ಬಾಳೆ ಎಲೆಯಲ್ಲಿ ಉಟ ಮಾಡಿ ಹತ್ತಾರು ಲಾಭ ಪಡೆಯಿರಿ

ಉಪಯುಕ್ತ ಸಲಹೆ

ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಮಗೆ ಸಿಗುವ ಪ್ರಯೋಜನಗಳು. ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ನಮ್ಮ ಪೂರ್ವಜರು ಏನೇ ಮಾಡಿದರೂ ಕೂಡ ಅದರ ಹಿಂದೆ ಒಂದು ವೈಜ್ಞಾನಿಕ ಸತ್ಯವಿದೆ ಎನ್ನುವ ವಿಷಯವನ್ನು ಹಲವಾರು ಸಂಶೋಧನೆಗಳು ಕೂಡ ಒಪ್ಪಿಕೊಂಡಿವೆ ಪ್ರಕೃತಿಯನ್ನು ದೇವರ ರೀತಿಯಲ್ಲೂ ಪೂಜಿಸುವ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಇರುವಂತಹ ಪ್ರತಿ ಆಚರಣೆಯ ಹಿಂದೆ ಒಂದೊಂದು ಸೊಗಸಾದ ಆರೋಗ್ಯದ ಗುಟ್ಟುಗಳಿವೆ ಹೌದು ಸ್ನೇಹಿತರೆ ಇಂದು ಇದೆ ಒಂದು ಆರೋಗ್ಯದ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ನಮ್ಮ ದೇಶದಲ್ಲಿ ಹಸಿರು ಹಸಿರಾದ ಬಾಳೆಎಲೆಯ ಊಟ ಇಂದು ಅಥವಾ ನಿನ್ನೆಯದಲ್ಲ ನಮ್ಮ ಪೂರ್ವಿಕರು ಈ ಬಾಳೆಎಲೆಯಲ್ಲಿರುವ ರೋಗನಿರೋಧಕ ಶಕ್ತಿಯನ್ನು ಗುರುತಿಸಿ ಅದರಿಂದ ಔಷಧಿ ತಯಾರಿಸುವುದರ ಜೊತೆಗೆ ಆ ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಪ್ರಯೋಜನವನ್ನು ಸಹ ತಿಳಿಸಿದ್ದಾರೆ.

ಕಾಲಕ್ರಮೇಣವಾಗಿ ಈ ಒತ್ತಡದ ಬದುಕಿನಲ್ಲಿ ಬಹುತೇಕ ಮರೆಯಾಗಿದ್ದ ಬಾಳೆಎಲೆಯ ಊಟ ಈಗ ಮತ್ತೆ ಮಹತ್ವವನ್ನು ಪಡೆದುಕೊಂಡಿದೆ. ಬಾಳೆಎಲೆಯ ಊಟದ ಮಹತ್ವ ಅದೆಷ್ಟೋ ಜನರಿಗೆ ಇಂದಿಗೂ ಕೂಡ ಗೊತ್ತಿಲ್ಲ ಹೀಗಾಗಿ ಈ ಊಟದ ಕೆಲವು ಸೊಗಸಾದ ಆರೋಗ್ಯಭರಿತ ಪ್ರಯೋಜನವೇನು ಎಂಬುದನ್ನು ತಿಳಿಯೋಣ ಬಾಳೆಎಲೆಗಳಲ್ಲಿ ಬಡಿಸುವ ಆಹಾರವನ್ನು ತಿನ್ನುವುದು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿದೆ ಬಾಳೆಎಲೆಗಳಲ್ಲಿ ನೀಡುವ ಆಹಾರವು ನಮಗೆ ಬಾಯಿ ರುಚಿಯನ್ನು ಕೊಡುವುದು ಮಾತ್ರವಲ್ಲದೆ ಆರೋಗ್ಯಕರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ರೆಸ್ಟೋರೆಂಟಗಳು ಹೊಟೇಲಗಳು ಬಾಳೆಎಲೆಗಳಲ್ಲಿ ಆಹಾರವನ್ನು ನೀಡಲು ಪ್ರಾರಂಭಿಸಿವೆ

