ರಾತ್ರಿ ಸಮಯ ಹಾಲು ಕುಡಿದರೆ ಇಪ್ಪತ್ತು ಲಾಭ

ಮನೆ ಮದ್ದು

ರಾತ್ರಿ ಮಲಗುವ ಮುನ್ನ ಹಾಲು ಕುಡಿದರೆ ಏನಾಗುತ್ತದೆ ಗೊತ್ತಾ. ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಮಲಗಿ ಅಂತ ಅದರಲ್ಲೂ ಮಕ್ಕಳಿಗೆ ಪಾಲಕರು ಹೇಳಿಕೊಡುತ್ತಾರೆ ಈ ಹಾಲು ತುಂಬಾ ಪ್ರಯೋಜನಗಳನ್ನು ಹೊಂದಿರುತ್ತದೆ ಶರೀರದ ಬೆಳವಣಿಗೆಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ ಹಾಲಿನಲ್ಲಿ ಕ್ಯಾಲ್ಸಿಯಂ ವಿಟಮಿನ್ ಎ ವಿಟಮಿನ್ ಬಿ ಮೊದಲಾದ ಪೋಷಕಾಂಶಗಳು ಹೇರಳವಾಗಿದ್ದು ಇದು ಪರಿಪೂರ್ಣವಾದ ಮತ್ತು ಆರೋಗ್ಯಕರ ವಾಗಿದ್ದು ಮಕ್ಕಳಿಗೆ ಅಷ್ಟೇ ಅಲ್ಲದೆ ಎಲ್ಲರಿಗೂ ಪೂರಕವಾಗಿದೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು ಏಕೆಂದರೆ ಆರೋಗ್ಯ ತಜ್ಞರ ಪ್ರಕಾರ ಇದರಲ್ಲಿರುವ ಟ್ರಿಕ್ಟೋಪ್ಯಾನ್ ಎಂಬ ಪೋಷಕಾಂಶ ಜೀರ್ಣಕ್ರಿಯೆ ಬಳಿಕ ಸೇರೋಟೋನಿನ್ ಎಂಬ ರಸದೂತವಾಗಿ ಪರಿವರ್ತನೆ ಆಗುತ್ತದೆ ಘಾಡ ಮತ್ತು ಸೊಂಪಾದ ನಿದ್ದೆಗೆ ಈ ರಸದೂತ ತುಂಬಾ ಅವಶ್ಯಕ ಅದರಲ್ಲೂ ಹಾಲು ಸ್ವಲ್ಪ ಬಿಸಿ ಇರುವಾಗ ನಾವು ಸೇವನೆ ಮಾಡುವುದರಿಂದ ನಮಗೆ ಮಾನಸಿಕವಾಗಿ ನಿರಾಳ ಸಿಗುತ್ತದೆ

