ವಿದ್ಯಾರ್ಥಿಗಳಾಗಿದ್ದರೆ ಓದಿದ್ದು ಹೆಚ್ಚುಕಾಲ ನೆನಪಿನಲ್ಲಿರಬೇಕು ಅಂದ್ರೆ

ಉಪಯುಕ್ತ ಸಲಹೆ

ನೀವು ವಿದ್ಯಾರ್ಥಿಗಳಾಗಿದ್ದರೆ ಓದಿದ್ದು ಹೆಚ್ಚುಕಾಲ ನೆನಪಿನಲ್ಲಿರಬೇಕು ಎಂದರೆ ಈ ಸಲಹೆಗಳನ್ನು ಪಾಲಿಸಿರಿ. ಅನೇಕ ಮಕ್ಕಳು ಪ್ರತಿನಿತ್ಯ ಮನೆಯಲ್ಲಿ ಕುಳಿತು ಎಷ್ಟು ಓದಿದರು ಪರೀಕ್ಷಾ ಸಂದರ್ಭದಲ್ಲಿ ಮಾತ್ರ ಓದಿದ್ದು ನೆನಪಾಗುವುದಿಲ್ಲ ಎಂದು ಹೇಳಿದ್ದನ್ನು ನಾವು ಕೇಳಿರುತ್ತೇವೆ ಅದಕ್ಕೆ ಕಾರಣ ಹಲವಾರಿವೆ. ಪ್ರತಿ ಮಗುವು ಶಾಲೆಯಲ್ಲಿ ಮೊದಲನೇ ಸ್ಥಾನ ಪಡೆಯಲು ಸಾಧ್ಯವಿಲ್ಲ ಒಂದೊಂದು ಮಗು ಕೂಡ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗೆಂದ ಮಾತ್ರಕ್ಕೆ ಪೋಷಕರು ಸುಮ್ಮನೆ ಇರಬೇಕಾಗಿಲ್ಲ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಏನು ಮಾಡಬಹುದು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಯೋಣ. ಮನೆಯಲ್ಲಿ ಓದುವ ಮಕ್ಕಳಿದ್ದರೆ ಈ ಅಂಶವನ್ನು ಗಮನವಿಡಿ ಮಕ್ಕಳು ಸದಾ ಪುಸ್ತಕ ಹಿಡಿದು ಕುಳಿತರೆ ಓದಿದಂತಾಗುವುದಿಲ್ಲ ಬದಲಾಗಿ ಓದು ಹೇಗಿರಬೇಕು ಮತ್ತು ಓದಿದ್ದು ನೆನಪಿನಲ್ಲಿ ಉಳಿಯುವಂತೆ ಮಾಡುವುದು ಹೇಗೆ ಎನ್ನುವುದನ್ನು ಈಗ ನೋಡೋಣ.

