ಅಪ್ಪಿ ತಪ್ಪಿಯೂ ಈ ಐದು ವ್ಯಕ್ತಿಗಳೊಂದಿಗೆ ತಮಾಷೆ ಮಾಡಬೇಡಿ

ಉಪಯುಕ್ತ ಸಲಹೆ

ಜೀವನದಲ್ಲಿ ಸಂತೋಷ ಬಹಳ ಮುಖ್ಯ ಹಾಗೆಯೇ ನಾವು ಸಹ ಸದಾ ಕಾಲ ಸಂತೋಷದಿಂದ ಇರಬೇಕು ಹಾಗೆಯೇ ಎಲ್ಲರ ಜೊತೆ ಹಾಸ್ಯ ಚಟಕಿಗಳನ್ನು ಹಾರಿಸಿ ಅವರಿಗೆ ಮುದವನ್ನು ನೀಡುತ್ತಾ ಅವರಿಗೆ ಸಂತೋಷದಿಂದ ನೋಡಿಕೊಳ್ಳುತ್ತಾ ಜೀವನ ಸಾಗಿಸಬೇಕು ಆದರೆ ಈ ಸಂತೋಷ ಯಾವುದೇ ಕಾರಣಕ್ಕೂ ಅತಿರೇಖಕ್ಕೆ ಹೋಗಬಾರದು ಏಕೆ ಎಂದರೆ ನಾವು ಬೇರೆಯವರಿಗೆ ತಮಾಷೆ ಮಾಡುವುದರಿಂದ ಬಹಳಷ್ಟು ಜನ ದುಃಖ ಪಡುತ್ತಾರೆ ಹಾಗೆಯೇ ಅವರು ಅಪಹಾಸ್ಯಕ್ಕೆ ಸಹಾ ಈಡಾಗುತ್ತಾರೆ ಇದರಿಂದ ಅವರು ದುಃಖ ಪಡುತ್ತಾರೆ ಮತ್ತು ಅವರು ನೆಮ್ಮದಿ ಹಾಳು ಮಾಡುತ್ತಾರೆ ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ತಮಾಷೆ ಮಾಡಬಾರದು ಹಾಗಾದ್ರೆ ಯಾವ ಐದು ವ್ಯಕ್ತಿಗಳ ಜೊತೆಗೆ ನಾವು ತಮಾಷೆ ಮಾಡಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಯಾವುದೇ ಕಾರಣಕ್ಕೂ ಎಲ್ಲಾ ವ್ಯಕ್ತಿಗಳನ್ನು ಒಂದೇ ರೀತಿ ನೋಡಬಾರದು ಯಾವುದೇ ಕಾರಣಕ್ಕೂ ಅವರನ್ನು ನಿಷ್ಠುರ ಮಾಡಬಾರದು ಈ ವ್ಯಕ್ತಿಗಳೊಂದಿಗೆ ನಾವು ಯಾವುದೇ ಕಾರಣಕ್ಕೂ ಅತಿ ಆಗ ಬಾರದು ಬೇರೆಯವರಿಗೆ ಅದು ತೊಂದರೆ ಆಗಬಾರದು ಅಂತಹ ಐದು ವ್ಯಕ್ತಿಗಳೊಂದಿಗೆ ನಾವು ಯಾವುದೇ ಕಾರಣಕ್ಕೂ ತಮಾಷೆ ಯೊಂದಿಗೆ ಅಪಹಾಸ್ಯ ಮಾಡಬಾರದು ಅವರೊಂದಿಗೆ ಸಂತೋಷವಾಗಿ ಪ್ರೀತಿಯಿಂದ ನೋಡಿಕೊಳ್ಳಬೇಕು. ಮೊದಲನೆಯದು ಅಂಗವಿಕಲ ವ್ಯಕ್ತಿಗಳು ಇವರ ಜೊತೆ ನಾವು ಯಾವುದೇ ಕಾರಣಕ್ಕೂ ತಮಾಷೆ ಮಾಡಬಾರದು ಅವರನ್ನು ಆಡಿ ಕೊಳ್ಳಬೇಡಿ ಅವರಿಗೆ ಆತ್ಮ ಸ್ಥೈರ್ಯ ತುಂಬಿರಿ. ಎರಡನೆಯದು ಯಾವುದೇ ರೀತಿಯ ತೊಂದರೆಗೆ ಒಳಪಟ್ಟ ವ್ಯಕ್ತಿಗಳು ಅಥವಾ ಆಕ್ಸಿಡೆಂಟ್ ಆದ ವ್ಯಕ್ತಿಗಳು ಇವರಿಗೆ ಧೈರ್ಯವನ್ನು ತುಂಬಿ ಬೆನ್ನೆಲುಬು ಆಗಿ ನಿಲ್ಲಿರಿ.

