ನಾನ್ ವೆಜ್ ತಿನ್ನುವ ಜನರಿಗಾಗಿ

ಉಪಯುಕ್ತ ಸಲಹೆ

ನೀವು ಮಾಂಸಾಹರಿಗಳಾಗಿದ್ದರೆ ಇದನ್ನು ದಯವಿಟ್ಟು ಓದಿರಿ. ನಾವು ಮಿಶ್ರಹಾರಿಗಳು ಅಂದರೆ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳನ್ನು ಅಗೆದು ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿರುವ ಮನುಷ್ಯರು. ಮಂಸಾಹಾರದಿಂದ ತುಂಬಾ ಪ್ರಮಾಣದ ಪ್ರೊಟೀನ್ ಲಭ್ಯವಾಗುವ ಕಾರಣ ಇದರ ಸೇವನೆಯನ್ನು ನಾವು ಕಡಿಮೆ ಮಾಡಬೇಕು ಆದರೆ ಇದರ ರುಚಿಯನ್ನು ಒಮ್ಮೆ ನೋಡಿದರೆ ಅದನ್ನು ನಿಯಂತ್ರಿಸುವುದು ಕಷ್ಟ. ಮತ್ತು ಈಗ ಸಿಧ್ದ ರೂಪದಲ್ಲಿ ಲಭ್ಯವಿರುವ ಅತ್ಯಂತ ಸುಂದರ ಮತ್ತು ಸ್ವಾಧೀಷ್ಟವಾದ ಖಾದ್ಯಗಳು ಅಂದ್ರೆ ತುಂಬಾ ಬೇರೆ ಬೇರೆ ಆಹಾರಗಳನ್ನು ತಿನ್ನದೆ ಇರಲು ಸಾಧ್ಯವಿಲ್ಲ. ಮಾಂಸಾಹಾರದ ರುಚಿಗೆ ಮನಸೋತವರ ಸೊಂಟದ ಗಾತ್ರವು ಸಹ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಆದರೆ ಅತೀಯಾದ ಸೇವನೆಯಿಂದ ತೂಕದಲ್ಲಿ ಹೆಚ್ಚಳ ಸ್ತೂಲಕಾಯ ಎದುರಾಗುವುದರ ಜೊತೆಗೆ ಅಚ್ಚರಿ ತರುವ ಇನ್ನು ಕೆಲವು ಪರಿಣಾಮಗಳು ಆಗುತ್ತವೆ.

ಆರೋಗ್ಯಕ್ಕೆ ಮಿತ ಪ್ರಮಾಣದ ಮಾಂಸಾಹಾರ ಅಗತ್ಯವಿರುವ ಕಾರಣ ಒಮ್ಮೆಲೇ ಮಾಂಸಾಹಾರ ಸೇವನೆ ನಿಲ್ಲಿಸುವದೂ ಬೇಡ ಮಾಂಸಾಹಾರ ಕೆಟ್ಟದ್ದು ಅಲ್ಲ ಹೇಗೆ ತಿನ್ನುತ್ತೇವೆ ಎಷ್ಟು ತಿನ್ನುತ್ತೇವೆ ಎನ್ನುವುದರ ಮೇಲೆ ಇದರ ಪರಿಣಾಮಗಳು ಎದುರಾಗುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಉತ್ತಮ ಗುಣಮಟ್ಟದ ಮಾಂಸವನ್ನು ಒಂದು ದಿನಕ್ಕೆ ನಿಮ್ಮ ಮುಷ್ಟಿಯಷ್ಟು ಪ್ರಮಾಣದ ಮಾಂಸವನ್ನು ಅಥವಾ 3 ಜೋಲ್ಸ್ ಗಳಷ್ಟು ಪ್ರಮಾಣಕ್ಕೂ ಮಿರಬಾರದು ವಿಶೇಷವಾಗಿ ಇಂದಿನ ದಿನಗಳಲ್ಲಿ ಜನರು ಅವರು ತಿನ್ನುವ ಮಾಂಸಾಹರದ ಪ್ರಮಾಣವನ್ನು ಗಮನಿಸುವುದಿಲ್ಲ. ಅಸ್ಟೆಅಲ್ಲದೆ ಹೋಟೆಲ್ ಮತ್ತು ರೇಸ್ಟೋರೆಂಟಗಳಲ್ಲಿ ತುಂಬಾ ಹೊತ್ತು ಕೂತ್ಕೊಂಡು ತಿನ್ನಬೇಕು ಅಂತ ಬೇರೆಬೇರೆ ಮಾಂಸಾಹಾರದ ಪಧಾರ್ಥಗಳನ್ನು ಮಾಡುತ್ತಾರೆ. ಹಾಗಾಗಿ ಅತಿಯಾದ ಮಾಂಸಾಹಾರ ಸೇವನೆಯಿಂದ ಏನಾಗುತ್ತದೆ ಎನ್ನುವುದನ್ನು ಈಗ ತಿಳಿಯೋಣ. ಹೆಚ್ಚಿನ ಪ್ರೊಟೀನ್ ಆಹಾರದಿಂದ ಮೂತ್ರಪಿಂಡಗಳು ಹೆಚ್ಚಿನ ಮೂತ್ರವನ್ನು ಉತ್ಪತ್ತಿ ಮಾಡಲು ಕಾರಣವಾಗಬಹುದು

