ಗೋವಾದಲ್ಲಿ ಈ ತಪ್ಪು ಮಾಡಿದ್ರೆ ಭಾರಿ ದಂಡ

ಇತರೆ ಸುದ್ದಿ

ಮದ್ಯಪಾನ ಅಂದ್ರೆ ನಮ್ಮ ಕೆಲವು ಯುವಕರಿಗೆ ಅದೇನೋ ಒಂದು ರೀತಿ ಖುಷಿಯ ವಿಚಾರ ಆಗಿದೆ, ನಮ್ಮಲ್ಲಿ ಕೆಲವು ಜನರು ಪ್ರತಿ ನಿತ್ಯ ಕುಡಿದರೆ ಮತ್ತಷ್ಟು ಜನರು ವಾರಕ್ಕೆ ಒಮ್ಮೆ ಅಥವ ಇನ್ನು ಯಾವುದೊ ಪಾರ್ಟಿಯಲ್ಲಿ ಮಾತ್ರ ಸೇವನೆ ಮಾಡ್ತಾರೆ ಆದ್ರೆ ಇದು ನಿಜಕ್ಕೂ ಆರೋಗ್ಯದ ವಿಷಯಕ್ಕೆ ಬಂದ್ರೆ ಗಂಭೀರ ಪರಿಣಾಮ ಬೀರುವುದು ಸತ್ಯ ಇದು ಎಲ್ಲರಿಗು ತಿಳಿಯದ ವಿಚಾರ ಕೂಡ ಹೌದು. ಮದ್ಯಪಾನ ಮಾಡಿ ಕೆಲವರು ಶಾಂತ ಸ್ವಭಾವದಲ್ಲಿ ಇದ್ದಾರೆ ಮತ್ತಷ್ಟು ಜನರು ಏನೋ ಮೈ ಮೇಲೆ ದೆವ್ವ ಬಂದಿರೋ ರೀತಿ ವರ್ತನೆ ಮಾಡುವುದು ಸಹ ನಿಮಗೆ ತಿಳಿದ ವಿಚಾರ ಮತ್ತು ಅನ್ಯ ಜನರ ಜೊತೆಗೆ ಗಲಾಟೆ ಮಾಡಿಕೊಳ್ಳುವುದು ಅತೀ ವೇಗದ ವಾಹನ ಚಾಲನೆ ಮಾಡಿ ಮತ್ತೊಬ್ಬರಿಗೆ ಸಮಸ್ಯೆಗಳು ಮಾಡುವುದು ಸಹ ತಿಳಿದ ವಿಚಾರ. ಅದಕ್ಕೆ ಪಕ್ಕದ ಗೋವ ಸರ್ಕಾರ ಒಂದು ಹೊಸ ಕಾನೂನು ತಂದಿದೆ. ಗೋವ ಅಂದ್ರೆ ಒಂದು ಪ್ರವಾಸಿ ಸ್ಥಳ ಅಲ್ಲಿಗೆ ಬರುವ ಸಾಕಷ್ಟು ಜನರು ಮದ್ಯ ಸೇವನೆ ಮಾಡುತ್ತಾರೆ ಎಲ್ಲೆಂದರಲ್ಲಿ ಕುಡಿದು ಬಾಟಲಿ ಎಸೆಯುವುದು ಮತ್ತು ಜನರ ಬಳಿ ಕೆಟ್ಟದಾಗಿ ವರ್ತನೆ ಮಾಡುವುದು ಸಹ ಮಾಮೂಲಿ ಆಗೋಗಿದೆ

