ನಿಯತ್ತಿಗಿರುವ ಮತ್ತೊಂದು ಹೆಸರೇ ಶ್ವಾನ ಅದು ಮಾಲೀಕ ಹಾಕಿದ ತುತ್ತು ಅನ್ನಕ್ಕೆ ತೋರಿಸಿದ ಸ್ವಲ್ಪ ಪ್ರೀತಿಗೆ ಸಾಯುವವರೆಗೂ ಋಣಿಯಾಗಿರುತ್ತದೆ ಇದು ಅಕ್ಷರಸಹ ಸತ್ಯ ಎನ್ನುವುದು ಎಷ್ಟೋ ಸಂದರ್ಭಗಳಲ್ಲಿ ಸಾಭೀತಾಗಿದೆ ಆದರೆ ಈ ಹಚ್ಚಿಕೊ ನಾಯಿಯ ನಿಯತ್ತು ಎಂತದು ಎಂದು ಗೊತ್ತಾದರೆ ನಿಜಕ್ಕೂ ನಿಮ್ಮ ಮನಸ್ಸು ಕರಗುತ್ತದೆ ಅಷ್ಟೇ ಅಲ್ಲದೆ ಈ ಹಚ್ಚಿಕೊ ನಾಯಿಯ ನಿಯತ್ತನ್ನು ಇಡೀ ಪ್ರಪಂಚವೇ ಮೆಚ್ಚಿತ್ತು ನಿಜಕ್ಕೂ ಈ ಹಚ್ಚಿಕೊ ನಾಯಿಯ ನಿಯತ್ತನ್ನು ಕೇಳಿದರೆ ನೀವು ಕೂಡ ನಿಮ್ಮ ಮನೆಯಲ್ಲಿ ಒಂದು ನಾಯಿಯನ್ನು ಸಾಕುವುದಕ್ಕೆ ಇಸ್ಟ ಪಡುತ್ತಿರ ಅಷ್ಟಕ್ಕೂ ಏನಿದು ಈ ಹಚ್ಚಿಕೊ ನಾಯಿಯ ಕಥೆ ಬನ್ನಿ ತಿಳಿಯೋಣ. ಈ ಹಚ್ಚಿಕೊ ನಾಯಿಯ ಜನನವಾಗಿದ್ದು ನವೆಂಬರ್ 10, 1923 ರಲ್ಲಿ ಒಂದು ನಾಯಿಗಳ ಪಾರ್ಮನಲ್ಲಿ ಜಪಾನ್ ನಲ್ಲಿ ಜನಿಸಿತು. ಇನ್ನು ಜಪಾನ್ ನ ಟೋಕಿಯೋದ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಐಜಾಬರೋಯುನೋ ಇವರು ಒಂದು ನಾಯಿಯನ್ನು ದತ್ತು ತೆಗೆದುಕೊಳ್ಳಲು ಹುಡುಕುತ್ತಿದ್ದರು ಒಂದು ದಿನ ನಾಯಿಯನ್ನು ಮನೆಗೆ ತಂದು ಹೆಸರಿಟ್ಟರು ಅದು ಹಚ್ಚಿಕೊ ಆ ನಾಯಿ ಮನೆಗೆ ಬಂದ ಸ್ವಲ್ಪ ದಿನದಲ್ಲೇ ಹಚ್ಚಿಕೊ
ಉಪಾಧ್ಯಾಯರು ಇಬ್ಬರಿಗೂ ಇನ್ನಿಲ್ಲದ ಪ್ರೀತಿ ಅವರು ಆ ನಾಯಿಯನ್ನು ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತೆ ನಾಯಿಯು ಅವರನ್ನು ತುಂಬಾ ಹಚ್ಚಿಕೊಳ್ಳುತ್ತೇ ಇವರು ಕೆಲಸಕ್ಕೆ ಹೋಗಬೇಕಾದರೆ ಟೋಕಿಯೋ ರೈಲು ನಿಲ್ದಾಣದಿಂದ ಹೋಗಬೇಕಿತ್ತು ಹಾಗಾಗಿ ದಿನನಿತ್ಯ ಮನೆಯಿಂದ ಹೊರಡುವಾಗ ಹಚ್ಚಿಕೊ ನಾಯಿ ಕೂಡ ರೈಲು ನಿಲ್ದಾಣದವರೆಗೂ ಅವರ ಜೊತೆಯಲ್ಲಿ ಹೋಗುತ್ತಿತ್ತು ಮತ್ತೆ ಅವರು ಕೆಲಸ ಮುಗಿಸಿ ಕಾಲೇಜಿನಿಂದ ತಿರುಗಿ ಬರೋವರೆಗೂ ಅದು ರೈಲ್ವೆ ನಿಲ್ದಾಣದಲ್ಲಿ ಅವರಿಗಾಗಿ ಕಾಯುತ್ತಿತ್ತು ಅವರು ಇಬ್ಬರು ಒಟ್ಟಿಗೆ ಮನೆಗೆ ಬರುತ್ತಿದ್ದರು ಇದು ಅವರಿಬ್ಬರ ದಿನನಿತ್ಯದ ಕೆಲಸವಾಗಿತ್ತು ಸಹಜವಾಗಿ ಇದು ಕೆಲವು ದಿನಗಳ ಕಾಲ ಹೀಗೆ ನಡೆದಿತ್ತು ಆದರೆ ಮೇ 21 , 1925 ರಂದು ಎಂದಿನಂತೆ ಇಬ್ಬರು