ಶೌಚಾಲಯದಲ್ಲಿ ಈ ತಪ್ಪುಗಳು ಮಾಡಬೇಡಿ ವೈದ್ಯರ ಮಾತು ಪಾಲಿಸಿ

ಉಪಯುಕ್ತ ಸಲಹೆ

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಸ್ವಚ್ಜತೆ ಎನ್ನುವುದು ನಮ್ಮ ಆರೋಗ್ಯದ ವಿಷಯದಲ್ಲಿ ತುಂಬಾನೆ ಮಹತ್ವವನ್ನು ಪಡೆಯುತ್ತದೆ ಏಕೆಂದರೆ ನಾವು ಸ್ವಚ್ಛತೆಯನ್ನು ಕಾಪಾಡಿಕೊಂಡಾಗಲೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯ ಹಾಗಾಗಿ ಸ್ನೇಹಿತರೆ ಇಲ್ಲಿ ನಾವು ಈ ಒಂದು ಲೇಖನದಲ್ಲಿ ತಿಳಿಸುವ ವಿಷಯ ಶೌಚಾಲಯ ಸ್ವಚ್ಛತೆ ಬನ್ನಿ ಹಾಗಾದ್ರೆ ಅದು ಯಾವ ವಿಷಯ ಅಂತ ತಿಳಿಯೋಣ. ಶೌಚಾಲಯದಲ್ಲಿ ಎಂದು ಈ ತಪ್ಪುಗಳನ್ನು ಮಾಡಬೇಡಿ. ಈ ಶೌಚಾಲಯ ಎನ್ನುವುದು ಪ್ರತಿಯೊಬ್ಬರಿಗೂ ಅತಿ ಮುಖ್ಯ ನಾವು ಪ್ರತಿನಿತ್ಯ ಬಳಸುವಂತಹ ಶೌಚಾಲಯದ ಬಗ್ಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ ಶೌಚ್ಚದ ಸಮಯದಲ್ಲಿ ಸಾಮಾನ್ಯವಾಗಿ ಕೆಲವು ತಪ್ಪುಗಳನ್ನು ಮಾಡುತ್ತೇವೆ

ಆ ತಪ್ಪು ಅನಾರೋಗ್ಯ ಅಥವಾ ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು. ಶೌಚಾಲಯಕ್ಕೆ ಹೋದ ತಕ್ಷಣ ಅದರ ಸ್ವಚ್ಛತೆಯನ್ನು ಗಮನಿಸದೆ ಅದನ್ನು ಬಳಕೆ ಮಾಡುವುದು ಅತಿ ದೊಡ್ಡ ತಪ್ಪು ಶೌಚಾಲಯ ಸ್ವಚ್ಛ ಇಲ್ಲದಿದ್ದರೆ ಅದನ್ನು ಮೊದಲು ಸ್ವಚ್ಛಗೊಳಿಸಬೇಕು ನಂತರ ನಿಮ್ಮ ಕೆಲಸವನ್ನು ಮಾಡಬೇಕು ಹಾಗೇನೇ ಮಲವಿಸರ್ಜನೆ ಮಾಡಿದ ನಂತರ ಶೌಚಾಲಯಕ್ಕೆ ಸರಿಯಾಗಿ ನೀರು ಹಾಕಬೇಕು ಕೆಲವರು ಇದನ್ನು ಕೂಡ ಮರೆಯುವುದುಂಟು ಹಾಗೇ ಮಾಡಿದ್ರೆ ಮೂತ್ರ ಸೋಂಕು ಬರುತ್ತದೆ. ಇನ್ನು ಕೆಲವರಿಗೆ ಶೌಚಾಲಯದಲ್ಲಿ ಸಿಗರೇಟ್ ಸೇದುವುದು ಹಾಗೂ ಗೋಡೆಯ ಮೇಲೆ ಉಗುಳುವ ಅಭ್ಯಾಸವಿರುತ್ತದೆ. ಹೀಗೆ ಗೋಡೆಯ ಮೇಲೆ ಉಗುಳಿದರೆ ಶೌಚಾಲಯ ಕೊಳಕಾಗುವ ಜೊತೆಗೆ ಅನಾರೋಗ್ಯ ಕೂಡ ನಮ್ಮನ್ನು ಕಾಡುತ್ತದೆ.

