ಪಾರ್ಲೆಜ್ ಬಿಸ್ಕೆಟ್ ಬಗ್ಗೆ ನಿಮಗೆ ತಿಳಿಯದ ಮಾಹಿತಿ

ಇತರೆ ಸುದ್ದಿ

ಈ ಬಿಸ್ಕೆಟ್ ಸ್ವಾತಂತ್ರ್ಯ ಪೂರ್ವದಿಂದಲೇ ಭಾರತ ದೇಶದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಪ್ರಿಯ ಓದುಗರೇ ನಮ್ಮ ಭಾರತ ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪಾರ್ಲೇಜಿ ಬಿಸ್ಕೆಟ್ ನ ರುಚಿಯನ್ನು ಸವಿದೆ ಇರುವವರನ್ನು ಹುಡುಕುವುದು ತುಂಬಾ ಕಷ್ಟ ಏಕೆಂದರೆ ಪ್ರತಿ ಮನೆಗೂ ಆವರಿಸಿದೆ ಈ ಒಂದು ಬಿಸ್ಕೆಟ್ ಈಗಲೂ ಸಹ ಈ ಬೇರೆ ಬೇರೆ ಬಗೆಯ ಹಲವಾರು ಬಿಸ್ಕೆಟ್ ಗಳು ನಮಗೆ ಲಭ್ಯವಿದ್ದರು ಸಹ ಈಗಲೂ ಪಾರ್ಲೇಜಿ ಬಿಟ್ರೆ ಬೇರೆ ಬಿಸ್ಕೆಟ್ ನಾವು ತಿನ್ನುವುದೇ ಇಲ್ಲ ಎನ್ನುವ ಜನರನ್ನು ಸಹ ನಾವು ನೋಡಿದ್ದೇವೆ. ಕೆಲವರಿಗೆ ಪ್ರತಿದಿನ ಕಾಫಿ ಚಹಾದ ಜೊತೆ ಈ ಒಂದು ಬಿಸ್ಕೆಟ್ ಇರಲೇಬೇಕು ಪ್ರಪಂಚದಾದ್ಯಂತ ಎಲ್ಲರನ್ನು ಆವರಿಸಿರುವ ಈ ಬಿಸ್ಕೆಟ್ ನ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು ಈ ಪಾರ್ಲೇಜಿ ಬಿಸ್ಕೆಟ್ ನಿನ್ನೆ ಮೊನ್ನೆಯದಲ್ಲ ನಮ್ಮ ದೇಶಕ್ಕೆ ಸ್ವಾತಂತ್ಯ ಸಿಗುವುದಕ್ಕಿಂತ ಮುಂಚೆನೇ ಇದು ನಮ್ಮ ದೇಶದಲ್ಲಿ ಉತ್ಪತ್ತಿ ಆಗುತ್ತಿದೆ. 1929 ರಲ್ಲಿ ನರೊತ್ತ ಮೋಹನ್ ಲಾಲ್ ಚೌಹಾಣ್ ಎಂಬುವರು ಪಾರ್ಲೇಜಿ ಬಿಸ್ಕೆಟ್ ನ್ನು ತಯಾರು ಮಾಡಲು ಶುರು ಮಾಡಿದರು