ಇದರಿಂದ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ದೈನಂದಿನ ಆರೋಗ್ಯದ ಪ್ರಕಾರ ಇದು ನಮ್ಮ ಶಕ್ತಿ ಮಟ್ಟವನ್ನು ನಮ್ಮ ತ್ವಚೆಯನ್ನು ಆಹಾರ ಸೇವನೆ ಬಳಕೆ ಹೆಚ್ಚಾಗುವುದನ್ನು ಸ್ನಾಯುಸೆಳೆತ ಇರುವವರಿಗೆ ಎಲ್ಲದರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಬೆವರಿನ ವಾಸನೆ ಬಂದರೆ ನಾವು ಅನುಸರಿಸುವ ವಿಧಾನ ಸುಗಂದವನ್ನು ಹಚ್ಚಕೊಳ್ಳುವುದು. ಕೆಮಿಕಲ್ ಸೆನ್ಸೆನ್ಸ್ ಎಂಬ ಮಾಧ್ಯಮದ ಪ್ರಕಾರ ಮಾಂಸಾಹಾರ ಸೇವಿಸಿದ ಜನರಲ್ಲಿ ದೇಹದ ದುರ್ಗಂಧವು ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ ಇದರಲ್ಲಿ ಆಶ್ಚರ್ಯವೇನೆಂದರೆ ಸಸ್ಯಾಹಾರಿಗಳ ಬೆವರಿನ ಗಂಧ ಮಾಂಸಾಹರಿಗಳ ಬೆವರಿನ ಗಂಧಕ್ಕಿಂತ ಅಹಲ್ಲಾದಕರ ವಾಗಿರುತ್ತದೆಯಂತೆ. ಹೆಚ್ಚಿನ ಮಾಂಸಾಹಾರ ಎಂದರೆ ಹೆಚ್ಚಿನ ಕಾರ್ಬೋಹೈಡ್ರೇಟ್ಗಳು ಅಂದರೆ ಹೆಚ್ಚಿನ ಮಲಬದ್ಧತೆ. ಏಕೆಂದರೆ ಮಾಂಸದಲ್ಲಿ ಕರಗದ ನಾರು ಇರುವುದಿಲ್ಲ ಹಾಗಾಗಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸದೆ ಮಲಬದ್ಧತೆ ಉಂಟಾಗುತ್ತದೆ.

