ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ನೀವೇ ನೋಡಿ. ಅಮೃತದ ಪ್ರತಿರೂಪವೇ ಆಗಿರುವ ನೀರು ಮನುಕುಲಕ್ಕೆ ಪ್ರಕೃತಿಯ ವರ ಊಟ ಬಿಟ್ಟು ಇರಬಹುದು ಆದರೆ ನೀರಿಲ್ಲದೆ ಇರಲು ಸಾಧ್ಯವಿಲ್ಲ ಪ್ರತಿನಿತ್ಯ ಒಬ್ಬ ಮನುಷ್ಯ 2 ರಿಂದ 3 ಲೀಟರ್ ನೀರು ಕುಡಿಯಬೇಕು ಈ ನೀರು ನಮ್ಮ ದೇಹದ ಹಲವು ರೀತಿಯ ಕಾಯಿಲೆಗಳಿಗೆ ರಾಮಬಾಣವಿದ್ದಂತೆ ಆದರೆ ಎಷ್ಟೋ ಜನಕ್ಕೆ 2 ರಿಂದ 3 ಲೀಟರ್ ನೀರು ಪ್ರತಿನಿತ್ಯ ಒಬ್ಬ ಮನುಷ್ಯ ಕುಡಿಯಲು ಬೇಕು ಎಂಬ ವಿಷಯ ಸಾಮಾನ್ಯವಾಗಿ ತಿಳಿದಿರುತ್ತದೆ ಆದರೆ 100 ರಲ್ಲಿ 90 ಜನಕ್ಕೆ ಆ 2 ರಿಂದ 3 ಲೀಟರ್ ನೀರನ್ನು ಹೇಗೆ ಯಾವಾಗ ಕುಡಿಯಬೇಕು ಎಂದು ತಿಳಿದಿರುವುದಿಲ್ಲ ಇನ್ನು ನಮ್ಮ ದೇಹದಲ್ಲಿ 60% ನಷ್ಟು ನೀರಿರುತ್ತದೆ ಇದು ಮೂತ್ರ ವಿಸರ್ಜನೆಯ ಮೂಲಕ ಬೆವರಿನ ಮೂಲಕ ಹೊರಹೋಗುತ್ತದೆ ಈ ಸಂದರ್ಭದಲ್ಲಿ ದೇಹದಲ್ಲಿನ ಕಲ್ಮಶಗಳು ಕೂಡ ಹೊರಹೋಗುತ್ತವೆ. ಹೀಗೆ ದೇಹದಿಂದ ನೀರು ಹೊರ ಹೋಗುವ ಕ್ರಿಯೆಯಿಂದಾಗಿ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ ಆ ಸಂದರ್ಭದಲ್ಲಿ ದೇಹಕ್ಕೆ ಅವಶ್ಯವಿದ್ದ ನೀರನ್ನು ಕೊಡದೆ ಇದ್ದಲ್ಲಿ ಕರುಳಿನ ಸಮಸ್ಯೆ
ಮಲ ವಿಸರ್ಜನೆಯ ಸಮಸ್ಯೆ ಮೂಲವ್ಯಾಧಿ ಕ್ಯಾನ್ಸರ್ ಮೂತ್ರಪಿಂಡದ ಕಲ್ಲುಗಳು ನಿರ್ಜಲೀಕರಣ ಚರ್ಮ ಕಾಂತಿ ಕಳೆದುಕೊಳ್ಳುವುದು ಮೊಡವೆಗಳು ಸುಸ್ತು ಕೂದಲು ಉದುರುವುದು ಹೇಗೆ ಹಲವಾರು ತೊಂದರೆಗಳು ಆಗುತ್ತವೆ ಹಾಗಾಗಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ದೇಹಕ್ಕೆ ಅಗತ್ಯವಾದ ನೀರನ್ನು ತಪ್ಪದೆ ಕುಡಿಯಿರಿ ಹಾಗೇನೇ ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣಪಡಿಸಿಕೊಳ್ಳಬಹುದು ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಪ್ರಾರಂಭವಾಗುತ್ತವೆ ಜಪಾನಿನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆಯಿಂದ ಇರುವವರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ ಏಕೆಂದರೆ ಜಪಾನಿನ ಜನರು ನೀರಿನ ತೆರಪಿಯನ್ನು ಅನುಸರಿಸುತ್ತಾರೆ. ಅದು ಹೇಗೆ ಎಂದರೆ ಬೆಳಿಗ್ಗೆ ಹಲ್ಲು ಉಜ್ಜುವ ಮುಂಚೆ 4 ಲೋಟ ನೀರು ಕುಡಿಯುವುದು ನಂತರ ಅರ್ಧ ಗಂಟೆಗಳ ಕಾಲ ಏನು ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ ಹೀಗಾಗಿ ಜಪಾನಿನ ಜನರು ಹೆಚ್ಚು ಆಕರ್ಷಿತರಾಗಿರುತ್ತಾರೆ ಮತ್ತು ಚಟುವಟಿಕೆಯಿಂದ ಇರುತ್ತಾರೆ. ಬೆಳಿಗ್ಗೆ ಹಲ್ಲುಜ್ಜುವ ಮುಂಚೆ ನೀರು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ಲಾಭಗಳಿವೆ ತಿಳಿಯೋಣ.