ಅಧ್ಯಯನ ಮಾಡುವ ಮುನ್ನ ಸ್ವಲ್ಪ ಆರಾಮವಾಗಿ ಸ್ವಚ್ಛಂದ ಗಾಳಿಯಲ್ಲಿ ನಡೆದಾಡಿ ವಿದ್ಯಾರ್ಥಿಗಳು ಪ್ರತಿನಿತ್ಯ ಓದುವ ಮುಂಚೆ 15 ನಿಮಿಷಗಳ ಕಾಲ ನಡೆಯುವುದು ಒಳ್ಳೆಯದು ಇದರಿಂದ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಬೆಳಿಗ್ಗೆಯಿಂದ ತರಗತಿಯಲ್ಲಿ ಸಮಯ ಕಳೆದ ಮಕ್ಕಳಿಗೆ ಮಾನಸಿಕವಾಗಿ ಒತ್ತಡಗಳಿರುತ್ತವೆ ಹಾಗಾಗಿ ಅಧ್ಯಯನ ಮಾಡುವ ಮುನ್ನ ಸ್ವಲ್ಪ ನಡೆಯಿರಿ ಆಗ ಅಧ್ಯಯನ ಮಾಡಲು ಆಸಕ್ತಿ ಬೆಳೆಯುತ್ತದೆ. ಜ್ಞಾನ ಮಾಡುವುದು ವಿದ್ಯಾರ್ಥಿಗಳು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಹೆಚ್ಚು ಅವಶ್ಯಕ ಹಾಗಾಗಿ ಬೆಳಿಗ್ಗೆ ಮತ್ತು ಸಂಜೆ ಅಧ್ಯಯನಕ್ಕೆ ಕುರುವ ಮುನ್ನ 10 ರಿಂದ 15 ನಿಮಿಷಗಳ ಕಾಲ ಜ್ಞಾನ ಮಾಡಿ ಇದರಿಂದ ಮೆದುಳು ಮತ್ತು ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ ಇದರಿಂದ ಪ್ರತಿನಿತ್ಯ ಅಧ್ಯಯನವನ್ನು ಯಾವುದೇ ರೀತಿಯ ದ್ವಂದ್ವಗಳಿಲ್ಲದೆ ಆಯಾಸವಿಲ್ಲದೆ ಸುಲಭವಾಗಿ ಮಾಡಬಹುದು. ಮತ್ತು ನೀರು ಮತ್ತು ಆಹಾರ ಸೇವನೆ ಮುಖ್ಯ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ವಿದ್ಯಾರ್ಥಿಗಳು ಅಂದಿನ ಪಾಠವನ್ನು ಅಂದೆ ಅಧ್ಯಯನ ಮಾಡಲು ಸಾಧ್ಯ ಮತ್ತು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಸದ್ಯ ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ

ಪ್ರತಿನಿತ್ಯ ಹೆಚ್ಚು ನೀರು ಕುಡಿಯಿರಿ ಮತ್ತು ಉತ್ತಮ ಆಹಾರ ಸೇವನೆ ಮಾಡಿ ಮೆದುಳಿನ ಆರೋಗ್ಯಕ್ಕೆ ಪುರಕವಾಗುವಂತಹ ಆಹಾರವನ್ನು ಹೆಚ್ಚು ಸೇವಿಸಿ ಪುಸ್ತಕವನ್ನು ಕಣ್ಣಾಡಿಸಿ ಓದುವ ಬದಲು ಜೋರಾಗಿ ಬಾಯಿಯಿಂದ ಓದಿ ಅನೇಕ ಮಕ್ಕಳು ಪುಸ್ತಕ ಹಿಡಿದು ಹೆಚ್ಚು ತಾಸು ಸುಮ್ಮನೆ ಓದುತ್ತ ಕುಳಿತಿರುತ್ತಾರೆ ಆದರೆ ಇಂತಹ ಸಮಯದಲ್ಲಿ ಮನಸ್ಸು ಬೇರೆಡೆಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಹಾಗಾಗಿ ಮಕ್ಕಳು ಜೋರಾಗಿ ಬಾಯಿಬಿಟ್ಟು ಓದಿದಾಗ ವಿಷಯ ಹೆಚ್ಚುಕಾಲ ನೆನಪಿನಲ್ಲಿ ಉಳಿಯುತ್ತದೆ. ಓದಿದನ್ನು ಇನ್ನೊಬ್ಬರೊಂದಿಗೆ ಚರ್ಚಿಸಿ ಅನೇಕ ಮಕ್ಕಳು ತಾವು ಓದಿ ಉತ್ತಮ ಅಂಕ ಗಳಿಸಬೇಕೆಂಬ ಆಲೋಚನೆಯನ್ನು ಹೊಂದಿರುತ್ತಾರೆ. ಆದರೆ ಇದು ಹೆಚ್ಚುಕಾಲ ನೆನಪಿನಲ್ಲಿ ಉಳಿಯಲು ಸಾಧ್ಯವಿಲ್ಲ ತಾವು ಓದಿದ ವಿಷಯವನ್ನು ಸ್ನೇಹಿತರೊಂದಿಗೆ ಚರ್ಚಿಸುವುದು ಮತ್ತು ಅವರಿಗೆ ವಿವರಿಸುವಂತಹ ಚಟುವಟಿಕೆಗಳನ್ನು ಮಾಡಿದಾಗ ವಿಷಯಜ್ಞಾನ ಹೆಚ್ಚಾಗುವುದರ ಜೊತೆಗೆ ಓದಿದ್ದು ಹೆಚ್ಚುಕಾಲ ನೆನಪಿನಲ್ಲಿ ಇಟ್ಟುಕೊಳ್ಳಬಹುದು.

