ಈ ಗಿಡಗಳು ಮನೆಯಲ್ಲಿ ಇದ್ರೆ ಕೆಟ್ಟ ಗಾಳಿ ತೆಗೆದು ಪರಿಶುದ್ದ ಗಾಳಿ ನೀಡುತ್ತದೆ

ಉಪಯುಕ್ತ ಸಲಹೆ

ಈ ಗಿಡಗಳಿಂದ ಮನೆಯಲ್ಲಿಯೇ ನಾವು ಪರಿಶುದ್ಧವಾದ ಗಾಳಿಯನ್ನು ಪಡೆಯಬಹುದು. ಯಾವ ಗಿಡಗಳನ್ನು ಬೆಳೆಸಿದರೆ ನಾವು ಶುದ್ಧ ಗಾಳಿಯನ್ನು ಪಡೆಯಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಸ್ಪೈಡರ್ ಪ್ಲ್ಯಾಂಟ್ ಇದು ನೋಡಲು ಜೇಡರ ಬಲೆ ತರ ಇರುವುದರಿಂದ ಇದನ್ನು ಸ್ಪೈಡರ್ ಪ್ಲ್ಯಾಂಟ್ ಎನ್ನುತ್ತಾರೆ ಇದನ್ನು ಮನೆಯ ಒಳಗಡೆ ಹೊರಗಡೆ ಅಷ್ಟೇ ಅಲ್ಲದೆ ಕಚೇರಿಯ ಟೇಬಲ್ ಪಕ್ಕದಲ್ಲಿ ಇಡಬಹುದು ಇದನ್ನು ಚಿಕ್ಕ ಹೂ ಕುಂಡಲದಲ್ಲಿ ಮಣ್ಣು ತುಂಬಿ ಇದನ್ನು ನೆಟ್ಟು 2 ದಿನಕ್ಕೊಮ್ಮೆ ನೀರು ಹಾಕಬೇಕು ನೆರಳು ಇರುವ ಕಡೆ ಇಟ್ಟು 15 ದಿನಕ್ಕೊಮ್ಮೆ ಬಿಸಿಲಿಗೆ ಇಡಬೇಕು ಒಣಗಿದ ಎಲೆ ತಗೆದರೆ ಹೊಸ ಎಲೆಗಳು ಬೆಳೆಯುತ್ತವೆ ಕಡಿಮೆ ಸೂರ್ಯನ ಬೆಳಕಿನಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸುವುದರಿಂದ ಶುದ್ಧಗಾಳಿ ನಮಗೆ ಸಿಗುತ್ತದೆ. ಇನ್ನು ಲೋಳೆಸರ ಇದರ ಅನೇಕ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತು ಇದನ್ನು ಸುಲಭವಾಗಿ ಬೆಳೆಯಬಹುದು

ಒಂದು ವಾರ ನೀರು ಹಾಕದೆ ಇದ್ದರು ಗಿಡ ಒಣಗುವುದಿಲ್ಲ ಇದು ಇಂಗಾಲದ ಡೈಆಕ್ಸೈಡ್ ಇಂಗಾಲದ ಮೊನಾಕ್ಸೈಡ್ ಫಾರ್ನುಲಾ ಡಿಹೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶುದ್ಧ ಗಾಳಿ ನಿಮಗೆ ದೊರಕುತ್ತದೆ. ಇನ್ನು ಶತಾವರಿ ಇದನ್ನು ಆಯುರ್ವೇದದಲ್ಲಿ ಬಳಸಿ ಅನೇಕ ಮದ್ದುಗಳನ್ನು ತಯಾರಿಸುತ್ತಾರೆ ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಇದನ್ನು ನೀಡಲಾಗುವುದು ಇದು ಗಾಳಿಯನ್ನು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತದೆ ಮನೆ ಮುಂದೆ ಇದು ಇದ್ದರೆ ಬ್ಯಾಕ್ಟೀರಿಯಾ ಹಾಗೂ ಸೋಂಕಾಣುಗಳನ್ನು ಕೊಲ್ಲುತ್ತದೆ. ಹಾಗೇನೇ ತುಳಸಿಗಿಡ ಮನೆ ಮುಂದೆ ತುಳಸಿಗಿಡವಿದ್ದರೆ ಅದರಿಂದ ಆರೋಗ್ಯಕರ ಗುಣಗಳನ್ನು ಪಡೆಯುವುದರ ಜೊತೆಗೆ ಮನೆಯ ಪರಿಸರದ ಗಾಳಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬಹುದು ಇದು ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್ ಕಾರ್ಬನ್ ಮೊನಾಕ್ಸೈಡ್ ರಂಜಕದ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ಹೊರಗೆ ಹಾಕುತ್ತದೆ ಇದರಿಂದ ಗಾಳಿ ಮನೆಯಲ್ಲಿ ಶುದ್ಧವಾಗಿರುತ್ತದೆ.