ಬೆಳಿಗ್ಗೆ ಹಲ್ಲುಜ್ಜುವ ಮುನ್ನ ನೀರು ಕುಡಿದರೆ ಮಲವಿಸರ್ಜನೆ ಮಾಡುವ ಅಗತ್ಯಆಗುವುದು ಹೀಗೆ ಮಾಡಿದರೆ ಕರುಳಿನ ಕ್ರಿಯೆ ಸರಾಗವಾಗಿ ಮಲವಿಸರ್ಜನೆ ಮೂಲಕ ದೇಹದಲ್ಲಿ ತ್ಯಾಜ್ಯ ಹೊರಹೋಗಿ ಮೂಲವ್ಯಾದಿಯಿಂದ ಮುಕ್ತಿ ಸಿಗುತ್ತದೆ. ಪ್ರತಿದಿನ ನಾವು ಆಹಾರದ ಮೂಲಕ ಸೇವನೆ ಮಾಡಿರುವ ವಿಷಕಾರಿ ಅಂಶಗಳು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ಹೊರಹೋಗುತ್ತದೆ. ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳುಗಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ ಬೆಳಿಗ್ಗೆ ಬೇಗನೆ ಹಸಿವಾಗುತ್ತದೆ ಇದರಿಂದ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಬಹುದು. ಇನ್ನು ತಲೆನೋವು ನಿವಾರಿಸುತ್ತದೆ ದೇಹದಲ್ಲಿನ ನೀರಿನ ಮಟ್ಟ ಕಡಿಮೆಯಾದಾಗ ತಲೆನೋವು ಕಾಣಿಸಿಕೊಳ್ಳುತ್ತದೆ ಹಾಗಾಗಿ ಬೆಳಿಗ್ಗೆ ನೀರು ಕುಡಿಯುವುದರಿಂದ ನಿಮ್ಮ ದೇಹದ ನೀರಿನ ಮಟ್ಟವನ್ನು ಕಾಯ್ದುಕೊಳ್ಳಬಹುದು ಇನ್ನು ಕರುಳಿನಲ್ಲಿ ಸಂಗ್ರಹವಾಗುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ ಇದರಿಂದ ದೇಹವು ಪೌಷ್ಟಿಕಾಂಶಗಳನ್ನು ಬೇಗನೆ ಹಿರಿಕೊಳ್ಳುತ್ತದೆ. ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂಪು ರಕ್ತ ಕಣಗಳನ್ನು ಅತಿ ವೇಗವಾಗಿ ಉತ್ಪತ್ತಿಮಾಡುತ್ತದೆ ಇದು ಆಮ್ಲಯುಕ್ತ ರಕ್ತವಾಗಿರುವ ಕಾರಣ ನೀವು ಹೆಚ್ಚು ಕ್ರಿಯಾಶೀಲ ರಾಗಿರುತ್ತೀರಿ ಇನ್ನು ತೂಕ ಕಳೆದುಕೊಳ್ಳಲು ನೀರು ಕಾರಣವಾಗುತ್ತದೆ ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿನ ಬೇಡದ ಕೊಬ್ಬು ಕರಗಿ ದೇಹದ ತೂಕ ಕಡಿಮೆಯಾಗುತ್ತದೆ.
ಕರುಳಿನಕ್ರಿಯೆ ಸರಿಯಾಗಿ ಇರದ ಸಮಯದಲ್ಲಿ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳಲು ನೀರು ತುಂಬಾ ಮುಖ್ಯ ಖಾಲಿಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹಕ್ಕೆ ಅಗತ್ಯವಿರುವ ನೀರನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ನೆನಪಿನ ಶಕ್ತಿ ಜೊತೆಗೆ ಏಕಾಗ್ರತೆ ಹೆಚ್ಚುತ್ತದೆ. ಮಲಗುವ ಸಮಯದಲ್ಲಿ ನೀವು ಮಲಗುವ ಕೋಣೆಯಲ್ಲಿ ಒಂದು ಚಂಬು ನೀರನ್ನು ಇಟ್ಟುಕೊಂಡು ಮಲಗಿ ಬೆಳಿಗ್ಗೆ ಎದ್ದ ಜಾಗದಲ್ಲೇ ಗುಟುಕು ಗುಟುಕಾಗಿ ಕುಡಿಯಿರಿ ಪ್ರಾರಂಬದಲ್ಲೆ ಹೀಗೆ ಕುಡಿಯುವುದು ಕಷ್ಟ ಆದರೆ ಕ್ರಮೇಣ ಅಭ್ಯಾಸವಾಗುವುದು ಈ ರೀತಿ ಒಂದು ವಾರ ಕುಡಿದರೆ ನಿಮಗೆ ಪ್ರಯೋಜನ ತಿಳಿಯುತ್ತದೆ. ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಇದು ಅತ್ಯುತ್ತಮವಾದ ಮದ್ದು. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