ಗಾಳಿಯಲ್ಲಿ ತೇಲುವ ಶಿವಲಿಂಗ

ದೇವರು

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು ಅಂದರೆ 12 ಜ್ಯೋತಿರ್ಲಿಂಗಗಳು ಇವೆ ಅವುಗಳಲ್ಲಿ ಮೊಟ್ಟ ಮೊದಲನೇ ಜ್ಯೋತಿರ್ಲಿಂಗಗಳ ಕ್ಷೇತ್ರ ಗುಜರಾತ್ ರಾಜ್ಯದಲ್ಲಿನ ವೇರವಲ್ ನಲ್ಲಿರುವ ಸೋಮನಾಥ ಇಲ್ಲಿರುವ ಸೋಮನಾಥ ದೇವಲಯವೆಂಬುದು ಪುರಾತನ ಶಿವನ ದೇವಾಲಯವಾಗಿದೆ ಭಾರತ ದೇಶದಲ್ಲಿರುವ ಶಿವ ಭಕ್ತರು ಹೆಚ್ಚಾಗಿ ಭೇಟಿನೀಡುವ ದೇವಸ್ಥಾನವಾಗಿದೆ ಸೋಮನಾಥ ಕ್ಷೇತ್ರದ ಬಗ್ಗೆ ಪುರಾಣಗಳಲ್ಲಿ ಕೂಡ ಹೇಳಲಾಗಿದೆ ಎಷ್ಟೋ ಅದ್ಭುತವಾದ ಚರಿತ್ರೆಯನ್ನು ಹೊಂದಿರುವ ಸೋಮನಾಥ ದೇವಾಲಯ ಕ್ಷೇತ್ರದ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಉತ್ತರ ಭಾರತ ದೇಶದಲ್ಲಿ ಹೆಚ್ಚಾಗಿ ಹಿಂದುಗಳು ಶಿವಾಲಯದಲ್ಲಿ ದೀಪಗಳನ್ನು ಹಚ್ಚಿ ಆರಾಧಿಸುತ್ತಾರೆ ಮುಖ್ಯವಾಗಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಹೇಳುವುದಕ್ಕಿಂತ ಹೆಚ್ಚಾಗಿ ಪೂಜೆಗಳು ಅಲ್ಲಿ ನಡೆಯುತ್ತವೆ ಇಲ್ಲಿ ಭಕ್ತ ಸಮೂಹ ಕಣ್ಣಿಗೆ ನಿಲುಕಲಾರದಷ್ಟು ಸಮೂಹ ಸೇರುತ್ತದೆ

ಈ ಕ್ಷೇತ್ರಗಳಲ್ಲಿ ಕಾಲು ಇಡಲು ಕೂಡ ಜಾಗವಿರುವುದಿಲ್ಲ ಈ ಸೋಮನಾಥ ಕ್ಷೇತ್ರದ ಸ್ಥಳ ಪುರಾಣ ಬಗ್ಗೆ ಹೇಳುವುದಾದರೆ ಚಂದ್ರನು ದಕ್ಷನ ಶಾಪದಿಂದ ವಿಮುಕ್ತಿ ಮಾಡಿದ ಶಿವನಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ ಅದೇ ಈ ಸೋಮನಾಥ ದೇವಾಲಯ ಇದನ್ನು ಮೊದಲು ಚಂದ್ರನು ಬಂಗಾರವನ್ನು ಬಳಸಿ ದೇವಾಲಯವನ್ನು ನಿರ್ಮಾಣವನ್ನು ಮಾಡಿದ್ದನ್ನು ನಂತರ ರಾವಣನು ಬೆಳ್ಳಿಯಿಂದ ಕೃಷ್ಣನು ಲೋಹದಿಂದ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಸೋಮನಾಥ ದೇವಾಲಯವು ಪ್ರಮುಖ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮೊದಲನೆಯದ್ದು ಇಲ್ಲಿ ಸಾಕ್ಷಾತ್ ಶಿವ ಪರಮಾತ್ಮನೇ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ನಿರ್ಮಿಸಿದ ಸಮಯದಿಂದ ಸುಮಾರು 7 ಬಾರಿ ನಾಶವಾಗಿ ಪುನರ್ ನಿರ್ಮಾಣ ಮಾಡಲ್ಪಟ್ಟಿದೆ ಕೊನೆಯದಾಗಿ ವಲ್ಲಬಾಯಿ ಪಟೇಲ್ 1951 ರಲ್ಲಿ ಈ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತದೆ

