ವಾರದಲ್ಲಿ ಈ ದಿನ ಕೂದಲು ಮತ್ತು ಉಗುರನ್ನು ಕತ್ತರಿಸುವುದು ಸೂಕ್ತ

ಉಪಯುಕ್ತ ಸಲಹೆ

ಈ ವಾರದಂದು ಕೂದಲು ಮತ್ತು ಉಗುರನ್ನು ಕತ್ತರಿಸುವುದು ಸೂಕ್ತ. ನಮ್ಮ ಮನೆಯಲ್ಲಿ ಇರುವ ಹಿರಿಯರು ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಅನುಮತಿ ನೀಡುವುದಿಲ್ಲ ಈ ದಿನ ಕತ್ತರಿಸಬಾರದು ನಾಳೆ ಕತ್ತರಿಸಬಾರದು ಹೀಗೆ ಹೇಳುತ್ತಾರೆ ಅದರಿಂದ ಕೆಲವೊಂದು ನಕಾರಾತ್ಮಕ ಪರಿಣಾಮಗಳು ನಮ್ಮ ಮೇಲೆ ಬೀಳುತ್ತದೆ ಎಂದು ಹಿರಿಯರು ಹೇಳುತ್ತಾರೆ ಹಾಗಾದರೆ ಯಾವ ವಾರ ಉಗುರನ್ನು ಕತ್ತರಿಸಬೇಕು ಕೂದಲನ್ನು ಕತ್ತರಿಸಬೇಕು ಮತ್ತೆ ಯಾವ ವಾರ ಕತ್ತರಿಸಬಾರದು ಎನ್ನುವುದರ ಬಗ್ಗೆ ತುಂಬಾ ಜನರಲ್ಲಿ ಒಂದು ಅನುಮಾನ ಇರುತ್ತದೆ ಆದ್ದರಿಂದ ಅದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಯಾವುದೇ ವಿಶೇಷ ದಿನ ಅಥವಾ ಹಬ್ಬ ಇರುವ ದಿನಗಳಲ್ಲಿ ಉಗುರು ಅಥವಾ ಕೂದಲನ್ನು ಕತ್ತರಿಸಬಾರದು ಎನ್ನಲಾಗುತ್ತದೆ ಉಗುರುಗಳನ್ನು ಸಂಜೆ ಸಮಯದಲ್ಲಿ ಮತ್ತು ರಾತ್ರಿ ಸಮಯದಲ್ಲಿ ಕತ್ತರಿಸಬಾರದು ಎನ್ನುವುದು ಕೂಡ ನಮ್ಮ ಹಿರಿಯರ ಒಂದು ನಂಬಿಕೆಯಾಗಿದೆ

ಹಿಂದೂ ಸಂಪ್ರದಾಯದಂತೆ ಪ್ರತಿ ವಾರವನ್ನು ಕೂಡ ಒಂದೊಂದು ಗುರುತಿನಲ್ಲಿ ಗುರುತಿಸಲಾಗುತ್ತದೆ ಅದರಲ್ಲಿ ಗ್ರಹ ನೀತಿ ನಿಯಮಗಳ ಪ್ರಭಾವಗಳನ್ನು ಪರಿಗಣಿಸಲಾಗುತ್ತದೆ ಸೋಮವಾರವನ್ನು ಶಿವನವಾರ ಎಂದು ಕರೆಯಲಾಗುತ್ತದೆ ಅಲ್ಲದೆ ಮಂಗಳವಾರವನ್ನು ಮಂಗಳ ಗ್ರಹದ ಹನುಮಾನ್ ವಾರವೆಂದು ಪರಿಗಣಿಸಲಾಗುತ್ತದೆ ಬುದವಾರವನ್ನು ಕೃಷ್ಣವಾರ ಬುದನ ಪ್ರಭಾವದ ವಾರವೆಂದು ಪರಿಗಣಿಸಲಾಗುತ್ತದೆ ಗುರುವಾರವನ್ನು ವಿಷ್ಣುವಿನ ವಾರವೆಂದು ಮತ್ತು ಗುರುವಿನ ಅಧಿಪತ್ಯದ ವಾರವೆಂದು ಪರಿಗಣಿಸಲಾಗುತ್ತದೆ ಶುಕ್ರವಾರವೂ ದುರ್ಗೆಯ ವಾರವಾಗಿದ್ದು ಶುಕ್ರಗ್ರಹದ ಅಧಿಪತ್ಯದ ವಾರವೆಂದು ಪರಿಗಣಿಸಲಾಗುತ್ತದೆ ಶನಿವಾರವನ್ನು ಶನಿಯವಾರವೆಂದು ಕರೆಯಲಾಗುತ್ತದೆ ರವಿವಾರವು ಸೂರ್ಯನ ವಾರ ಅಂತ ಕರೆಯಲಾಗುತ್ತದೆ. ಹಾಗಾದರೆ ನಾವು ಉಗುರುಗಳನ್ನು ಯಾವಾಗ ಕತ್ತರಿಸಬೇಕು ಯಾವಾಗ ಕತ್ತರಿಸಬಾರದು ಎಂದು ಹೇಳುವುದಾದರೆ ನಮ್ಮ ಹಿಂದುಗಳ ಪ್ರಕಾರ ಹೇಳುವುದಾದರೆ ನಿತ್ಯವೂ ಕೂಡ ಒಂದೊಂದು ಸಂಪ್ರದಾಯ ವನ್ನು ಪಾಲನೆ ಮಾಡಬೇಕು