ಮತ್ತು ದೇಹದ ಒತ್ತಡವನ್ನು ನಿರಾಳವಾಗಿಸುವ ಮೂಲಕ ಹಾಯಾದ ಅನುಭವ ನೀಡುತ್ತದೆ. ನಿದ್ದೆ ಸಮಯದಲ್ಲಿ ಟ್ರಿಕ್ಟೋಪ್ಯಾನ್ ಜೀರ್ಣಿಸುವ ವೇಳೆ ಮೊಲಾಟೋನಿನ್ ಎಂಬ ಪೋಷಕಾಂಶ ಉತ್ಪತ್ತಿ ಆಗುತ್ತದೆ ಈ ಮೊಲಾಟೋನಿನ್ ಮೆದುಳಿನ ನಿದ್ದೆ ಸಮಯದಲ್ಲಿ ಕೇವಲ ನಿದ್ದೆಗೆ ಪೂರಕ ಕೆಲಸವನ್ನು ಮಾಡಲು ನೆರವಾಗುತ್ತದೆ. ಇದರಿಂದ ರಾತ್ರಿ ಹಾಲು ಕುಡಿಯುವುದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕುಡಿಯಬಹುದು ಅಂತ ವೈದ್ಯರು ಹೇಳುತ್ತಾರೆ. ಹಾಲಿನಲ್ಲಿರುವ ಕಾರ್ಬೋಹೈಡ್ರೇಟ್ ಗಳು ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿ ಇರುವ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ದೇಹದಲ್ಲಿ ಉತ್ಪತ್ತಿ ಆಗುವ ಟ್ರಿಕ್ಟೋಪ್ಯಾನ್ ರಸದೂತವನ್ನು ಮೆದುಳಿಗೆ ಸಹಿತ ದೇಹದ ಇತರ ಭಾಗಗಳಿಗೆ ಪರಿಚಲಿಸುವಂತೆ ಮಾಡುತ್ತದೆ ಘಾಡ ನಿದ್ರೆ ಪಡೆಯಲು ನೆರವಾಗುತ್ತದೆ. ಮಕ್ಕಳ ಬೆಳವಣಿಗೆಗೆ ಹಾಲು ಹೆಚ್ಚಿನ ನೆರವು ನೀಡುತ್ತದೆ ಇದಕ್ಕಾಗಿ ಪರಿಪೂರ್ಣ ಹಾಲು ಅಥವಾ ಕೊಬ್ಬುಯುಕ್ತ ಹಾಲು ಸೂಕ್ತವಾಗಿರುತ್ತದೆ.

ಸುಮಾರು 30 35 ವರ್ಷಗಳ ಬಳಿಕ ಈ ಕೊಬ್ಬುಯುಕ್ತ ಹಾಲಿನ ಸೇವನೆಯಿಂದ ದೇಹದ ತೂಕ ಹೆಚ್ಚಾಗುತ್ತದೆ ಹಾಗಾಗಿ ನಡುವಯಸ್ಸಿನವರಿಗೆ ಕೊಬ್ಬು ರಹಿತ ಅಥವಾ ಹಾಲಿನ ಪುಡಿಯಿಂದ ತಯಾರಿಸಿದ ಹಾಲಿನ ಸೇವನೆ ಸೂಕ್ತ ಅಲ್ಲದೆ ಕೆಲವರಿಗೆ ಹಾಲಿನಲ್ಲಿರುವ ಲ್ಯೂಕ್ಟೊಸ್ ಒಗ್ಗುವುದಿಲ್ಲ ಇಂತವರು ವೈದ್ಯರ ಸಲಹೆ ಪಡೆದು ಹಾಲನ್ನು ಸೇವಿಸಬೇಕು. ಹಾಲಿನ ಬದಲು ಬಾಳೆಹಣ್ಣು ಚೆರ್ರೆ ಹಣ್ಣು ಧಾನ್ಯಗಳು ಟೊಮೊಟೊ ಲೇಟಿವ್ಸ್ ಮೀನು ಒಣಫಲ ಮೊದಲಾದವುಗಳನ್ನು ಸೇವಿಸಿ ನಾವು ಘಾಡ ನಿದ್ರೆಯನ್ನು ಪಡೆಯಬಹುದು. ಹಾಲಿನಲ್ಲಿ ನೀರು ಪ್ರೊಟೀನ್ ಖನಿಜಗಳು ಅಮೈನೋ ಆಮ್ಲಗಳು ಹೈಡ್ರೋಡ್ ಗಳು ಮೊದಲಾದ ಹಲವಾರು ಅವಶ್ಯಕ ಪೋಷಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಟ್ರಿಕ್ಟೋಪ್ಯಾನ್ ಇದೊಂದು ಪ್ರಮುಖ ಅಮೈನೋ ಆಮ್ಲವಾಗಿದ್ದು ದೇಹದ ಹಲವು ರಸದೂತಗಳನ್ನು ನಿಯಂತ್ರಿಸುವುದು ಇದರ ಪ್ರಮುಖ ಕಾರ್ಯ ರಕ್ತದ ಮೂಲಕ ಮೆದುಳಿಗೆ ಆಗಮಿಸುವ ಟ್ರಿಕ್ಟೋಪ್ಯಾನ್ ಸೇರೋಟಾನಾಜಿಕ್ ನ್ಯೂರಾನ್ ಎಂಬ ಭಾಗದಲ್ಲಿ