ಪಠ್ಯದಲ್ಲಿರುವ ಚಿತ್ರಗಳನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳು ಪುಟಗಟ್ಟಲೆ ಓದುವುದಕ್ಕಿಂತ ಕ್ಷಣಕಾಲ ನೋಡಿದಂತಹ ಪಠ್ಯಗಳಲ್ಲಿನ ಚಿತ್ರಗಳು ಹೆಚ್ಚು ನೆನಪಿಗೆ ಬರುತ್ತವೆ ಹಾಗಾಗಿ ಪಾಠಗಳಲ್ಲಿ ಇರುವ ಚಿತ್ರಗಳನ್ನು ಬಿಡಿಸುವ ಅಭ್ಯಾಸ ಹೆಚ್ಚು ಮಾಡಿ ಇದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ವಿಷಯವು ಹೆಚ್ಚುಕಾಲ ನೆನಪಿನಲ್ಲಿರುತ್ತದೆ ಅಧ್ಯಯನದ ನಡುವೆ ವಿರಾಮವನ್ನು ತೆಗೆದುಕೊಳ್ಳಿ ವಿದ್ಯಾರ್ಥಿಗಳು ಸದಾ ಓದಿನಲ್ಲಿ ಮಗ್ನರಾಗಿದ್ದರೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ 40 ರಿಂದ 45 ನಿಮಿಷಗಳ ಕಾಲ ನಿರಂತರ ಅಧ್ಯಯನ ಮಾಡಿದ್ದಲ್ಲಿ ತದನಂತರ 10 ರಿಂದ 15 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ಅಧ್ಯಯನ ಮಾಡುವುದು ಒಳಿತು ಹೀಗೆ ಮಾಡಿದಾಗ ಯಾವುದೇ ವಿಷಯವನ್ನು ಮರೆಯಲು ಸಾಧ್ಯವಿಲ್ಲ ಹಾಗೂ ಅಧ್ಯಯನದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸುಲಬವಾಗುತ್ತದೆ. ಮನಸ್ಸಿಗೆ ಖುಷಿ ಕೊಡುವ ಸಂಗೀತ ಕೇಳಿ ವಿದ್ಯಾರ್ಥಿಗಳು ಎಂದ ಮಾತ್ರಕ್ಕೆ ಎಲ್ಲ ವಿಷಯಗಳಿಂದ ದೂರವಿರಬೇಕು ಎಂದಿಲ್ಲ ಮನಸ್ಸಿಗೆ ಮುದ ನೀಡುವ

