ಬ್ರಹ್ಮನ ಐದನೇ ತಲೆ ಕಡಿದಿದ್ದು ಇವರೇ

ದೇವರು

ಬ್ರಹ್ಮನಿಗೆ ಈ ಕಾರಣಕ್ಕೆ ಯಾರು ಪೂಜೆ ಮಾಡುವುದಿಲ್ಲ. ಸ್ನೇಹಿತರೆ ಬ್ರಹ್ಮ ದೇವನಿಗೆ ಯಾರೂ ಪೂಜೆ ಮಾಡಲ್ಲ ಏಕೆ ಗೊತ್ತಾ ಮಗಳ ಮೇಲೆಯೇ ಕಣ್ಣು ಹಾಕಿದ್ದು ಏಕೆ ಬ್ರಹ್ಮ ದೇವ ಬ್ರಹ್ಮನಿಗೆ ಇದ್ದ ಐದು ತಲೆಯಲ್ಲಿ ಒಂದು ತಲೆ ಎಗರಿಸಿದ್ದು ಯಾರು ಬ್ರಹ್ಮನ ಹೆಂಡತಿ ಯಾರು ಅವನ ಮಗ ಯಾರು ಎಲ್ಲವನ್ನೂ ವಿವರವಾಗಿ ಹೇಳುತ್ತೇವೆ. ಸರಸ್ವತಿ ಸೃಷ್ಟಿ ಕರ್ತನು ಬ್ರಹ್ಮ ಹಾಗೂ ಪತಿಯು ಬ್ರಹ್ಮ ಸ್ನೇಹಿತರೆ ಬ್ರಹ್ಮನ ಹೆಂಡತಿ ಸರಸ್ವತಿ ಅಂತಾರೆ ಆದರೆ ನಿಮಗೆ ಗೊತ್ತಾ ಬ್ರಹ್ಮನ ಹೆಂಡತಿ ಸರಸ್ವತಿ ಬ್ರಹ್ಮನ ಪುತ್ರಿ ಕೂಡ ಹೌದು. ಸೃಷ್ಟಿಕರ್ತ ಬ್ರಹ್ಮ ಅವನದ್ದೇ ಮಗಳನ್ನು ಮದುವೆ ಆಗಿದ್ದರೂ ಈ ಬಗ್ಗೆ ಮತ್ಸ್ಯ ಪುರಾಣ ಮತ್ತು ಬ್ರಹ್ಮ ಪುರಾಣಗಳಲ್ಲಿ ಉಲ್ಲೇಖ ಇದೆ. ನಿಮಗೆಲ್ಲಾ ಗೊತ್ತಿರುವ ಪ್ರಕಾರ ಈ ಭೂಮಿಯನ್ನು ಸೃಷ್ಟಿಸಿದ್ದು ಬ್ರಹ್ಮ. ಆಗ ಸೃಷ್ಟಿಯಲ್ಲಿ ಯಾರು ಇರಲಿಲ್ಲ ಬ್ರಹ್ಮ ತಮ್ಮ ಶಕ್ತಿಯಿಂದ ಸರಸ್ವತಿಯನ್ನು ಸೃಷ್ಟಿಸಿದರು ಆದರೆ ಸರಸ್ವತಿಗೆ ತಾಯಿ ಅಂತ ಯಾರು ಇಲ್ಲವಾದ್ದರಿಂದ ಬ್ರಹ್ಮನ ಪುತ್ರಿ ಎಂದೇ ಕರೆಯಲಾಯಿತು.

