ರಸ್ತೆಯಲ್ಲಿನ ಟ್ರಾಫಿಕ್ ಗೂಗಲ್ ಮ್ಯಾಪ್ ನಲ್ಲಿ ಕ್ಷಣದಲ್ಲಿ ತೋರಿಸುತ್ತೆ ಅಂದ್ರೆ

ಇತರೆ ಸುದ್ದಿ

ಗೂಗಲ್ ಮ್ಯಾಪ್ ನಿಂದ ನೇರವಾಗಿ ಟ್ರಾಫಿಕ್ ಮಾಹಿತಿ ಪಡೆಯುವ ವಿಧಾನ. ಆಧುನಿಕ ಯುಗದಲ್ಲಿ ನಮಗೆ ಪ್ರತಿ ದಿನ ಪ್ರಯಾಣದ ಸಮಯದಲ್ಲಿ ಅತಿಯಾಗಿ ಕಾಡುವ ಸಮಸ್ಯೆಯೆಂದರೆ ಟ್ರಾಫಿಕ್ ಸಮಸ್ಯೆ ಈ ಒಂದು ಸಮಸ್ಯೆ ಪ್ರಪಂಚದ ಯಾವ ನಗರವನ್ನು ಬಿಟ್ಟಿಲ್ಲ ಸ್ನೇಹಿತರೆ ಆಧುನಿಕ ಕಾಲ ಘಟ್ಟದಲ್ಲಿ ನಮಗೆ ವಾಹನ ಓಡಾಟದ ಬಗ್ಗೆ ಗೂಗಲ್ ಮ್ಯಾಪ್ ನಿಂದ ಸಹಾಯವಾಗುತ್ತಿದೆ ಈ ಗೂಗಲ್ ಮ್ಯಾಪ್ ನಮಗೆ ವಾಹನ ಓಡಾಟವನ್ನು ತೋರಿಸುವ ಮೂಲಕ ಸಹಾಯವನ್ನು ಮಾಡುತ್ತಿದೆ ಹಾಗಾದರೆ ಗೂಗಲ್ ಮ್ಯಾಪ್ ಹೇಗೆ ನೇರವಾಗಿ ಟ್ರಾಫಿಕ್ ನ ಮಾಹಿತಿಯನ್ನು ಪಡೆಯುತ್ತಿದೆ ಎಂದು ನಿಮಗೆ ಯಾವತ್ತಾದರು ಅನಿಸದೆ ಇರಬಹುದು ಹಾಗಾದರೆ. ಈ ಒಂದು ಲೇಖನದಲ್ಲಿ ಅದಕ್ಕೆ ಉತ್ತರವಿದೆ. ಟ್ರಾಫಿಕ್ ಬಗ್ಗೆ ತಿಳಿಯಲು ಈ ಹಿಂದೆ ಹಲವಾರು ಅಪ್ಲಿಕೇಶನ್ ಗಳು ಇದ್ದವು ಅಲ್ಲದೆ ನಮ್ಮ ಎಫ್ ಎಮ್ ರೇಡಿಯೋ ಸ್ಟೆಸೇನ್ ಗಳು ಕೂಡ ನಮಗೆ ಟ್ರಾಫಿಕ್ ಮಾಹಿತಿಯನ್ನು ನೀಡುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಶಕ್ತಿಯುತ ಅಪ್ಲಿಕೇಶನ್ ಅಂದರೆ ಗೂಗಲ್ ಮ್ಯಾಪ್ ಈ ಅಪ್ಲಿಕೇಶನ್ ನಲ್ಲಿ ನಮಗೆ ಟ್ರಾಪಿಕ ನ ಮಾಹಿತಿ ಸಿಗಲು ಕಾರಣ ಏನು ಎಂಬುದನ್ನು ತಿಳಿಯೋಣ.

