ಈ 5 ಮರಗಳನ್ನು ಪೂಜಿಸಿದರೆ ಜೀವನದಲ್ಲಿ ಸುಖ ಸಂತೋಷ ದೊರೆಯುತ್ತದೆ

ಜೋತಿಷ್ಯ

ಈ 5 ಗಿಡಮರಗಳನ್ನು ಪೂಜಿಸಿದರೆ ಜೀವನದಲ್ಲಿ ಸುಖ ಸಂತೋಷ ದೊರೆಯುತ್ತದೆ. ದೇವರು ಈ ಗಿಡಮರಗಳ ರೂಪದಲ್ಲಿ ಭೂಮಿಗೆ ಬಂದಿರುತ್ತಾನೆ ಅವುಗಳನ್ನು ಪೂಜಿಸಿದರೆ ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದರೆ ಆ 5 ವಿಶೇಷ ಮರಗಳು ಯಾವುದು ತಿಳಿಯೋಣ ಬನ್ನಿ. ಬಿಲ್ವಪತ್ರೆಯ ಮರ ಇದು ಶಿವನೊಂದಿಗೆ ಸಂಯೋಜನೆಯನ್ನು ಪಡೆದುಕೊಂಡಿದೆ ಬಿಲ್ವಪತ್ರೆಯು ಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠವಾದದ್ದು ವೈಜ್ಞಾನಿಕ ಔಷಧಿ ಗುಣಗಳನ್ನು ಹೊಂದಿದೆ. ಸೃಷ್ಟಿಯ ದೇವತೆಗಳಾದ ಬ್ರಹ್ಮ ವಿಷ್ಣು ಮಹೇಶ್ವರರನ್ನು ಬಿಲ್ವ ಪತ್ರೆ ಸಂಕೇತಿಸುತ್ತದೆ. ಈ ಎಲೆಯು 3 ಎಲೆಗಳ ಕುಡಿಯನ್ನು ಹೊಂದಿರುತ್ತದೆ ಅವು ಶಿವನ 3 ಕಣ್ಣುಗಳನ್ನು ಹಾಗೂ ತ್ರಿಶೂಲದ 3 ತುದಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.

ಈ ಮರದ ಎಲ್ಲ ಭಾಗಗಳು ಔಷಧಿ ಗುಣಗಳನ್ನು ಒಳಗೊಂಡಿವೆ ಧಾರ್ಮಿಕವಾಗಿ ಈ ಮರದ ಒಂದೊಂದು ಭಾಗವು ಪಾರ್ವತಿಯ ದೇವಿಯ ಅವತಾರವನ್ನು ಪ್ರತಿನಿಧಿಸುತ್ತವೆ. ಎರಡನೆಯದು ಬಾಳೆಮರ ಬಾಳೆಮರವಲ್ಲದಿದ್ದರು ಅದನ್ನು ಬಾಳೆಮರವೆಂದು ಕರೆಯುತ್ತಾರೆ ಇದು ವಿಷ್ಣು ಮತ್ತು ಲಕ್ಷ್ಮೀ ದೇವಿಯೊಂದಿಗೆ ಸಂಯೋಜನೆಯನ್ನು ಪಡೆದಿದೆ ಬಾಳೆಗಿಡವು ಎಲ್ಲ ಶುಭಕಾರ್ಯಗಳಿಗೂ ಪವಿತ್ರವಾದದ್ದು ಹಾಗೂ ಅಗತ್ಯವಾದ ಗಿಡವು ಹೌದು ಬಾಳೆಗಿಡ ಬಾಳೆಹಣ್ಣು ಬಾಳೆ ಎಲೆ ಬಾಳೆಹೂವು ಬಾಳೆದಾರ ಬಾಳೆದಿಂಡು ಎಲ್ಲವೂ ದೇವರ ಪೂಜೆಗೆ ಅಗತ್ಯವಾದ ವಸ್ತುಗಳು ಇವುಗಳ ಬಳಕೆ ಇಲ್ಲದೆ ಪೂಜಾ ವಿಧಾನವು ಅಪೂರ್ಣವಾಗುತ್ತವೆ. ಗುರುವಾರ ಯಾರು ಬಾಳೆಗಿಡಕ್ಕೆ ಪೂಜೆಯನ್ನು ಮಾಡುತ್ತಾರೆಯೋ ಅವರ ಕುಟುಂಬದಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಮೂರನೆಯದು ತುಳಸಿಗಿಡ ತುಳಸಿ ಎಲೆ ಇಲ್ಲದೆ ಯಾವ ಪೂಜೆಯು ಪೂರ್ಣವಾಗುವುದಿಲ್ಲ ತುಳಸಿಯನ್ನು ಮನೆಯಲ್ಲಿ ಇಟ್ಟು ಯಾರು ಪೋಷಿಸುತ್ತಾರೆಯೋ ಅವರ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ನಂಬಿಕೆ ಇದೆ ಪ್ರಾಚೀನ ವೇದಗಳು ಹೇಳುವ ಪ್ರಕಾರ ಯಾರು ತುಳಸಿಗಿಡವನ್ನು ಸ್ಪರ್ಶಿಸುತ್ತಾರೋ ಅವರು ಆಂತರಿಕವಾಗಿ ಶುದ್ಧಿಯನ್ನು ಪಡೆಯುತ್ತಾರೆ. ತುಳಸಿಗಿಡದಿಂದ ತಯಾರಿಸಿದ ಜಪದ ಸರಗಳನ್ನು ಋಷಿಮುನಿಗಳು ಸಂತರು ಹಾಗೂ ಪುರೋಹಿತರು ಧರಿಸುತ್ತಾರೆ ಇದು ಅತೇಂದ್ರಿಯ ಶಕ್ತಿಯನ್ನು ನೀಡುತ್ತದೆ ಇದರಿಂದ ವಯಸ್ಸು ಮನಸ್ಸು ದೇಹ ಹಾಗೂ ಭಾವನೆಗಳೆಲ್ಲವು ಶುದ್ಧಿಯಾಗುತ್ತವೆ. ಆಯುರ್ವೇದದ ಔಷಧಿಯಲ್ಲಿ ತುಳಸಿಯನ್ನು ಅತ್ಯಂತ ಅಗತ್ಯವಸ್ತುವಾಗಿ ಉಪಯೋಗಿಸಲಾಗುತ್ತದೆ ವಿಷ್ಣುವಿಗೆ ಅತಿ ಪ್ರಿಯವಾದ ತುಳಸಿ ಗಿಡಕ್ಕೆ ನಿತ್ಯವೂ ಪೂಜೆಯನ್ನು ಸಲ್ಲಿಸಬೇಕು ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಆಗಮನ ಆಗುತ್ತದೆ.

