ಶಿವನು ಗಣೇಶನ ಶಿರಚ್ಚೆಧನ ಮಾಡಿದ ಸ್ಥಳ

ದೇವರು

ಶಿವನು ಗಣೇಶನ ಶಿರಚ್ಚೆಧನ ಮಾಡಿದಾಗ ಆ ಶಿರ ಬಿದ್ದಂತಹ ಸ್ಥಳ ಇದಾಗಿದೆ. ಹಿಂದೂ ಪುರಾಣಗಳ ಪ್ರಕಾರ ಶಿವ ಮತ್ತು ಪಾರ್ವತಿಯ ಮೊದಲ ಮಗು ವಿನಾಯಕ ವಿನಾಯಕನ ಬಗ್ಗೆ ಅತ್ಯಂತ ಸುಂದರವಾದ ಕಥೆ ಸಹ ಇದೆ ಈ ಕಥೆ ಏನೆಂದರೆ ಪಾರ್ವತಿ ತಲೆಸ್ನಾನ ಮಾಡುವಾಗ ತನ್ನ ಮೈಗೆ ಹಚ್ಚಿಕೊಂಡಿದ್ದ ಅರಿಷಿಣವನ್ನು ಸ್ವಲ್ಪ ಸ್ವಲ್ಪವೇ ತೆಗೆದು ಒಂದು ಮಾನವ ಕೃತಿಯನ್ನು ಮಾಡುತ್ತಾರೆ ಆ ಮಾನವ ಕೃತಿಯೇ ಬಾಲಕ ಗಣೇಶ. ಗಣೇಶನನ್ನು ಗಜಮುಖ ವಿನಾಯಕ ವಿಗ್ನವಿನಾಶಕ ಗಣಪತಿ ಪಾರ್ವತಿ ಸುತ ಹೀಗೆ ಹಲವಾರು ಹೆಸರಿನಿಂದ ಕರೆಯುತ್ತಾರೆ ಹೀಗೆ ಒಂದು ದಿನ ಪಾರ್ವತಿಯು ಸ್ನಾನಕ್ಕೆ ಹೋಗುವಾಗ ಯಾರೇ ಬಂದರು ಸ್ನಾನ ಗೃಹದ ಪ್ರವೇಶವನ್ನು ನೀಡಬೇಡ ಅಂತ ಪಾರ್ವತಿ ಸ್ನಾನಕ್ಕೆ ಹೋಗುತ್ತಾಳೆ ತಾಯಿಯ ಆಜ್ಞೆಯಂತೆ ಬಾಗಿಲಲ್ಲಿ ಕಾವಲುಗಾರನಾಗಿ ನಿಂತಿದ್ದ ಗಣೇಶ ಮಹಾಶಿವನು ಬಾಲ ಗಣೇಶನನ್ನು ಕಂಡು ಒಳಪ್ರವೇಶಿಸಲು ಬಿಡು ಎಂದನು ಗಣೇಶ ಒಳಗೆ ಬಿಡಲಿಲ್ಲ ಕೋಪಗೊಂಡ ಶಿವನು ಗಣೇಶನ ಶಿರಚ್ಚೆದನ ಮಾಡಿದನು ಆದರೆ ಈ ಶಿರ ಎಲ್ಲಿದೆ ಎಂಬ ಪ್ರಶ್ನೆ ಎಲ್ಲರಿಗೂ

ಬರುತ್ತದೆ ಈ ಒಂದು ಲೇಖನದಲ್ಲಿ ಗಣೇಶನ ಶಿರ ಬಿದ್ದಂತಹ ಸ್ಥಳದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ. ಗಣಪತಿಯ ತಲೆಯು ಉತ್ತರ ಖಂಡ ರಾಜ್ಯದ ಭುವನೇಶ್ವರ ನಗರ ಪಾತಾಳ ಭುವನೇಶ್ವರ ಗುಹೆಯಲ್ಲಿದೆ ಪಾತಾಳ ಭುವನೇಶ್ವರ ಅತ್ಯಂತ ಚಿಕ್ಕ ಗ್ರಾಮ ಗುಹೆಗೆ ಹೋಗಬೇಕಾದರೆ 2 ರಿಂದ 3 ಕಿಲೋಮೀಟರ್ ನಡೆಯಬೇಕು ಈ ಗುಹೆಯ ಮುಂದೆ ಸುಂದರವಾದ ಚಿಕ್ಕದಾದ ಶಿವನ ದೇವಾಲಯವು ಇದೆ ಈ ಗುಹೆಯ ದ್ವಾರ ಅತ್ಯಂತ ಚಿಕ್ಕದಾಗಿದ್ದು ಒಬ್ಬ ಮನುಷ್ಯ ಮಾತ್ರ ಹೋಗಬಹುದು ಈ ಗುಹೆಯಿಂದ ಕೈಲಾಸ ಪರ್ವತಕ್ಕೆ ದಾರಿಯಿದೆ ಆದರೆ ಈ ಮಾರ್ಗ ಆತ್ಯಂತ ಅಪಾಯಕಾರಿಯಾಗಿದೆ ಆಕ್ಸಿಜನ್ ಸಿಗದೆ ಇರುವ ದಾರಿಯಾಗಿದೆ ಕೆಲವೊಮ್ಮೆ ಮರಣವು ಸಹ ಸಂಭವಿಸಬಹುದು. ಈ ಗುಹೆಯಲ್ಲಿ ಹಲವು ರೀತಿಯ ಔಷಧಿ ಗುಣಗಳನ್ನು ಹೊಂದಿರುವ ಔಷಧಿ ಸಸ್ಯಗಳನ್ನು ನೋಡಬಹುದು.

