ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡದ ಪವಾಡ

ದೇವರು

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕನಕ ಜಯಂತಿಯಂದು ಪವಾಡ ನಡೆದಿದೆ. ನಿಮಗೆ ಈ ವಿಷಯ ಗೊತ್ತಾ ಉಡುಪಿಯ ಕೃಷ್ಣ ಕನಕ ಭಕ್ತಿಗೆ ಪಶ್ಚಿಮಕ್ಕೆ ತಿರುಗಿದನಂತೆ ಇದು ಹೌದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದಿತ್ತಾ ಪವಾಡ ಅದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ ಕನದಾಸರ ಭಕ್ತಿಗೆ ಒಲಿದು ಉಡುಪಿಯಲ್ಲಿನ ಶ್ರೀ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ ಅಂತ ಪೇಜಾವರ ಶ್ರೀಗಳು ವಿಶ್ವೇಶ ತೀರ್ಥರು ಉಡುಪಿಯಲ್ಲಿ ಕಳೆದ ಕನಕ ಜಯಂತಿ ಕಾರ್ಯ ಕ್ರಮದಲ್ಲಿ ಹೇಳಿದ್ದಾರೆ ಅದೇ ವೇಳೆ ಪ್ರಗತಿಪರರು ಒಪ್ಪೋದಿಲ್ಲ ಹಾಗೂ ಸನಾತನಿಗಳು ಸಹಾ ಮಾನ್ಯ ಮಾಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಇನ್ನೂ ಕನಕ ದಾಸರ ಭಕ್ತಿಗೆ ಒಲಿದ ಕೃಷ್ಣ ಪೂರ್ವ ದಿಕ್ಕಿಗೆ ಮುಖ ಮಾಡಿದವನು ಪಶ್ಚಿಮಕ್ಕೆ ತಿರುಗಿದ ಎನ್ನುವ ಬಗ್ಗೆ ಹಲವು ವಾದ ಪ್ರತಿ ವಾದಗಳು ಇವೆ.

ಉಡುಪಿಯ ಕೃಷ್ಣ ವಿಗ್ರಹ ಇದ್ದದ್ದೇ ಪಶ್ಚಿಮ ದಿಕ್ಕಿನಲ್ಲಿ ಅದರಲ್ಲಿ ತಿರುಗುವ ಮಾತೇ ಇಲ್ಲ ಎಂದು ಕೂಡ ವಾದಿಸುವವರು ಇದ್ದಾರೆ ಒಟ್ಟಾರೆ ಕೃಷ್ಣ ವಿಗ್ರಹ ಪಶ್ಚಿಮ ದಿಕ್ಕಿಗೆ ತಿರುಗಿದ ವಿಚಾರವೇ ಚರ್ಚೆಯ ವಸ್ತು. ಇನ್ನೂ ಹೀಗಿರುವಾಗ ಕಳೆದ ಕನಕ ಜಯಂತಿಯಂದು ಪೇಜಾವರ ಶ್ರೀಗಳು ನೀಡಿದ ಹೇಳಿಕೆ ಮತ್ತೆ ಚರ್ಚೆಗೆ ಕಾರಣ ಆಗಿದೆ ಅದಕ್ಕಾಗಿಯೇ ಅವರು ಯತಿಗಳ ವಾದಿರಾಜರ ಹಾಡೊಂದು ಸಾಕ್ಷಿ ಆಗಿದೆ ಎಂದು ಹೇಳಿದ್ದು ಇನ್ನೂ ಮುಂದೆ ಈ ಬಗ್ಗೆ ಯಾವುದೇ ವಾದ ವಿವಾದ ಬೇಡ ಎಂದು ಕೂಡ ಹೇಳಿದ್ದಾರೆ ಆದರೆ ಈ ಬಗ್ಗೆ ಧಾರ್ಮಿಕ ಚಿಂತಕರು ಎಲ್ಲಾ ಭಿನ್ನವಾದ ಅಭಿಪ್ರಾಯವನ್ನು ಹೇಳುತ್ತಾ ಇದ್ದಾರೆ ಹಾಗೆ ಈ ಅಭಿಪ್ರಾಯಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ. ಇನ್ನೂ ಭಕ್ತ ಕನಕದಾಸ ಸಿನಿಮಾ ಬಿಡುಗಡೆ ನಂತರದ ವಾದ ಇದು. ಉಡುಪಿಯ ಶ್ರೀ ಕೃಷ್ಣ ಪಶ್ಚಿಮಕ್ಕೆ ತಿರುಗಿದ ಎಂದು ಆರಂಭ ಆಗಿದ್ದೇ ರಾಜ್ ಕುಮಾರ್ ನಟಿಸಿದ್ದ ಭಕ್ತ ಕನಕದಾಸ ಸಿನಿಮಾ ರಿಲೀಸ್ ಆದ ಮೇಲೆ.

