ಈ ಊರಿನಲ್ಲಿ ಬರೀ ಹೆಣ್ಣು ಮಕ್ಕಳೇ ವಾಸಿಸುತ್ತಾ ಇದ್ದಾರೆ

ಇತರೆ ಸುದ್ದಿ

ಸ್ನೇಹಿತರೆ ಪ್ರತಿಯೊಂದು ಹೆಣ್ಣಿಗೂ ಗಂಡಿನ ಅವಶ್ಯಕತೆ ಇರುತ್ತದೆ ಇದು ಪ್ರಕೃತಿಯ ನಿಯಮ ಕೂಡ ಹೌದು ಆದರೆ ಇಲ್ಲೊಂದು ಊರಿನಲ್ಲಿ ಗಂಡಸರು ಇಲ್ಲ ಎಂದರೆ ನೀವು ನಂಬಲೇ ಬೇಕು ಈ ಊರಿನಲ್ಲಿ ಬರೀ ಹೆಣ್ಣು ಮಕ್ಕಳೇ ವಾಸಿಸುತ್ತಾ ಇದ್ದಾರೆ ಹೆಣ್ಣು ಮಕ್ಕಳು ಹೇಳಿದ್ದೆ ನಡೆಯುತ್ತದೆ ಇದನ್ನು ಕೇಳೋಕೆ ವಿಚಿತ್ರ ಎನಿಸಬಹುದು ಆದರೆ ಇದು ನಿಜ ಹಾಗಿದ್ದರೆ ಈ ಊರು ಎಲ್ಲಿದೆ ಅಲ್ಲಿ ಗಂಡಸರು ಯಾಕೆ ಇಲ್ಲ ಎಂದು ಹೇಳುತ್ತಾ ಹೋಗುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಎಲ್ಲಿದೆ ಈ ಊರು ಇಲ್ಲಿ ಏಕೆ ಗಂಡಸರು ಇಲ್ಲ, ಸ್ನೇಹಿತರೆ ಈ ಊರು ಇರುವುದು ಕೀನ್ಯಾ ದಲ್ಲಿ ಕೀನ್ಯಾದ ಸಾಮ್ಮಾರು ಪ್ರಾಂತ್ಯದ ಉಮೋಜ ಎನ್ನುವ ಊರು. ಊರಿನಲ್ಲಿ ಕೇವಲ ಮಹಿಳೆಯರು ಇದ್ದಾರೆ ಒಂದೇ ಲಿಂಗದ ಸಮುದಾಯದವರು ಜೀವಿಸುತ್ತಾ ಇರುವ ಆಫ್ರಿಕಾದ ಏಕೈಕ ಗ್ರಾಮ ಇದಾಗಿದೆ ಕೀನ್ಯಾದ ರಾಜಧಾನಿ ನೈರೋಭಿಯದಿಂದ 380 ಕಿಮೀ ದೂರದಲ್ಲಿ ಇದೆ

ಈ ಊರು ಅಂದಹಾಗೆ 1990 ರಲ್ಲಿ ಸಾಮಾಜಿಕ ಹೋರಾಟಗಾರ್ತಿ ರಬೇಕಾಲೋಲೋ ನೇತೃತ್ವದಲ್ಲಿ 14 ಮಹಿಳೆಯರು ಇಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ ಇವರೆಲ್ಲ ಸ್ಥಳೀಯ ಬ್ರಿಟಿಷ್ ಅಧಿಕಾರಿಗಳಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಆಗಿದ್ದರು ಇದರ ನಂತರ ಪುರುಷ ಪ್ರಧಾನ ಸಮಾಜದಿಂದ ಶೋಷಣೆಗೆ ಒಳಗಾದ ಮಹಿಳೆಯರು ಇಲ್ಲಿಗೆ ಬರಲು ಪ್ರಾರಂಭಿಸಿದರು ಅತ್ಯಾಚಾರ ಬಾಲ್ಯ ವಿವಾಹ ಕೌಟುಂಬಿಕ ಕಲಹದಂತಹ ಶೋಷಣೆಗೆ ಒಳಗಾದ ಮಹಿಳೆಯರು ಈ ಊರಿಗೆ ಬಂದು ನೆಲೆಸಿದರು ಈ ಊರಲ್ಲಿ ಸಾಧ್ಯ 50 ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ವಾಸಿಸುತ್ತಾ ಇದ್ದಾರೆ ಈ ಊರಲ್ಲಿ ಶಾಲೆ ಸಾಂಸ್ಕೃತಿಕ ಕೇಂದ್ರ ಹಾಗೂ ಸಾಮ್ರು ರಾಷ್ಟ್ರೀಯ ಉದ್ಯಾನವನ ನೋಡಲು ಬರುವ ಪ್ರವಾಸಿಗರಿಗೆ ಸೈತಿಂಗ್ ಕೇಂದ್ರಗಳನ್ನು ತೆರೆದಿದ್ದಾರೆ ಈ ಮಹಿಳೆಯರು.

