ಕಬ್ಬಿನ ಹಾಲು ಕುಡಿಯುವ ಮುಂಚೆ ತಿಳಿಯಿರಿ

ಮನೆ ಮದ್ದು

ನೀವು ಕಬ್ಬಿನ ಹಾಲನ್ನು ಕುಡಿಯುತ್ತಿರ ಹಾಗಾದರೆ ಈ ವಿಷಯ ಕೇಳಿ. ದೇಶದಲ್ಲಿ ಎಷ್ಟೇ ರೀತಿಯಾದ ತಂಪು ಪಾನಿಯಗಳು ಬಂದರು ಕೂಡ ದೇಶದಲ್ಲಿ ಕಬ್ಬಿನ ಹಾಲಿಗೆ ಇರುವ ಒಂದು ಬೇಡಿಕೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ ನೀವು ಕೂಡ ನೋಡಿರಬಹುದು ಬೇಸಿಗೆ ಕಾಲದಲ್ಲಿ ಸ್ವಲ್ಪ ಸಮಯ ಹೊರಗಡೆ ತಿರುಗಿದರು ಕೂಡ ತುಂಬಾನೇ ಬಾಯಾರಿಕೆ ಆಗುತ್ತದೆ ಇನ್ನು ಕೆಲವರು ಬಾಯಾರಿಕೆ ಆಗುವುದಕ್ಕೆ ವಿವಿಧ ಬಗೆಯ ತಂಪು ಪಾನೀಯಗಳ ಮೊರೆ ಹೋಗುತ್ತಾರೆ ಇನ್ನು ಬೇಸಿಗೆ ಸಮಯದಲ್ಲಿ ಜನರು ತಮ್ಮ ಬಾಯರಿಕೆಯನ್ನು ಈಡೇರಿಸಿಕೊಳ್ಳಲು ರಸ್ತೆ ಬದಿಯಲ್ಲಿ ಸಿಗುವ ಕಬ್ಬಿನ ಹಾಲಿಗೆ ಮೊರೆ ಹೋಗುವುದನ್ನು ನಾವು ಕಂಡಿದ್ದೇವೆ ನೀವು ಕೂಡ ಕಬ್ಬಿನ ಹಾಲನ್ನು ಕುಡಿಯುತ್ತಿದ್ದಿರ ಹಾಗಾದರೆ ಈ ಲೇಖನವನ್ನು ದಯವಿಟ್ಟು ಪೂರ್ತಿಯಾಗಿ ಓದಿರಿ. ರಸ್ತೆ ಬದಿಯಲ್ಲಿ ಇರುವ ಕೆಲವು ಕಬ್ಬಿನ ಅಂಗಡಿಯಲ್ಲಿ ಒಬ್ಬರೇ ಇರುತ್ತಾರೆ ಅವರೇ ಯಂತ್ರದಲ್ಲಿ ಕಬ್ಬನ್ನು ಹಾಕಿ ಕೂಡ ಚಲೂವು ಮಾಡುತ್ತಾರೆ

ಅವರೇ ಕಬ್ಬಿನ ಹಾಲನ್ನು ಲೋಟಕ್ಕೆ ಹಾಕಿ ಕೂಡ ಕೊಡುತ್ತಾರೆ ಇನ್ನು ಕಬ್ಬಿನ ಹಾಲನ್ನು ಮಾಡುವ ಮನುಷ್ಯ ಆ ಯಂತ್ರವನ್ನು ಮುಟ್ಟಿ ತನ್ನ ಕೈಯನ್ನು ಹೊಲಸು ಮಾಡಿಕೊಳ್ಳುತ್ತಾನೆ ಮತ್ತು ಅದೇ ಕೈಯಿಂದ ಒಂದು ಲೋಟ ಹಾಲನ್ನು ನಮಗೆ ಕೊಡುತ್ತಾನೆ ಆದ್ದರಿಂದ ನೀವು ಕಬ್ಬಿನ ಹಾಲನ್ನು ಕುಡಿಯುವ ಮುನ್ನ ಇವುಗಳನ್ನು ಖಡ್ಡಾಯವಾಗಿ ಗಮನಿಸುವುದು ಒಳ್ಳೆಯದು ಮತ್ತೊಂದು ವಿಷಯ ಏನೆಂದರೆ ಕೆಲವು ಅಂಗಡಿಗಲ್ಲಿ ಕಬ್ಬಿನ ಹಾಲನ್ನು ಮಾಡುವ ಯಂತ್ರಗಳನ್ನು ಸ್ವಚ್ಛ ಮಾಡಿರುವುದಿಲ್ಲ ನಿಂಬೆಹಣ್ಣು ಶುಂಠಿ ಅಥವಾ ಪುದಿನ ಇದನ್ನು ಸ್ವಚ್ಛ ಮಾಡದೆ ಅದಕ್ಕೆ ಮಿಶ್ರಣ ಮಾಡಿ ಕೊಡುತ್ತಾರೆ. ಇನ್ನು ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ ಏಕೆಂದರೆ ಅದು ಕೂಡ ಒಂದು ಹಾಳಾದ ಕಬ್ಬಾಗಿರುತ್ತದೆ ಇನ್ನು ಈ ರೀತಿಯ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಿಮಗೆ ಅತಿಸಾರ ಮತ್ತು ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳು ಬರಬಹುದು ಎಂದು ವೈದ್ಯರು ಹೇಳುತ್ತಾರೆ. ಹಾಗೆಯೇ ಕಲಬೆರಕೆ ಕಡಿಮೆ ಬೆಲೆ ಐಸ್ ಬಳಕೆ ಮಾಡಿರುವ ಉದಾಹರಣೆ ಸಹ ಸಾಕಷ್ಟು ಇದೆ.

ಇನ್ನು ಸ್ವಚ್ಚ ಮಾಡಿದ ಕಬ್ಬಿನ ಹಾಲಿನ ಯಂತ್ರ ಮತ್ತು ಅದರಿಂದ ಮಾಡಿದ ಹಾಲನ್ನು ನೀವು ಕುಡಿದರೆ ಅದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಏಕೆಂದರೆ ಕೆಮಿಕಲ್ ಸೇರಿದ ತಂಪು ಪಾನೀಯಗಳನ್ನು ನೀವು ಕುಡಿಯುವುದರಿಂದ ನಿಮ್ಮ ಹೊಟ್ಟೆ ಹಾಳಾಗುತ್ತದೆ ಆದ್ದರಿಂದ ಯಾವುದೇ ವಿಧವಾದ ಯಾವುದೇ ಹಾಳಾದ ಕೆಮಿಕಲ್ ಮಿಶ್ರಿತವಲ್ಲದ ತಂಪು ಪಾನೀಯ ಎಂದರೆ ಅದು ಕಬ್ಬಿನ ಹಾಲು ಹಾಗಾಗಿ ಕಬ್ಬಿನ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇನೇ ಕಬ್ಬಿನ ಹಾಲನ್ನು ಅಥವಾ ಕಬ್ಬನ್ನು ಬೇಸಿಗೆ ಕಾಲದಲ್ಲಿ ತಿನ್ನುವುದರಿಂದ ನಿಮ್ಮ ದೇಹವನ್ನು ತುಂಬಾನೇ ತಂಪಾಗಿ ಇಟ್ಟುಕೊಳ್ಳಬಹುದು. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.