ಪ್ರತಿ ದಿನ ಸ್ನಾನ ಆದ ಬಳಿಕ ಹೀಗೆ ಮಾಡಿದರೆ ಅದೃಷ್ಟವೋ ಅದೃಷ್ಟ

ಜೋತಿಷ್ಯ

ಪ್ರತಿ ದಿನ ಸ್ನಾನ ಆದ ನಂತರ ಹೀಗೆ ಮಾಡಿದರೆ ಅದೃಷ್ಟವೋ ಅದೃಷ್ಟ. ಪ್ರತಿಯೊಬ್ಬರೂ ಕೂಡ ಯಶಸ್ಸಿನ ಹಿಂದೆ ಓಡುತ್ತಾರೆ ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ ಶಾಸ್ತ್ರ ಮತ್ತು ಪದ್ಧತಿಗಳು ನಿಮಗೆ ಇದಕ್ಕೆ ಸಹಾಯ ಮಾಡಬಲ್ಲವು ಬೆಳಗ್ಗೆ ಎದ್ದ ತಕ್ಷಣ ಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡರೆ ದುರದೃಷ್ಟ ದೂರವಾಗಿ ಅದೃಷ್ಟ ನಿಮಗೆ ಒಲಿಯುತ್ತದೆ ಯಾವುದೇ ಕೆಲಸ ಕೈ ಗೂಡದೇ ಹೋದರೆ ದುರದೃಷ್ಟ ಬೆನ್ನು ಹತ್ತಿದೆ ಎಂದು ಅರ್ಥ ಪ್ರತಿ ದಿನ ಸ್ನಾನ ಮಾಡಿದ ನಂತರ ಅಗತ್ಯವಿರುವ ವ್ಯಕ್ತಿಗೆ ಅಗತ್ಯವಿರುವ ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ದುರದೃಷ್ಟ ಅದೃಷ್ಟ ಆಗಿ ಬದಲಾಗುತ್ತದೆ.

ಹಿಂದೂ ಪದ್ಧತಿಯಲ್ಲಿ ಸ್ನಾನವನ್ನು ಇಂತಹ ಸಮಯದಲ್ಲಿ ಮಾಡಬೇಕು ಎನ್ನುವ ಒಂದು ನಿಯಮ ಇದೆ ಇದರ ಜೊತೆಗೆ ಸ್ನಾನ ಮಾಡಿದ ನಂತರ ಹೀಗೆ ಮಾಡಿದರೆ ಸಾಕು ಮನುಷ್ಯನ ದುರದೃಷ್ಟ ಅದೃಷ್ಟ ಆಗಿ ಬದಲಾಗುತ್ತದೆ ಎಂದು ಕೂಡ ನಮ್ಮ ಹಿರಿಯರು ನಂಬುತ್ತಾರೆ ಹಾಗಾದರೆ ಸ್ನಾನ ಮಾಡಿದ ನಂತರ ಏನು ಮಾಡಬೇಕು ಯಾವ ಕೆಲಸ ಮಾಡಿದರೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ನಮ್ಮ ಸಂಪ್ರದಾಯದಲ್ಲಿ ದೇವರ ಪೂಜೆಗೆ ನಾವು ಅದೆಷ್ಟು ವಿಶಿಷ್ಟವಾದ ಸ್ಥಾನವನ್ನು ನೀಡಿದ್ದೇವೆ ಅಲ್ಲವೇ ಪೂಜೆಯನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಶಾಂತಿ ದೊರೆಯುತ್ತದೆ ಈ ಬಗೆಯಾಗಿ ಸ್ನಾನ ಮಾಡಿದ ಬಳಿಕ ಮೊದಲು ದೇವರ ಪೂಜೆಯನ್ನು ಮಾಡಿ ನಂತರ ನಮ್ಮ ಕೈಯಿಂದ ಆಗುವಷ್ಟು ಬೇರೆಯವರಿಗೆ ಯಾವುದಾದರೂ ಒಂದು ವಸ್ತುವನ್ನು ದಾನ ಮಾಡಬೇಕು ಹೀಗೆ ಮಾಡುವುದರಿಂದ ಮನುಷ್ಯನ ನಸೀಬು ಬದಲಾಗುತ್ತದೆ. ಅದಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೆಳ್ಳಗೆ ಸ್ನಾನ ಮತ್ತು ದೇವರ ಪೂಜೆ ಆದ ನಂತರ ತಿಂಡಿಗೆ ಮುನ್ನ ಒಬ್ಬರಿಗೆ ಒಂದಿಷ್ಟು ಆಹಾರ ನೀಡಿರಿ.

ನಮ್ಮ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಎಂತಹ ಸ್ಥಾನ ಇದೆ ಎಂಬುದು ಗೊತ್ತು. ತುಳಸಿ ಮಂಗಳಕರ ಎಂದು ನಂಬಲಾಗಿದೆ. ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲಸಿರುತ್ತಾರೆ. ಹಾಗಾಗಿ ಪ್ರತಿ ದಿನ ಸ್ನಾನ ಆದ ಬಳಿಕ ಮತ್ತು ಸೂರ್ಯಾಸ್ತದ ವೇಳೆ ಗೋಧೂಳಿ ಸಮಯದಲ್ಲಿ ಕೂಡ ತುಳಸಿ ಗಿಡಕ್ಕೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲಸುವುದರ ಜೊತೆಗೆ ಆ ವ್ಯಕ್ತಿಯ ಅದೃಷ್ಟ ಕೂಡ ಬದಲಾಗುತ್ತದೆ. ಈ ರೀತಿ ಮಾಡುವುದರಿಂದ ಈ ಎಲ್ಲಾ ನಿಯಮಗಳನ್ನು ಪಾಲಿಸುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ ಎಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೇಳಲಾಗಿದೆ ಮತ್ತು ಇದನ್ನು ನಮ್ಮ ಹಿರಿಯರು ಕೂಡ ಪಾಲಿಸುತ್ತಾ ಇದ್ದರು. ಇನ್ನೂ ಯಾರ ಮನೆಯಲ್ಲಿ ಗಾಯತ್ರಿ ಮಂತ್ರ ಕೇಳಿ ಬರುತ್ತದೆಯೋ ಈ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದಿಲ್ಲ ಪ್ರತಿ ದಿನ ಸ್ನಾನ ಆದ ನಂತರ ಗಾಯತ್ರಿ ಮಂತ್ರ ಜಪಿಸಿ.

Leave a Reply

Your email address will not be published.