ಮನೆಯಿಂದ ರೈಲ್ವೆ ನಿಲ್ದಾಣಕ್ಕೆ ಬಂದರು ತಮ್ಮ ರೈಲನ್ನು ಹತ್ತಿ ಕಾಲೇಜಿಗೆ ಹೋದರು ಇನ್ನು ಈ ನಾಯಿ ತನ್ನ ಯಜಮಾನ ಸಂಜೆ ಬರುತ್ತಾನೆ ಅಂತ ಅಲ್ಲೇ ಕಾಯುತ್ತ ಕುಳಿತಿತ್ತು ಆ ಅಧ್ಯಾಪಕರಿಗೆ ಅನಾರೋಗ್ಯದ ಸಮಸ್ಯೆ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಇತ್ತ ನಾಯಿ ಕಾಯುತ್ತ ಕುಳಿತಿತ್ತು ಆದರೆ ಎಷ್ಟು ಹೊತ್ತಾದರೂ ಮನೆ ಯಜಮಾನ ವಾಪಸ್ಸು ಬರಲಿಲ್ಲ ಆ ನಾಯಿಯನ್ನು ರೈಲ್ವೆ ನಿಲ್ದಾಣದಲ್ಲಿ ನೋಡಿದ ಅವರ ಮನೆಯ ಮಾಜಿ ಕೆಲಸಗಾರ ಅದನ್ನು ಮನೆಗೆ ವಾಪಸ್ ಕರೆದುಕೊಂಡು ಹೋದ ಆದರೆ ಮಾರನೇದಿನ ಅದು ವಾಪಸ್ ಬಂದು ತನ್ನ ಮಾಲೀಕನಿಗಾಗಿ ಮತ್ತೆ ಅಲ್ಲೇ ಕಾಯುತ್ತ ಕುಳಿತಿರುತ್ತದೆ.
ಆದರೆ ಅದು ತನ್ನ ಮನೆ ಯಜಮಾನ ಮತ್ತೆ ವಾಪಸ್ ಬರುತ್ತಾನೆ ಎಂದು ಕಾದು ಕುಳಿತಿದ್ದು ಒಂದು ದಿನ ಅಲ್ಲ ಎರಡು ದಿನ ಅಲ್ಲ ಮೂರು ದಿನ ಅಲ್ಲ ಬರೋಬ್ಬರಿ 9 ವರ್ಷ 9 ತಿಂಗಳು 15 ದಿನ ಇಷ್ಟು ವರ್ಷಗಳ ಕಾಲ ತನ್ನ ಮನೆ ಯಜಮಾನ ಮತ್ತೆ ವಾಪಸ್ ಬರುತ್ತಾನೆ ನಾನು ಅವನ ಜೊತೆ ಮನೆಗೆ ಹೋಗುತ್ತೇನೆ ಅಂತ ಆ ಹಚ್ಚಿಕೊ ನಾಯಿ ಆ ಅಧ್ಯಾಪಕರಿಗಾಗಿ ಕಾಯುತ್ತ ಕುಳಿತಿತ್ತು ಅದೇ ರೀತಿ ಸತತ 9 ವರ್ಷ ಆ ನಾಯಿ ತನ್ನ ಮನೆ ಯಜಮಾನನಿಗಾಗಿ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತ ಕುಳಿತಿತ್ತು ನಂತರ ಆ ಅಧ್ಯಾಪಕರ ಒಬ್ಬ ವಿದ್ಯಾರ್ಥಿಗೆ ಆ ನಾಯಿಯ ಕಥೆ ಗೊತ್ತಾಗುತ್ತದೆ ನಿಜಕ್ಕೂ ಅವನಿಗೆ ಈ ನಾಯಿಯ ನಿಯತ್ತನ್ನು ಕೇಳಿ ಆಶ್ಚರ್ಯವಾಗುತ್ತದೆ ನಂತರ ಆತ ಆ ನಾಯಿಯ ಬಗ್ಗೆ ಒಂದು ಲೇಖನವನ್ನು ಬರೆಯುತ್ತಾನೆ ಅದು 1932 ರಲ್ಲಿ ಜಪಾನ್ ನ ಒಂದು ಪ್ರಮುಖ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಇದಾದ ನಂತರ ಜಪಾನಾದ್ಯಂತ ಈ ಹಚ್ಚಿಕೊ ನಾಯಿ ತುಂಬಾ ಪ್ರಸಿದ್ಧವಾಗುತ್ತದೆ ನಂತರ ಜನರು ಈ ನಾಯಿಯನ್ನು ಚುಕೇನ್ ಹಚ್ಚಿಕೊ ಅಂತ ಕರೆಯುತ್ತಾರೆ ಅಂದರೆ ಇದರರ್ಥ ಹಚ್ಚಿಕೊ ನಿಷ್ಠಾವಂತ ನಾಯಿ ಅಂತ ಮತ್ತೆ ಈ ನಾಯಿಯ ಕಥೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಸಾಕಷ್ಟು ಗಮನ ಸೆಳೆಯುತ್ತದೆ.
