ಇಲ್ಲಿಗೆ ಹೋಗೋ ವಿಮಾನ ಮತ್ತು ಹಡಗು ಯಾವತ್ತು ವಾಪಸ್ ಬಂದಿಲ್ಲ

ಇತರೆ ಸುದ್ದಿ

ಬರ್ಮುಡಾ ಟ್ರಯಾಂಗಲ್ ಸಮುದ್ರದ ಒಂದು ವಿಚಿತ್ರ ಕಥೆ. ಕಳೆದ ನೂರು ವರ್ಷದಲ್ಲಿ ಸಾವಿರಕ್ಕೂ ಹೆಚ್ಚಿನ ಹಡಗುಗಳು ಹಾಗೂ ವಿಮಾನಗಳನ್ನು ಸಣ್ಣ ಸುಳಿವು ಇಲ್ಲದಂತೆ ಏನಾಗುತ್ತಿವೆ ಎಂದು ಯಾರಿಗೂ ತಿಳಿಯದಂತೆ ಮಾಯ ಮಾಡುತ್ತಿರುವ ಪ್ರಪಂಚದ ಏಕೈಕ ನಿಘುಡ ಸ್ಥಳ ಎಂದರೆ ಅದು ಬರ್ಮುಡಾ ಟ್ರಯಾಂಗಲ್. ಫ್ಲೋರಿಡ ಬರ್ಮುಡಾ ಮತ್ತು ಪ್ಯೂಟೋರಿಕೋ ಮಧ್ಯ ಇರುವ ಅಟ್ಲಾoಟಿಕ್ ಓಶಿಯನ್ನೇ ನಮ್ಮ ಬರ್ಮುಡಾ ಟ್ರಯಾಂಗಲ್ ಇದು 130000 ಚದರ ಅಡಿ ಇರುತ್ತದೆ ಇದನ್ನೇ ಡೇವಿಲ್ಸ್ ಟ್ರೈಯಂಗಲ್ ಅಂತಾನೂ ಕರೆಯುತ್ತಾರೆ. ಬರ್ಮುಡಾ ಟ್ರಯಾಂಗಲ್ ನಲ್ಲಿ ಪ್ರತಿವರ್ಷ 4 ವಿಮಾನಗಳು ಮತ್ತು 20 ಹಡಗುಗಳು ಮಾಯವಾಗುತ್ತವೆ ಇದರಲ್ಲಿ ವಿಚಿತ್ರ ಏನೆಂದರೆ ಆ ಹಡಗುಗಳು ಹೇಗೆ ಮಯವಾಗುತ್ತಿವೆ ಎನ್ನುವುದು ಇದುವರೆಗೂ ಯಾರಿಗೂ ಗೊತ್ತಿಲ್ಲ ಈ ಜಾಗದಲ್ಲಿ ಇದುವರೆಗೆ ಸಾವಿರಾರು ವಿಚಿತ್ರ ಘಟನೆಗಳು ನಡೆದಿವೆ ಆದರೆ ಅದರಲ್ಲಿ ಕೇವಲ 5 ಘಟನೆಗಳು ಮಾತ್ರ ಜನರಿಗೆ ತಿಳಿದಿವೆ ಅವೆಂದರೆ 1918 ಮಾರ್ಚ್ 14 ರಂದು ಯುಎಸ್ ಸೈಕ್ಲೋಪ್ಸ್ ಕಾರ್ಗೋ ಶೀಪ ಹಡಗು 314 ಜನ ಸೈನಿಕರ ಜೊತೆ ಮಾಯವಾಗುತ್ತದೆ

