ನೀವು ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರಿಗೆ ಈ ಎಲೆಗಳು ಸೇರಿಸಿ ಕುಡಿದರೆ ಅದ್ಬುತ ಲಾಭ

ಉಪಯುಕ್ತ ಸಲಹೆ

ನೀವು ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುತ್ತಿದ್ದಿರ ಹಾಗಾದರೆ ಇದನ್ನು ಒಮ್ಮೆ ಓದಿ. ನೀವು ಕೂಡ ತಾಮ್ರದ ಪಾತ್ರೆಯಲ್ಲಿ ನೀರು ಸೇವನೆ ಮಾಡುತ್ತೀರಾ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ಆಯುರ್ವೇದದ ಪ್ರಕಾರ ಹಲವಾರು ಪ್ರಯೋಜನಗಳಿವೆ ಅದರಲ್ಲೂ ತಾಮ್ರದ ಪಾತ್ರೆಯಲ್ಲಿ ರಾತ್ರಿ ಇಡೀ ಶೇಖರಿಸಿ ಇಟ್ಟಂತಹ ನೀರನ್ನು ಮುಂಜಾನೆ ಕುಡಿಯುವುದರಿಂದ ವಾತ ಪಿತ್ತ ಕಫಗಳಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಳ್ಳಬಹುದು ಹಾಗೇನೇ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವುದು ಮಾಮೂಲಿ ಆದ್ರೆ ಶೇಖರಿಸಿ ಇಟ್ಟ ನೀರಿನಲ್ಲಿ ನಾಲ್ಕು ತುಳಸಿ ಎಲೆಯನ್ನು ಹಾಕಿ ನಿರಂತರವಾಗಿ ಕುಡಿಯುತ್ತ ಬಂದರೆ ಕಫ ಕಡಿಮೆಯಾಗುತ್ತದೆ. ಹಲವು ದಿನಗಳಿಂದ ಇರುವ ಕೆಮ್ಮಿನ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.

ದೇಹದ ಅಂಗಗಳು ಕಾರ್ಯ ನಿರ್ವಹಿಸಲು ತಾಮ್ರವು ಅತ್ಯಗತ್ಯವಾದ ಖನಿಜವಾಗಿದೆ ತಾಮ್ರವು ಕೆಂಪು ರ ಕ್ತಕಣಗಳು ಮತ್ತು ಕೊಲ್ಯಜಿನ್ ಗಳನ್ನು ನಿರ್ಮಿಸಲು ಅಗತ್ಯವಾಗಿವೆ ಅಲ್ಲದೆ ಆಹಾರದಿಂದ ದೇಹಕ್ಕೆ ಅಗತ್ಯವಾದ ಶಕ್ತಿಯ ಉತ್ಪಾದನೆಯಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತಾಮ್ರವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಿಕೊಳ್ಳುತ್ತದೆ ರ ಕ್ತದೊತ್ತಡವನ್ನು ನಿಯಂತ್ರಣ ಮಾಡಲು ಹಾಗೂ ಹೃದಯದ ಬಡಿತವನ್ನು ಕ್ರಮ ಬದ್ಧಗೊಳಿಸಲು ತಾಮ್ರ ಉತ್ತಮವಾಗಿದೆ. ಅಲ್ಲದೆ ಕೆಟ್ಟ ಕೊಬ್ಬನ್ನು ತಗ್ಗಿಸಿ ಅಧಿಕ ರ ಕ್ತ ದೊತ್ತಡವನ್ನು ತಗ್ಗಿಸಲು ನೇರವಾಗುತ್ತದೆ. ಮೂತ್ರಪಿಂಡದ ಸಮಸ್ಯೆಗಳನ್ನು ಮತ್ತು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಸಹಕಾರಿಯಾಗುತ್ತದೆ.

ಹಾಗೇನೇ ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ವಯಸ್ಸಾದಂತೆ ಕಾಣುವುದು ಈ ಎಲ್ಲ ರೀತಿಯ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ. ಆದ್ದರಿಂದ ತಾಮ್ರ ಒಂದು ಒಳ್ಳೆಯ ವಾಹಕ ಇದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವ ಬದಲು ತಾಮ್ರದ ಬಾಟಲಿಗಳಲ್ಲಿ ನೀರನ್ನು ಇಟ್ಟು ಕುಡಿಯುವುದು ನಿಜಕ್ಕೂ ಅಪಾಯ ಎಂಬುದು ಸಂಶೋದನೆಯಲ್ಲಿ ತಿಳಿದು ಬಂದಿದೆ, ಶಾಲಾ ಮಕ್ಕಳಿಗೆ ನಾವು ಪ್ಲಾಸ್ಟಿಕ್ ವಾಟರ್ ಕ್ಯಾನ್ ಗೆ ನೀರು ಹಾಕಿ ಕೊಡುತ್ತೇವೆ ಇದು ಮಕ್ಕಳ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ನಿಮ್ಮ ಮಕ್ಕಳಿಗೆ ಪ್ಲಾಸ್ಟಿಕ್ ಕ್ಯಾನ್ ಬದಲು ಒಂದು ಕಡಿಮೆ ಮೊತ್ತದ ಸ್ಟೀಲ್ ಬಾಟಲಿ ಅಥವ ಸಣ್ಣ ಗಾತ್ರದ ತಾಮ್ರದ ಬಾಟಲಿ ಕೊಡಿಸಿ, ಅದರಿಂದ ನೀರು ಕುಡಿಸುವ ಅಭ್ಯಾಸ ಮಾಡಿಸಿರಿ. ಹಾಗೇನೇ ಮನೆಯಲ್ಲೂ ಸಹ ತಾಮ್ರದ ಬಿಂದಿಗೆಯಲ್ಲಿ ಇಲ್ಲವೇ ಪಾತ್ರೆಯಲ್ಲಿ ನೀರು ಕುಡಿಯಿರಿ ಹಾಗೇನೇ ನಿಮ್ಮ ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಿ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಲು ಮರೆಯದಿರಿ

Leave a Reply

Your email address will not be published.