ಚಳಿಗಾಲದಲ್ಲಿ ಕಾಡುವ ಡ್ರೈ ಸ್ಕಿನ್ ಸಮಸ್ಯೆಯನ್ನು ಈ ರೀತಿ ನಿವಾರಿಸಿ. ಚಳಿಗಾಲದಲ್ಲಿ ಕಾಡುವ ಒಣಚರ್ಮ ಸಮಸ್ಯೆಯನ್ನು ಈ ರೀತಿ ನಿವಾರಿಸಿಕೊಳ್ಳಿ. ಅದು ಹೇಗೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಚಳಿಗಾಲದಲ್ಲಿ ತ್ವಚೆಯ ಆರೈಕೆ ಇದನ್ನು ಸವಾಲಾಗುತ್ತದೆ ತ್ವಜೆಯ ಸುಷ್ಕತೆಯನ್ನು ಕಾಪಾಡುವುದು ಬಹಳ ಕಷ್ಟದ ಕೆಲಸ. ಚಳಿಗಾಲದಲ್ಲಿ ಮುಖದ ಆರೈಕೆಯನ್ನು ಕಾಪಾಡಿಕೊಂಡು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ನೈಸರ್ಗಿಕ ಉಪಾಯಗಳು ಇಲ್ಲಿವೆ ನೋಡಿ. ಬಾಳೆಹಣ್ಣನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಮುಖಕ್ಕೆ ಹಚ್ಚಿದರೆ ತ್ವಜೆಯ ಒರಟುತನ ಕಡಿಮೆ ಆಗುತ್ತದೆ. ಎರಡು ಚಮಚ ಅಲೋವೆರಾ ಜೆಲ್ ಒಂದು ಚಮಚ ಕಿತ್ತಳೆ ಹಣ್ಣಿನ ರಸ ಮಿಕ್ಸ್ ಮಾಡಿ ಮುಖಕ್ಕೆ ಲೇಪಿಸಿ ಹತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ನೀರಿನಿಂದ ತೊಳೆಯಿರಿ ನಂತರ ಮಲಿಶ್ಚರೈಸರ್ ಅಪ್ಲೈ ಮಾಡಿ.
ಜೇನು ತುಪ್ಪ ಆರೋಗ್ಯಕ್ಕೆ ಒಂದೇ ಅಲ್ಲ ಚರ್ಮಕ್ಕೆ ಉತ್ತಮ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುವ ಪದಾರ್ಥ ಇದು. ಜೇನುತುಪ್ಪವನ್ನು ಮುಖದ ಮೇಲೆ ಹಚ್ಚಿ ನಿಧಾನವಾಗಿ ಸ್ಕ್ರೈಬ್ ಮಾಡಬೇಕು ಹತ್ತು ನಿಮಿಷದ ನಂತರ ಮುಖವನ್ನು ನೀರಿನಲ್ಲಿ ತೊಳೆಯಬೇಕು ಇದು ಮುಖದ ಕಾಂತಿ ಹೆಚ್ಚಿಸುವಲ್ಲಿ ಚರ್ಮ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.ಹಾಲು ಮತ್ತು ಆಲಿವ್ ಆಯಿಲ್ ಕೂಡ ಚರ್ಮದ ಕಾಂತಿ ಹೆಚ್ಚಿಸುತ್ತದೆ ತಂಪಾದ ಹಾಲಿನಲ್ಲಿ ಆಲಿವ್ ಆಯಿಲ್ ಅನ್ನು ಎರಡು ಹನಿ ಹಾಕಿ ಅದನ್ನು ಮುಖಕ್ಕೆ ಮಸಾಜ್ ಮಾಡುವ ಮೂಲಕ ಚರ್ಮದಿಂದ ಪರಿಹಾರ ಹೊಂದಬಹುದಾಗಿದೆ. ಇನ್ನೂ ಅರ್ಧ ಸೇಬಿನ ತುಂಡನ್ನು ಸ್ಮ್ಯಾಶ್ ಮಾಡಿ ಒಂದು ಚಮಚ ಜೇನುತುಪ್ಪ ದೊಂದಿಗೆ ಬೆರೆಸಿ ಈ ಮಿಶ್ರಣವನ್ನು ತ್ವಜೆಗೆ ಅಪ್ಲೈ ಮಾಡಿ ಇದನ್ನು 10 ರಿಂದ 15 ನಿಮಿಷ ಬಿಟ್ಟು ಸ್ವಚ್ಛ ಮಾಡಿ ನೀರಿನಿಂದ ತೊಳೆಯಿರಿ. ಇದು ತ್ವಜೆಯ ಶುಷ್ಕವನ್ನ ಕಾಪಾಡುತ್ತದೆ.
ಒಂದು ಚಮಚ ದಾಳಿಂಬೆ ರಸವನ್ನು ಅರ್ಧ ಚಮಚ ಕಡಲೆ ಹಿಟ್ಟಿನಿಂದ ಮಿಶ್ರಣ ಮಾಡಿ ತ್ವಜೆಯ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಹಾಗೆ ಬಿಟ್ಟು ನೀರಿನಿಂದ ತೊಳೆಯಿರಿ ಇದು ತ್ವಜೆಯನ್ನ ತೇವದಿಂದ ಇಡುತ್ತದೆ. ಚೆನ್ನಾಗಿ ಮಾಗಿದ ಸ್ಟ್ರಾಬೆರಿ ಹಣ್ಣನ್ನು ಒಂದು ಚಮಚ ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಫೇಸ್ ಪ್ಯಾಕ್ ಅಂತೆ ಅಪ್ಲೈ ಮಾಡಿ 15 ನಿಮಿಷಗಳ ನಂತರ ತೊಳೆಯಿರಿ. ಹಾಲಿನ ಕೆನೆಗೆ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿ ಮುಖ ಕೈ ಕಾಲಿಗೆ ಹಚ್ಚಿಕೊಂಡ ಬಳಿಕ ಸ್ವಲ್ಪ ಹೊತ್ತಿನ ಬಳಿಕ ಮುಖ ತೊಳೆಯಿರಿ ಹೀಗೆ ಮಾಡುವುದರಿಂದ ಚರ್ಮ ಒಣಗಿದಂತೆ ಕಾಣುವುದಿಲ್ಲ. ಚಳಿಗಾಲದಲ್ಲಿ ಆದಷ್ಟು ಸ್ನಾನಕ್ಕೆ ಕಡಲೆಹಿಟ್ಟು ಬಳಸಿದರೆ ಉತ್ತಮ ಸೋಪ್ ಬಳಕೆ ಕಡಿಮೆ ಮಾಡಿರಿ. ಚಳಿಗಾಲದಲ್ಲಿ ಪಾದದ ಬಿರುಕು ಸರ್ವೇ ಸಾಮಾನ್ಯ ರಾತ್ರಿ ಮಲಗುವಾಗ ಹೊರಗೆ ಹೋಗುವಾಗ ಕಾಲಿಗೆ ಸಾಕ್ಸ್ ಧರಿಸಿರಿ. ಹೆಚ್ಚಿನ ಬಿರುಕು ಇದ್ದರೆ ಕ್ರ್ಯಾಕ್ ಹೀಲ್ ಹಚ್ಚಿಕೊಂಡು ಮಲಗಿರಿ.