ವಿದ್ಯಾರ್ಥಿಗಳು ಪಾಲಿಸಬೇಕಾದ 7 ಆಚಾರ್ಯ ಚಾಣಕ್ಯನ ನೀತಿಗಳು. ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವುದಕ್ಕೆ ವಿದ್ಯೆ ಎಂಬುದು ಈಗಿನ ಕಾಲದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಒಳ್ಳೆಯ ವಿದ್ಯಾಭ್ಯಾಸವೇ ಒಳ್ಳೆಯ ಭವಿಷ್ಯವನ್ನು ರೂಪಿಸುತ್ತದೆ ಆದರೆ ವಿದ್ಯಾರ್ಥಿಗಳು ಸರಿಯಾದ ದಾರಿಯನ್ನು ಬಿಟ್ಟು ಕೆಟ್ಟ ದಾರಿಯನ್ನು ಹಿಡಿದರೆ ಅಂತವರ ಜೀವನ ಕೆಟ್ಟ ಆಲೋಚನೆಗಳಿಂದ ಮುಂದುವರೆಯುತ್ತದೆ ಆದರೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಈ 7 ವಿಷಯಗಳಿಂದ ದೂರವಿರಬೇಕು ಎಂದು ಆಚಾರ್ಯ ಚಾಣಕ್ಯ ವಿದ್ಯಾರ್ಥಿಗಳಿಗೆ ತಿಳಿಸಿದ್ದಾನೆ. ಆ 7 ವಿಷಯಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಶೃಂಗಾರದ ಮೇಲೆ ಆಸಕ್ತಿ ವಿದ್ಯಾರ್ಥಿಗಳು ಇದರ ಮೇಲೆ ಇರುವ ಮೋಹವನ್ನು ಬಿಡಬೇಕು ಯಾರು ಇದರ ಮೇಲೆ ಆಸಕ್ತಿ ಹೊಂದಿರುತ್ತಾರೋ ಆ ವಿದ್ಯಾರ್ಥಿಗೆ ಓದಿನ ಮೇಲೆ ಗಮನ ಇರುವುದಿಲ್ಲ ವಿದ್ಯಾರ್ಥಿಗಳು ಕಾ ಮ ಕ್ರೀಡೆಗಳಿಂದ ದೂರ ಇರುವುದೇ ಉತ್ತಮ. ಈ ಕೋಪ ಎನ್ನುವುದು ಪ್ರತಿ ಮನುಷ್ಯನಿಗೆ ಶತ್ರುವಾಗುತ್ತದೆ. ಕೋಪ ಬಂದಾಗ ಪ್ರತಿ ಮನುಷ್ಯನಲ್ಲಿ ಆಲೋಚನೆ ಶಕ್ತಿ ಅರ್ಥ ಮಾಡಿಕೊಳ್ಳುವ ಶಕ್ತಿ ಕುಗ್ಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಕೋಪದಿಂದ ದೂರವಿರುವುದು ಒಳ್ಳೆಯದು. ದುರಾಸೆ ಈ ದುರಾಸೆ ಎನ್ನುವುದು ಓದಿಕೊಳ್ಳುವ ವಿಷಯದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ ಅದಕ್ಕೆ ದೊಡ್ಡವರು ದುರಾಸೆ ಎನ್ನುವುದು ದುಖಕ್ಕೆ ಮೂಲ ಎನ್ನುತ್ತಾರೆ ಆದ್ದರಿಂದ ವಿದ್ಯಾರ್ಥಿಗಳು ದುರಾಸೆಯನ್ನು ಬಿಡುವುದು ಒಳ್ಳೆಯದು.
ರುಚಿ ಸಾಧಾರಣ ವಿದ್ಯಾರ್ಥಿಗಳ ಜೀವನವನ್ನು ಒಂದು ತಪಸ್ಸಿನ ರೀತಿ ಭಾವಿಸಲಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ರುಚಿಕರವಾದ ಊಟದ ಬಗ್ಗೆ ಆಲೋಚಿಸುವುದನ್ನು ಬಿಡಬೇಕು ಇನ್ನು ಉಪ್ಪು ಖಾರ ಇಲ್ಲದಂತಹ ಆಹಾರ ಪಧಾರ್ಥಗಳನ್ನು ತಿಂದರೆ ತುಂಬಾ ಒಳ್ಳೆಯದು. ಅಲಂಕಾರ ವಿದ್ಯಾರ್ಥಿಗಳ ಜೀವನದಲ್ಲಿ ಯಾವಾಗಲು ಸಾಧಾರಣ ಜೀವನವನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮವಾದ ಮಾರ್ಗ ಹೆಚ್ಚಾಗಿ ಅಲಂಕಾರ ಮಾಡಿಕೊಳ್ಳುವ ವಿದ್ಯಾರ್ಥಿಗಳ ಮನಸ್ಸು ಓದಿನ ಕಡೆ ಇರುವುದಿಲ್ಲ ಎಂದು ನಮ್ಮ ಆಚಾರ್ಯ ಚಾಣಕ್ಯನು ತಿಳಿಸಿದ್ದಾರೆ. ಹಾಗಾಗಿ ಹೆಚ್ಚಿನ ಅಲಂಕಾರವನ್ನು ಬಿಟ್ಟು ಒಂದೇ ರೀತಿಯ ಉಡುಪನ್ನು ಧರಿಸುವುದು ತುಂಬಾ ಒಳ್ಳೆಯದು. ವಿನೋದ ಈ ವಿಷಯಕ್ಕೆ ಬಂದರೆ ಆಟಗಳಲ್ಲಿ ತುಂಬಾ ಸಮಯ ವಿನೋದ ಪಡೆಯುವುದು ಕಷ್ಟಕ್ಕೆ ದಾರಿ ತೋರಿಸುವ
ಒಂದು ಸೂಚನೆಯಾಗಿರುತ್ತದೆ ಆದ್ದರಿಂದ ಆಟಗಳು ಮೊಬೈಲ್ ಮತ್ತು ಟಿವಿಯಿಂದ ವಿದ್ಯಾರ್ಥಿಗಳು ದೂರವಿರುವುದು ತುಂಬಾ ಒಳ್ಳೆಯದು. ನಿದ್ರೆ ಆರೋಗ್ಯಕರವಾದ ದೇಹಕ್ಕೆ ನಿದ್ರೆ ತುಂಬಾ ಮುಖ್ಯ ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಓದಿನ ಮೇಲೆ ಶ್ರದ್ಧೆ ಹೆಚ್ಚಾಗುತ್ತದೆ. ಹಾಗೆ ಹೆಚ್ಚಿನ ಸಮಯ ನಿದ್ದೆ ಮಾಡುವ ವಿದ್ಯಾರ್ಥಿಗಳಿಗೆ ಸಮಯ ಭಾವನೆ ಸಮಯದ ಅಭಾವವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಆಚಾರ್ಯ ಚಾಣಕ್ಯ ಹೇಳಿದ 7 ಸಂಗತಿಗಳನ್ನು ನೀವು ಕೂಡ ಪಾಲಿಸಿ ವಿದ್ಯಾರ್ಥಿ ಜೀವನವನ್ನು ಯಶಸ್ವಿಗೊಳಿಸಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