ಉಗುರಿನಲ್ಲಿ ಬಿಳಿ ಕಲೆಗಳು ಕಾಣಿಸಿದರೆ ತಕ್ಷಣ ಈ ರೀತಿ ಮಾಡಿರಿ

ಉಪಯುಕ್ತ ಸಲಹೆ

ಉಗುರಿನಲ್ಲಿ ಬಿಳಿ ಕಲೆಗಳು ಕಾಣಿಸಿದರೆ ಹೀಗೆ ಮಾಡಿ. ಆರೋಗ್ಯ ಎನ್ನುವುದು ಮನುಷ್ಯನಿಗೆ ತುಂಬಾ ಮುಖ್ಯ ಅದನ್ನು ನಾವು ಹೆಚ್ಚು ಕಾಳಜಿಯಿಂದ ಕಾಪಾಡಿಕೊಳ್ಳಬೇಕು ಈಗಿನ ಕಾಲದ ಜನರು ಉಗುರುಗಳ ಸೌಂದರ್ಯ ಹೆಚ್ಚಿಸಲು ಹೆಚ್ಚು ಗಮನ ನೀಡುತ್ತಾರೆ ಆದರೆ ಅದರ ಬಗ್ಗೆ ಕಾಳಜಿ ಕೊಡುವುದು ಕಡಿಮೆ ಅದೆಷ್ಟೋ ಜನರು ಉಗುರಿನಲ್ಲಿ ಬಿಳಿ ಕಲೆಗಳಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದು ಲುಕೊನೇಜಿಯ ಕಾರಣದಿಂದಲೂ ಆಗಿರಬಹುದು ಇದು ಹೆಚ್ಚಾಗಿ ಕೈಯಲ್ಲಿರೋ ಉಗುರುಗಳಲ್ಲಿ ಅಥವಾ ಕಾಲಿನಲ್ಲಿರುವ ಉಗುರುಗಳಲ್ಲಿ ಕಂಡುಬರುತ್ತದೆ. ನೈಸರ್ಗಿಕವಾಗಿ ನಮ್ಮ ಮನೆಯಲ್ಲಿಯೇ ಈ ಉಗುರುಗಳಲ್ಲಿ ಆಗುವಂತಹ ಈ ಕಲೆಗಳನ್ನು ಹೇಗೆ ಸುಲಭವಾಗಿ ನಿವಾರಿಸಿಕೊಳ್ಳಬಹುದು ಎಂಬುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ ಸ್ನೇಹಿತರೆ.

ನಿಂಬೆರಸ ಮತ್ತು ಆಲಿವ್ ಎಣ್ಣೆಯನ್ನು ಬಳಸಿ ಈ ಸಮಸ್ಯೆಯನ್ನು ನಾವು ಪರಿಹರಿಸಿಕೊಳ್ಳಬಹುದು ನಿಂಬೆಹಣ್ಣಿನ ರಸದಲ್ಲಿರುವ ವಿಟಮಿನ್ ಸಿ ಅಂಶವು ನಮ್ಮ ಉಗುರಿನಲ್ಲಾದ ಬಣ್ಣದ ಬದಲಾವಣೆಯು ಹಾಗೂ ಬಿಳಿ ಚುಕ್ಕಿಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗೆಯೇ ಆಲಿವ್ ಎಣ್ಣೆ ಕೂಡ ನಮ್ಮ ಉಗುರನ್ನು ಪೋಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಹಾಗಾದರೆ ಈ ಉಗುರಿನ ಮೇಲಿನ ಕಲೆಗಳನ್ನು ಹೋಗಲಾಡಿಸಲು ನಾವು ನಿಂಬೆಹಣ್ಣು ಮತ್ತು ಆಲಿವ್ ಎಣ್ಣೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವ ವಿಧಾನವನ್ನು ಈಗ ತಿಳಿಯೋಣ ಎರಡು ಚಮಚ ನಿಂಬೆರಸ ಮತ್ತು ಕೆಲವು ಹನಿ ಆಲಿವ್ ಎಣ್ಣೆಯನ್ನು ಸೇರಿಸಿ ಇವೆರಡು ಪಧಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು ಇದನ್ನು ನಿಮ್ಮ ಕೈ ಅಥವಾ ಕಾಲಿನ ಉಗುರುಗಳಿಗೆ ಹಚ್ಚಿಕೊಂಡು 25 ರಿಂದ 30 ನಿಮಿಷ ಹಾಗೆ ಬಿಡಿ

ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದನ್ನು ನೀವು ಪ್ರತಿದಿನ ಬೆಳಿಗ್ಗೆ ಸಂಜೆ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಈ ಉಗುರಿನ ಮೇಲೆ ಕಲೆಗಳು ಹಲವಾರು ಕಾರಣಕ್ಕೆ ಆಗಬಹುದು ಏಕೆಂದರೆ ನಮ್ಮ ದೇಹದಲ್ಲಿ ರಕ್ತವು ಕಡಿಮೆ ಆದಾಗ ನಮ್ಮ ಕೈ ಹಾಗೂ ಕಾಲಿನ ಉಗುರಿನ ಸುತ್ತಲೂ ಕಪ್ಪು ವರ್ತುಲ ಆದ ಹಾಗೆ ಅನಿಸುತ್ತದೆ ಇದಕ್ಕೆ ಕಾರಣ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಆಗುವುದು ಇದರಿಂದ ನಮ್ಮಲ್ಲಿ ನಿಶಕ್ತಿ ಸುಸ್ತು ಕಾಣಿಸುತ್ತದೆ ಏಕೆಂದರೆ ಇಂದಿನ ಆಧುನಿಕ ಯುಗದಲ್ಲಿ ನಾವು ತಿನ್ನುವ ಆಹಾರ ಅಪೌಷ್ಟಿಕತೆಯಿಂದ ಕೂಡಿರುತ್ತದೆ ಆದರೆ ಅದರಲ್ಲಿ ಯಾವುದೇ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಇರುವುದಿಲ್ಲ ಇದನ್ನು ಸೇವಿಸುವುದರಿಂದ ದೇಹದ ಅಂಗಾಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗುತ್ತವೆ

ಇದರಿಂದ ನಾವು ಹೊರಬರಬೇಕೆಂದರೆ ಒಳ್ಳೆಯ ಪೌಷ್ಟಿಕಾಂಶಗಳನ್ನು ಹೊಂದಿದ ಆಹಾರ ಸೇವನೆ ಮಾಡಬೇಕು ಆಗ ಉಗುರಿನ ಸುತ್ತಲೂ ಕಪ್ಪು ಕಲೆಗಳಾಗಲಿ ಉಗುರಿನ ಬಣ್ಣ ಬದಲಾಗುವ ಸಮಸ್ಯೆಯಾಗಲಿ ಅಥವಾ ಉಗುರಿನ ಮೇಲೆ ಬಿಳಿಚುಕ್ಕೆ ಅಥವಾ ಕಲೆಗಳು ಯಾವುವು ಸಹ ಆಗುವುದಿಲ್ಲ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಕೂಡ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.