ಇಂತಹ ಮನೆಮದ್ದನ್ನು ಮಾಡುವುದರಿಂದ ಗಜಕರ್ಣದ ಜೊತೆಗೆ ಅದರ ಕಲೆಯು ಸಹ ಉಳಿಯುವುದಿಲ್ಲ. ನಮಸ್ಕಾರ ಸ್ನೇಹಿತರೆ ಮನುಷ್ಯನ ಮೈ ಮೇಲೆ ಏನೇ ಒಂದು ಸಣ್ಣ ಗುಳ್ಳೆಯಾದರು ಸಹ ಅದು ಒಡೆದು ಪೂರ್ತಿಯಾಗಿ ವಾಸಿಯಾದ ಮೇಲು ಸಹ ಅದರ ಕಲೆ ಹಾಗೇನೇ ಉಳಿದಿರುತ್ತದೆ. ಅದಕ್ಕೆ ಏನೇ ಮಾಡಿದರೂ ಸಹ ಗಾಯ ವಾಸಿಯಾದರು ಸಹ ಆ ಗಾಯದ ಕಲೆ ಮಾತ್ರ ಹಾಗೆ ಇರುತ್ತದೆ ಅದಕ್ಕೆ ಹಿರಿಯರು ಒಂದು ಮಾತನ್ನು ಹೇಳಿದ್ದಾರೆ ಹುಣ್ಣು ಮಾಸಿದರು ಹುಣ್ಣಿನ ಕಲೆ ಮಾತ್ರ ಮಾಸುವುದಿಲ್ಲ ಎಂದು ಆದ್ದರಿಂದ ಈ ಒಂದು ಲೇಖನದಲ್ಲಿ ಗಜಕರ್ಣ ಮತ್ತು ಅದರ ಕಲೆಯನ್ನು ಹೇಗೆ ವಾಸಿಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಯೋಣ. ಈಗ ನಾವು ತಿಳಿಸುವಂತಹ ವಿಷಯ ಹುಳುಕಡ್ಡಿ ಅಥವಾ ಗಜಕರ್ಣ ಹಾಗೂ ಅದರಿಂದಾದ ಕಲೆ ವಾಸಿಯಾಗಲು ಏನು ಮಾಡಬೇಕು ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.
ಗಜಕರ್ಣ ಅಂದರೆ ಹುಳುಕಡ್ಡಿ ಇದು ಕೆಲವರಿಗೆ ಕೈಯಲ್ಲಿ ಕುತ್ತಿಗೆಯಲ್ಲಿ ಹಾಗೆ ದೇಹದ ಹಲವು ಕಡೆ ಕಾಣಿಸುತ್ತದೆ ಇದನ್ನು ಪ್ರಾರಂಭದಲ್ಲೆ ವಾಸಿಮಾಡಿಕೊಳ್ಳಬೇಕು ಇಲ್ಲವಾದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೇಗನೆ ಹರಡುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಮನೆಮದ್ದು ಇಲ್ಲಿದೆ ನೋಡಿ. ಈ ಹುಳುಕಡ್ಡಿ ಸ್ವಲ್ಪವಿದ್ದರೆ ಅದಕ್ಕೆ ಬೆಳ್ಳುಳ್ಳಿ ರಸವನ್ನು ಹತ್ತಿಯಿಂದ ಅದರ ಮೇಲೆ ಹಚ್ಚಬೇಕು ನಂತರ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಇದನ್ನು ದಿನಕ್ಕೆ 4 ರಿಂದ 5 ಬಾರಿ ಮಾಡಿದರೆ ಬೇಗ ಹುಳುಕಡ್ಡಿ ವಾಸಿಯಾಗುತ್ತದೆ. ಅದೇರೀತಿ ಅದಕ್ಕೆ ಅರಿಷಿಣವನ್ನು ಕೂಡ ಹಚ್ಚಬಹುದು ಆದ್ರೆ ಉತ್ತಮ ಗುಣ ಮಟ್ಟದ ಶುದ್ದ ಅರಿಶಿನ ಬಳಕೆ ಕಡ್ಡಾಯ. ಹುಳುಕಡ್ಡಿ ಜಾಸ್ತಿ ಆಗಿದ್ದರೆ ಅದಕ್ಕೆ ಬೇವಿನ ಸೊಪ್ಪಿನ ಪೇಸ್ಟನ್ನು ಒಂದು ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಅರಿಷಿಣ ಮತ್ತು ತುಳಸಿ ಪೇಸ್ಟನ್ನು ಒಂದು ಚಮಚ ತೆಗೆದುಕೊಂಡು ಹುಳುಕಡ್ಡಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಇದನ್ನು ಒಂದು ದಿನಕ್ಕೆ 3 ರಿಂದ 4 ಬಾರಿ ಮಾಡಿದರೆ ಜಾಸ್ತಿ ಆಗಿರುವಂತಹ ನಿಮ್ಮ ಮೈಮೇಲಿನ ಹುಳುಕಡ್ಡಿ ಬೇಗನೆ ಕಡಿಮೆಯಾಗುತ್ತದೆ. ಅಲ್ಲದೆ ಈ ಒಂದು ಪೇಸ್ಟನ್ನು ಹಚ್ಚುವುದರಿಂದ ಆ ಹುಳುಕಡ್ಡಿಯ ಕಲೆ ಕೂಡ ಉಳಿಯುವುದಿಲ್ಲ. ಒಂದು ವೇಳೆ ನಿಮಗೆ ಆದಂತಹ ಹುಳುಕಡ್ಡಿ ವಾಸಿಯಾಗಿ ಅದರ ಕಲೆಯೇನಾದರು ಹಾಗೆ ಉಳಿದಿದ್ದರೆ ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಗೂ ಒಂದು ಸಣ್ಣ ಚಮಚ ಕರ್ಪುರ ಇವೆರಡನ್ನು ಚನ್ನಾಗಿ ಸೇರಿಸಿ ಹುಳುಕಡ್ಡಿ ಕಲೆಯಾದ ಜಾಗದಲ್ಲಿ ಹಚ್ಚಿ ನಂತರ ಅರ್ಧಗಂಟೆ ಬಿಟ್ಟು ಮತ್ತೆ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಇದನ್ನು ದಿನಕ್ಕೆ 3 ರಿಂದ 4 ಬಾರಿ ಮಾಡಿದರೆ ಕಲೆ ಉಳಿಯುವುದಿಲ್ಲ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಲು ಮರೆಯದಿರಿ