ಈ ಮುಂಚೆ ಟ್ರಾಫಿಕ್ ಮಾಹಿತಿಯನ್ನು ಪಡೆಯಲು ಗೂಗಲ್ ನವರು ಬೇರೆ ಒಂದು ತಂತ್ರಜ್ಞಾನವನ್ನು ಬಳಸುತ್ತಿದ್ದರು ಅದೆಂದರೆ ಕೆಲವೊಂದು ಖಾಸಗಿ ಕಂಪನಿಗಳ ಮುಕಾಂತರ ರಸ್ತೆಯಲ್ಲಿ ಇಂಪೋರೇಟ್ ಸೂಚನೆಗಳನ್ನು ಹಾಕಿಸುವುದರ ಮೂಲಕ ಟ್ರಾಫಿಕ್ ನ್ ಮಾಹಿತಿಯನ್ನು ತಿಳಿಯುತ್ತಿದ್ದರು ಆದರೆ ಕ್ರಮೇಣ ಈ ವಿಧಾನ ಮರೆಯಾಯಿತು ಗೂಗಲ್ ನವರು ಈಗ ಬಳಸುತ್ತಿರುವ ತಂತ್ರಜ್ಞಾನ ಎಂದರೆ ಅದು ಕ್ರೌಡ್ ಸೊರ್ಸಿಂಗ್ ಈ ಕ್ರೌಡ್ ಸೊರ್ಸಿಂಗ್ ಎಂದರೆ ಏನೆಂದು ತಿಳಿಯೋಣ ಅಮೆರಿಕದ ಖ್ಯಾತ ಐಸ್ ಕ್ರೀಮ್ ತಯಾರಿಕಾ ಕಂಪನಿಯೊಂದು ಗ್ರಾಹಕರಿಗೆ ಅವರು ಮೆಚ್ಚುವ ಪರಿಮಳ ಯಾವುದು ಎನ್ನುವ ಒಂದು ಸ್ಪರ್ಧೆಯನ್ನು ನಡೆಸಿತ್ತು ಏಕೆಂದರೆ ಜನರು ಅತಿ ಹೆಚ್ಚು ತಿನ್ನುವ ಉತ್ಪಾದನೆ ಯಾವುದೆಂದು ಇದರಿಂದ ಕಂಪನಿಗೆ ತಿಳಿಯಬೇಕಾಗಿತ್ತು ಇದನ್ನೇ ಕ್ರೌಡ್ ಸೊರ್ಸಿಂಗ್ ಎನ್ನುವರು ಇಲ್ಲಿ ಗೂಗಲ್ ಮ್ಯಾಪ್ ನಲ್ಲಿ ನಮಗೆ ಸಿಗುವ ಟ್ರಾಫಿಕ್ ಸೂಚನೆಯ ಮಾಹಿತಿ ಬೇರೆ ಯಾರಿಂದಲೂ ಸಿಗದೆ ಅದು ನಮ್ಮಿಂದಲೇ ಗೂಗಲ್ ಮ್ಯಾಪ ಗೆ ಸಿಗುತ್ತದೆ ಎಂದರೆ ನೀವು ನಂಬಲೇಬೇಕು.

