ಗೊರಕೆ ಹೊಡೆದ್ರೆ ಹೃದಯಾಘಾತಕ್ಕೂ ಕಾರಣವಾಗಲಿದೆ

ಉಪಯುಕ್ತ ಸಲಹೆ

ಗೊರೆಕೆ ಕೇವಲ ಒಂದು ಗೊರಕೆ ಆಗಿರದೆ ಅದು ಹೃದಯಾಘಾತಕ್ಕೂ ಕಾರಣವಾಗಿದೆ. ಗೊರಕೆ ಒಂದು ಸಾಮಾನ್ಯ ಸಮಸ್ಯೆ ವಯಸ್ಕರಲ್ಲಿ 45ರಷ್ಟು ಜನ ಗೊರಕೆ ಸಮಾಸ್ಯೆಯನ್ನು ಅನುಭವಿಸುತ್ತಿದ್ದಾರೆ ಅದರಲ್ಲಿ ನಾವು ಸಹ ಒಬ್ಬರು ಅಂಥವರನ್ನು ಅವರ ಕುಟುಂಬದವರು ಕಾಡಿಸುವುದು ಉಂಟು ಅದರಲ್ಲೂ ದಂಪತಿಗಳಲ್ಲಿ ಒಬ್ಬರಿಗೆ ಗೊರಕೆ ಸಮಸ್ಯೆ ಇದ್ದರೆ ಸಾಕು ಗೊರಕೆ ಹೊಡೆಯುವ ವ್ಯಕ್ತಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಾರೆ ಮತ್ತೊಬ್ಬರು ನಿದ್ದೆ ಇಲ್ಲದೆ ಪರಿತಪಿಸುತ್ತಾರೆ ಈ ಒಂದು ಸಮಸ್ಯೆಯಿಂದ ಅವರಲ್ಲಿ ಗಲಾಟೆ ಉಂಟಾಗುತ್ತದೆ ಗೊರೆಕೆ ಕೇವಲ ಕಿರಿಕಿರಿ ಮಾಡುವುದಿಲ್ಲ ಕೆಲವರಿಗೆ ಗೊರಕೆ ಹೊಡೆಯುವಾಗ ಆಗಾಗ ಉಸಿರು ಗಟ್ಟುವ ಸಮಸ್ಯೆ ಇರುತ್ತದೆ ಇದು ಹೃದಯ ಸಂಬಂಧಿ ರೋಗಕ್ಕೆ ದಾರಿ ಮಾಡಿಕೊಡಬಹುದು ಅಷ್ಟೇ ಅಲ್ಲದೆ ಹೃದಾಯಾಘಾತವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಇಂತಹ ಸಂದರ್ಭಗಳಲ್ಲಿ ನಾವು ವೈದ್ಯರನ್ನು ಭೇಟಿಮಾಡಬೇಕು ಗೋರಕೆಯಿಂದ ಹೊರಬರಲು ಈ ಲೇಖನದಲ್ಲಿ ಕೆಲವೊಂದು ಸಲಹೆಯನ್ನು ತಿಳಿಸುತ್ತೇವೆ ನೋಡಿ. ನಾವು ನೇರವಾಗಿ ಮಲಗುವುದನ್ನು ಬಿಟ್ಟು ಎಡ ಅಥವಾ ಬಲಗಡೆ ತಿರುಗಿ ಮಲಗುವುದರಿಂದ ಗೊರಕೆ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಅಸ್ಟೆ ಅಲ್ಲದೆ ಕೆಲವೊಂದು ಪಧಾರ್ಥಗಳನ್ನು ತಿನ್ನುವುದನ್ನು ಬಿಡುವುದರಿಂದ ಈ ಗೊರಕೆ ಸಮಸ್ಯೆಯನ್ನು ತಪ್ಪಿಸಬಹುದು. ಏಲಕ್ಕಿ ಪುಡಿಯಿಂದ ಗೊರಕೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಒಂದು ಲೋಟ ಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಏಲಕ್ಕಿ ಪುಡಿಯನ್ನು ಬೆರೆಸಬೇಕು ಚನ್ನಾಗಿ ಮಿಶ್ರಣ ಮಾಡಿದ ಏಲಕ್ಕಿ ಪುಡಿಯ ನೀರನ್ನು ಮಲಗುವುದಕ್ಕಿಂತ ಮುಂಚೆ ಕುಡಿಯಬೇಕಾಗುತ್ತದೆ ಪ್ರತಿದಿನ ಹೀಗೆ ಮಾಡುವುದರಿಂದ ಕ್ರಮೇಣ ಗೊರಕೆ ಕಡಿಮೆಯಾಗುತ್ತದೆ.

