ಬ್ರೆಡ್ ತಿನ್ನುವ ಅಭ್ಯಾಸ ಇದ್ರೆ ಈ ಎಂಟು ಸಮಸ್ಯೆಗಳು ನಿಮ್ಮನು ಕಾಡುತ್ತದೆ

ಮನೆ ಮದ್ದು

ಬ್ರೆಡ್ ತಿನ್ನುವ ಅಭ್ಯಾಸ ಇರುವವರು ಈ ಕಾಯಿಲೆಗೆ ತುತ್ತಾಗುತ್ತಾರೆ. ಪ್ರಿಯ ಓದುಗರೇ ಹಿಂದಿನ ಕಾಲದ ಜನ ಒಂದು ಹೊತ್ತಿನ ಊಟಕ್ಕೂ ಸಹ ತುಂಬಾ ಕಷ್ಟ ಪಡುತ್ತಿದ್ದರು ಆದರೆ ಒಂದೆ ಹೊತ್ತು ಅವರು ಊಟ ಮಾಡಿದರು ಕೂಡ ಆರೋಗ್ಯವಾದ ಪೌಷ್ಟಿಕ ಆಹಾರವನ್ನು ಸೇವನೆ ಮಾಡುತ್ತಿದ್ದರು ಅವರು ಒಂದು ಹೊತ್ತು ಮಾಡಿದ ಊಟ ಅವರ ಆ ದಿನಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತಿತ್ತು ಅವರು ಕೂಡ ಅಷ್ಟೇ ಶಕ್ತಿವಂತರಾಗಿದ್ದರು ಆದರೆ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಹಸಿವಾದಾಗ ತಿನ್ನಲು ಆಹಾರ ಸಿಗುತ್ತದೆ ಆದರೆ ಆ ಆಹಾರ ಮಾತ್ರ ಪೌಷ್ಟಿಕ ಇರುವುದಿಲ್ಲ ಮತ್ತು ಜನರಿಗೆ ಅಷ್ಟೊಂದು ಶಕ್ತಿ ಕೂಡ ಇರುವುದಿಲ್ಲ ಹಾಗೇನೇ ಆರೋಗ್ಯ ಕೂಡ ಇರುವುದಿಲ್ಲ ಇದಕ್ಕೆ ಮುಖ್ಯ ಕಾರಣ ಏನೆಂದರೆ ಅವರು ಸೇವಿಸುವ ಆಹಾರ. ಇತ್ತೀಚೆಗೆ ಜನರು ಎಷ್ಟೇ ದುಡಿದರು ಸಹ ಅವರ ಆಹಾರ ಮಾತ್ರ ಪೌಷ್ಟಿಕಾಂಶದಿಂದ ಕೂಡಿರುವುದಿಲ್ಲ

ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಂಜೆ ಸಮಯದಲ್ಲಿ ಚಹಾ ಅಥವಾ ಕಾಫಿ ಜೊತೆ ಬ್ರೆಡ್ ನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ ಇನ್ನು ಕೆಲವರಂತೂ ಬೆಳಗಿನ ಉಪಹಾರಕ್ಕೆ ಬ್ರೆಡ್ ಜೊತೆಗೆ ಜಾಮನ್ನು ಹಾಕಿಕೊಂಡು ತಿನ್ನುತ್ತಾರೆ ಆದರೆ ಬ್ರೆಡ್ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಷ್ಟು ಕೆಟ್ಟದ್ದು ಎನ್ನುವುದನ್ನು ಮಾತ್ರ ಯಾರು ತಿಳಿದುಕೊಳ್ಳುವುದಿಲ್ಲ ಬ್ರೆಡ್ ತಿನ್ನಲು ರುಚಿಯಾಗಿರುತ್ತದೆ ಮತ್ತು ಅದು ನಮ್ಮ ಹಲವು ಆಹಾರ ಪಧಾರ್ಥಗಳಲ್ಲಿ ಒಂದಾಗಿ ಬೆರೆತುಹೋಗಿದೆ. ಆದರೆ ಬ್ರೆಡ್ ನ್ನು ಸೇವಿಸುವುದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ ಏಕೆಂದರೆ ಈ ಬ್ರೆಡ್ ನ್ನು ಮೈದಾ ಹಿಟ್ಟಿನಿಂದ ಮಾಡಿರುತ್ತಾರೆ ಈ ಮೈದಾ ಬಳಸಿ ಮಾಡಿರುವ ಬ್ರೆಡ್ ಅಂದರೆ ಬಿಳಿ ಬ್ರೆಡ್ ಇದರಲ್ಲಿ ಪೋಷಕಾಂಶಗಳು ಇರುವುದಿಲ್ಲ ಈ ಮೈದಾದಿಂದ ಮಾಡಿದ ಬಿಳಿಬ್ರೆಡ್ ನ್ನು ಸೇವಿಸುವ ಬದಲು ಗೋದಿ ಅಥವಾ ಮೊಟ್ಟೆ ಬಳಸಿ ಮಾಡಿದ ಬ್ರೇಡನ್ನು ಸೇವಿಸುವುದು ತುಂಬಾ ಒಳ್ಳೆಯದು.

