ಶಬರಿಮಲೆ ಅಯ್ಯಪ್ಪ ನ ಪವಾಡ ನಡೆದಿದೆ

ದೇವರು

ಸ್ನೇಹಿತರೆ ಶಬರಿಮಲೆ ಅಯ್ಯಪ್ಪ ನ ಪವಾಡ ನಡೆದಿದೆ ಇದು ಅಂತಿತ ಪವಾಡ ಅಲ್ಲ ಕೋಟ್ಯಂತರ ಭಕ್ತ ಸಮೂಹವನ್ನು ಭಕ್ತಿಯಲ್ಲಿ ಮಿಂದೇಳುವಂತ ಪವಾಡ ಒಂದು ಬೀದಿ ನಾಯಿ ದೈವಭಕ್ತಿ ಯ ಪರಾಕಾಷ್ಠೆಯನ್ನು ಮೆರೆದಿರುವ ಪವಾಡ ನೂರಾರು ಕಿಮೀ ಪಾದಯಾತ್ರೆಯ ಸಾಹಸದ ಪವಾಡ ಇಲ್ಲಿ ಗಾಯಗೊಂಡು ರಕ್ತ ಸೋರಿದರು ಭಕ್ತಿ ಮೆರೆದಿರುವ ಶ್ವಾನದ ದೈವ ಭಕ್ತಿ ಇದೆ ನಾಯಿಯ ಪುನರ್ ಜನ್ಮದ ರಹಸ್ಯದ ಬಗ್ಗೆ ಊಹಾ ಪೋಹಗಳು ಇವೆ ಬನ್ನಿ ಹಾಗಾದರೆ ಏನಿದು ಅಚ್ಚರಿ ಎಂದು ನೋಡೋಣ. 13 ಅಯ್ಯಪ್ಪ ಮಾಲದಾರಿಗಳು ಆಂಧ್ರದ ತಿರುಪತಿಯಿಂದ ಪ್ರಯಾಣ ಆರಂಭ. ಸ್ನೇಹಿತರೆ 13 ಅಯ್ಯಪ್ಪ ಮಾಲದಾರಿಗಳು ಕೆಲದಿನಗಳ ಹಿಂದೆ ತಿರುಪತಿ ತಿಮ್ಮಪ್ಪನ ಸನ್ನಿದಿಯಿಂದ ಶಬರಿ ಮಲೆ ಹತ್ತಿರ ಹೊರಟರು ಇಲ್ಲಿಂದಲೇ ಒಂದು ಪಾವಾಡಕ್ಕೆ ಮುಹೂರ್ತ ಶುರು ಆಯಿತು. ಅತ್ಯಂತ ವಿಶೇಷ ಎಂದರೆ ಇವರು ಪಾದಯಾತ್ರೆಯಲ್ಲಿ ಹೊರಟರು ದಕ್ಷಿಣ ಕನ್ನಡದ ಮೂಡಬಿದ್ರೆಯ ತೊಡದಿರ ರಾಜೇಶ್ ಕೃಷ್ಣ ಅವರ ನೇತೃತ್ವದಲ್ಲಿ ತಂಡ ಈ ದೈವ ಭಕ್ತಿಯ ಪಾದಯಾತ್ರೆಯನ್ನು ಆರಂಭ ಮಾಡಿತು ಆಗಲು ನಡೆದಿದ್ದು ಒಂದು ದೊಡ್ಡ ಅಚ್ಚರಿ ಪಾದಯಾತ್ರೆಯನ್ನು ಸೇರಿತ್ತು ಬೀದಿನಾಯಿ.