ಇನ್ನು ಆಲದಮರ ಈ ಮರವೂ ಬ್ರಹ್ಮ ದೇವನನ್ನು ಪ್ರತಿನಿಧಿಸುತ್ತದೆ ಈ ಮರವೂ ಅತ್ಯಂತ ವಿಶಾಲತೆಯನ್ನು ಪಡೆದುಕೊಳ್ಳುವುದು ಇದು ಧೀರ್ಘಯುಷ್ಯವನ್ನು ಸಂಕೇತಿಸುತ್ತದೆ ಈ ಮರವೂ ಫಲವತ್ತತೆಯ ಸಂಕೇತವೂ ಹೌದೂ ಧಾರ್ಮಿಕ ನಂಬಿಕೆಯ ಪ್ರಕಾರ ಮಕ್ಕಳು ಇಲ್ಲದ ದಂಪತಿಗಳು ಆಲದ ಮರಕ್ಕೆ ಪೂಜೆ ಮಾಡಿದರೆ ಸಂತಾನಫಲ ಪಡೆಯುವರು ಎಂದು ನಂಬಲಾಗಿದೆ. ಈ ಮರವನ್ನು ಕತ್ತರಿಸುವುದು ಅತ್ಯಂತ ಪಾಪಕೃತ್ಯ ಎಂದು ಪರಿಗಣಿಸಲಾಗಿದೆ. ವಟೊವೃಕ್ಷ ಎಂದು ಕರೆಯುವ ಇದಕ್ಕೆ ವಿವಾಹಿತ ಮಹಿಳೆಯರು ಪತಿಯ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಪೂಜೆಯನ್ನು ಸಲ್ಲಿಸುತ್ತಾರೆ. ಇನ್ನು ಅಶ್ವಥಮರ ಇದರಲ್ಲಿ ಎಲ್ಲ ದೇವಾನು ದೇವತೆಗಳ ವಾಸ ವಿರುತ್ತದೆ ಎನ್ನುವ ನಂಬಿಕೆ ಇದೆ ಇದು ಪ್ರತಿಯೊಂದು ಊರಿನಲ್ಲಿ ಒಂದು ಮರವಾದರು ಇರುತ್ತದೆ.

ಶನಿ ಮತ್ತು ಹನುಮಂತನ ದೇವಸ್ಥಾನದ ಎದುರು ಅಥವಾ ಆವರಣದಲ್ಲಿ ಈ ಮರ ಕಡ್ಡಾಯವಾಗಿ ಇರುತ್ತದೆ ಇದರಲ್ಲಿ ಲಕ್ಷ್ಮೀದೇವಿಯು ಸದಾ ಕುಳಿತಿರುತ್ತಾಳೆ ಎನ್ನುವ ನಂಬಿಕೆಯೂ ಸಹ ಇದೆ ಸಾಕಷ್ಟು ಸಾಂಕ್ರಾಮಿಕ ರೋಗಗಳನ್ನು ದೂರಮಾಡುತ್ತದೆ. ಯಾರು ಈ ಮರಕ್ಕೆ ನಿತ್ಯ ದೀಪವನ್ನು ಬೆಳಗುತ್ತಾರೋ ಯಾರು ನೀರನ್ನು ಹಾಕುವರೊ ಅವರ ಜೀವನದಲ್ಲಿ ಸಂತೋಷ ಹಾಗೂ ಮನದ ಆಸೆಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಈ 5 ವಿಶೇಷ ಗಿಡ ಮರಗಳಿಗೆ ನಿತ್ಯ ನೀರೆರೆಯುವುದು ಹಾಗೂ ದೀಪಾವನ್ನು ಬೆಳಗುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಜೀವನದಲ್ಲಿ ಲಾಭಗಳು ದೊರೆಯುತ್ತವೆ ಸಮಸ್ಯೆಗಳು ದೂರವಾಗುತ್ತವೆ. ಜೀವನದದಲ್ಲಿ ಸಾಕಷ್ಟು ಸಮಸ್ಯೆಗಳು ನಿಮ್ಮನು ಕಾಡುತ್ತಾ ಇದ್ಯಾ, ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಸಾಕಷ್ಟು ಚಿಂತೆ ನಿಮ್ಮಲ್ಲಿ ಕಾಡುತ್ತಾ ಇದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಶಂಕರ ನಾರಾಯಣ ಗುರು ಅವರಿಗೆ ಉಚಿತ ಕರೆ ಮಾಡಿರಿ ನಿಮ್ಮ ಉಚಿತ ಭವಿಷ್ಯ ತಿಳಿಯಿರಿ.

Leave a Reply

Your email address will not be published.