ಆಸಕ್ತಿಗೆ ಪೂರಕವಾಗುವಂತಹ ಸಂಗೀತವನ್ನು ಕೇಳಿ ಅಧ್ಯಯನದ ನಡುವೆ ವಿರಾಮ ತೆಗೆದುಕೊಳ್ಳುವ ಸಮಯದಲ್ಲಿ ವಿದ್ಯಾರ್ಥಿಗಳು ಇರೀತಿ ಮಾಡಿದರೆ ಮನಸ್ಸು ಉಲ್ಲಾಸದಿಂದ ಇರುತ್ತದೆ. ಜೊತೆಗೆ ಆರಾಮವು ಸಹ ಸಿಗುತ್ತದೆ. ನಂತರ ಅಧ್ಯಯನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು. ಸ್ನೇಹಿತರೊಂದಿಗೆ ಅಧ್ಯಯನ ಮಾಡಿ ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳು ಕೋಣೆಯೊಳಗೆ ಒಬ್ಬರೇ ಕುಳಿತು ಅಧ್ಯಯನ ಮಾಡುವುದನ್ನು ನೋಡಿರುತ್ತೇವೆ ಆದರೆ ಶಾಲೆಯಲ್ಲಿ ಸ್ನೇಹಿತರೊಂದಿಗೆ ಕುಳಿತು ಅಧ್ಯಯನ ಮಾಡುತ್ತ ಚರ್ಚಿಸುತ್ತ ಇನ್ನೊಬ್ಬರಿಗೆ ಹೇಳಿಕೊಡುತ್ತ ಅಧ್ಯಯನ ಮಾಡಿದರೆ ನಿಮ್ಮಂತೆ ಇತರರು ಓದಿನತ್ತ ಗಮನ ಕೊಡುತ್ತಾರೆ ಅಷ್ಟೇ ಅಲ್ಲದೆ ನಿಮಗೂ ವಿಷಯ ಜ್ಞಾನ ಹೆಚ್ಚಾಗುತ್ತದೆ. ಪಠ್ಯದ ಬಗೆಗೆ ಕೆಲವು ಸಂದೇಹಗಳು ಉಂಟಾಗುತ್ತವೆ ಅದನ್ನು ನಿಮ್ಮ ಗೆಳೆಯರೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳುವ ಅವಕಾಶವೂ ದೊರೆಯುತ್ತದೆ.

ಹೀಗೆ ಮಾಡಿದರೆ ಓದಿದನ್ನು ಹೆಚ್ಚುಕಾಲ ನೆನಪಿನಲ್ಲಿಟ್ಟುಕೊಳ್ಳಬಹುದು ಕಷ್ಟವಾದ ವಿಷಯವನ್ನು ಹೆಚ್ಚು ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳು ಬಹುಬೇಗ ಅರ್ಥವಾಗುವುದಿಲ್ಲ ಮತ್ತೆ ಕೆಲವು ವಿಷಯಗಳು ಬಹುಬೇಗ ನೆನಪಾಗುವುದಿಲ್ಲ ಅಂತಹ ವಿಷಯಗಳನ್ನು ಹೆಚ್ಚು ಸಮಯ ಅಧ್ಯಯನ ಮಾಡಿದರೆ ನಿಮಗೆ ವಿಷಯವು ಅರ್ಥವಾಗುವುದರ ಜೊತೆಗೆ ಹೆಚ್ಚುಕಾಲ ನೆನಪಿನಲ್ಲಿಟ್ಟುಕೊಳ್ಳಬಹುದು ಈ ಎಲ್ಲ ಸರಳ ವಿಧಾನವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಿದ್ದಲ್ಲಿ ಅಧ್ಯಯನವು ಯಾವುದೇ ಹಂತದಲ್ಲಿ ಕುಂಠಿತಗೊಳ್ಳುವುದಿಲ್ಲ ಪ್ರಾರ್ಥಮಿಕ ಹಂತದ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ಹಂತದ ವರೆಗೂ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಅಧ್ಯಯನ ಮಾಡಿ ಇದರಿಂದ ನೀವು ಪ್ರತಿಭಾವಂತ ವಿದ್ಯಾರ್ಥಿ ಆಗುವುದರ ಜೊತೆಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತೀರಿ. ಈ ಒಂದು ಮಾಹಿತಿ ನೀವು ವಿದ್ಯಾರ್ಥಿ ಆಗಿದ್ದರೆ ನಿಮಗೆ ಖಂಡಿತವಾಗಿಯೂ ಇಸ್ಟ ಆಗುತ್ತದೆ ಕೂಡಲೇ ಒಂದು ಲೈಕ್ ಕೊಡಿ ಹಾಗೇನೇ ನಿಮ್ಮ ಎಲ್ಲಾ ಸ್ನೇಹಿತರಿಗೂ ಸಹ ಶೇರ್ ಮಾಡಿ

Leave a Reply

Your email address will not be published.