ಆಗಲೇ ಒಂದು ಬೀದಿ ನಾಯಿ ಪಾದಯಾತ್ರೆಯನ್ನು ಸೇರಿತ್ತು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಶಬರಿಮಲೆ ಸ್ವಾಮಿಗಳನ್ನು ಫಾಲೋ ಮಾಡಲು ಶುರು ಮಾಡಿತು ಮೊದಮೊದಲು ಸ್ವಾಮಿಗಳು ಅದನ್ನು ಅಷ್ಟೊಂದು ಸೀರಿಯಸ್ ಆಗಿ ಪರಿಗಣಿಸಲಿಲ್ಲ ಆದರೆ ನೂರಾರು ಕಿಮೀ ಸಾಗಿದ ಬಳಿಕವೂ ಮತ್ತೆ ಮತ್ತೆ ನಾಯಿ ಪ್ರತ್ಯಕ್ಷ ಆಗುತ್ತಿತ್ತು ಇವರ ಹಿಂದೆಯೇ ತಾನು ನಡೆದುಕೊಂಡು ಬರುತ್ತಾ ಇತ್ತು ಕಲ್ಲು ಮುಳ್ಳಿನಲ್ಲಿ ನಡೆದು ನಾಯಿಯ ಕಾಲುಗಳಿಗೆ ಗಾಯ ಆಗಿ ರಕ್ತ ಸೋರುತ್ತ ಇದ್ದರೂ ಕೂಡ ಒಂದು ಚೂರೂ ಅಂಜದೆ ಅತ್ಯಂತ ಲವಲವಿಕೆಯಿಂದ ನಾಯಿ ನಡೆಯುತ್ತಾ ಇಟ್ಟು ಆಗ ಅಯ್ಯಪ್ಪನ ಮಾಲೆ ಹಾಕಿದ ಸ್ವಾಮಿಗಳಿಗೆ ದಿಗ್ಭ್ರಮೆ ಆಯಿತು. ಇದರ ಹಿಂದೆ ಖಂಡಿತ ದೈವೀ ಶಕ್ತಿಯ ಪವಾಡ ಇದೆ ಎಂದು ಸ್ವಾಮಿಗಳು ನಂಬಿದರು ಕೂಡಲೇ ನಾಯಿಯ ಕಾಲುಗಳಿಗೆ ಪ್ರಥಮ ಚಿಕಿತ್ಸೆ ಮಾಡಿ ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದರು ಅದರೊಂದಿಗೆ ಹಲವು ಬಾರಿ ನಾಯಿಯೊಂದಿಗೆ ಚಿಕಿತ್ಸೆಯನ್ನು ಕೊಡಲಾಗಿದೆ

ಆದರೂ ನಾಯಿ ಅವರನ್ನು ಹಿಂಬಾಲಿಸಿಕೊಂಡು ಶಬರಿಮಲೆ ಕಡೆ ಹೋಗಲು ನಿಲ್ಲಿಸಲಿಲ್ಲ ಸಧ್ಯ ಅಯ್ಯಪ್ಪ ಮಾಲದಾರಿ ಯಾತ್ರಿಗಳು ಚಿಕ್ಕಮಂಗಳೂರು ನ ಕೊಟ್ಟಿಗೆದಾರ ವನ್ನ ದಾಟಿ ಮುಂದಕ್ಕೆ ನಡೆಯುತ್ತಾ ಇದ್ದಾರೆ ತಾವು ದಾರಿ ಮಧ್ಯೆ ಆಗಾಗ ವಿಶ್ರಾಂತಿ ಪಡೆದು ಆಹಾರವನ್ನು ತಯಾರಿಸಿದಾಗ ನಾಯಿಗೂ ಆಹಾರವನ್ನು ಕೊಡುತ್ತಾ ಇದ್ದಾರೆ ಶಬರಿಮಲೆಯ ಅಯ್ಯಪ್ಪ ಮಾಲಾದಾರಿ ಸ್ವಾಮಿಗಳ ಜೊತೆ ಈ ಶ್ವಾನದ ಮಹಾಯಾತ್ರೆ ಮುಂದುವರೆದಿದೆ. ನಾಯಿಯ ಈ ಯಾತ್ರೆಯ ಹಿಂದೆ ಇದೆ ಪುನರ್ ಜನ್ಮದ ರಹಸ್ಯವಿದೆ ಎಂದು ಊಹಾ ಪೋಹಾಗಳು ಶುರು ಆಗಿದೆ ಈ ನಾಯಿ ಹಿಂದಿನ ಜನ್ಮದಲ್ಲಿ ಸ್ವಾಮಿ ಅಯ್ಯಪ್ಪನ ಅತಿ ದೊಡ್ಡ ಭಕ್ತ ಆಗಿತ್ತು ಈ ಜನ್ಮದಲ್ಲಿ ಅದಕ್ಕೆ ದರ್ಶನ ಸಾಧ್ಯ ಆಗಿರಲಿಲ್ಲ ಆದ್ದರಿಂದ ಈ ಜನ್ಮದಲ್ಲಿ ನಾಯಿ ಆಗಿ ಹುಟ್ಟಿದ್ದರೂ ಸ್ವಾಮಿಗಳನ್ನು ಹಿಂಬಾಲಿಸಿ ಅಯ್ಯಪ್ಪನ ಸನ್ನಿಧಿಗೆ ಹೋಗುತ್ತಾ ಇದೆ ಎಂದು ಹೇಳಲಾಗುತ್ತದೆ

Leave a Reply

Your email address will not be published.