ಸರಸ್ವತಿ ಸೌಂದರ್ಯಕ್ಕೆ ಮಾರು ಹೋದ ಬ್ರಹ್ಮ. ಹೌದು ಬ್ರಹ್ಮ ತಾನೇ ಸೃಷ್ಟಿಸಿದ ಸರಸ್ವತಿ ಸೌಂದರ್ಯಕ್ಕೆ ಮಾರು ಹೋಗುತ್ತಾರೆ ಅಲ್ಲದೆ ಸರಸ್ವತಿಯನ್ನು ಮದುವೆ ಆಗಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುವರು ಆದರೆ ಈ ವಿಚಾರ ತಿಳಿದ ಸರಸ್ವತಿ ನಾಲ್ಕು ದಿಕ್ಕುಗಳಿಗೆ ಓಡಿ ಹೋಗಿ ಬ್ರಹ್ಮನಿಂದ ತಪ್ಪಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತಾರೆ ಆದರೆ ಬ್ರಹ್ಮನಿಂದ ತಪ್ಪಿಸಿ ಕೊಳ್ಳಲು ಸಾಧ್ಯ ಇಲ್ಲ ಕೊನೆಗೆ ಬೇರೆ ದಾರಿ ಇಲ್ಲದೆ ಸರಸ್ವತಿ ಬ್ರಹ್ಮನನ್ನು ಮದುವೆ ಆಗುತ್ತಾಳೆ ನಂತರ ಇಬ್ಬರು ಭೂಮಿಗೆ ಬಂದು ಅಲ್ಲಿ ಸುಮಾರು 100 ವರ್ಷಗಳ ಕಾಲ ಗಂಡ ಹೆಂಡತಿ ಆಗಿ ಬದುಕುತ್ತಾರೆ. ಈ ವೇಳೆ ಅವರಿಗೆ ಒಂದು ಮಗು ಆಯಿತು ಅದೇ ಮನು. ಭೂಮಿಗೆ ಕಾಲಿಟ್ಟ ಮೊದಲ ಮನುಷ್ಯ ಮನು ಎಂದು ಪುರಾಣ ಹೇಳುತ್ತಿದೆ.

ಪುತ್ರಿಯನ್ನೆ ಮೋಹಿಸಿದ ಬ್ರಹ್ಮನ ಒಂದು ತಲೆ ತೆಗೆದ ಶಿವ. ಬ್ರಹ್ಮ ತನ್ನದೇ ಮಗಳನ್ನು ಮದುವೆ ಆಗಿದ್ದು ಸಂಸಾರ ಮಾಡಿದ್ದನ್ನು ಕಂಡು ಉಳಿದ ದೇವತೆಗಳು ತುಂಬಾ ಸಿಟ್ಟು ಆಗುತ್ತಾರೆ ಇದೊಂದು ಘೋರ ಪಾಪದ ಕೆಲಸ ಎಂದು ಭಾವಿಸಿದ ದೇವತೆಗಳು ಸೀದಾ ಶಿವನ ಬಳಿ ಹೋಗಿ ಬ್ರಹ್ಮ ಮಾಡಿದ್ದು ಸರಿ ಅಲ್ಲ ಅವನ ತಪ್ಪಿಗೆ ಶಿಕ್ಷೆ ಕೊಡಬೇಕು ಎಂದು ಪಟ್ಟು ಹಿಡಿಯುವರು ಹೀಗಾಗಿ ಶಿವ ಬ್ರಹ್ಮನಿಗೆ ಶಿಕ್ಷೆ ಕೊಡುತ್ತಾರೆ. ಸರಸ್ವತಿ ಬ್ರಹ್ಮನಿಂದ ತಪ್ಪಿಸಿಕೊಂಡು ಅಡಗಿ ಕುಳಿತಾಗ ಬ್ರಹ್ಮನ ಐದನೇ ತಲೆ ಆಕೆಯನ್ನು ಪತ್ತೆ ಹಚ್ಚಿತ್ತು ಹೀಗಾಗಿ ಶಿವ ಬ್ರಹ್ಮನ ಈ ಐದನೇ ತಲೆಯನ್ನು ಕತ್ತ ರಿಸುತ್ತಾರೆ ಬ್ರಹ್ಮನ ಐದನೇ ತಲೆ ಯಾವಾಗಲೂ ಕೆಟ್ಟದ್ದನ್ನೇ ಮಾತನಾಡುತ್ತಿತ್ತು ಮತ್ತು ಕೆಟ್ಟದ್ದನ್ನೇ ಯೋಚಿಸುತ್ತಾ ಇತ್ತು ಎಂದು ನಂಬಲಾಗಿದೆ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ ಇಂತಹ ಹಲವು ಮಾಹಿತಿಗಾಗಿ ಈ ಪೇಜ್ ತಪ್ಪದೆ ಲೈಕ್ ಮಾಡಿರಿ

Leave a Reply

Your email address will not be published.