ಕೈಗೆ ಮೌಳಿದಾರ ಕಟ್ಟಿದರೆ ಅದೃಷ್ಟವೋ ಅದೃಷ್ಟ

ಜೋತಿಷ್ಯ

ಕೈಗೆ ಕೆಂಪುದಾರ ಕಟ್ಟುವ ಹಿಂದಿರುವ ಕಾರಣ. ಹಿಂದೂ ಧರ್ಮಗಳಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವನ್ನು ಕಲಾವದಾರ ಅಥವಾ ಮೌಳಿದಾರ ಎಂದು ಕರೆಯುತ್ತಾರೆ ಪ್ರತಿಪೂಜೆ ಮತ್ತು ಪ್ರಮುಖ ಸಂದರ್ಭಗಳಲ್ಲಿ ಈ ದಾರವನ್ನು ಕಟ್ಟಿಕೊಳ್ಳುವುದನ್ನು ಸಾಮಾನ್ಯವಾಗಿ ನಾವು ನೋಡಬಹುದು. ಅಷ್ಟೇ ಅಲ್ಲದೆ ಇದನ್ನು ಶುಭ ಸಂಕೇತವಾಗಿ ಪರಿಗಣಿಸಬಹುದು ಆದರೆ ಇದನ್ನು ಕಟ್ಟಿಕೊಳ್ಳುವ ಮೂಲಕ ನಾವು ಆರೋಗ್ಯಕರ ಪ್ರಯೋಜನಗಳನ್ನು ನಮ್ಮ ದೇಹಕ್ಕೆ ಪಡೆಯಬಹುದು ಅಂತಾ ತುಂಬಾ ಜನರಿಗೆ ಗೊತ್ತೇ ಇಲ್ಲ ನಮ್ಮ ಭಾರತೀಯ ಸಂಪ್ರದಾಯ ಮತ್ತು ಸಂಸ್ಕ್ರುತಿಗಳು ಒಂದಲ್ಲ ಒಂದು ರೀತಿಯಲ್ಲಿ ಒಳ್ಳೆಯದನ್ನು ಮಾಡುತ್ತ ಅವುಗಳ ಒಂದು ಕ್ರಮವನ್ನು ನಮಗೆ ತಿಳಿಸುತ್ತಿವೆ ಆದರೆ ನಾವು ಇವುಗಳನ್ನು ಮೂಢನಂಬಿಕೆ ಎಂದು ತಿಳಿದು ಈಗ ಇವುಗಳನ್ನು ಪಾಲಿಸದೆ ಬಿಟ್ಟುಬಿಟ್ಟಿದ್ದೀವಿ.

ಈ ಕೆಂಪು ದಾರ ಕಟ್ಟುವುದು ನೂರಾರು ವರ್ಷಗಳಿಂದ ನಡೆದುಬಂದಂತಹ ಸಂಸ್ಕೃತಿಯಾಗಿದೆ ಮತ್ತು ಇದರ ಹಿಂದೆ ಕೆಲವು ಪ್ರಯೋಜನಗಳು ಸಹ ಇವೆ. ಇದರಿಂದ ನಮ್ಮ ಆರೋಗ್ಯಕ್ಕೆ ಯಾವ ಯಾವ ರೀತಿಯ ಅನುಕೂಲ ಇದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಹಿಂದೂ ಧರ್ಮದಲ್ಲಿ ಪ್ರತಿ ಸಂಸ್ಕೃತಿಯ ಉತ್ಸವವನ್ನು ಕೆಂಪುಧಾರ ಕಟ್ಟುವ ಮೂಲಕ ಪ್ರಾರಂಭಮಾಡುತ್ತಾರೆ ಗ್ರಂಥಗಳಲ್ಲಿ ಹೇಳುವ ಪ್ರಕಾರ ಮಣಿಕಟ್ಟಿನ ಗಂಟಿನ ಭಾಗದಲ್ಲಿ ಅಂದರೆ ನಾವು ಗಡಿಯಾರ ಕಟ್ಟಿಕೊಳ್ಳುವ ಭಾಗದಲ್ಲಿ ಕಟ್ಟುವ ಈ ದಾರವನ್ನು ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಲಕ್ಷ್ಮೀ ಪಾರ್ವತಿ ಮತ್ತು ಸರಸ್ವತಿ ಎಂಬ ತ್ರಿದೇವತೆಯ ಆಶೀರ್ವಾದ ಪಡೆಯಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ ಈ ಆಶೀರ್ವಾದ ಮೂಲಕ ನಮ್ಮ ಆರೋಗ್ಯ ಲಭಿಸುತ್ತದೆ ಎಂದು ನಮ್ಮ ಪುರಾಣಗಳು ತಿಳಿಸುತ್ತವೆ. ಈ ಪುರಾಣಗಳು ಹೇಳುವ ಪ್ರಕಾರ ಈ ಕೆಂಪುದಾರ ಕಟ್ಟುವ ಸಂಪ್ರದಾಯ ದೇವತೆ ಲಕ್ಷ್ಮೀಯು ಬಲಿರಾಜನಿಗೆ ಕಟ್ಟುವ ಮೂಲಕ ಆರಂಭವಾಯಿತು

