ಈ ಸಮಯದಲ್ಲಿ ಒಂದು ಲೋಟ ನೀರು ಕುಡಿದರೆ ನಿಮ್ಮ ಉದರದ ಎಲ್ಲಾ ಸಮಸ್ಯೆಗಳು ತಕ್ಷಣ ಮಾಯ ಆಗಲಿವೆ. ನೀರು ನಮ್ಮ ದೇಹದ ಹೆಚ್ಚಿನ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಒದಗಿಸುತ್ತದೆ ಕೆಲವೊಮ್ಮೆ ದೇಹದಲ್ಲಿ ನೀರಿನ ಅಭಾವ ಆಗುವುದರಿಂದ ಸಾಕಷ್ಟು ಸಮಸ್ಯೆಗಳು ಕಾಯಿಲೆಗಳು ನಮ್ಮ ದೇಹದಲ್ಲಿ ಉತ್ಪತ್ತಿ ಆಗುತ್ತದೆ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸಾಕಷ್ಟು ರೋಗಗಳನ್ನು ನಾವು ಗುಣ ಪಡಿಸಿಕೊಳ್ಳಬಹುದು. ಏಕೆಂದರೆ ನಮ್ಮ ಹೆಚ್ಚಿನ ರೋಗಗಳ ಮೂಲ ನಮ್ಮ ಹೊಟ್ಟೆ ಆಗಿರುತ್ತದೆ ಅಂದರೆ ಅಜೀರ್ಣದ ಸಮಸ್ಯೆ ಮಲಬದ್ಧತೆ ಇವೆಲ್ಲವೂ ಉದರಕ್ಕೆ ಸಂಬಂಧಿಸಿದ್ದು ಹಾಗಾಗಿ ನಾವು ಹೊಟ್ಟೆಯ ಸಮಸ್ಯೆಗಳನ್ನು ಹೋಗಲಾಡಿಸಿದರೆ ಮಾತ್ರ 90 ರಷ್ಟು ಸಮಸ್ಯೆಗಳಿಂದ ನಾವು ಪಾರಾಗಲು ಸಾಧ್ಯ.
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆ ಮೊದಲು ಪ್ರಾರಂಭ ಆಗಿದ್ದು ಜಪಾನ್ ನಲ್ಲಿ ಜಪಾನ್ ನ ಜನರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ 4 ಲೋಟ ನೀರು ಕುಡಿಯುತ್ತಾರೆ ಮತ್ತು ಅದರ ನಂತರ ಅರ್ಧ ಗಂಟೆ ಅವರು ಏನನ್ನು ಕುಡಿಯುವುದಿಲ್ಲ ಹಾಗೂ ತಿನ್ನುವುದಿಲ್ಲ ಈ ಒಂದು ಅಧ್ಬುತ ಐಡಿಯಾ ಆರೋಗ್ಯ ಆಗಿರುವಂತೆ ಮತ್ತು ದಿನ ಪೂರ್ತಿ ಚಟುವಟಿಕೆಗಳಲ್ಲಿ ಚುರುಕಾಗಿ ಇರುವಂತೆ ಮಾಡುತ್ತದೆ ಹಾಗಾಗಿ ಜಪಾನ್ ನ ಜನರು ವಿಶ್ವದಲ್ಲಿ ಅತ್ಯಂತ ಹೆಚ್ಚು ಚುರುಕು ಮತ್ತು ಕಾರ್ಯ ದಕ್ಷತೆಯನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರ ಆಗಿದ್ದಾರೆ ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಕುಡಿಯುವ ನೀತಿ ನಮ್ಮ ಆರೋಗ್ಯವನ್ನು ಕಾಪಾಡುವ ಸಂಜೀವಿನಿ ಆಗಿ ಕಾರ್ಯ ನಿರ್ವಹಿಸುತ್ತದೆ ಊಟವಾದ ಬಳಿಕ ಬಿಸಿ ಬಿಸಿ ನೀರನ್ನು ಕುಡಿಯುವುದರಿಂದ ಆಹಾರದಲ್ಲಿ ಇರುವ ಎಣ್ಣೆ ಕೊಬ್ಬಾಗಿ ಪರಿವರ್ತಿಸುವುದು ತಪ್ಪಿಸುತ್ತದೆ ಬೆಳಗಿನ ವೇಳೆ ಆದಷ್ಟು ಬಿಸಿ ಬಿಸಿ ನೀರು ಕುಡಿಯುವುದರಿಂದ ತುಂಬಾ ಉತ್ತಮ ಆದ್ದರಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಬಿಸಿ ನೀರು ಕುಡಿಯುವುದರಿಂದ ಆಗುವ ಉಪಯೋಗಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಸಿವು ಹೆಚ್ಚಾಗುತ್ತದೆ ನಮ್ಮ ಕರಳು ಸ್ವಚ್ಛ ಆಗುತ್ತದೆ ದೇಹದ ಆಯಾಸ ಕಡಿಮೆ ಆಗುತ್ತದೆ ಬೆಳಗ್ಗೆ ಬೇಗನೆ ಹಸಿವು ಹೆಚ್ಚಾಗುತ್ತದೆ ಬೆಳಗ್ಗೆ ಎದ್ದ ನಂತರ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇಕಡಾ 24 ರಷ್ಟು ಹೆಚ್ಚಾಗುತ್ತದೆ ಇದರಿಂದ ನಮ್ಮ ಆಹಾರವು ಬೇಗ ಜೀರ್ಣ ಆಗಿ ಆಹಾರವು ಸಮೀಕರಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಮ್ಮ ದೇಹದಲ್ಲಿ ನೀರಿನ ಅಂಶ ಕಾಯ್ದು ಕೊಳ್ಳಲು ನೀರು ತುಂಬಾ ಮುಖ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ಮಲ ವಿಸರ್ಜನೆ ಮಾಡುವಾಗ ಅಗತ್ಯತೆ ಹೆಚ್ಚಾಗುತ್ತದೆ ಇದರಿಂದ ನಮ್ಮ ಕರುಳಿನ ಕ್ರಿಯೆ ನಿಯಮಿತವಾಗಿ ಇರುತ್ತದೆ ಪ್ರತಿ ಬಾರಿ ನಾವು ಮಲ ವಿಸರ್ಜನೆ ಮಾಡುವಾಗ ನಮ್ಮ ದೇಹದಲ್ಲಿ ಇರುವ ತ್ಯಾಜ್ಯ ವಸ್ತುಗಳು ಹೊಸ ಹೋಗುತ್ತದೆ ಅದಕ್ಕೆ ಈ ನೀರು ನೆರವಾಗುತ್ತದೆ ಹೆಚ್ಚಿನ ಸಲ ನಮಗೆ ತಲೆ ನೋವು ಕಾಣಿಸುತ್ತದೆ ಬೆಳಗ್ಗೆ ನೀರು ಕುಡಿಯುವುದರಿಂದ ನಮ್ಮ ದೇಹವನ್ನು ನಿರ್ಜಲೀಕರಣ ದಿಂದ ದೂರ ಮಾಡಬಹುದು.