ಅಮೆರಿಕ ನೇವಿ ಚರಿತ್ರೆಯಲ್ಲೇ ಅತಿ ಹೆಚ್ಚು ಸೈನಿಕರನ್ನು ಕಳೆದುಕೊಂಡ ಘಟನೆ ಈ ಹಡಗಿನದ್ದು ಈ ಹಡಗು ಯುದ್ಧದ ಸಮಯದಲ್ಲಿ ಬೇರೆ ಹಡಗುಗಳಿಗೆ ಪಿಯಲ್ಸ್ ಕಳುಹಿಸಲು ಬಳಸುತ್ತಿದ್ದರು ಇದರ ಸುಳಿವು ಇವತ್ತಿಗೂ ಸಿಕ್ಕಿಲ್ಲ. ಎರಡನೆಯದು 1942 ರಲ್ಲಿ ಕ್ರಿಸ್ಟೋಫರ್ ಕೊಲಂಬಸ ಮಹಾನ್ ಪರಿಶೋಧಕ ಬರ್ಮುಡಾ ಟ್ರಯಾಂಗಲ್ ನ ಸಮೀಪ ಹಡಗಿನಲ್ಲಿ ಹೋಗುವಾಗ ಆತನಿಗೆ ಕೆಲವು ವಿಚಿತ್ರ ದೀಪಗಳು ಕಾಣಿಸಿದವು ಹಾಗೆಯೇ ಆಕಾಶದಲ್ಲಿ ದೊಡ್ಡ ಬೆಂಕಿ ಉಂಡೆ ಕಾಣಿಸಿತು ಮತ್ತು ಅವನ ಮೆಗ್ನೇಟಿಕ್ ದಿಕ್ಸೂಚಿ ಕೆಲಸ ಮಾಡದೆ ಇರುವುದನ್ನು ಅವನು ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ. ಮೂರನೆಯದು 1945 ಡಿಸೆಂಬರ್ 5 ರಂದು ನೇವಿಯವರು ವಿಮಾನಗಳನ್ನು ಬರ್ಮುಡಾ ಟ್ರಯಾಂಗಲ್ ಜಾಗಕ್ಕೆ ಕಳುಹಿಸಿದರು ನಂತರ 2 ಗಂಟೆ ಬಳಿಕ ಫ್ಲೈಟ್ 90 ನಾಯಕನಿಂದ ಇಲ್ಲಿ ನಮ್ಮ ದಿಕ್ಸೂಚಿ ಕೆಲಸ ಮಾಡುತ್ತಿಲ್ಲ ಈ ಸಮುದ್ರ ಬೇರೆ ಸಮುದ್ರದ ಹಾಗಲ್ಲ ಎಂದು ಹೇಳುವಾಗ ಆ ದ್ವನಿ ಸಂದೇಶ ಕಟ್ಟಾಗುತ್ತದೆ. 5 ವಿಮಾನಗಳು ಮತ್ತು 14 ನೇವಿ ವಿಮಾನ ಚಾಲಕರು ಸಂಜೆ ಆದರೂ ವಾಪಸ್ ಬರುವುದಿಲ್ಲ ಆಗ