ಮೂರನೆಯದು ಅನಕ್ಷರಸ್ಥ ವ್ಯಕ್ತಿಗಳು ಅವಿದ್ಯಾವಂತ ವ್ಯಕ್ತಿಗಳು ಅವರೊಂದಿಗೆ ನಾವು ಯಾವುದೇ ಕಾರಣಕ್ಕೂ ಅಪಹಸ್ಯವನ್ನು ಮಾಡಬಾರದು ಏಕೆಂದರೆ ಅವರಿಗೆ ತಮ್ಮದೇ ಆದ ಕಷ್ಟಗಳು ಇರುತ್ತದೆ ಅವರು ಏನಕ್ಕೆ ಓದಲಿಲ್ಲ ಎನ್ನುವುದಕ್ಕೆ ಬಹಳಷ್ಟು ತೊಂದರೆ ಇರಬಹುದು. ಕಷ್ಟಗಳು ಇರಬಹುದು ಆದ್ದರಿಂದ ಯಾವುದೇ ಕಾರಣಕ್ಕೂ ಅವರನ್ನು ಅವಮಾನಿಸಬೇಡಿ. ನಾಲ್ಕನೆಯದು ನಮಗಿಂತ ಹಿರಿಯರು ನಮಗಿಂತ ದೊಡ್ಡವರು ಅವರಿಗೆ ನಾವು ಗೌರವ ಕೊಡಬೇಕು ತೊಂದರೆ ಕೊಡಬಾರದು ಅವರೊಂದಿಗೆ ತಮಾಷೆ ಮಾಡಬಾರದು ನಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಮಾಡಿ ಗೌರವ ನೀಡಬೇಕು. ಕೊನೆಯದಾಗಿ ಬಡವರು ಹೌದು ಅವರ ಆರ್ಥಿಕ ಪರಿಸ್ಥಿತಿಯನ್ನು ನೋಡಿ ನಾವು ಎಂದಿಗೂ ಆಡಿ ಕೊಳ್ಳಬಾರದು ಅವರನ್ನು ನಮ್ಮ ಆತ್ಮೀಯರ ಹಾಗೆ ನೋಡಿಕೊಳ್ಳಬೇಕು. ಸ್ವಲ್ಪ ಬಡವರು ಎಂದ ಕೂಡಲೇ ನಾವು ಅವರ ಜೊತೆ ದೌರ್ಜನ್ಯ ಆಗಿ ನಡೆದುಕೊಳ್ಳ ಬಾರದು ಯಾವುದೇ ಕಾರಣಕ್ಕೂ ಅವರ ಮೇಲೆ ನಮ್ಮ ಅಧಿಕಾರ ಚಲಾಯಿಸಬಾರದು ಯಾವುದೇ ಕಾರಣಕ್ಕೂ ಅವರಿಗೆ ನಮ್ಮ ಕೈಯಲ್ಲಿ ಎಷ್ಟು ಆಗುತ್ತದೋ ಅಷ್ಟು ಸಹಾಯ ಮಾಡಬೇಕು. ಮತ್ತು ನಾವು ಅವರ ಸ್ವಾಭಿಮಾನ ಕ್ಕೆ ಬೆಲೆ ಕೊಡಬೇಕು.

Leave a Reply

Your email address will not be published.