ಓಂ ಕಾಳು ನಿಮ್ಮ ಆರೋಗ್ಯ ಕಾಪಾಡುತ್ತದೆ

ಮನೆ ಮದ್ದು

ಓಂ ಕಾಳು ಅಡುಗೆಗೆ ರುಚಿ ನೀಡುವುದಲ್ಲದೆ ತನ್ನಲ್ಲಿ ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ಇಂದಿನ ಒತ್ತಡದ ಬದುಕಿನಲ್ಲಿ ಜನರು ತಾವೇ ಅಡುಗೆ ಮಾಡಿ ತಿನ್ನಲು ಸಮಯವಿಲ್ಲದ ಕಾರಣ ಹೊರಗಡೆ ಅಥವಾ ಹೋಟೆಲ್ ಗಳಲ್ಲಿ ಹಾಗೇನೇ ರಸ್ತೆ ಬದಿಗಳಲ್ಲಿ ಸಿಗುವಂತಹ ಮತ್ತೆ ಬೇಕರಿ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ತಿನ್ನುತ್ತಾರೆ ಆದರೆ ಇವುಗಳು ಅವರ ಬಾಯಿಗೆ ರುಚಿಯನ್ನು ನೀಡುತ್ತವೆ ಆದರೆ ಅದರಿಂದ ಆರೋಗ್ಯ ಖಂಡಿತ ಹಾಳಾಗುತ್ತದೆ ಏಕೆಂದರೆ ಹೋಟೆಲ್ ಗಳಲ್ಲಿ ಹೆಚ್ಚಾಗಿ ಹೊರಗಿನ ತಿನಿಸುಗಳಲ್ಲಿ ಸೋಡ ಬಳಸುತ್ತಾರೆ. ಏಕೆಂದರೆ ಈ ಸೋಡಾವನ್ನು ಅಡುಗೆಯಲ್ಲಿ ಬಳಸುವುದರಿಂದ ಊಟ ಮಾಡುವಾಗ ಜನರಿಗೆ ಊಟ ಹೆಚ್ಚಾಗಿ ಸೇರುವುದಿಲ್ಲ ಸ್ವಲ್ಪವೇ ಊಟ ತಿಂದ ತಕ್ಷಣ ಹೊಟ್ಟೆ ತುಂಬಿ ದಂತಾಗುತ್ತದೆ ಏಕೆಂದರೆ ಇದಕ್ಕೆ ಕಾರಣ ಅಡುಗೆಯಲ್ಲಿ ಬಳಸಿದ ಅಡುಗೆ ಸೋಡಾ ಇಂತಹ ಅಡುಗೆ ತಿನ್ನುವುದರಿಂದ ಗ್ಯಾಸ್ಟ್ರಿಕ್

ಎದೆ ಯೂರಿಯಂತಹ ಸಮಸ್ಯೆಗಳು ಎದುರಾಗುತ್ತವೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ ಏಕೆಂದರೆ ಅದಕ್ಕೆ ನಾವೇ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ಹಾಗಾದರೆ ಆ ಮನೆಮದ್ದನ್ನು ತಯಾರಿಸಲು ಮನೆಯಲ್ಲಿ ಇರುವ ಅಡುಗೆಗೆ ಬಳಸುವ ಓಂಕಾಳು ಹಲವಾರು ಔಷಧಿ ಗುಣಗಳನ್ನು ಹೊಂದಿದೆ ಓಂಕಾಳನ್ನು ಹೀಗೆ ಬಳಸುವುದರಿಂದ ಯಾವ ಯಾವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುವುದನ್ನು ಈ ಒಂದು ಚಿಕ್ಕ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲನೆಯ ಉಪಯೋಗವೆಂದರೆ ಊಟದ ನಂತರ ಕೆಲವರಿಗೆ ಸರಿಯಾಗಿ ಜೀರ್ಣವಾಗದೆ ಎದೆಉರಿ ಸಮಸ್ಯೆ ಕಾಡುವುದುಂಟು ಈ ಸಮಸ್ಯೇಗೆ ಒಂದೆರಡು ಬಾದಾಮಿ ಜೊತೆಗೆ ಓಂಕಾಳನ್ನು ಅಗೆದು ತಿನ್ನುವುದರಿಂದ ಎದೆ ಉರಿ ಕಡಿಮೆ ಯಾಗುತ್ತದೆ.