ಪ್ರಪಂಚದಾದ್ಯಂತ ಅನೇಕರು ಬಂದು ಆ ನಾಯಿಯನ್ನು ಭೇಟಿಯಾಗುತ್ತಾರೆ ಮತ್ತು ಈ ನಾಯಿಯ ನಿಯತ್ತಿನ ಬಗ್ಗೆ ಪ್ರಪಂಚದಾದ್ಯಂತ ಸಾಕಷ್ಟು ಲೇಖನಗಳು ಪ್ರಕಟವಾಗುತ್ತವೆ ಮತ್ತೆ ದಿನನಿತ್ಯ ಆ ನಾಯಿಯನ್ನು ಭೇಟಿ ಮಾಡಲು ಬರುವ ಜನರು ಅದಕ್ಕೆ ಊಟ ತಿಂಡಿಯನ್ನೆಲ್ಲ ಕೊಡುತ್ತಿದ್ದರು ನಂತರ ಅದು ಮಾರ್ಚ 8, 1935 ರಂದು ಕ್ಯಾನ್ಸರ್ ಮತ್ತು ದೇಹದಲ್ಲಿ ಇಂಫೆಕ್ಷನ್ ಜಾಸ್ತಿಯಾಗಿ ಅದು ಸಾವನ್ನಪ್ಪುತ್ತದೆ. ನಂತರ ಈ ನಾಯಿಯ ನಿಯತ್ತನ್ನು ಈ ಪ್ರಪಂಚಕ್ಕೆ ಮತ್ತಷ್ಟು ಸಾರುವ ಸಲುವಾಗಿ ನ್ಯಾಷನಲ್ ಮ್ಯೂಜಿಯಮ್ ಆಫ್ ಜಪಾನ್ ನಲ್ಲಿ ಇಡಲಾಯಿತು ಮತ್ತೆ ಸೀಬುಯ ರೈಲು ನಿಲ್ದಾಣದ ಬಳಿ ಈ ಹಚ್ಚಿಕೊ ನಾಯಿಯ ಮೂರ್ತಿಯನ್ನು ಕೂಡ ನಿರ್ಮಾಣ ಮಾಡಲಾಯಿತು. ಅದಲ್ಲದೆ ಜಪಾನಿನ ಹಲವು ಕಡೆ ಈ ಹಚ್ಚಿಕೊ ನಾಯಿಯ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಮತ್ತು ಈ ಹಚ್ಚಿಕೊ ನಾಯಿಯ ಜೀವನದ ಕುರಿತಾಗಿ ಹಚ್ಚಿ ಎ ಡಾಗ್ ಸ್ಟೈಲ್ ಎನ್ನುವ ಒಂದು ಸಿನಿಮಾ ಕೂಡ ನಿರ್ಮಾಣ ಮಾಡಿದ್ದಾರೆ. ಇದರಿಂದ ಮನುಷ್ಯರ ನಡುವಿನ ಸಂಬಂದಕ್ಕಿಂತ ನಾಯಿ ಮತ್ತು ಮನುಷ್ಯರ ನಡುವಿನ ಸಂಬಂಧ ಎಷ್ಟರ ಮಟ್ಟಿಗೆ ಗಟ್ಟಿ ಇರುತ್ತದೆ ಎನ್ನುವುದಕ್ಕೆ ಈ ಒಂದು ಘಟನೆಯೇ ಸಾಕ್ಷಿ.