ಹಾಗಾಗಿ ಮಾಂಸಾಹಾರದ ಪ್ರಮಾಣವನ್ನು ಕಡಿಮೆ ಮಾಡಬೇಕು. ಸಂಯುಕ್ತ ಕಾರ್ಬೋಹೈಡ್ರೇಟ್ಗಳನ್ನು ಹೆಚ್ಚಿಸಬೇಕು ಅಂದರೆ ಹೆಚ್ಚಾಗಿ ನಾರುಯುಕ್ತ ಹಣ್ಣುಗಳನ್ನು ತರಕಾರಿಗಳನ್ನು ಸೇವಿಸಬೇಕು. ನಾವು ತಿನ್ನುವ ಮಾಂಸವು ಹೆಚ್ಚು ನಿರ್ಜಲೀಕರಣವಾಗಬಹುದು ಎಂದಾಗ ಇದು ನಮಗೆ ತಲೆನೋವನ್ನು ಉಂಟುಮಾಡುತ್ತದೆ. ಹೆಚ್ಚಾಗಿ ಕಾರ್ಬೋಹೈಡ್ರೇಟ್ ಗಳು ಮೆದುಳಿಗೆ ಇಂದನವಾಗಿದೆ ಆದ್ದರಿಂದ ನಾವು ಹೆಚ್ಚಾಗಿ ಮಾಂಸಾಹಾರವನ್ನು ಸೇವಿಸಿ ಸಾಕಷ್ಟು ಕಾರ್ಬೋಹೈಡ್ರೇಟ್ ಗಳನ್ನು ಸೇವಿಸದೇ ಇದ್ದರೆ ಇದು ತಲೆನೋವು ಮತ್ತು ಮಾನಸಿಕ ಕ್ಷಮತೆ ನಮ್ಮ ದೇಹದಲ್ಲಿ ಉಂಟುಮಾಡಲು ಕಾರಣವಾಗುತ್ತದೆ. ಕೆಂಪು ಮಾಂಸವನ್ನು ಹೆಚ್ಚಾಗಿ ಸೇವಿಸುವ ಮೂಲಕ ಜೀವಕೋಶಗಳ ಮರುಹುಟ್ಟುವಿಕೆ ಪ್ರಮಾಣದಲ್ಲಿ ಇಳಿಮುಖ ಕಂಡುಬರುತ್ತದೆ ಅಂದರೆ ವಯಸ್ಸಾಗುವ ಲಕ್ಷಣಗಳು ಇದು ಕಣ್ಣಿನ ಜೀವಕೋಶಗಳು ಅನ್ವಯಿಸುವ ಮೂಲಕ ಕಣ್ಣಿನ ಕ್ಷಮತೆ ಕಳೆದುಕೊಳ್ಳುವ ಅವಕಾಶ ಹೆಚ್ಚಿರುತ್ತದೆ.

ಕಣ್ಣಿನ ದೃಷ್ಟಿಗೂ ಕೆಂಪು ಮಾಂಸಕ್ಕೂ ಎಲ್ಲಿಲ್ಲದ ಒಂದು ಸಂಬಂದ ಇದೆ ಅಂತ ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಕೆಂಪು ಮಾಂಸದಲ್ಲಿರುವ ಸಂತುಪ್ತ ಕೊಬ್ಬು ಕಣ್ಣುಗಳಲ್ಲಿರುವ ಅತಿ ಸೂಕ್ಷ್ಮವಾದ ನರಗಳಿಗೆ ಹಾನಿಯುಂಟು ಮಾಡುತ್ತದೆ ಅಂದರೆ ಈ ಮಾಂಸಗಳೇ ನೇರವಾಗಿ ಪ್ರಭಾವ ಬೀರುವುದಿಲ್ಲ ಬದಲಿಗೆ ಮಾಂಸವನ್ನು ಸತ್ಕರಿಸಲು ಬಳಸುವ ಕೆಲವು ರಾಸಾಯನಿಕಗಳು ವಿಶೇಷವಾಗಿ ನೈಟ್ರೋಸಮೈನಗಳು ಕಣ್ಣುಗಳಿಗೆ ಹಾನಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಕೆಲವು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಆಹಾರದಲ್ಲಿ ಪ್ರೋಟಿನಗಳು ಹೆಚ್ಚಿದಾಗ ಇದನ್ನು ಸತ್ಕರಿಸಿ ಜೀವರಸಾಯನಿಕ ಕ್ರಿಯೆಯನ್ನು ಪೂರ್ಣಗೊಳಿಸುವಾಗ ಮೂತ್ರದ ಪ್ರಮಾಣವು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಮೂತ್ರ ದೇಹದಿಂದ ಹೊರಬರುವಾಗ ಆಹಾರದಲ್ಲಿನ ಕ್ಯಾಲ್ಸಿಯಂನ್ನು ಬಳಸಿಕೊಳ್ಳುವ ಮುನ್ನವೇ ಹೊರಬಿಡುತ್ತದೆ. ಆ ಪ್ರಕಾರ ನಾವು ಸಾಕಷ್ಟು ಕ್ಯಾಲ್ಸಿಯಂ ಯುಕ್ತ ಆಹಾರಗಳನ್ನು ಸೇವಿಸಿದ ಬಳಿಕವೂ ಇದನ್ನು ಬಳಸಿಕೊಳ್ಳಲಾಗುತ್ತದೆ ಹೊರ ಹೋಗಹೋಗುತ್ತದೆ. ಹಾಗಾಗಿ ಕ್ಯಾಲ್ಸಿಯಂ ಕೊರತೆಯಿಂದ ನಮ್ಮ ಮೂಳೆಗಳು ಬಲವನ್ನು ಕಳೆದುಕೊಳ್ಳುವ ಅವಕಾಶ ಹೆಚ್ಚಿರುತ್ತದೆ.