ಇನ್ನು ಎರಡನೆಯದಾಗಿ ಕರುಳಿನ ರೋಗಗಳನ್ನು ನಿಯಂತ್ರಿಸುತ್ತದೆ ಈ ಓಂಕಾಳು ಕರುಳಿನ ಸಂಬಂದಿ ಸಮಸ್ಯೆಗಳಿಗೂ ಸಹ ತುಂಬಾ ಉಪಯುಕ್ತವಾಗಿದೆ. ಬಿಸಿನೀರಿನಲ್ಲಿ 2 ರಿಂದ 3 ಗ್ರಾಮ್ ಓಂಕಾಳನ್ನು ಹಾಗೂ ಅರ್ಧ ಗ್ರಾಮ್ ಕರಿಮೆಣಸನ್ನು ಹಾಕಿ ಸೇವಿಸುವುದರಿಂದ ಕರುಳಿಗೆ ಸಂಬಂದಿಸಿದ ರೋಗಗಳಿಂದ ನಿವಾರಿಸಿಕೊಳ್ಳಬಹುದು. ಇನ್ನು ಮೂರನೆಯ ಒಂದು ಉಪಯೋಗ ಎಂದರೆ ಹೊಟ್ಟೆ ಹುಳು ಸಮಸ್ಯೆಗೆ ಮಜ್ಜಿಗೆಯಲ್ಲಿ ಓಂಕಾಳಿನ ಪುಡಿಯನ್ನು ಹಾಕಿಕೊಂಡು ಸೇವಿಸುವುದರಿಂದ ಹೊಟ್ಟೆಹುಳು ಸಮಸ್ಯೆ ನಿವಾರಣೆಯಾಗುತ್ತದೆ ಹಾಗೇನೇ ನಾಲ್ಕನೆಯ ಒಂದು ಲಾಭವೆಂದರೆ ಅತಿಯಾಗಿ ನೀರು ಭೇದಿ ಸಮಸ್ಯೆ ಇದ್ದರೆ ಓಂಕಾಳನ್ನು ಉಪ್ಪಿನ ಜೊತೆ ನುಂಗಿ ನೀರನ್ನು ಕುಡಿದರೆ ತಕ್ಷಣ ಭೇದಿ ನಿಲ್ಲುತ್ತದೆ ಹಾಗೂ ಐದನೆಯ ಉಪಯೋಗ ಎಂದರೆ ಮಹಿಳೆಯರಲ್ಲಿ

ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಹೆಚ್ಚಾಗಿದ್ದರೆ ಓಂಕಾಳಿನ ಪುಡಿಯನ್ನು ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಬಿಸಿಹಾಲಲ್ಲಿ ಬೆರಸಿ ಸೇವಿಸಬೇಕು ಹೀಗೆ ಸೇವಿಸುವುದರಿಂದ ಮಹಿಳೆಯತಿಗೆ ಕಾಡುವ ಒಂದು ಸಮಸ್ಯೆ ನಿವಾರಣೆಯಾಗುತ್ತದೆ. ಹೀಗೆ ಓಂಕಾಳು ಅಡುಗೆಗೆ ರುಚಿ ಕೊಡುವುದರ ಜೊತೆಗೆ ಅನೇಕ ಔಷಧಿ ಗುಣಗಳನ್ನು ಸಹ ಹೊಂದಿದೆ ಓಂಕಾಳನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರ ಕೂಡ ಕಡಿಮೆಯಾಗುತ್ತದೆ. ಈ ಒಂದು ಉಪಯುಕ್ತವಾದ ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.