ಉರಿ ಮೂತ್ರದಿಂದ ಬಳಲುತ್ತಿರುವವರಿಗೆ ಇಲ್ಲಿದೆ ಉಪಯುಕ್ತ ಮನೆ ಮದ್ದು

ಮನೆ ಮದ್ದು

ಉರಿ ಮೂತ್ರದಿಂದ ಬಳಲುತ್ತಿರುವವರಿಗೆ ಇಲ್ಲಿದೆ ಉಪಯುಕ್ತ ಮನೆ ಮದ್ದುಗಳು. ನಮ್ಮ ದೇಹದಲ್ಲಿ ಆಗುವ ಹಲವಾರು ರೀತಿಯ ಬದಲಾವಣೆಗಳಿಗೆ ನಮಗೆ ಗೊತ್ತಿಲ್ಲದ ಹಾಗೆ ನಮಲ್ಲೇ ಅನೇಕ ರೀತಿಯ ಮನೆ ಮದ್ದುಗಳು ಇರುತ್ತವೆ ಆದರೆ ನಮಗೆ ಅದು ತಿಳಿದಿರುವುದಿಲ್ಲ ಈ ಉರಿ ಮೂತ್ರ ಸಮಸ್ಯೆಯು ಕೂಡ ಒಂದು ನಮ್ಮ ದೇಹಕ್ಕೆ ಸಂಬಂದಿಸಿದ ಸಮಸ್ಯೆಯಾಗಿದೆ ಇದು ನೀರಿನ ಅಂಶ ನಮ್ಮ ದೇಹದಲ್ಲಿ ಕಡಿಮೆ ಯಾಗುವುದರಿಂದ ಈ ಒಂದು ಉರಿಮೂತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೂ ಕೂಡ ನಾವು ಹಲವಾರು ಮನೆ ಮದ್ದುಗಳನ್ನು ಮಾಡಬಹುದು ಹಾಗಾದರೆ ಬನ್ನಿ ಈ ಒಂದು ಲೇಖನದಲ್ಲಿ ಉರಿಮೂತ್ರ ಸಮಸ್ಯೆ ಗೆ ಮನೆಮದ್ದು ಯಾವುದು ಎನ್ನುವುದನ್ನು ತಿಳಿಯೋಣ.

ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಎನಾದರು ಸೋಂಕು ಆದಾಗ ಉರಿಮೂತ್ರ ಸಮಸ್ಯೆ ಕಂಡುಬರುತ್ತದೆ ನಿತ್ಯ ಉರಿಮೂತ್ರ ಸಮಸ್ಯೆ ಕಾಡುತ್ತಿದ್ದರೆ ಗರ್ಭಕೋಶ ಸಮಸ್ಯೆ ಮೂತ್ರಪಿಂಡದ ಸಮಸ್ಯೆ ಎದುರಾಗುವ ಸಾಧ್ಯತೆ ಕೂಡ ಇದೆ ಈ ಸಮಸ್ಯೆಯಿಂದ ಹೊರಬರಬೇಕಾದರೆ ಪ್ರತಿನಿತ್ಯ ದಾಳಿಂಬೆ ರಸವನ್ನು ಸೇವನೆ ಮಾಡಬೇಕು ದಾಳಿಂಬೆ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟಗಳು ಉರಿಮೂತ್ರ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ತುಂಬಾನೇ ಸಹಕಾರಿಯಾಗಿದೆ ಇನ್ನು ದಾಳಿಂಬೆ ರಸವನ್ನು ಕುಡಿಯುವುದರಿಂದ ಕ್ಯಾನ್ಸರ್ ಹಾಗೂ ಹೃದಯ ಸಮಸ್ಯೆ ಹೃದಯ ಸಂಬಂದಿ ಕಾಯಿಲೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು ಇದು ಮೂತ್ರದ ಉರಿಯನ್ನು ಕಡಿಮೆ ಮಾಡಿ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮೂತ್ರದ ಉರಿಯನ್ನು ಕಡಿಮೆ ಮಾಡುವ ಇತರೆ ಆಹಾರಗಳೆಂದರೆ ಕ್ಯಾನ್ ಬೇರಿ ರಸ ಮತ್ತು ವಿಟಮಿನ್ ಸಿ ಅಂಶ ಹೆಚ್ಚಿರುವಂತಹ ಕಿತ್ತಳೆ ಹಣ್ಣು ದ್ರಾಕ್ಷಿಹಣ್ಣು ಹಾಗೂ ಕೀವಿ ಹಣ್ಣುಗಳು ಇವುಗಳನ್ನು ತಿನ್ನುವುದರಿಂದಲು ಸಹ ಉರಿ ಮೂತ್ರವನ್ನು ನಿಯಂತ್ರಣಕ್ಕೆ ತರಬಹುದು. ಮೂತ್ರದ ಉರಿ ಕಂಡುಬಂದರೆ ಸಾಕಷ್ಟು ನೀರು ಸೇವನೆ ಮಾಡಬೇಕು ನೀರು ಹೆಚ್ಚಾಗಿ ಕುಡಿಯುವುದರಿಂದ ದೇಹದಲ್ಲಿರುವ ಮೂತ್ರದ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಹೊರಹಾಕಿ ಮೂತ್ರಪಿಂಡವನ್ನು ಸಂರಕ್ಷಿಸಬಹುದು.

ನಮ್ಮ ದೇಹಕ್ಕೆ ನೀರು ಅತಿ ಮುಖ್ಯವಾದ ಒಂದು ಅಂಶವಾಗಿದೆ ನಾವು ನೀರನ್ನು ಅತಿ ಹೆಚ್ಚಾಗಿ ಕುಡಿಯುವುದರಿಂದ ನಮ್ಮ ದೇಹದ ವಿವಿಧ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಕಾರಿ ಯಾಗುವುದರ ಜೊತೆಗೆ ನಮ್ಮ ತ್ವಚೆಯನ್ನು ಸಹ ಕಾಪಾಡುತ್ತದೆ ಹೆಚ್ಚಾಗಿ ನೀರು ಸೇವನೆ ಮಾಡುವುದರಿಂದ ನಮ್ಮ ತ್ವಚೆ ಕಾಂತಿಯುತವಾಗುತ್ತದೆ ಜೊತೆಗೆ ಚರ್ಮದ ಹೊಳಪು ಹೆಚ್ಚಾಗಿ ಚರ್ಮರೋಗಗಳಿಂದ ಮುಕ್ತಿಯನ್ನು ಪಡೆಯಬಹುದು. ಹೀಗೆ ಈ ನೀರನ್ನು ಸೇವಿಸುವುದರ ಮೂಲಕ ಉರಿಮೂತ್ರವನ್ನು ಕೂಡ ನಾವು ತಡೆಗಟ್ಟಬಹುದು. ಈ ಒಂದು ಚಿಕ್ಕ ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಆರೋಗ್ಯ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಲು ಮರೆಯದಿರಿ

Leave a Reply

Your email address will not be published.