ಅದಕ್ಕೂ ಮುಂಚೆ ಇವರು ಕ್ಯಾಂಡಿ ತಯಾರು ಮಾಡುತ್ತಿದ್ದರು ಆ ಒಂದು ವ್ಯವಹಾರವು ಕೂಡ ತುಂಬಾ ಜೋರಾಗೆ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ಅಂದ್ರೆ 1929 ನಲ್ಲೆ ಸುಮಾರು ಒಂದು ವರ್ಷಕ್ಕೆ 60000 ರೂಪಾಯಿ ಅವರ ವ್ಯಾಪಾರದ ವಹಿವಾಟು ನಡೆಯುತ್ತ ಇತ್ತು. ಆದರೆ ಬರಬರುತ್ತ ಅದನ್ನು ತಯಾರು ಮಾಡಲು ಬೇಕಾದಂತ ಸಾಮಗ್ರಿಗಳ ಬೆಲೆ ಹೆಚ್ಚಾದಾಗ ಅದರಲ್ಲಿ ನಷ್ಟವನ್ನು ಅವರು ನೋಡಬೇಕಾಯಿತು. ಆಗ ತಾನೇ ಶುರುಮಾಡಿದ ಈ ಪಾರ್ಲೇಜಿ ಬಿಸ್ಕೆಟ್ ಸುಮಾರು 4 ರಿಂದ 5 ಸಾವಿರ ರೂಪಾಯಿ ಲಾಭ ಮಾಡುತ್ತದೆ. ಮೊದಲು ಆ ಕಂಪನಿಯನ್ನು ಮಾರಲು ನಿರ್ಧಾರ ಮಾಡಿದ ಅವರು ಈ ಬಿಸ್ಕೆಟ್ ನಿಂದ ಆದ ಲಾಭ ನೋಡಿ ಅದನ್ನು ಮಾರುವ ನಿರ್ಧಾರವನ್ನು ಕೈ ಬಿಟ್ಟರು ಆಗ ಜನರಿಗೆ ಈ ಬಿಸ್ಕೆಟ್ ಅವಶ್ಯಕತೆ ಎಷ್ಟಿದೆ ಎನ್ನುವುದು ಗೊತ್ತಾಗುತ್ತೆ. ಆಗ ಹುಟ್ಟಿದ್ದೇ ಈ ಪಾರ್ಲೇಜಿ ಬಿಸ್ಕೆಟ್. ನಂತರ ನರೊತ್ತ ಮೋಹನ್ ಲಾಲ್ ರವರು ಇಂಗ್ಲೆಂಡ್ ಗೆ ಹೋಗಿ ಅಲ್ಲಿ ಬಿಸ್ಕೆಟ್ ನ್ನು ಯಾವ ರೀತಿ ತಯಾರುಮಾಡುವುದು ಹೇಗೆ ಏನು ಎಂದು ಅದರ ಬಗ್ಗೆ ಸರಿಯಾಗಿ ತಿಳಿದು ಅಧ್ಯಯನ ಮಾಡಿ ಅದಕ್ಕೆ ಬೇಕಾದ ಯಂತ್ರಗಳನ್ನು ತೆಗೆದುಕೊಂಡು ಭಾರತಕ್ಕೆ ಬಂದರು ಕಡಿಮೆ ಬೆಲೆಗೆ ತುಂಬಾ ಒಳ್ಳೆಯ ರುಚಿಯನ್ನು ಕೊಡುವ ಈ ಒಂದು ಬಿಸ್ಕೆಟ್ ದಿನಗಳು ಕಳೆದಂತೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತದೆ ಮೊದಲು ಈ ಬಿಸ್ಕೆಟ್ ನ ಹೆಸರು ಪಾರ್ಲೆಗ್ಲುಕೋ ಅಂತ ಇತ್ತು ನಂತರ 1980 ರಲ್ಲಿ ಆ ಹೆಸರನ್ನು ಪಾರ್ಲೇಜಿ ಅಂತ ಬದಲಾಯಿಸಲಾಯಿತು.