ಸೋಮನಾಥ ದೇವಾಲಯದಲ್ಲಿ ಯಾರಿಗೂ ಅರ್ಥವಾಗದ ಕೆಲವು ವಿಚಿತ್ರಗಳು ನಡೆಯುತ್ತವೆ ಅದೇ ಚಂದ್ರನು ಪ್ರತಿಷ್ಠಾಪಿಸಿದ ಶಿವಲಿಂಗ ದೇವಾಲಯದ ಮಧ್ಯದಲ್ಲಿ ಭೂಮಿಯ ಒಳಗೆ ಯಾವುದೇ ಆಧಾರವಿಲ್ಲದೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಇದು ಗಾಳಿಯಲ್ಲಿ ತೇಲುವ ಶಿವಲಿಂಗದ ಹಾಗೆ ನಮಗೆ ಕಾಣಿಸುತ್ತದೆ ಇದೊಂದು ವರ್ಣಿಸಲಾಗದ ಒಂದು ಅದ್ಭುತ ದೃಶ್ಯ ಎಂದು ಹೇಳಬಹುದು ಸೋಮನಾಥ ದೇವಾಲಯದ ಒಳಗೆ ವಿಶಾಲವಾದ ಮಂಟಪ ಎತ್ತರದ ಗೋಪುರಗಳು ನಮಗೆ ಕಾಣಿಸುತ್ತದೆ ಗುಡಿಯಲ್ಲಿ ಶಿವಲಿಂಗವು ದೊಡ್ಡ ಗಾತ್ರದಲ್ಲಿ ಕಾಣಿಸುತ್ತದೆ. ಶಿವಲಿಂಗದ ಹಿಂದೆ ಪಾರ್ವತಿ ದೇವಿ ವಿಗ್ರಹವು ಸಹ ಕಾಣಿಸುತ್ತದೆ.

ದ್ವಾರಕ್ಕೆ ಬಲಭಾಗದಲ್ಲಿ ಹಾಗೂ ಹಿಂದಿನ ಭಾಗದಲ್ಲಿ ವಿನಾಯಕನ ವಿಗ್ರಹ ಆಂಜನೇಯ ಸ್ವಾಮಿ ವಿಗ್ರಹಗಳು ಕಾಣಿಸುತ್ತವೆ ಈ ದೇವಾಲಯಗಳ ಕೆತ್ತನೆ ಬೆಳ್ಳಿದ್ವಾರಗಳು ನಂದಿ ವಿಗ್ರಹಗಳು ಮತ್ತು ಇಲ್ಲಿನ ಶಿವಲಿಂಗ ಪ್ರಮುಖ ಆಕರ್ಷಣೆಯನ್ನು ಪಡೆದಿದೆ. ಭಕ್ತರು ಕಾರ್ತಿಕ ಪೌರ್ಣಮಿ ಹಬ್ಬದ ಸಮಯದಂದು ಈ ದೇವಾಲಯಕ್ಕೆ ವಿಶೇಷವಾಗಿ ಭೇಟಿ ನೀಡುತ್ತಾರೆ ಮಹಾಶಿವರಾತ್ರಿ ಮತ್ತು ಚಂದ್ರಗ್ರಹಣ ಸಂದರ್ಭದಲ್ಲಿ ಲಕ್ಷಾಂತರ ಜನರು ಸೋಮನಾಥ ದೇವಾಲಯಕ್ಕೆ ಭೇಟಿನೀಡಿ ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ ಇಲ್ಲಿ ನಾವು ಕಾಣುವಂತಹ ಒಂದು ಅದ್ಭುತವೇ ಈ ಶಿವಲಿಂಗ ಗಾಳಿಯಲ್ಲಿ ತೇಲುವುದು ಇದೊಂದು ಎಲ್ಲರನ್ನು ಅಚ್ಚರಿ ಮೂಡಿಸುತ್ತದೆ.

Leave a Reply

Your email address will not be published.