ಗಣೇಶ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅತ್ಯಂತ ಇಷ್ಟವಾದ ದೇವರು ಈ ದೇವಾಲಯಕ್ಕೆ ಬರುವ ಹಲವಾರು ಭಕ್ತರು ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾರೆ ಈ ಗಣೇಶನ ದರ್ಶನ ಮಾಡಿ ಮುಕ್ತಿ ಮತ್ತು ಆನಂದ ಪಡೆಯುವುದು ತುಂಬಾ ಸುಲಭ ಎನ್ನುವುದು ಭಕ್ತರ ನಂಬಿಕೆ. ಈ ದೇವಾಲಯಕ್ಕೆ ಹೋಗುವುದು ಅಷ್ಟು ಸುಲಭವಲ್ಲ ಸುಮಾರು 90 ನಡಿಗೆಗಳ ಮೂಲಕ 160ಕಿಲೋಮೀಟರ್ ಸಾಗಬೇಕು ಈ ಗಣಪತಿಯನ್ನು ನೋಡಲು ಬಂದ ಎಷ್ಟೋ ಭಕ್ತರು ಮಧ್ಯದಲ್ಲೇ ಉಳಿದು ಬಿಡುತ್ತಾರೆ ಪಾತಾಳ ಭುವನೇಶ್ವರ ಗುಹೆ ಕೇವಲ ಒಂದು ಗುಹೆ ಅಲ್ಲ ಬದಲಾಗಿ ಅನೇಕ ಗುಹಾಲಯಗಳ ಸಮುದಾಯವಾಗಿದೆ ಇಲ್ಲಿ ಶಿವನ ಜಟಾರುಟಮ್ ಶಿವನಿಗೆ ಸುತ್ತುವರಿದ ನಾಗರ ಹಾವು ಐರಾವತ ಕಲ್ಪವೃಕ್ಷ ಕಾಮದೇನು ಬ್ರಹ್ಮ ವಿಷ್ಣು ಮಹೇಶ್ವರ ಹಾಗೂ 33 ಕೋಟಿ ದೇವತೆಗಳ ಆಕಾರವನ್ನು ಇಲ್ಲಿ ನಾವು ಕಾಣಬಹುದು

ಇದು ಒಂದು ಗುಹೆ ಸಮುದಾಯವಾಗಿದೆ ಈ ಪಾತಾಳ ಭುವನೇಶ್ವರ ಗುಹೆಯ ಹತ್ತಿರದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ ಅವೆಂದರೆ ನಾಗಾಮಂದಿರ ಕೌಸಾನಿ ಅಲ್ಮೊರಾ ಇನ್ ಸರ್ ಪಿತೋರ್ಗಾರ್ ಶಿವನ ದೇವಾಲಯ ಮಹಾಕಾಳಿ ದೇವಾಲಯ ರುದ್ರತಾಜಲಪಾತ ಇನ್ನು ಅನೇಕ ದೇವಾಲಯಗಳನ್ನು ನಾವು ಇಲ್ಲಿ ನೋಡಬಹುದು. ಮಂದಿರನಾಗ ಇದು ಪ್ರಕೃತಿಯಿಂದ ನಿರ್ಮಾಣವಾಗಿರುವ ದೊಡ್ಡ ದೇವಾಲಯವಾಗಿದೆ ಗಣೇಶನನ್ನು ಆರಾಧಿಸಲು ಸಾಲುಸಾಲಾಗಿ ಹಲವು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಆಶ್ಚರ್ಯ ಏನೆಂದರೆ ಈ ಗುಹಾ ದೇವಾಲಯದಲ್ಲಿ ಸ್ವಲ್ಪ ದೂರದಲ್ಲಿ ಒಂದು ಚಿಕ್ಕ ಬಾಲಕ ನಿಂತಿರುವ ಹಾಗೆ ಕಾಣಿಸುತ್ತದೆ ವಿನಾಯಕನ ಶಿರಚ್ಚೆಧನದ ನಂತರ ಶಿವನು ವಿನಾಯಕನಿಗೆ ಉತ್ತರ ದಿಕ್ಕಿನಲ್ಲಿ ಮುಖ ಮಾಡಿಕೊಂಡಿದ್ದ ಆನೆಯ ತಲೆಯನ್ನು ತಂದು ಅಂಟಿಸಲಾಯಿತು ಹಾಗೆ ಶಿವನ ಒಂದು ರೂಪವನ್ನು ಇಲ್ಲಿ ಬಿಡಲಾಗಿದೆ ಅಂತ ಕೆಲವರ ನಂಬಿಕೆಯಾಗಿದೆ.

Leave a Reply

Your email address will not be published.