ಅಡುಗೆಗೆ ಬಳಸುವ ದನಿಯಾದಲ್ಲಿದೆ ನಮ್ಮ ಆರೋಗ್ಯವನ್ನು ವೃದ್ಧಿಸುವ ಶಕ್ತಿ. ದನಿಯಾ ಕಾಳುಗಳು ಅಥವಾ ದನಿಯಾ ಪುಡಿಯನ್ನು ನಾವು ಅಡುಗೆ ಮಾಡುವಾಗ ಅಡುಗೆಯ ರುಚಿ ಹೆಚ್ಚಿಸಲು ಒಂದು ಮಸಾಲ ಪಧಾರ್ಥವಾಗಿ ಅಷ್ಟೇ ಬಳಸುತ್ತೇವೆ ಆದರೆ ಈ ದನಿಯಾ ಕೇವಲ ಅಡುಗೆಗೆ ಮಾತ್ರ ಸೀಮಿತವಾಗಿರದೆ ತನ್ನಲ್ಲಿ ಇನ್ನು ಅನೇಕ ಔಷಧಿಯ ಗುಣಗಳನ್ನು ಸಹ ಹೊಂದಿದೆ. ನಮ್ಮ ನಿಮ್ಮ ಮನೆಯಲ್ಲಿದ್ದ ಹಿರಿಯರು ಇದನ್ನು ಸರಿಯಾದ ರೀತೀಯಲ್ಲಿ ಬಳಕೆ ಮಾಡುತ್ತಾ ಇದಿದ್ದು ನಮಗೂ ನಿಮಗೆ ನೆನಪಿದೆ. ಹಾಗಾದ್ರೆ ಧನಿಯ ಬಳಕೆ ಮಾಡಿಕೊಂಡು ನಮ್ಮ ಯಾವೆಲ್ಲ ಖಾಯಿಲೆಗಳು ಗುಣ ಮಾಡಿಕೊಳ್ಳಬಹುದು ,ಅದರಿಂದ ಎಷ್ಟೆಲ್ಲಾ ಆಭ ಪಡೆಯಬಹುದು ಎಂಬುದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮಸಾಲೆ ಪಧಾರ್ಥಗಳಲ್ಲಿ ಬಹು ಮುಖ್ಯವಾದ ದನಿಯಾ ಅಥವಾ ಕೊತ್ತಂಬರಿ ಬೀಜದಲ್ಲಿ ಆರೋಗ್ಯ ವೃದ್ಧಿಸುವ ಅಂಶಗಳು ಬಹಳವೇ ಇವೆ ಕೊತ್ತಂಬರಿ ಸೊಪ್ಪನ್ನು ನಾವು ದಿನನಿತ್ಯ ಅಡುಗೆಯಲ್ಲಿ ಬಳಕೆ ಮಾಡುತ್ತೇವೆ ಕೊತ್ತಂಬರಿ ಬೀಜವು ಆಹಾರದಲ್ಲಿ ರುಚಿ ಹೆಚ್ಚಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರ ಲಾಭಗಳು ಮಾತ್ರ ನೂರಾರು ಇದನ್ನು ನಾವು ಬಳಕೆ ಮಾಡುವ ವಿಧಾನ ಗೂತ್ತಿರಬೇಕು.
ದನಿಯಾ ಹಾಗೂ ಮೆಣಸುಕಾಳಿನ ಪುಡಿಯಿಂದ ತಯಾರಿಸಿದ ಕಷಾಯ ಸೇವಿಸುವುದರಿಂದ ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯಬಹುದು. ಮೂಲವ್ಯಾದಿಯಿಂದ ಬಳಲುತ್ತಿರುವವರು ಒಂದು ಚಮಚ ದನಿಯಾವನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ ಬೆಲ್ಲದೊಂದಿಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದನ್ನು ನೀವು ಕ್ರಮೇಣ ಕನಿಷ್ಠ ಒಂದು ವಾರ ಆದರು ಸಹ ಮಾಡಬೇಕು. ಆದ್ರೆ ಹೆಚ್ಚಿಗೆ ಮೂಲವ್ಯಾದಿ ಸಮಸ್ಯೆಗಳು ಇದ್ದವರು ಇದನ್ನು ಮಾಡುವುದು ಸೂಕ್ತ ಅಲ್ಲವೇ ಅಲ್ಲ. ಮೂತ್ರ ಸರಿಯಾಗಿ ಆಗದಿದ್ದಲ್ಲಿ 5 ರಿಂದ 6 ದನಿಯಾ ಕಾಳುಗಳನ್ನು ಜಜ್ಜಿ ಅದರ ರಸ ಸೇವಿಸುವುದರಿಂದ ಮೂತ್ರವು ಸುಲಭವಾಗಿ ಆಗುತ್ತದೆ. ದಿನಕ್ಕೆ 2 ಬಾರಿಯಂತೆ ಕೊತ್ತಂಬರಿ ಬೀಜದಿಂದ ತಯಾರಿಸಿದ ಕಷಾಯದಿಂದ ಬಾಯಿ ಮುಕ್ಕಳಿಸುತ್ತ ಬಂದಲ್ಲಿ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ.
ಜ್ವರ ಬಂದಂತಹ ಸಂದರ್ಭದಲ್ಲಿ ದನಿಯಾ ಹಾಗೂ ಶುಂಠಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದು ಉತ್ತಮ ಆದ್ರೆ ಡೆಂಗ್ಯು ಜ್ವರ ಮತ್ತು ಇತರೆ ಸಮಸ್ಯೆಗಳು ಇದ್ದಾಗ ಈ ಮದ್ದು ಸೂಕ್ತ ಅಲ್ಲ. ಬಾಯಿಯಲ್ಲಿ ಹುಣ್ಣಾದಾಗ ದನಿಯಾ ಪುಡಿಯನ್ನು ತುಪ್ಪದೊಂದಿಗೆ ಕಲಸಿ ಹುಣ್ಣಿನ ಮೇಲೆ ಲೇಪನ ಮಾಡುವುದರಿಂದ ಹುಣ್ಣು ಬೆಗೇನೆ ಮಾಯುವುದು. ಹೀಗೆ ಅಡುಗೆಯಲ್ಲಿ ರುಚಿಕೊಡುವ ಈ ದನಿಯಾ ನಮ್ಮ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು ಇಂತಹ ದನಿಯಾದಿಂದ ಅನೇಕ ರೀತಿಯ ಮನೆಮದ್ದುಗಳನ್ನು ತಯಾರಿಸಿಕೊಳ್ಳಬಹುದು. ಸ್ನೇಹಿತರೆ ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