ಶೌಚಾಲಯಕ್ಕೆ ಹೋದ ನಂತರ ಕೆಲವರು ತುಂಬಾ ಸಮಯವನ್ನು ಶೌಚಾಲಯದಲ್ಲಿಯೇ ಕಳೆಯುತ್ತಾರೆ ಅದರಲ್ಲೂ ಇತ್ತೀಚೆಗೆ ಮೊಬೈಲ್ ತೆಗೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ ಹೆಚ್ಚಿನ ಸಮಯ ಅಲ್ಲಿ ಕಳೆಯುವುದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಕೂಡ ಹೆಚ್ಚಿದೆ ಹತ್ತು ಹಲವು ಸೋಂಕು ನಿಮ್ಮ ದೇಹಕ್ಕೆ ಬಹುಬೇಗನೆ ಬರುತ್ತದೆ. ಹಾಗೇನೇ ಈಗ ವಿದೇಶಿ ಮಾದರಿ ಶೌಚಾಲಯ ಕೂಡ ಬಂದಿದೆ ಅದರಲ್ಲಿ ಕೂದಲು ಹಾಕುವುದು ನ್ಯಾಪ್ಕಿನ ಹಾಕುವುದನ್ನು ಮಾಡಬಾರದು ಶೌಚಾಲಯದಿಂದ ಬಂದ ನಂತರ ತಪ್ಪದೆ ಸೋಪಿನಿಂದ ಕೈಯನ್ನು ತೊಳೆದುಕೊಳ್ಳಬೇಕು ಅನೇಕ ಬಾರಿ ಅವಸರದಲ್ಲಿ ಕೈಯನ್ನು ಸರಿಯಾಗಿ ತೊಳೆದು ಕೊಳ್ಳುವುದಿಲ್ಲ ಕೈಯನ್ನು ಸರಿಯಾಗಿ ತೊಳೆಯದೆ ಹಾಗೆ ಆಹಾರ ಸೇವನೆ ಮಾಡಿದರೆ ಸೋಂಕು ಹೊಟ್ಟೆಯನ್ನು ಸೇರುತ್ತದೆ. ಇದರಿಂದ ನಮ್ಮ ಆರೋಗ್ಯ ಹಾಳಾಗಿ

ಹಲವಾರು ರೀತಿಯ ರೋಗ ರೂಜಿನಗಳು ನಮ್ಮನ್ನು ಬೆಂಬಿಡದೆ ಕಾಡುತ್ತವೆ ಆದ್ದರಿಂದ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ನೀವು ತುಂಬಾ ಜಾಗರುಕರಾಗಿ ಇರಿ ಮಕ್ಕಳಿಗೂ ಸಹ ಶೌಚಾಲಯದ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಹೇಳಿ ಆಗ ನಿಮ್ಮ ಮಕ್ಕಳನ್ನು ಸಹ ನೀವು ಆರೋಗ್ಯವಾಗಿ ಇಡಬಹುದು ಮತ್ತು ಅವರ ಆರೋಗ್ಯವನ್ನು ಚನ್ನಾಗಿ ಕಾಪಾಡಬಹುದು. ಇದು ಓದುಗರಿಗೆ ಮುಜುಗರದ ವಿಷಯ ಆಗಿರಬಹುದು ಆದರೆ ನಮ್ಮ ಆರೋಗ್ಯದ ದೃಷ್ಟಿಯಿಂದ ನೋಡಿದಾಗ ಸ್ವಚ್ಛತೆಯ ಬಗ್ಗೆ ನಾವು ತಿಳಿದುಕೊಳ್ಳುವುದರಲ್ಲಿ ಯಾವುದೇ ಸಂಕೋಚವಿಲ್ಲ ಹಾಗಾಗಿ ಸ್ನೇಹಿತರೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಶೇರ್ ಮಾಡಿ

Leave a Reply

Your email address will not be published.