ಸಾಂಪ್ರದಾಯಕ ಉಡುಗೆ ತೊಡುಗೆ ಹಾಗೂ ಆಭರಣಗಳನ್ನು ತಯಾರಿಸುವ ಇವರು ಯಾರ ಹಂಗೂ ಇಲ್ಲದೆ ತಮ್ಮ ಜೀವನವನ್ನು ಸಾಗಿಸುತ್ತಾ ಇದ್ದಾರೆ. ಊರಿನ ಪ್ರತಿಯೊಂದು ಮಗುವು ಶಾಲೆಗೆ ಹೋಗುತ್ತದೆ. ಮಹಿಳೆಯರು ಕೂಡ ಶಿಕ್ಷಣ ಪಡೆಯುವಂತೆ ಇಲ್ಲಿ ಪ್ರೇರಣೆ ನೀಡುತ್ತದೆ. ಮಹಿಳೆಯರಿಗೆ ಹುಟ್ಟುವ ಗಂಡು ಮಕ್ಕಳ ಕಥೆಯೇ ಏನು ಈ ಊರಲ್ಲಿ ಗಂಡಸರು ಇಲ್ಲ ಎಂದು ಹೇಳಿದ್ವಿ ಹಾಗಾದರೆ ಇಲ್ಲಿರುವ ಮಹಿಳೆಯರಿಗೆ ಹುಟ್ಟುವ ಅಥವಾ ಮಹಿಳೆಯರೊಂದಿಗೆ ಇರುವ ಗಂಡು ಮಕ್ಕಳ ಕಥೆ ಏನು ಎಂದು ನೀವು ಯೋಚನೆ ಮಾಡಬಹುದು ಈ ಗಂಡು ಮಕ್ಕಳನ್ನು 18 ವರ್ಷದ ವರೆಗೆ ಮಹಿಳೆಯರೇ ಸಾಕುತ್ತಾರೆ ಅವರಿಗೆ 18 ವರ್ಷ ಆದ ಬಳಿಕ ಊರಿನಿಂದ ಹೊರ ಹಾಕುತ್ತಾರೆ ಅಂದರೆ 18 ವರ್ಷವಾದ ಬಳಿಕ ಗಂಡು ಮಕ್ಕಳು ತಾಯಿಯ ಜೊತೆ ವಾಸಿಸುವಂತೆ ಇಲ್ಲ. ಸ್ನೇಹಿತರೆ ಇದಿಷ್ಟು ಗಂಡಸರು ಇಲ್ಲದ ಊರಿನ ಕಥೆ. ಈ ಊರಲ್ಲಿ ಸಧ್ಯ ಅತ್ಯಾಚಾರ ಹಾಗೂ ಶೋಷಣೆಗೆ ಒಳಗಾದ ಮಹಿಳೆಯರೇ ವಾಸಿಸುತ್ತಾ ಇದ್ದಾರೆ. ಈ ಮಾಹಿತಿ ಇಷ್ಟ ಆಗಿದ್ದರೆ ಈ ಲೇಖನವನ್ನು ಶೇರ್ ಮಾಡಿರಿ

Leave a Reply

Your email address will not be published.