ಇಷ್ಟೇ ಆದ್ರೆ ಅಲ್ಲಿನ ಸರ್ಕಾರ ಸಹ ಏನೋ ಅಷ್ಟು ಗಂಭೀರ ಯೋಚನೆ ಮಾಡುತ್ತಾ ಇರಲಿಲ್ಲ ಆದ್ರೆ ಇತ್ತೇಚೆಗೆ ಗೋವ ಬೀಚ್ ನಲ್ಲಿ ಕೆಲವು ಯುವಕರು ಕಂಠ ಪೂರ್ತಿ ಬೀಚ್ ನಲ್ಲಿ ಆಟ ಆಡುವಾಗ ಅಲೆಗಳ ರಬಸಕ್ಕೆ ಕೊಚ್ಚಿಕೊಂಡು ಮೂರೂ ಜನರು ಮ ರಣ ಹೊಂದಿದ್ದಾರೆ ಇದನ್ನು ಗೋವಾ ಸರ್ಕಾರ ಗಂಭೀರ ರೀತಿಯಲ್ಲಿ ತೆಗೆದುಕೊಂಡು ಇನ್ನು ಮುಂದೆ ಯಾವುದೇ ಕಾರಣಕ್ಕೂ ಬೀಚ್ ಸುತ್ತಾ ಮುತ್ತಾ 200 ಮೀಟರ್ ನಲ್ಲಿ ಮದ್ಯಪಾನ ಮಾಡಿದ್ರೆ ಒಂದು ಸಾವಿರ ರುಪಾಯಿ ದಂಡ ಎಂದು ಆದೇಶ ಮಾಡಿದೆ. ಇದು ಇಷ್ಟೇ ಅಲ್ಲದೆ ಬೀಚ್ ನಲ್ಲಿ ಕುಡಿದು ಅಸಭ್ಯ ರೀತಿಯಲ್ಲಿ ವರ್ತನೆ ಮಾಡುವ ಜನಕ್ಕೂ ಇದು ದೊಡ್ಡ ಮೊತ್ತದ ದಂಡ ಹಾಕಲು ಸಿದ್ದತೆ ಮಾಡಿಕೊಂಡಿದೆ. ಈ ನಿಯಮ ಸಾಕಷ್ಟು ಜನರು ಒಳ್ಳೆಯದು ಅಂತಿದ್ದಾರೆ ಆದ್ರೆ ಕೆಲವು ಮದ್ಯಪಾನ ಮಾಡುವ ಜನರು ಇದಕ್ಕೆ ಅತೀಯಾದ ವಿರೋಧ ಸಹ ವ್ಯಕ್ತ ಪಡಿಸಿದ್ದಾರೆ.

ಸರ್ಕಾರ ಜನರ ಆರೋಗ್ಯದ ಮತ್ತು ಜೀವದ ದೃಷ್ಟಿಯಿಂದ ಇಂತಹ ಕಠಿಣ ನಿರ್ಧಾರಗಳು ತೆಗೆದುಕೊಳ್ಳುತ್ತದೆ ಎಂಬ ಸ್ಪಷ್ಟನೆ ನೀಡಿದೆ. ಅಧಿಸೂಚನೆ ಪ್ರಕಾರ ಈ ಹೊಸ ನಿಯಮ ಇನ್ನು ಕೆಲವು ದಿನದಲ್ಲಿ ಜಾರಿ ಆಗಬಹುದು ಎಂದು ಗೋವ ಸರ್ಕಾರದ ಸಚಿವಾಲಯ ಮಾದ್ಯಮಗಳಿಗೆ ಮಾಹಿತಿ ನೀಡಿದೇ. ಈ ಉಪಯುಕ್ತ ಸುದ್ದಿ ಮರೆಯದೆ ಶೇರ್ ಮಾಡಿರಿ ಮದ್ಯಪಾನ ಮಾಡುವ ನಿಮ್ಮ ಸ್ನೇಹಿತರು ಅಕಸ್ಮಾತ್ ಗೋವಾ ಹೋದ್ರೆ ಹುಷಾರ್ ಆಗಿ ಇರಲು ಹೇಳೀ ಇಲ್ಲ ಅಂದ್ರೆ ಭಾರಿ ಮೊತ್ತದ ದಂಡ ತೆತ್ತಲು ಸಿದ್ದರಾಗಬೇಕು. ಈ ಉಪಯುಕ್ತ ಲೇಖನ ಶೇರ್ ಮಾಡಿರಿ ಮತ್ತಷ್ಟು ಸುದ್ದಿ ಪಡೆಯಲು ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಮರೆಯಬೇಡಿ.

Leave a Reply

Your email address will not be published.