ಕೂದಲು ಕತ್ತರಿಸುವುದು ಶೇವ್ ಉಗುರು ಕತ್ತರಿಸುವುದು ಕೆಲ ದಿನಗಳಲ್ಲಿ ನಿಷೇಧಿಸಲಾಗಿದೆ. ಈಗ ಸೋಮವಾರವೂ ಚಂದ್ರನಿಗೆ ಸಂಬಂದಿಸಿದ ವಾರವಾಗಿದ್ದು ಮಾನವನ ದೇಹದ ಮೇಲೆ ಚಂದ್ರನ ನೇರ ಪರಿಣಾಮ ಬೀರುತ್ತದೆ ಈ ವಾರ ಉಗುರು ಕತ್ತರಿಸಿದ ಮಾನವನ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ ಅಲ್ಲದೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅಂತ ನಮ್ಮ ಹಿರಿಯರ ಒಂದು ನಂಬಿಕೆಯಾಗಿದೆ ಮಂಗಳವಾರ ಈ ವಾರ ಕೂದಲು ಕತ್ತರಿಸುವುದಕ್ಕೆ ನಿಷೇಧವಿದೆ ಅಲ್ಲದೆ ಆ ದಿನ ಶೇವ್ ಮಾಡಿಸಿಕೊಂಡರು ಸಹ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ ಇದು ನಮ್ಮ ಜೀವನದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಬುಧವಾರ ಸಾಮಾನ್ಯವಾಗಿ ಎಲ್ಲರಿಗೂ ನೆಚ್ಚಿನವಾರ ಈ ವಾರದಂದು ಯಾವ ಕೆಲಸ ಮಾಡಿದರು ಕೂಡ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಕೂದಲು ಮತ್ತು ಉಗುರು ಕತ್ತರಿಸುವುದಕ್ಕೆ ಅತಿ ಸೂಕ್ತವಾದ ದಿನ.

ಗುರುವಾರವನ್ನು ವಿಷ್ಣುವಿನ ವಾರ ಎಂದು ಕರೆಯಲಾಗುತ್ತದೆ ಇಂದು ಉಗುರು ಮತ್ತು ಕೂದಲನ್ನು ಕತ್ತರಿಸುವುದು ಉತ್ತಮವೆ ಎಂದು ಪರಿಗಣಿಸಲಾಗುತ್ತದೆ. ಶುಕ್ರವಾರ ಈ ವಾರವೂ ಶುಕ್ರನಿಗೆ ಸಂಬಂದಿಸಿದ ವಾರವಾಗಿದೆ ಶುಕ್ರ ಸೌಂದರ್ಯದ ಪ್ರತಿಕಾರವಾಗಿದ್ದಾನೆ ಇದಿನ ಉಗುರು ಮತ್ತು ಕೂದಲು ಕತ್ತರಿಸುವುದು ಕೆಟ್ಟದ್ದು ಎನ್ನಲಾಗುತ್ತದೆ. ಶನಿವಾರ ಶನಿಯ ವಾರ ಅಂತ ಕರೆಯುತ್ತಾರೆ ಇದಿನ ಉಗುರು ಕೂದಲು ಕತ್ತರಿಸುವುದು ಅಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಾವಿನ ಸಂಭವ ಹೆಚ್ಚು ಎಂದು ನಂಬಲಾಗುತ್ತದೆ ಭಾನುವಾರ ಇದು ಸೂರ್ಯನ ಅಧಿಪತ್ಯದ ವಾರ ಇದಿನ ಕೂದಲು ಮತ್ತು ಉಗುರು ಕತ್ತರಿಸುವುದುಉತ್ತಮ ಎನ್ನಲಾಗುತ್ತದೆ.

Leave a Reply

Your email address will not be published.