ವಾರಕ್ಕೆ ಒಮ್ಮೆ ಈ ಕಾಳುಗಳನ್ನು ತಿಂದರೆ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ವಾರಕ್ಕೊಮ್ಮೆ ಮೊಳಕೆ ಕಾಳು ತಿನ್ನುವುದರಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ. ತಿಳಿಯಲು ಈ ಲೇಖನ ಓದಿರಿ. ಈಗಿನ ವಿದ್ಯಮಾನದಲ್ಲಿ ಉತ್ತಮ ಆರೋಗ್ಯಕರ ಜೀವನ ನಡೆಸುವುದು ತುಂಬಾ ಕಷ್ಟಕರ ಆಗಿದೆ. ನಾವು ಧಾನ್ಯಗಳನ್ನು ಆಹಾರ ಪದಾರ್ಥದಲ್ಲಿ ಬಳಸಿದಂತೆ ಅವುಗಳನ್ನು ಮೊಳಕೆ ತರಿಸಿದ ಆಹಾರ ಪದಾರ್ಥಗಳಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ ಎಂದು ಸಾಬೀತು ಪಡಿಸಿದೆ. ಮೊಳಕೆ ಕಟ್ಟುವ ಪ್ರಕ್ರಿಯೆಯಿಂದ ಕಾಳುಗಳಲ್ಲಿ ನಾರಿನಾಂಶ ಅಧಿಕಗೊಳ್ಳುತ್ತದೆ ಇವುಗಳು ನಿಮ್ಮ ಜೀರ್ಣಕ್ರಿಯೆಯನ್ನು ಮತ್ತು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ನಾರಿನಾಂಶ ನಿಮ್ಮ ದೇಹದಲ್ಲಿನ ಅನಗತ್ಯ ಕೊಬ್ಬು ಮತ್ತು ಟಾಕ್ಸಿನ್ ಗಳನ್ನ ಹೊರಹಾಕುತ್ತದೆ. ಅಮೈನೋ ಆಮ್ಲಗಳ ಕೊರತೆಯಿಂದ ಸ್ಥೂಲ ಕಾಯದ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ನಿರಂತರವಾಗಿ ಸರಿಯಾದ ಆಹಾರ ಕ್ರಮವಿಲ್ಲದಿದ್ದರೆ ಸ್ಥೂಲ ಕಾಯ ಕಟ್ಟಿಟ್ಟ ಬುತ್ತಿ ಮೊಳಕೆ ಕಟ್ಟಿದ ಕಾಳುಗಳು ನಮ್ಮ ದೇಹದ ಚೈತನ್ಯವನ್ನು ಕಾಪಾಡುವ ಅಮೈನೋ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.
ಮೊಳಕೆಗಳಲ್ಲಿ ಖನಿಜ ವಿವಿಧ ರೂಪದಲ್ಲಿ ಅಡಗಿರುತ್ತದೆ. ಮೊಳಕೆ ಒಡೆಯುವಾಗ ಕ್ಯಾಲ್ಸಿಯಂ ಮೆಗ್ನೀಸಿಯಂ ಇತ್ಯಾದಿಗಳು ಉತ್ಪತ್ತಿ ಆಗುತ್ತವೆ. ಇವುಗಳು ನಮ್ಮ ಆಹಾರದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಸಾಮಾನ್ಯವಾಗಿ ತರಕಾರಿ ಮತ್ತು ಹಣ್ಣುಗಳಿಗಿಂತ ಮೊಳಕೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕಿಣ್ವಗಳು ಇವೆ ಎಂದು ಅಧ್ಯಯನ ಗಳಿಂದ ದೃಢ ಪಟ್ಟಿದೆ. ಮೊಳಕೆ ಕಟ್ಟುವ ಪ್ರಕ್ರಿಯೆಯಿಂದ ಈ ಕಾಳು ಅಥವಾ ಧಾನ್ಯದಲ್ಲಿ ಇರುವ ಶಕ್ತಿಯು ಬಿಡುಗಡೆ ಹೊಂದುತ್ತದೆ. ಇವು ಈ ಧಾನ್ಯ ದಲ್ಲಿ ಇರುವ ಸಂಪೂರ್ಣ ಪೋಷಕಾಂಶಗಳ ಸದುಪಯೋಗ ನಮ್ಮ ದೇಹಕ್ಕೆ ದೊರೆಯುವಂತೆ ಮಾಡುತ್ತದೆ. ಮೊಳಕೆ ಕಾಳುಗಳ ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅವುಗಳಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು ಅವು ಪಚನ ಕ್ರಿಯೆಯನ್ನು ಸುಲಭ ಮಾಡುತ್ತದೆ.
ಮೊಳಕೆ ಧಾನ್ಯಗಳು ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಸ್ನಾಯುಗಳು ಬಲ ಆಗಲು ಕಾರಣ ಆಗುತ್ತದೆ. ಮೊಳಕೆ ಕಾಳುಗಳು ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿದೆ ಹಾಗಾಗಿ ಅವುಗಳ ಸೇವನೆಯಿಂದ ತೂಕ ಕಡಿಮೆ ಆಗುತ್ತದೆ. ಇದರಲ್ಲಿರುವ ವಿಟಮಿನ್ ಕೆ ಅಂಶವು ರಕ್ತ ಸಂಚಾರ ಸರಿಯಾಗಿ ಆಗುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಪ್ರತಿ ನಿತ್ಯ ನೀವು 50 ಗ್ರಾಂ ಅಷ್ಟು ಮೊಳಕೆ ಕಟ್ಟಿದ ಹೆಸರು ಕಾಳು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ. ಮೊಳಕೆಯಲ್ಲಿ ಸಂಪೂರ್ಣ ಪೋಷಕಾಂಶಗಳು ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತದೆ. ಹೆಸರು ಕಾಳು ಕಡಲೆ ಕಾಳು ಹುರುಳಿ ಒಣ ಬಟಾಣಿ ಮುಂತಾದ ಕಾಳುಗಳು ದೇಶದಾದ್ಯಂತ ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ ಹಾಗೆಯೇ ಇಂತಹ ಹಲವು ಉಪಯುಕ್ತ ಮಾಹಿತಿಗಾಗಿ ತಪ್ಪದೆ ಈ ಪೇಜ್ ಲೈಕ್ ಮಾಡಿರಿ.