ಅಂದರೆ ಜಿ ಅಂದರೆ ಮೊದಲು ಗ್ಲುಕೋಸ್ ಅಂತ ಅರ್ಥ ಇತ್ತು ನಂತರ ಅದನ್ನು ಪಾರ್ಲೇಜಿ ಅಂತ ಹೆಸರಿಟ್ಟ ಮೇಲೆ ಆ ಜಿ ನಾ ಜಿನಿಯಸ್ ಅಂತ ಹೆಸರನ್ನು ಬದಲಾಯಿಸಲಾಯಿತು. ಮತ್ತು ಅವರು ಈ ಒಂದು ಪ್ಯಾಕ್ಟರಿಯನ್ನು ಶುರುಮಾಡಿದಾಗ ಅದಕ್ಕೆ ಹಾಕಿದ ಬಂಡವಾಳ ಸುಮಾರು 2 ಲಕ್ಷ ರೂಪಾಯಿ ಆದರೆ ಇವತ್ತು ಆ ಒಂದು ಬಿಸ್ಕೆಟ್ ಪಾಕ್ಟರಿ 5000 ಕೋಟಿಗೆ ಬೆಲೆಬಾಳುತ್ತದೆ. 1 ದಿನಕ್ಕೆ ಸುಮಾರು 450 ಮಿಲಿಯನ್ ಪಾರ್ಲೇಜಿ ಬಿಸ್ಕೆಟ್ ತಯಾರಾಗುತ್ತವೆ ಎಂದರೆ ಅದರ ಪ್ರಶಿದ್ದಿ ನೀವೇ ನೋಡಿ. ಈ ಒಂದು ಬಿಸ್ಕೆಟ್ ಗೆ ಪೈಪೋಟಿಯಾಗಿ ನೂರಾರು ವಿದೇಶಿ ಕಂಪನಿಗಳು ಹುಟ್ಟಿಕೊಂಡವು ಆದರೆ ಪಾರ್ಲೇಜಿ ಬಿಸ್ಕೆಟ್ ತರ ಯಾವುವು ಬರಲಿಲ್ಲ ಮತ್ತೆ ಪಾರ್ಲೇಜಿ ಬಿಸ್ಕೆಟ್ ನ್ನು ನಾವು ಹೇಗೆ ಕಂಡುಹಿಡಿಯುತ್ತೇವೆ ಎಂದರೆ ಬಿಸ್ಕೆಟ್ ಪ್ಯಾಕಿನ ಮೇಲಿರುವ ಆ ಹುಡುಗಿಯ ಚಿತ್ರ ಹಾಗೇನೇ ಕೆಲವು ತಿಂಗಳುಗಳ ಹಿಂದೆ ಪಾರ್ಲೇಜಿ ಬಿಸ್ಕೆಟ್ ಪ್ಯಾಕ್ ಮೇಲಿರುವ ಹುಡುಗಿ ಯಾರು ಗೊತ್ತಾ ಅಂತ ಬೇರೆ ಯಾರದೋ ಫೋಟೋ ಹಾಕಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು ಆದರೆ ಸತ್ಯ ಏನಪ್ಪ ಅಂದರೆ 1960 ರಲ್ಲಿ ಒಬ್ಬ ಚಿತ್ರ

ಕಲಾವಿದ ಆ ಕಂಪೆನಿಗಾಗಿ ಬಿಡಿಸಿದ ಚಿತ್ರ ಹಾಗಾಗಿ ಇದು ಒಬ್ಬ ಚಿತ್ರ ಕಲಾವಿದನ ಕೈಯಲ್ಲಿ ಮೂಡಿಬಂದ ಚಿತ್ರವೇ ಹೊರತು ಬೇರೆ ಯಾರದೋ ಫೋಟೋ ಅಲ್ಲ ಮತ್ತೆ 2003 ರಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಮಾರಾಟವಾದ ಬಿಸ್ಕೆಟ್ ಎನ್ನುವ ಹೆಸರಿಗೆ ಇದು ಸೇರಿತ್ತು ಇವತ್ತಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬಿಸ್ಕೆಟ್ ಗಳಲ್ಲಿ ಪಾರ್ಲೇಜಿ ಕೂಡ ಅಗ್ರ ಸ್ಥಾನದಲ್ಲಿದೆ ಈ ಪಾರ್ಲೇಜಿ ಯಲ್ಲಿ 5 ರೂಪಾಯಿಯಿಂದ ಸುಮಾರು 100 ರೂಪಾಯಿವರೆಗೂ ವಿಧವಿಧದ ಪ್ಯಾಕೆಟ್ ಗಳಲ್ಲಿ ಬಿಸ್ಕೆಟ್ ಸಿಗುತ್ತದೆ ಅತಿ ಹೆಚ್ಚಾಗಿ ಖರ್ಚಾಗುವ ಬಿಸ್ಕೆಟ್ ಎಂದರೆ 5 ರೂಪಾಯಿಯ ಪ್ಯಾಕೆಟ್ ಇರಿತಿಯಾಗಿ ಸ್ವಾತಂತ್ರ್ಯ ಪೂರ್ವದಿಂದ ಇವತ್ತಿನವರೆಗೂ ಕೂಡ ತನ್ನ ನಾಗಾಲೋಟವನ್ನು ನಿಲ್ಲಿಸದೆ ಮುನ್ನುಗ್ಗುವ ಒಂದು ಬಿಸ್ಕೆಟ್ ಪಾರ್ಲೇಜಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave a Reply

Your email address will not be published.