲೆ ಹಾಕಿ ಒಂದು ವೇಳೆ ಈ ಕಾಗದ ನಿಮ್ಮ ಜೇನಿನ ಹನಿಯನ್ನೂ ಹೀರಿಕೊಂಡು ಒದ್ದೆಯಾದರೆ ನಿಮ್ಮ ಜೇನು ಶುದ್ಧವಲ್ಲ ಎಂದು ತಿಳಿಯಿರಿ.

ನಿಮ್ಮಲ್ಲಿರುವ ಜೇನಿನ ಒಂದು ಹನಿಯನ್ನೂ ಸ್ವಲ್ಪ ಧೂಳು ಇಲ್ಲದ ಮರಳಿನ ಮೇಲೆ ಹಾಕಿರಿ ಧೂಳು ಇಲ್ಲದ ಮರಳು ಎಂದರೆ ಸಮುದ್ರದ ಬದಿಯಲ್ಲಿ ಸಿಗುವ ಶುದ್ಧವಾದ ಮರಳು. ಒಂದು ವೇಳೆ ನಿಮ್ಮ ಜೇನಿನ ಹಾನಿ ಮರಳಿನಲ್ಲಿ ಮಿಕ್ಸ್ ಆದ್ರೆ ನಿಮ್ಮ ಜೇನು ಅಶುದ್ಧ ಎಂದು ಲೆಕ್ಕ. ಏಕೆಂದರೆ ಶುದ್ಧ ಜೇನು ಯಾವುದೇ ವಸ್ತುವಿನ ಜೊತೆ ಮಿಕ್ಸ್ ಆಗುವುದಿಲ್ಲ ನೀವು ಕೋಲಿನಿಂದ ಮಿಕ್ಸ್ ಮಾಡಲು ಪ್ರಯತ್ನಿಸಿದರೆ ಮಾತ್ರ ಅದು ಚಂಡು ರೂಪದಲ್ಲಿ ಮುದ್ದೆ ಆಗಬಹುದು ಅಷ್ಟೆ. ಇನ್ನೊಂದು ವಿಧಾನ ಎಂದರೆ ಒಂದು ಗ್ಲಾಸ್ ನೀರಿನಲ್ಲಿ ಸ್ವಲ್ಪ ಜೇನನ್ನು ಹಾಕಿ ನೋಡಿ ನಿಮ್ಮ ಜೇನು ಯಾವುದೇ ಪ್ರಯಾಸ ಇಲ್ಲದೆ ಸಕ್ಕರೆ ನೀರಲ್ಲಿ ಮಿಕ್ಸ್ ಆಗುವ ಹಾಗೆ ಮಿಕ್ಸ್ ಆದ್ರೆ ನಿಮ್ಮ ಜೇನು ಅಶುದ್ಧ ಎಂದು ಅರ್ಥ. ಏಕೆಂದರೆ ಶುದ್ಧ ಜೇನು ಅಷ್ಟು ಸುಲಭವಾಗಿ ನೀರಿನಲ್ಲಿ ಮಿಕ್ಸ್ ಆಗುವುದಿಲ್ಲ ಒಂದು ವೇಳೆ ನೀವು ಒಂದು ಎರಡು ನಿಮಿಷ ಚೆನ್ನಾಗಿ ಕಲೆಸಿದ ನಂತರ ಮಿಕ್ಸ್ ಆದರೂ ಕೂಡ ಅದು ನೀವು ಸ್ವಲ್ಪ ಸಮಯ ಬಿಟ್ಟು ನೋಡುವಾಗ ತಳದಲ್ಲಿ ಹೂರಿರುತ್ತದೆ.

ನೀರಿನ ಸಾಂದ್ರತೆ ಗಿಂತ ಜೇನಿನ ಸಾಂದ್ರತೆ ಹೆಚ್ಚು ಒಂದು ಬೆಂಕಿ ಕಡ್ಡಿ ಗೀರಿ ಜೇನಿನಲ್ಲಿ ಮುಳುಗಿಸಿ ನೋಡಿ ಈ ಬೆಂಕಿ ಕಡ್ಡಿ ಎರಡು ಸೆಕೆಂಡ್ ಅಷ್ಟು ಸಮಯ ಪ್ರಕಾರಮಾನವಾಗಿ ಉರಿದರೆ ನಿಮ್ಮ ಜೇನು ಶುದ್ಧ ಎಂದು ತಿಳಿದುಕೊಳ್ಳಿ ಇಲ್ಲ ನೀವೂ ಮುಳುಗಿಸಿದ ಕೂಡಲೇ ಬೆಂಕಿ ಕಡ್ಡಿ ಟುಸ್ ಆಯಿತು ಎಂದರೆ ನಿಮ್ಮ ಜೇನು ಕಲಬೆರಕೆ ಆಗಿದೆ ಎಂದು ಅರ್ಥ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ ಅವರಿಗೂ ಸಹಾ ಪರಿಶೀಲಿಸಲು ಹೇಳಿರಿ. ಇಂತಹ ಹಲವು ಉಪಯುಕ್ತ ಮಾಹಿತಿಗಾಗಿ ಈ ಪೇಜ್ ತಪ್ಪದೆ ಎಲ್ಲರಿಗೂ ಶೇರ್ ಮಾಡಿರಿ.

Leave a Reply

Your email address will not be published.