ಇನು ಈಗಿಡ ಮನೆಯ ಸಮೀಪ ಇದ್ದರೆ ಸೊಳ್ಳೆಕಾಟವು ತಪ್ಪುವುದು ಇದನ್ನು ಮನೆಯ ಆವರಣದಲ್ಲಿ ಇಡಬಹುದು. ಇನ್ನು ಜರ್ಬರಾ ಅಥವಾ ಜರ್ಬರಾಡೈಸಿ ಸುಮಾರು 30 ಕ್ಕೂ ಅಧಿಕ ಬಣ್ಣಗಳಲ್ಲಿ ಜರ್ಬರಾ ಗಿಡಗಳು ಬೆಳೆಯುತ್ತವೆ ಇದನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು ಹೂಕುಂಡಗಳಲ್ಲಿ ಇದರ ಬೀಜ ಹಾಕಿದರೆ ಇದು ಬೆಳೆಯುತ್ತದೆ ಸ್ವಲ್ಪ ಬಿಸಿಲು ಬೀಳುವ ಕಡೆ ಇಡಬೇಕು ಚಳಿಗಾಲದಲ್ಲಿ ಸ್ವಲ್ಪ ಕಡಿಮೆ ನೀರು ಹಾಕಿದರೆ ಸಾಕು ಮನೆಯ ಸುತ್ತಮುತ್ತಲಿನ ಗಾಳಿಯನ್ನು ಶುದ್ಧಗೊಳಿಸುತ್ತದೆ ಹಾಗೂ ಗಿಡ ಹೂವು ಬಿಟ್ಟಾಗ ತುಂಬಾ ಸುಂದರವಾಗಿ ಕಾಣುತ್ತದೆ. ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲ್ಯಾಂಟ್ ನೋಡಲು ಹಾವಿನಂತೆ ಕಾಣುವ ಈ ಸಸ್ಯವನ್ನು ಮನೆಯೊಳಗೆ ಬೆಳೆಸಬಹುದು ಈ ಸಸ್ಯವಿದ್ದ ಕಡೆ ಹಾವು ಬರುವುದಿಲ್ಲ ಕಡಿಮೆ ಬೆಳಕು ಬೀಳುವ ತೇವಾಂಶವಿರುವ ಕಡೆ ಇದನ್ನು ಇಡಬಹುದು ಇದನ್ನು ಮನೆಯ ಒಳಗಡೆ ಇಟ್ಟರೆ ಗಾಳಿಯಲ್ಲಿರುವ ಕಲುಷಿತ ಹೀರಿಕೊಂಡು ಶುದ್ಧಗಾಳಿ ನೀಡುತ್ತದೆ.

ಸೇವಂತಿಗೆ ಹೂವು ನೋಡುಗರನ್ನು ಸೆಳೆಯುತ್ತದೆ ಈ ಹೂವಿನಲ್ಲಿ ಹಲವಾರು ಬಗೆಗಳಿವೆ ಚಿಕ್ಕ ಹೂಕುಂಡಲದಲ್ಲಿ ಮನೆಯ ಮುಂದೆ ಸ್ವಲ್ಪ ಬಿಸಿಲಿರುವ ಕಡೆ ಇಡಬೇಕು ಈಗಿಡ ಸಿಗರೇಟ್ ಹೊಗೆಯನ್ನು ಹೊರದುಡಿ ಪರಿಸರದಲ್ಲಿ ಶುದ್ಧಗಾಳಿ ಇರುವಂತೆ ಮಾಡುತ್ತದೆ ಇನ್ನು ಕೊನೆಯದಾಗಿ ಡ್ರ್ಯಾಗನ್ ಗಿಡ ಇದನ್ನು ಕಚೇರಿಗಳಲ್ಲಿ ಹೆಚ್ಚಾಗಿ ಇಡುತ್ತಾರೆ ನೋಡಲು ಆಕರ್ಷಕವಾಗಿದ್ದು ಮನೆ ಹಾಗೂ ಕಚೇರಿಗೆ ವಿಶೇಷ ಕಳೆಯನ್ನು ನೀಡುವುದು ಮನೆಯಲ್ಲಿ ಇದನ್ನು ಬೆಳೆಸಿದರೆ ಕಾರಿನಿಂದ ಬರುವ ಹೊಗೆ ಬಣ್ಣದ ವಾಸನೆ ಸಿಗರೇಟ್ ಹೊಗೆ ಈರೀತಿಯ ಕಲುಷಿತ ಗಾಳಿಯಿಂದ ಮುಕ್ತಿ ಪಡೆಯಬಹುದು ಇದನ್ನು ಸುಲಭವಾಗಿ ಬೆಳೆಯಬಹುದು. ಹೀಗೆ ಈ ಎಲ್ಲ ಗಿಡವನ್ನು ಬೆಳೆಸಿದರೆ ಮನೆಯಲ್ಲಿಯೇ ನಾವು ಶುದ್ಧ ಗಾಳಿಯನ್ನು ಪಡೆಯಬಹುದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.