ಯು ಎಸ್ ನೇವಿಯವರು 13 ಜನ ಇರುವ ಇನ್ನೊಂದು ವಿಮಾನವನ್ನು ಇವರನ್ನು ರಕ್ಷಿಸಲು ಕಳುಸುತ್ತಾರೆ ಅದರೆ ಇವರು ಸಹ ವಾಪಸ್ ಬರಲಿಲ್ಲ ಇದುವರೆಗೂ ಆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಾಲ್ಕನೆಯದು 1970 ಡಿಸೆಂಬರ್ ರಲ್ಲಿ ಬ್ರುಸ್ ಸ್ಕೆರನಾರ್ಟ್ಸ್ ಎನ್ನುವ ವ್ಯಕ್ತಿ ತನ್ನ ಸ್ವಂತ ವಿಮಾನದಲ್ಲಿ ಫ್ಲೋರಿಡದಿಂದ ಬರ್ಮಾಸ್ ಗೆ ಹೊರಟಿರುತ್ತಾನೆ ದಾರಿಯಲ್ಲಿ ಬ್ರುಸ್ ವಿಮಾನ ಒಂದು ದೊಡ್ಡ ಮೋಡದ ಮಧ್ಯ ಹೊರಡುತ್ತದೆ ಆ ಮೊಡವನ್ನೇ ಬ್ರುಸ್ ಎಲೆಟ್ರಾನಿಕ್ಪಾಗ ಅಂತ ಅವನ ಪುಸ್ತಕದಲ್ಲಿ ಬರೆದಿದ್ದಾನೆ ಇದ್ದಕ್ಕಿಂದ್ದಂತೆ ಅವನಿಗೆ ಹೆಚ್ಚಿನ ತೀವ್ರತೆಯ ನಿರಂತರ ಬೆಳಕು ಅವನಿಗೆ ಕಾಣಿಸಿತು ನಂತರ ಆ ವಿಮಾನ ಆ ಮೋಡದ ಮಧ್ಯ ಹೊರಬಂದಿತು ಮುಂದೆ ಆತನಿಗೆ ಮಿಯಾಮಿ ಬೀಚ್ ಕಾಣಿಸಿತು ವಿಚಿತ್ರ ಏನೆಂದರೆ ಫ್ಲೋರಿಡಾ ದಿಂದ ಮಿಯಾಮಿಗೆ ವಿಮಾನದಲ್ಲಿ 70 ನಿಮಿಷ ಬೇಕು ಆದರೆ ಬ್ರುಸ್ ಕೇವಲ 45 ನಿಮಿಷದಲ್ಲಿ ಸೇರಿರುತ್ತಾನೆ.

ಐದನೆ ಘಟನೆ ಯುಎಸ್ ನೇವಿಯವರು 1966 ರಲ್ಲಿ ಬರ್ಮುಡಾ ಟ್ರಯಾಂಗಲ್ ಒಂದು ಕಟ್ಟುಕಥೆ ಸುಳ್ಳು ಎಂದು ಹೇಳಿಕೆ ಕೊಟ್ಟರು ಆದರೆ ಫೈಟ್ 90 ಘಟನೆ ನಂತರ ಗುಟ್ಟಾಗಿ ಔಟ್ ಟಾಕ್ ಅಂಡರ್ ವಾಟರ್ ಅಮೆರಿಕನ್ ಬೇಸ್ ಅಂದರೆ ನೀರಿನ ಅಡಿಯಲ್ಲಿ ಅಮೆರಿಕ ಒಂದು ಬೇಸನ್ನು ಸ್ಥಾಪಿಸಿತು ಇದರಲ್ಲಿ ಬರ್ಮುಡಾ ಟ್ರಯಾಂಗಲ್ ನಲ್ಲಿ ಏನು ನಡೆಯುತ್ತೆ ಎನ್ನೋದನ್ನ ಪರೀಕ್ಷೆ ಮಾಡುತ್ತಾರೆ ಇದು ಗೊತ್ತಾದ ತಕ್ಷಣ ಇದು ಒಂದು ನಿಘುಡ ಸ್ಥಳ ಎನ್ನುವುದು ಜನರಿಗೆ ತಿಳಿದಿದೆ ಇದಕ್ಕೆ ಹಲವಾರು ಸಿದ್ಧಾಂತಗಳಿವೆ ನೀರಿನೊಳಗೆ ಶಕ್ತಿಯುತ ಕಲ್ಲುಗಳಿವೆ ಅದರಿಂದ ಪ್ರಯಾಣಿಸೋ ಯಾವ ಹಡಗು ವಿಮಾನ ಕೆಲಸ ಮಾಡಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ನೀರಿನೊಳಗೆ ಸುಳಿ ಇದೆ ಎನ್ನುತ್ತಾರೆ ಮತ್ತೆ ಕೆಲವರು ಮೀಥೇನ್ ಅನಿಲ ಇದೆ ಅದು ನುಂಗುತ್ತದೆ ಎನ್ನುತ್ತಾರೆ. ಆದರೆ ಸರಿಯಾದ ವಿವರಣೆ ಇನ್ನು ಸಿಕ್ಕಿಲ್ಲ. ಈ ಒಂದು ಮಾಹಿತಿ ಇಸ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

Leave a Reply

Your email address will not be published.