ಈ ದಿಕ್ಕಿಗೆ ಕುಳಿತು ಊಟ ಮಾಡಿದ್ರೆ ಅದೃಷ್ಟವೋ ಅದೃಷ್ಟ

ಉಪಯುಕ್ತ ಸಲಹೆ

ಮನುಷ್ಯನಾದ ಪ್ರತಿಯೊಬ್ಬ ವ್ಯಕ್ತಿಗೂ ಸಹ ತಾನು ಮಾಡುವ ಪ್ರತಿಯೊಂದು ಕೆಲಸಗಳಿಗೆ ನೀತಿ ನಿಯಮಗಳು ಇರುತ್ತವೆ ಹಾಗೇನೇ ಊಟದ ವಿಷಯದಲ್ಲೂ ಸಹ ಅವನು ಅನುಸರಿಸಬೇಕಾದ ಕೆಲವೊಂದು ನೀತಿ ನಿಯಮಗಳು ಇವೆ ಅವುಗಳನ್ನು ಪಾಲಿಸಿದರೆ ಆತನಿಗೆ ಜೀವನದಲ್ಲಿ ಶುಭವಾಗುತ್ತದೆ. ಹಾಗಾದರೆ ಭೋಜನದಲ್ಲಿ ಆತ ಪಾಲಿಸಬೇಕಾದ ನಿಯಮಗಳು ಯಾವುದು ಅಥವಾ ಅವನು ಊಟ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಇದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಹಿಂದೂ ಧರ್ಮದಲ್ಲಿ ಪ್ರತಿದಿನದ ಪ್ರತಿಯೊಂದು ಕೆಲಸಕ್ಕೂ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ ಈ ನಿಯಮಗಳನ್ನು ಭವಿಷ್ಯ ಪುರಾಣದಲ್ಲಿ ನೋಡಬಹುದುದಾಗಿದೆ.

ಊಟ ಕೂಡ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಬಹು ಮುಖ್ಯ ಕೆಲಸವಾಗಿದೆ ಭೋಜನವನ್ನು ಮಾಡುವಾಗ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಜೀವನದ ಮೇಲೆ ಅಡ್ಡ ಪರಿಣಾಮವನ್ನು ಬಿರುವಂತಹ ಸಾಧ್ಯತೆಗಳು ಕೂಡ ಇರುತ್ತವೆ ಪೂರ್ವದಿಕ್ಕಿಗೆ ಮುಖ ಮಾಡಿ ಭೋಜನ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಅದೇ ಪಶ್ಚಿಮಕ್ಕೆ ಮುಖ ಮಾಡಿ ಊಟ ಮಾಡುವುದರಿಂದ ಧನಲಾಭವಾಗುತ್ತದೆ. ಹಾಗೇನೇ ಉತ್ತರ ದಿಕ್ಕಿಗೆ ಮುಖ ಮಾಡಿ ನಾವು ಆಹಾರ ಸೇವನೆ ಮಾಡುವುದರಿಂದ ಗೌರವ ಪ್ರಾಪ್ತಿಯಾಗುತ್ತದೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದರಿಂದ ಹೆಸರು ಲಭಿಸುತ್ತದೆ. ಊಟದ ಮಧ್ಯ ತಟ್ಟೆ ಬಿಟ್ಟು ಏಳಬಾರದು ಭೋಜನದ ಮಧ್ಯ ಹೀಗೆ ಪದೇ ಪದೇ ಎದ್ದಲ್ಲಿ ಹಣ ವ್ಯಯವಾಗುತ್ತದೆ. ಇನ್ನು ಬಿಟ್ಟ ಆಹಾರವನ್ನು ಮತ್ತೆ ಸೇವನೆ ಮಾಡಬಾರದು

ಹೀಗೆ ಮಾಡುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಹಾಗೆಯೇ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವನೆ ಮಾಡಬಾರದು ಇನ್ನು ಯಾರಿಗೂ ಕೆಟ್ಟ ಆಹಾರ ಪಧಾರ್ಥವನ್ನು ನೀಡಬಾರದು ಹಾಗೆಯೇ ನಾವು ಕೂಡ ಕೆಟ್ಟ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಆಹಾರ ಸೇವನೆ ಮಾಡಿದ ನಂತರ ಹಾಗೆಯೇ ಎದ್ದು ಹೋಗಬಾರದು ಸ್ವಲ್ಪ ನೀರನ್ನು ಸೇವನೆ ಮಾಡಿದ ನಂತರವೇ ಹೊರಗೆ ಹೋಗಬೇಕು ಭೋಜನವನ್ನು ಖುಷಿ ಖುಷಿಯಾಗಿ ಸೇವನೆ ಮಾಡಬೇಕು ಜೊತೆಗೆ ಉಪ್ಪು ಹುಳಿ ಖಾರ ಕಡಿಮೆ ಇದ್ದಲ್ಲಿ ಅದರ ಬಗ್ಗೆ ತಕರಾರನ್ನು ಮಾಡಬಾರದು. ಅನ್ನವನ್ನು ಅನ್ನಪೂರ್ಣೇಶ್ವರಿ ಎನ್ನುತ್ತಾರೆ ಅದಕ್ಕೆ ನಾವು ಗೌರವ ಕೊಡಬೇಕು ಬದಲಾಗಿ ಅನ್ನವನ್ನು ಹೆಚ್ಚಾಗಿ ಚೆಲ್ಲಬಾರದು ಹಾಗೆ ಚೆಲ್ಲಿದರೆ ದರಿದ್ರ ನಮ್ಮನ್ನು ಬೆಂಬಿಡದೆ ಕಾಡುತ್ತದೆ ಜೊತೆಗೆ ಮುಂದಿನ ಜನ್ಮದಲ್ಲಿ

ಒಂದು ತುತ್ತು ಅನ್ನಕ್ಕೂ ಸಹ ನಾವು ಪರದಾಡುವ ಸ್ಥಿತಿ ಬರುತ್ತದೆ ಹಸಿದವರಿಗೆ ಒಂದು ತುತ್ತು ಅನ್ನ ನೀಡುವ ಮಾನವೀಯ ಗುಣವಿರಬೇಕು ಆಗ ದೇವರು ನಿಮಗೆ ನಿಮ್ಮ ಒಳ್ಳೆ ಗುಣಕ್ಕೆ ಮೆಚ್ಚುತ್ತಾನೆ. ಹೀಗೆ ಭೋಜನ ಮಾಡುವಾಗ ತಟ್ಟೆಯನ್ನು ನಮಸ್ಕರಿಸಿ ನಂತರ ಊಟವನ್ನು ಸೇವಿಸಬೇಕು ಹೀಗೆ ಮಾಡುವುದರಿಂದ ಅನ್ನಪೂರ್ಣೇಶ್ವರಿಗೆ ನಾವು ಗೌರವ ಸೂಚಿಸಿದಂತೆ ಆಗುತ್ತದೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.