ಸೇರೋಟಾನಾಜಿಕ್ ಎಂಬ ರಸದೂತವಾಗಿ ಪರಿವರ್ತನೆ ಆಗುತ್ತದೆ ಈ ಮೂಲಕ ಮೇಲಾಟಾನಿನ್ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ ಈ ಮೇಲಾಟಾನಿನ್ ಪ್ರಮುಖ ಕಾರ್ಯವೆಂದರೆ ಯಾವಾಗ ಮಲಗಬೇಕು ಯಾವಾಗ ಎಚ್ಚರವಾಗಬೇಕು ಅಂತ ನಿರ್ಧರಿಸುತ್ತದೆ ಮತ್ತು ಘಾಡ ನಿದ್ದೆ ಸಮಯದಲ್ಲಿ ಕನಸುಗಳು ಬೀಳಲು ಈ ಮೇಲಾಟಾನಿನ್ ಇರುವುದು ಅಗತ್ಯ. ಕ್ಯಾಲ್ಸಿಯಂ ಅಂಶ ಮೆದುಳಿನಲ್ಲಿರುವ ನ್ಯೂರಾನ ಗಳ ಚಟುವಟಿಕೆ ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಖಟ ಸಂಬಂಧವನ್ನು ಹೊಂದಿರುತ್ತದೆ ಮತ್ತು ನಿದ್ದೆಯ ಸಮಯದಲ್ಲಿ ನಮ್ಮ ಕಣ್ಣುಗುಡ್ಡೆಗಳು ಕ್ಷಿಪ್ರವಾಗಿ ಚಲಿಸುವ ಅಥವಾ ಘಾಡವಾದ ನಿದ್ದೆಯ ಅವಧಿಯನ್ನು ಇದು ನಿರ್ಧರಿಸುತ್ತದೆ. ವಿಟಮಿನ್ ಬಿ22 ಹಾಲಿನಲ್ಲಿರುವ ಇತರ ಪೋಷಕಾಂಶಗಳಿಗಿಂತ ಇದಕ್ಕೆ ಹೆಚ್ಚಿನ ಮಹತ್ವ ಇದೆ ಮೆದುಳಿನಲ್ಲಿರುವ ಪಿನಿಯರ್ ಗ್ರಂಥಿ ಮೇಲಾಟೋನಿನನ್ನು

ಉತ್ಪಾದಿಸಿ ನಿಯಂತ್ರಿಸಲು ಇದು ಅವಶ್ಯಕ. ಈ ಗುಣ ತಿಳಿದ ಬಳಿಕ ಅಗತ್ಯ ಪ್ರಮಾಣದ ವಿಟಮಿನ್ ಬಿ12 ಹೊಂದಿರುವ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಈ ಮಾತ್ರೆಗಳ ಸೇವನೆಯಿಂದ ನಿದ್ರಾ ಹೀನ ತೊಂದರೆಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಿನ್ನದೆ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದರೆ ಸಾಕು. ತೂಕ ಹೆಚ್ಚಿಸಲು ಮಲಗುವ ಮುನ್ನ ಹಾಲು ಕುಡಿಯಬೇಕು. ರಾತ್ರಿ 7 ಗಂಟೆಗಿಂತ ಮೊದಲು ಹಾಲನ್ನು ಕುಡಿದು ನಂತರ 8 ಗಂಟೆ ನಂತರ ಊಟ ಮಾಡಬೇಕು ಇದರಿಂದ ತಂಪಾದ ನಿದ್ರೆಯನ್ನು ಮಾಡಬಹುದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ

Leave a Reply

Your email address will not be published.