ಬಾಳೆಎಲೆಯಲ್ಲಿ ಸತತವಾಗಿ ಊಟ ಮಾಡುವುದರಿಂದ ಬಿಳಿಕೂದಲು ಸಂತಾನ ಹೀನತೆ ಮತ್ತು ಚರ್ಮರೋಗದ ಸಮಸ್ಯೆಗಳು ದೂರವಾಗುತ್ತವೆ ಬಾಳೆಎಲೆಯ ಸುತ್ತ ರಂಗೋಲಿಯನ್ನು ಹಾಕುವ ಕ್ರಮ ಕೂಡ ಇದೆ ಸಣ್ಣ ಸಣ್ಣ ಇರುವೆಗಳು ಕ್ರಿಮಿಕೀಟಗಳು ಇತ್ಯಾದಿಗಳು ಆಹಾರ ಹುಡುಕುತ್ತ ಎಲೆಗೆ ಬರಬಾರದು ಎಂಬ ಉದ್ದೇಶದಿಂದ ಇದನ್ನು ಮಾಡಲಾಗುತ್ತದೆ. ಬಾಳೆ ಎಲೆಯಲ್ಲಿನ ಊಟ ಮನಸ್ಸಿಗೆ ಒಂದು ರೀತಿಯ ಮುದ ನೀಡುವುದರ ಜೊತೆಗೆ ನಮಗೆ ಆರೋಗ್ಯ ಭಾಗ್ಯವನ್ನು ಕೂಡ ನೀಡುತ್ತದೆ ಹಾಗಾಗಿ ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ಕೂಡ ಯಾವುದೇ ಕೆಲಸಕ್ಕೂ ಕೂಡ ಬರಿ ನಮ್ಮ ಆರೋಗ್ಯವನ್ನು ಹಾಳು ಮಾಡುವ ಪ್ಲಾಸ್ಟಿಕ್ ಬಳುಸುತ್ತೇವೆ ಇದರಿಂದ ಅನೇಕ ರೀತಿಯ ರೋಗ ರುಜಿನಗಳಿಗೆ ನಾವು ಬಲಿಯಾಗುತ್ತೇವೆ

ಹಾಗಾಗಿ ಈ ಪ್ಲಾಸ್ಟಿಕ್ ಬದಲಿಗೆ ನಾವು ಬೆಳೆಯುವ ಬಾಳೆ ಎಲೆಯನ್ನು ಪ್ರತಿಯೊಂದು ಊಟ ತಿಂಡಿತಿನಿಸು ಇನ್ನು ಹಲವಾರು ಉಪಯುಕ್ತ ಕೆಲಸಗಳಿಗೆ ಬಳಸುವುದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳುವುದರ ಜೊತೆಗೆ ನಮ್ಮ ಪರಿಸರವನ್ನು ಸಹ ಕಾಪಾಡಿಕೊಳ್ಳಬಹುದು ಏಕೆಂದರೆ ಪ್ಲಾಸ್ಟಿಕ್ ಬಳಸಿ ಅದನ್ನು ಎಲ್ಲೆಂದರಲ್ಲಿ ಬಿಸಾಕುತ್ತೇವೆ ಅದು ಕರಗದೆ ಭೂಮಿಯ ಮೇಲೆಲ್ಲ ಹರಡಿಕೊಂಡು ಮೂಕ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಮಾರಕವಾಗಿದೆ ಹಾಗಾಗಿ ಆ ಉದ್ದೇಶದಿಂದ ನಾವು ಬಾಳೆಎಲೆ ಬಳಸುವುದರಿಂದ ಅದನ್ನು ಬಿಸಾಕಿದರು ಸಹ ಅದು ಕೊಳೆತು ಭೂಮಿಯಲ್ಲಿ ಗೊಬ್ಬರವಾಗಿ ಪರಿವರ್ತನೆ ಆಗುವುದರ ಮೂಲಕ ಅದರಿಂದ ನಮಗೆ ಅಥವಾ ಪ್ರಾಣಿಗಳಿಗೆ ಯಾವುದೇ ವಿಧವಾದ ತೊಂದರೆ ಆಗುವುದಿಲ್ಲ ಹಾಗಾಗಿ ನೀವು ಕೂಡ ಬಾಳೆ ಎಲೆ ಊಟವನ್ನು ಹಬ್ಬ ಹರಿದಿನಗಳಲ್ಲಿ ಆದರೂ ಸಹ ಬಳಸಿ.

Leave a Reply

Your email address will not be published.