ಮಧ್ವಾಚಾರ್ಯರ ತಂತ್ರಸಾರ ಸಂಗ್ರಹದಲ್ಲಿ ದೇವಾಲಯ ವಾಸ್ತುಗಳ ಬಗ್ಗೆ ಪ್ರಸ್ಥಾಪವಾಗಿದ್ದು ಈ ಪ್ರಕಾರ ವಿಗ್ರಹ ಇದ್ದಿದ್ದೇ ಪಶ್ಚಿಮಾಭಿಮುಖ ವಾಗಿ ಎಂದು ಸತ್ಯ ಹೇಳುತ್ತಾರೆ ವಿದ್ವಾಂಸರು ಹಾಗೂ ಧಾರ್ಮಿಕ ಚಿಂತಕರಾದ ಭೀಮಸೇನ ಆಚರ್ ಆತನೂರು ಹಾಗಿದ್ದರೆ ಮೇಲುಕೋಟೆಯಲ್ಲಿ ಇದ್ದರಾ ಕನಕದಾಸರು ಕೆಲವರು ವಾದ ಮಾಡುವ ಪ್ರಕಾರ ಕನಕದಾಸರು ಇದ್ದದ್ದು ಮೇಲುಕೋಟೆಯಲ್ಲಿ ಅವರ ಕೀರ್ತನೆಗಳು ರಚನೆ ಆದದ್ದು ಮೇಲುಕೋಟೆ ಚೆಲುವನಾರಾಯಣ ಬಗ್ಗೆನೇ ಉಡುಪಿಯ ದೇವಾಲಯ ಹಾಗೂ ಕೃಷ್ಣನ ವಿಚಾರವನ್ನು ಎಳೆದು ತರಲಾಗಿದೆ ಎನ್ನುವ ವಾದವನ್ನು ಶ್ರೀ ವೈಷ್ಣವರು ಮುಂದಿಡುತ್ತಾರೆ. ಇನ್ನೂ ಈ ಹಿಂದೆ ಕೃಷ್ಣ ನದು ಮಠವೇ ಅಲ್ಲ ಅದೊಂದು ಷಣ್ಮುಖ ದೇವಸ್ಥಾನ ದೇವಾಲಯದ ವಾಸ್ತು ಹಾಗೂ ವಿಗ್ರಹದ ಪ್ರಮಾಣ ಎಲ್ಲವನ್ನೂ ಗಮನಿಸಿದರೆ ಶನ್ಮುಖನ ದೇವಾಲಯ ಎಂದು ತಿಳಿದು ಬರುತ್ತದೆ ಎಂದು ದೇವಾಲಯದ ವಾಸ್ತು ಶಾಸ್ತ್ರಜ್ಞರು ಕೂಡ ವಾದ ಮಂಡಿಸುತ್ತಾ ಇದ್ದಾರೆ.

Leave a Reply

Your email address will not be published.