ಅಷ್ಟೇ ಅಲ್ಲದೆ ಈ ಮೂಳೆಗಳು ಶಿತಲವಾಗುವ ಅವಕಾಶವೂ ಇರುತ್ತದೆ. ಸಾಕಷ್ಟು ವಿಶ್ರಾಂತಿ ಪಡೆದ ನಂತರವೂ ನಿಮಗೆ ಸುಸ್ತು ಆವರಿಸಿದೆ ಇದಕ್ಕೆ ಕೇವಲ ನಿಮ್ಮ ನಿದ್ದೆ ಮತ್ತು ಚಟುವಟಿಕೆ ಕಾರಣವಲ್ಲ ನಮ್ಮ ಆಹಾರವು ಸಹ ಕಾರಣ ಏಕೆಂದರೆ ಅತಿ ಹೆಚ್ಚಿನ ಪ್ರೊಟಿನನ್ನು ಜೀರ್ಣಿಸಲು ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಗೆ ಅತಿ ಹೆಚ್ಚಿನ ಶಕ್ತಿ ಮತ್ತು ಪೋಷಕಾಂಶಗಳ ಅಗತ್ಯವಿದ್ದು ದೇಹದಲ್ಲಿರುವ ಹೆಚ್ಚಿನ ಶಕ್ತಿಯನ್ನು ಇದಕ್ಕಾಗಿ ಉಪಯೋಗಿಸುವುದರಿಂದ ಉಳಿದ ಕೆಲಸಗಳಿಗೆ ಶಕ್ತಿ ಸಾಲದೆ ಹೋಗುತ್ತದೆ ಇದೆ ಸುಸ್ತು ಆವರಿಸಲು ಕಾರಣವಾಗುತ್ತದೆ. ನಮ್ಮ ಬಾಯಿಯಲ್ಲಿ ಸತತವಾಗಿ ದುರ್ವಾಸನೆ ಬರುತ್ತಿದ್ದರೆ ಇದಕ್ಕೆ ಮೂಲ ಕಾರಣ ನಾವು ತಿನ್ನುವ ಕೆಲವು ಆಹಾರಗಳು ಸಾಕಷ್ಟು ಕಾರ್ಬೋಹೈಡ್ರೇಟ್ ಗಳು ಇಲ್ಲದ ಪ್ರೊಟೀನ್ ಮತ್ತು ಕಬ್ಬಿಣಾಂಶವುಳ್ಳ ಆಹಾರ ಸೇವನೆಯಿಂದ ದೇಹದಲ್ಲಿ ಕಿಟೋನಗಳನ್ನು ಉತ್ಪಾದಿಸಲು ಕಾರಣವಾಗಬಹುದು.

