ನೀವು ಬೆಳ್ಳಗೆ ಆಗಲು ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್

ಮನೆ ಮದ್ದು

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಎಲ್ಲರೂ ಸಹ ತುಂಬಾ ಪ್ರಯೋಗಗಳನ್ನು ಮಾಡುತ್ತಾರೆ ಅದು ದುಬಾರಿ ಬೆಲೆಯ ಕ್ರಿಮಗಳನ್ನು ಬಳಸುವುದಾ ಗಿರಬಹುದು ಅಥವಾ ದುಬಾರಿ ಬೆಲೆಯ ಸೌಂದರ್ಯ ವರ್ಧಕ ಚಿಕಿತ್ಸೆ ಪಡೆಯುವುದು ಸಹ ಆಗಿರಬಹುದು ಆದರೆ ಇದಕ್ಕೆಲ್ಲ ನಾವು ಹಣದ ಅಪವ್ಯಯ ಮಾಡುತ್ತೇವೆಯೇ ಹೊರತು ಅದರಿಂದ ನಮಗೆ ಶಾಶ್ವತ ಹೊಳೆಯುವ ತ್ವಚೆ ಸಿಗುವುದಕ್ಕಿಂತ ಹೆಚ್ಚಾಗಿ ನಮ್ಮ ತ್ವಚೆಯನ್ನೇ ನಾವು ಹಾಳು ಮಾಡಿಕೊಳ್ಳಬೇಕಾಗುತ್ತದೆ ಏಕೆಂದರೆ ಈ ಸೌಂದರ್ಯ ವರ್ಧಕ ಸಾಮಗ್ರಿಗಳಲ್ಲಿ ಹಲವಾರು ವಿಧದ ರಾಸಾಯನಿಕಗಳನ್ನು ಬಳಸಿರುತ್ತಾರೆ ಅದು ನಮ್ಮ ತ್ವಚೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಆದ್ದರಿಂದ ಇದರ ಬದಲಾಗಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ತ್ವಚೆಯನ್ನು ನಾವು ಹೊಳೆಯುವಂತೆ ಮಾಡಬಹುದು

ಹಾಗಾದರೆ ಆ ಹೊಳೆಯುವ ತ್ವಚೆಗೆ ಮನೆ ಮದ್ದು ಯಾವುದು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್ ಮಾಡಿಕೊಂಡರೆ ನಿಮ್ಮ ಮುಖ ತುಂಬಾ ಹೊಳೆಯುತ್ತದೆ ನೈಸರ್ಗಿಕವಾದ ತ್ವಚೆ ಪಡೆಯಬೇಕೆಂದರೆ ಮನೆಯಲ್ಲೇ ಸಿಗುವ ಈ ಸೊಪ್ಪಿನಿಂದ ನೈಸರ್ಗಿಕ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು ಅದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ತರಕಾರಿ ಮತ್ತು ಸೊಪ್ಪನ್ನು ತ್ವಚೆಯ ಆರೈಕೆಗೆ ಬಳಸಲು ನಾವು ತುಂಬಾ ಯೋಚನೆ ಮಾಡುತ್ತೇವೆ ಕೆಲವು ಸೊಪ್ಪುಗಳು ಕೂಡ ತ್ವಚೆಯನ್ನು ಆರೈಕೆ ಮಾಡುತ್ತವೆ ಅದರಲ್ಲಿ ಒಂದು ಸೊಪ್ಪು ಎಂದರೆ ಅದು ನಾವು ಅಡುಗೆಯಲ್ಲಿ ಬಳಸುವಂತಹ ಕೊತ್ತಂಬರಿ ಸೊಪ್ಪು ಈ ಕೊತ್ತೊಂಬರಿ ಸೊಪ್ಪು ಹಲವಾರು ರೀತಿಯಿಂದ ತ್ವಚೆಗೆ ತುಂಬಾ ಉಪಯೋಗಕಾರಿ

ಎಲ್ಲ ವಿಧದಿಂದ ಕೊತ್ತೊಂಬರಿ ಸೊಪ್ಪನ್ನು ಬಳಸಬಹುದು ಆದರೆ ಸೂಕ್ಷ್ಮ ವಿಧದ ಚರ್ವವನ್ನು ಹೊಂದಿದವರು ಸ್ವಲ್ಪ ಇದನ್ನು ಬಳಸುವಾಗ ಎಚ್ಚರ ವಹಿಸುವುದು ಉತ್ತಮ. ಮೊಡವೆ ಕಪ್ಪುಕಲೆ ಮತ್ತು ಸೋಂಕುಗಳಿಗೆ ಈ ಕೊತ್ತೊಂಬರಿ ಸೊಪ್ಪು ತುಂಬಾ ಲಾಭದಾಯಕ ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್ ಅಥವಾ ಸ್ಕ್ರಬನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ಈಗ ತಿಳಿಯೋಣ ಕೊತ್ತೊಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ನಂತರ ಅದಕ್ಕೆ 5 ರಿಂದ 6 ಚಮಚ ಟೊಮೊಟೊ ರಸವನ್ನು ಮತ್ತು ಸ್ವಲ್ಪ ನಿಂಬೆರಸ ಹಾಗೂ ಅರ್ಧ ಚಮಚ ಮುಲ್ತಾನ ಮಟ್ಟಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಕಲಸಿ ಫೇಸ್ ಪ್ಯಾಕ್ ತಯಾರಿಸಬೇಕು ಅದನ್ನು ಮುಖಕ್ಕೆ ಚೆನ್ನಾಗಿ ನಿಧಾನವಾಗಿ ಹಚ್ಚಿಕೊಳ್ಳಿ ನಂತರ

ಅದು ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ ಹೀಗೆ ವಾರದಲ್ಲಿ ಒಂದು ಬಾರಿ ಮಾಡುವುದರಿಂದ ಸುಂದರವಾದ ಕಲೆರಹಿತ ಮುಖವನ್ನು ನೀವು ಪಡೆಯಬಹುದು ಇದರ ಜೊತೆಗೆ ನಿಮ್ಮ ಮುಖ ತುಂಬಾನೇ ಹೊಳೆಯುವ ತ್ವಚೆಯನ್ನು ಸಹ ಪಡೆಯುತ್ತದೆ. ಇದು ನೈಸರ್ಗಿಕವಾದ ಒಂದು ಮನೆ ಮದ್ದಾಗಿರುವುದರಿಂದ ಯಾವುದೇ ವಿಧವಾದ ಅಡ್ಡ ಪರಿಣಾಮಗಳು ಇರುವುದಿಲ್ಲ ಎಲ್ಲಾ ವಯಸ್ಸಿನವರು ಸಹ ಈ ಒಂದು ಸಲಹೆಯನ್ನು ಅನುಸರಿಸಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಲು ಮರೆಯದಿರಿ

Leave a Reply

Your email address will not be published.