ಈ ದಾರ ಸರಳವಾದ ದಾರವಾದರು ಪ್ರಭುವಿನ ಆಶೀರ್ವಾದ ಪಡೆಯಲು ಅರ್ಹತೆ ಹೊಂದಿದೆ ಈ ದಾರವನ್ನು ಕಟ್ಟುವುದರಿಂದ ಪಡೆಯುವ ಲಾಭಗಳನ್ನು ವಿಜ್ಞಾನವು ಸಹ ಒಪ್ಪಿಕೊಂಡಿದೆ. ಮಾನವ ಶಾಸ್ತ್ರದ ಪ್ರಕಾರ ನಮ್ಮ ಮಣಿಕಟ್ಟಿನಲ್ಲಿ ಸೂಕ್ಷ್ಮ ನರಗಳ ಜಾಲವೆ ಹರಡಿಕೊಂಡಿದೆ ದೇಹದ ಎಲ್ಲ ಪ್ರಮುಖ ರಕ್ತ ನಾಳಗಳು ಈ ಭಾಗದ ಮೂಲಕ ಹಾದುಹೋಗುತ್ತವೆ ಈ ಭಾಗದಲ್ಲಿ ದಾರ ಕಟ್ಟಿಕೊಳ್ಳುವುದರಿಂದ ರಕ್ತ ಪರಿಚಲನೆ ಉತ್ತಮವಾಗುತ್ತದೆ ಹೇಗೆ ಅಂದರೆ ಈ ಮೂಲಕ ತ್ರಿದೋಷಗಳಾದ ವಾತ ಪಿತ್ತ ಮತ್ತು ಕಫಗಳು ಸಮತೋಲನದಲ್ಲಿ ಇರುತ್ತದೆ. ಇದರ ಪರಿಣಾಮವಾಗಿ ದೇಹದ ವ್ಯವಸ್ಥೆ ಸಮತೋಲನ ಕಾಯ್ದುಕೊಂಡು ಆರೋಗ್ಯಕರವಾಗಿರುತ್ತದೆ ಅಲ್ಲದೆ ಈ ದಾರಕ್ಕೆ ಋಣಾತ್ಮಕ ಶಕ್ತಿಯನ್ನು ಸಂಹರಿಸುವ ಶಕ್ತಿಯು ಸಹ ಇದೆ ಈ ದಾರವನ್ನು ಮಣಿಕಟ್ಟಿನ ಜಾಗದಲ್ಲಿ ಯಾರು ಕಟ್ಟಿರುತ್ತಾರೋ ಅವರಿಗೆ ಪೆಚ್ಚಾವಾರ್ಯು ಮಧುಮೇಹ ಹೃದಯ ಸಂಬಂಧಿ ತೊಂದರೆಗಳು ಕಾಡುವುದಿಲ್ಲ

ಅಲ್ಲದೆ ಮಣಿಕಣ್ಣಿನಲ್ಲಿ ಕಟ್ಟಿರುವ ಈ ದಾರದ ಮೂಲಕ ನರಗಳ ಮೇಲೆ ಬೀಳುವ ಒತ್ತಡದಿಂದ ರಕ್ತ ಅತಿಯಾಗಿ ಹರಿಯದೆ ಅಗತ್ಯವಿದ್ದಷ್ಟು ಹರಿಯುತ್ತದೆ ಇದರ ಮೂಲಕ ರೋಗನಿರೋಧಕ ಶಕ್ತಿ ಮತ್ತು ನಮ್ಮ ದೇಹದ ಶಕ್ತಿ ಅತ್ಯುತ್ತಮವಾಗುವಂತೆ ಇದು ನಮ್ಮನ್ನು ಕಾಪಾಡುತ್ತದೆ ಪುರಾತನ ಕಾಲದಿಂದಲೂ ಮಂಗಳಕರ ಎನ್ನುವ ಹಳದಿ ಮತ್ತು ಕೆಂಪುದಾರವನ್ನು ಕಟ್ಟಿಕೊಳ್ಳುವ ಸಾಂಪ್ರದಾಯ ಅಸ್ತಿತ್ವಕ್ಕೆ ಬಂದಿತು ಎನ್ನಲಾಗಿದೆ.ಇದಲ್ಲದೆ ಕಿತ್ತಳೆ ಹಳದಿ ಕೆಂಪು ಬಣ್ಣಗಳ ದಾರವನ್ನು ನಮ್ಮ ಹಿಂದೂ ಧರ್ಮದಲ್ಲಿ ಮಂಗಳಕರ ಅಂತ ಪರಿಗಣಿಸಲಾಗುತ್ತದೆ. ಇವು ಗುರು ಮಂಗಳ ಸೂರ್ಯನಿಗೆ ಇಷ್ಟವಾದ ಬಣ್ಣಗಳು ಎನ್ನಲಾಗುತ್ತದೆ. ಗ್ರಂಥಗಳಲ್ಲಿ ವಿವರಿಸಿರುವ ಪ್ರಕಾರ ಪುರುಷರು ಬಲಗೈಗೆ ಮತ್ತು ಅವಿವಾಹಿತ ಯುವತಿಯರು ಎಡಗೈಗೆ ದಾರಾವನ್ನು ಕಟ್ಟಿಕೊಳ್ಳಬೇಕು ಈ ದಾರವನ್ನು ಕಟ್ಟುವ ಸಮಯದಲ್ಲಿ ಮುಷ್ಟಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿರಬೇಕು ಮತ್ತೆ ಇನ್ನೊಂದು ಕೈಯನ್ನು ತಲೆಯ ಮೇಲೆ ಇರಿಸಬೇಕು ಹಬ್ಬದ ದಿನಗಳನ್ನು ಹೊರತುಪಡಿಸಿ ಶನಿವಾರ ಮತ್ತು ಮಂಗಳವಾರ ಈ ಕಾರ್ಯಕ್ಕೆ ಸೂಕ್ತವಾದ ದಿನಗಳಾಗಿವೆ.

Leave a Reply

Your email address will not be published.