ಕಿಟೋನಗಳು ಉಸಿರಾಟದ ಮೂಲಕ ಬಿಡುಗಡೆಯಾಗಿತ್ತದೆ ಮತ್ತು ಅದು ಅಸಿಟೋನ್ ನಂತಹ ಕೆಟ್ಟ ವಾಸನೆಯನ್ನು ನಮ್ಮ ದೇಹದಿಂದ ಹೊರಬಿಡುತ್ತದೆ. ನಮ್ಮ ಕರುಳಿನಲ್ಲಿರುವ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಮ್ಮ ದೇಹದಲ್ಲಿರುವ ಉತ್ತಮ ಬ್ಯಾಕ್ಟೀರಿಯವನ್ನು ಕೆಟ್ಟದ್ದಾಗಿ ಪರಿವರ್ತಿಸುತ್ತದೆ. ಅದಕ್ಕಾಗಿ ನಾವು ತಿನ್ನುವ ಆಹಾರದ ಮೇಲೆ ನಾವು ಗಮನವನ್ನು ಇಡಬೇಕು ಅವು ಅಭಿವೃದ್ಧಿ ಹೊಂದಲು ಸಂಕೀರ್ಣ ಕಾರ್ಬೋಹೈಡ್ರೇಟ್ ಗಳು ಬೇಕಾಗುತ್ತವೆ ನಿರ್ಧಿಷ್ಟವಾಗಿ ಹಣ್ಣು ಮತ್ತು ತರಕಾರಿಗಳು ಮತ್ತು ದಾನ್ಯಗಳಿಂದ ಕರಗದ ನಾರು ನಮಗೆ ಲಭಿಸುತ್ತದೆ. ಹೆಚ್ಚಿನ ಪ್ರೋಟಿನಯುಕ್ತ ಆಹಾರಗಳಲ್ಲಿ ಈ ಅಂಶ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಇದು ಕರುಳಿನ ಬ್ಯಾಕ್ಟೀರಿಯವನ್ನು ಕಳಪೇ ವೈವಿಧ್ಯಕ್ಕೆ ಸಂಬಂದಿಸಿದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಷ್ಟೇ ಆದ್ದರಿಂದ ಮಾಂಸಾಹಾರವನ್ನು ಸ್ವಲ್ಪ ಕಡಿಮೆ ಸೇವಿಸುವುದು ತುಂಬಾ ಉತ್ತಮ.

ಕೆಂಪುಮಾಂಸ ಆಧಾರಿತ ಪ್ರೋಟೀನ್ಗಳಲ್ಲಿ ವಿಶೇಷವಾಗಿ ಅತಿ ಹೆಚ್ಚು ಪ್ರಮಾಣದ ಪ್ರೊಟೀನ್ ಇರುವ ಆಹಾರಗಳು ಕ್ಯಾನ್ಸರ್ ಸೇರಿಂದತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ನಮ್ಮನ್ನು ತಳ್ಳುತ್ತೇ ಅಂತ ಹೇಳಲಾಗುತ್ತದೆ. ಹೆಚ್ಬು ಕೆಂಪು ಮತ್ತು ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಕರುಳು ಗುದನಾಳ ಸ್ಥಾನ ಮತ್ತು ಪ್ರಸ್ಟೇಟ್ ಕ್ಯಾನ್ಸರ್ ನೊಂದಿಗೆ ಸಂಬಂದ ಹೊಂದಿರುತ್ತದೆ. ಇದು ನಮಗೆ ನಗು ಅನಿಸಬಹುದು ಆದರೆ ಮಾಂಸವನ್ನು ಹೊರತು ಪಡಿಸಿ ಬೇರೆ ಪಧಾರ್ಥಗಳಿಂದ ಪಡೆಯುವ ಪ್ರೊಟೀನ್ ಸೇವನೆ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮಾಂಸಹದಲ್ಲಿರುವ ಪ್ರೊಟೀನ್ ಹೊರತಾಗಿ ಅದರಲ್ಲಿರುವ ರಸದೂತಗಳು ಕ್ಯಾನ್ಸರ್ ಕಾರಕ ಸಂಯುಕ್ತಗಳು ಕೊಬ್ಬು ಮತ್ತು ಇತರ ಅಂಶಗಳೇ ಈ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಆದ್ದರಿಂದ ವಾರಕ್ಕೆ 1 ಇಲ್ಲವೇ 2 ಬಾರಿ ಅತಿ ಕಡಿಮೆ ಪ್ರಮಾಣದಲ್ಲಿ ಮಾಂಸವನ್ನು ಸೇವಿಸಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.