ಹೌದು ಸ್ನೇಹಿತರೆ ನಾವು ಗೂಗಲ್ ಮ್ಯಾಪ್ ನಲ್ಲಿ ನೇರವಾಗಿ ವಾಹನ ಓಡಾಟವನ್ನು ನೋಡುತ್ತಿರುವಾಗಲೇ ಗೂಗಲ್ ನಮ್ಮಿಂದ ಡಾಟಾಗಳನ್ನು ಸಂಗ್ರಹಿಸುತ್ತದೆ ನಾವು ಗೂಗಲ್ ಮ್ಯಾಪ ಅಪ್ಲಿಕೇಶನ್ ನನ್ನು ತೆರೆಯುವಾಗ ಗೂಗಲ್ ಕ್ಯಾನ್ ಮಾನಿಟರ್ ಯುವರ್ ಲೋಕೇಶನ್ ಎಂಬ ಆಯ್ಕೆ ನೋಡಿರುತ್ತೀರಿ ಇಲ್ಲಿ ನಾವು ಗೂಗಲ್ ಮ್ಯಾಪನಲ್ಲಿ ಟ್ರಾಫಿಕ್ ಮಾಹಿತಿಯನ್ನು ಹುಡುಕುವಾಗ ಗೂಗಲ್ ಮ್ಯಾಪ್ ನಾವು ಸಾಗುತ್ತಿರುವ ವಾಹನದ ವೇಗವನ್ನು ಅಂದಾಜಿಸುತ್ತದೆ ಅಂದರೆ ಆ ನಗರದಲ್ಲಿ ಟ್ರಾಫಿಕ್ ಅತಿಯಾಗಿದ್ದರೆ ನಾವು ನಿಧಾನವಾಗಿ ಚಲಿಸುತ್ತಿರುತ್ತೇವೆ ಹಾಗೆ ಟ್ರಾಫಿಕ್ ಕಡಿಮೆ ಇದ್ದರೆ ನಾವು ವೇಗವಾಗಿ ಚಲಿಸುತ್ತೇವೆ ಈ ಒಂದು ಮಾಹಿತಿಯನ್ನು ಗೂಗಲ್ ಮ್ಯಾಪ್ ರಸ್ತೆಯಲ್ಲಿ ಸಾಗುತ್ತಿರುವ ಎಲ್ಲ ಸ್ಮಾರ್ಟ್ ಫೋನ್ ಗಳಿಂದ ಸಂಗ್ರಹಿಸಿ ಕೊನೆಯದಾಗಿ ಡಾಟಾವನ್ನು ಸಂಗ್ರಹಿಸಿ ನಮಗೆ ಆ ಪ್ರದೇಶದ ಟ್ರಾಫಿಕ್ ಸ್ಥಿತಿಗತಿಯನ್ನು ತೋರಿಸುತ್ತದೆ.

ಇಲ್ಲಿ ನಾವು ಟ್ರಾಫಿಕ್ ಪರಿಸ್ಥಿತಿಯನ್ನು ಹುಡುಕುವಾಗಲೇ ಟ್ರಾಫಿಕ್ ನ ಮಾಹಿತಿಯನ್ನು ನಮಗೆ ಗೊತ್ತಿಲ್ಲದಂತೆ ಗೂಗಲ್ ಗೆ ನೀಡಿರುತ್ತೇವೆ ಇದನ್ನೇ ಕ್ರೌಡ್ ಸೊರ್ಸಿಂಗ್ ಎನ್ನಲಾಗುತ್ತದೆ. ನೀವು ನಿಮ್ಮ ಮೊಬೈಲ್ ನಲ್ಲಿ ಸ್ಥಳವಿವರಣೆಯನ್ನು ಬಂದು ಮಾಡಿದರೆ ನಿಮಗೆ ಟ್ರಾಫಿಕ್ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ನಾವು ಲೋಕೇಶನ ನ್ನು ತೆರೆದಾಗಲೇ ಈ ಗೂಗಲ್ ಮ್ಯಾಪ್ ಟ್ರಾಫಿಕ್ ಮಾಹಿತಿಯನ್ನು ನೀಡುತ್ತದೆ. ಈ ಸ್ಮಾರ್ಟ್ ಫೋನ್ ಯುಗದಲ್ಲಿ ಇದೊಂದು ಸ್ಮಾರ್ಟ್ ಕೆಲಸ ಅಲ್ಲವೇ ಅದೇನೇ ಇರಲಿ ಗೂಗಲ್ ಮ್ಯಾಪ್ ನಿಂದ ನಮಗೆ ನೇರವಾಗಿ ಟ್ರಾಫಿಕ್ ಮಾಹಿತಿ ಸಿಗುವುದಂತೂ ಸತ್ಯ ಮತ್ತು ಇದರಿಂದ ನಮಗೆ ಉಪಯೋಗವಿರುವುದು ಸತ್ಯ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಶೇರ್ ಮಾಡಿ.

Leave a Reply

Your email address will not be published.