ಗೊರಕೆ ಸಮಸ್ಯೆಗೆ ಧೂಮಪಾನವು ಒಂದು ಕಾರಣವಾಗಬಹುದು ಧೂಮಪಾನ ಮಾಡುವವರ ಶ್ವಾಸನಾಳ ಉದಿಕೊಳ್ಳುವ ಕಾರಣ ಶ್ವಾಸ ತೆಗೆದುಕೊಳ್ಳುವಾಗ ಅಡ್ಡಿ ಉಂಟಾಗುತ್ತದೆ ಧೂಮಪಾನ ಮಾಡುವವರು ಗೋರಕೆಯನ್ನು ಹೊಡೆಯುತ್ತಿದ್ದರೆ ಖಂಡಿತ ನೀವು ಧೂಮಪಾನವನ್ನು ತ್ಯಜ್ಜಿಸಬೇಕಾಗುತ್ತದೆ. ಮದ್ಯಪಾನ ಅಭ್ಯಾಸ ಇರುವವರು ರಾತ್ರಿಸಮಯದಲ್ಲಿ ಕುಡಿಯುವುದನ್ನು ಬಿಡಬೇಕಾಗುತ್ತದೆ. ಮಧ್ಯಪಾನದಿಂದ ನಾಲಿಗೆ ಮತ್ತು ಗಂಟಲಿನಲ್ಲಿರುವ ಅಂಗಾಂಗಗಳು ವಿಶ್ರಾಂತಿ ಪಡೆಯುತ್ತವೆ ಇದರಿಂದ ಶ್ವಾಸನಾಳಕ್ಕೆ ಅಡ್ಡಿಯಾಗಿ ಗೊರಕೆ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಇದರಿಂದ ಆದಷ್ಟು ರಾತ್ರಿ ಸಮಯ ಮಧ್ಯಪಾನ ಸೇವಿಸುವವರು ಗೊರಕೆ ಹೊಡಿಯುತ್ತಿದ್ದರೆ ಖಂಡಿತ ನೀವು ಸಹ ಮದ್ಯಪಾನವನ್ನು ಬಿಡಬೇಕು. ಅಧಿಕ ತೂಕದ ಕಾರಣ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ತೂಕ ಹೆಚ್ಚಾದ ನಂತರ

ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗಾಗಿ ಅಧಿಕ ತೂಕ ಇರುವವರು ಗೊರಕೆ ಹೊಡೆಯುತ್ತಿದ್ದರೆ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಕೆಲವೊಂದು ಸಲಹೆಯನ್ನು ನೀವು ಅನುಸರಿಸಬೇಕು ಇಂತವರು ಪ್ರಾಣಾಯಾಮ ಮಾಡುವುದರ ಮೂಲಕ ಶ್ವಾಸದ ಮೇಲೆ ನಿಯಂತ್ರಣ ಸಿಗುತ್ತದೆ. ಗೋರಕೆಯೊಂದಿಗೆ ನಿದ್ದೆಗೆ ಸಂಬಂದಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅರಿಷಿಣ ಬೆರೆಸಿದ ಹಾಲು ಗೊರಕೆ ಸಮಸ್ಯೆಯನ್ನು ನಿಯಂತ್ರಿಸುತ್ತದೆ ಒಂದು ಲೋಟ ಹಾಲಿಗೆ 2 ಚಮಚ ಅರಿಷಿಣ ಬೆರೆಸಿಕೊಂಡು ಕುಡಿಯಬೇಕು ಪ್ರತಿದಿನ ನಿದ್ದೆ ಮಾಡುವ ಮುನ್ನ ಅರಿಷಿಣ ಬೆರೆಸಿದ ಹಾಲು ಕುಡಿದರೆ ಉತ್ತಮ ಲಾಭ ಸಿಗುತ್ತದೆ ನಮ್ಮ ಹತ್ತಿರದ ಔಷಧಿ ಅಂಗಡಿಗಳಲ್ಲಿ ಸಿಗುವ ನಜಲ್ ಸ್ಟ್ರಿಪ್ ಗಳನ್ನು ತಂದುನಿದ್ದೆ ಮಾಡುವ ಸಮಯದಲ್ಲಿ ಮೂಗಿಗೆ ಹಾಕಿ ಮಲಗಬೇಕು ಇದು ನಮಗೆ ಸ್ವಲ್ಪ ಕಿರಿಕಿರಿ ಅನಿಸುತ್ತದೆ ಆದರೆ ಮೂಳೆಗಳ ಒಳೆಗಳನ್ನು ತೆರೆಯುವಂತೆ ಮಾಡುತ್ತದೆ. ನೀವು ಸಹ ಗೊರಕೆ ಹೊಡೆಯುತ್ತಿದ್ದರೆ ಈ ಸೂಚನೆಗಳನ್ನು ಅನುಸರಿಸಿರಿ.

Leave a Reply

Your email address will not be published.