ಬಿಳಿ ಬ್ರೆಡ್ ತಿನ್ನುವಾಗ ಅದರಲ್ಲಿ ಉಪ್ಪು ಇದೆಯಾ ಅಥವಾ ಇಲ್ಲವೋ ಎನ್ನುವುದನ್ನು ಗಮನಿಸಬೇಕು ಏಕೆಂದರೆ ಉಪ್ಪು ಕಡಿಮೆ ಇರುವ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಉಪ್ಪು ಜಾಸ್ತಿ ಇರುವ ಬ್ರೆಡ್ ನ್ನು ಸೇವಿಸುವುದರಿಂದ ದೇಹದಲ್ಲಿ ಸೋಡಿಯಮ್ ಪ್ರಮಾಣದಲ್ಲಿ ಏರುಪೇರಾಗುತ್ತದೆ ಇದರಿಂದ ನಮ್ಮ ಆರೋಗ್ಯ ಕೂಡ ಹಾಳಾಗುತ್ತದೆ. ಹಾಗೇನೇ ನಾವು ಮೈದಾ ಬಳಸಿ ಮಾಡಿದ ಬ್ರೇಡನ್ನು ಸೇವಿಸುವುದರಿಂದ ತುಂಬಾ ಬೇಗನೆ ದಪ್ಪಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತೆ ಮೈದಾ ತಿಂಡಿತಿನಿಸುಗಳು ಕ್ಯಾನ್ಸರ್ ಕಾಯಿಲೆ ಬರುವುದಕ್ಕೆ ದಾರಿ ಮಾಡಿಕೊಡುತ್ತದೆ. ಬೆಳಗಿನ ಉಪಹಾರಕ್ಕೆ ಬ್ರೆಡ್ ಮತ್ತು ಅದರಿಂದ ಮಾಡಿದ ತಿನಿಸುಗಳನ್ನು ನೆಚ್ಚಿಕೊಂಡಿರುವವರು ತುಂಬಾ ಜನ ಇದ್ದಾರೆ ಅಂತವರಿಗೆ ಒಂದು ಆಶ್ಚರ್ಯಕರ ಸುದ್ದಿ ಇದೆ ಇತ್ತೀಚೆಗೆ ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿರುವ ಸಮೀಕ್ಷೆಯೊಂದು ಭಾರತದಲ್ಲಿ ಸಿಗುವ ಬ್ರೆಡ್ ಗಳಲ್ಲಿ

ಕೆಲವು ರೀತಿ ವಿಷಕಾರಿ ರಾಸಾಯನಿಕ ವಸ್ತುಗಳಿದ್ದು ಇವು ಥೈರಾಯ್ಡ್ ಮತ್ತೆ ಕ್ಯಾನ್ಸರ್ ರೋಗವನ್ನು ಉಂಟುಮಾಡುತ್ತವೆ ಎಂದು ಹೇಳಲಾಗಿದೆ ಈ ಮೈದಾ ಬ್ರೆಡ್ ನಲ್ಲಿ ಉಪ್ಪು ಮತ್ತೆ ಸಕ್ಕರೆ ಅಂಶ ಎರಡು ಕೂಡ ಹೆಚ್ಚಾಗಿರುತ್ತದೆ ಇಂತ ಬ್ರೆಡ್ ತಿನ್ನುವುದರಿಂದ ಬೇಗ ಹಸಿವಾಗುತ್ತದೆ ಮೈದಾ ಬಳಸಿ ಮಾಡಿದ ಬ್ರೆಡ್ ನ್ನು ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ ಮತ್ತೆ ಮೈದಾ ಬ್ರೆಡ್ ನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಕೂಡ ಹೆಚ್ಚಾಗುತ್ತದೆ ಹಾಗಾಗಿ ಬ್ರೆಡ್ ಸೇವನೆ ಮಾಡುವುದನ್ನು ನಿಲ್ಲಿಸಿ ಅದರಲ್ಲೂ ಮೈದಾವನ್ನು ಬಳಸಿ ಮಾಡಿರುವ ಬಿಳಿ ಬ್ರೆಡ್ ಸೇವನೆಯನ್ನು ನೀವು ನಿಲ್ಲಿಸಲೇಬೇಕು ನಿಮಗೆ ಬ್ರೆಡ್ ಬೇಕು ಎಂದರೆ ಮೈದಾ ರಹಿತಬ್ರೆಡ್ ನ್ನು ನಿಯಮಿತವಾಗಿ ನೀವು ಸೇವಿಸಿ ಮತ್ತೆ ನಿಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಈ ಒಂದು ಚಿಕ್ಕ ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಕೂಡ ತಿಳಿಸಿ

Leave a Reply

Your email address will not be published.