ಇನ್ಸ್ ಸ್ಟಂಟ್ ನೂಡಲ್ಸ್ ನಿಂದ ಆಗುವ ದುಷ್ಪರಿಣಾಮಗಳು. ಚಿಕ್ಕ ವಯಸ್ಸಿನಿಂದಲೂ ನಮ್ಮ ಜನರೇಶನ್ ಇನ್ಸ್ಟಂಟ್ ನ ನೂಡಲ್ಸ್ ತಿಂದು ಬೆಳೆದಿದ್ದೇವೆ ಆದರೆ ಬಹುತೇಕ ನೂಡಲ್ಸ್ ಮೈದಾ ಹಿಟ್ಟಿನಿಂದ ತಯಾರು ಮಾಡುತ್ತಾರೆ ಇದನ್ನು ತಿಂದರೆ ಕಣ್ಣು ಮತ್ತು ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ ಒಂದಿಷ್ಟು ಹಸಿವಾದರೆ ಎರಡು ನಿಮಿಷದಲ್ಲಿ ನೀಡಲಾಗುತ್ತದೆ ಈ ನೂಡಲ್ಸನ್ನು. ಕಡಿಮೆ ಸಮಯ ಹಾಗೂ ತುಂಬಾ ಸುಲಭದಲ್ಲಿ ತಯಾರಾಗುವ ಇನ್ಸ್ ಸ್ಟಂಟ್ ನೂಡಲ್ಸ್ ಬಗ್ಗೆ ತಿಳಿದುಕೊಂಡ ಬಳಿಕ ಖಂಡಿತವಾಗಿಯೂ ನೀವು ಬೆಚ್ಚಿ ಬೀಳುತ್ತೀರಿ ಇದಕ್ಕೆ ಬೇರೆ ಏನಾದರೂ ಆರೋಗ್ಯಕರ ಮಾರ್ಗೋಪಾಯ ಇದೆಯಾ ಎಂದು ಹುಡುಕಲು ಪ್ರಾರಂಭ ಮಾಡುತ್ತೀರಿ ಸ್ನೇಹಿತರೆ ನೂಡಲ್ಸ್ ಇತರೆ ಇನ್ನಿತರ ಇನ್ಸ್ ಸ್ಟಂಟ್
ಸ್ಟ್ರೀಟ್ ಫುಡ್ ನಿಂದಾಗಿ ಏಷಿಯಾದಲ್ಲಿ ಸಾವಿರಾರು ಲಕ್ಷಾಂತರ ಮಕ್ಕಳು ರೋಗಗ್ರಸ್ತರಾಗುತ್ತಿದ್ದಾರೆ ಚಿಕ್ಕವಯಸ್ಸಿನಲ್ಲೇ ಒಬೆಸಿಟಿ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಗತ್ಯ ಪೋಷಕಾಂಶಗಳಿಂದ ವಂಚಿತ ರಾಗುತ್ತಿದ್ದಾರೆ ಇಷ್ಟೆಲ್ಲಾ ತಿಳಿದುಕೂಡ ಟೈಂ ಹಣ ಮತ್ತು ಮಾಹಿತಿಯ ಕೊರತೆಯಿಂದಾಗಿ ಕೋಟ್ಯಾಂತರ ಪೋಷಕರು ತಮ್ಮ ಮಕ್ಕಳಿಗೆ ಗಡಿಬಿಡಿಯಲ್ಲಿ ನೂಡಲ್ಸ್ ತಿನ್ನಿಸಿ ಕೆಲಸಕ್ಕೆ ಹೋಗುತ್ತಿದ್ದಾರೆ ಅಪ್ಪ ಅಮ್ಮ ಇಬ್ಬರೂ ಕೆಲಸಮಾಡುವ ಮನೆಯಲ್ಲಿ ಮಕ್ಕಳಿಗೆ ನೂಡಲ್ಸೇ ಪರಮಾನ್ನ ಗ್ಲೋಬಲ್ ಹ್ಯಾಂಗರ್ ಇಂಡೆಕ್ಸ್ ನಲ್ಲಿ ಭಾರತಕ್ಕೆ 102 ನೇ ಸ್ಥಾನ ಸಿಕ್ಕಿದೆ ಇದು ಆತಂಕಕಾರಿ ಇನ್ನೂ ಆತಂಕಕಾರಿ ವಿಷಯವೆಂದರೆ ಭಾರತದಲ್ಲಿ ಮಕ್ಕಳ ಆಹಾರ ಕ್ರಮದಲ್ಲಿ ಗಂಭೀರ ಸ್ವರೂಪದ ಬದಲಾವಣೆ ಆಗುತ್ತಿದೆ ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಮಕ್ಕಳಿಗೆ ಪರಂಪರಾಗತವಾಗಿ ಬಂದ ಪದ್ದತಿಯಂತೆ ಮನೆಯಲ್ಲಿ ವಿಧವಿಧವಾದ ಪೌಷ್ಟಿಕಾಂಶದ ಆಹಾರವನ್ನು ತಯಾರಿಸಿ ಮಾಡಿ ಕೊಡಲಾಗುತ್ತಿತ್ತು
ಭಾರತೀಯ ಪರಂಪರೆಯಲ್ಲಿ ಆಯುರ್ವೇದ ಮುತ್ತಜ್ಜಿ ಇಂದ ಅಜ್ಜಿಗೆ ಅಜ್ಜಿಯಿಂದ ಮಗಳಿಗೆ ಬಂದಂತಹ ಜ್ಞಾನದಿಂದ ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಏನು ಕೊಡಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿರುತ್ತಿತ್ತು ಆದರೆ ಇಂದಿನ ನ್ಯಾನೋ ಫ್ಯಾಮಿಲಿ ಗಳಿಂದಾಗಿ ಮಕ್ಕಳು ಅತ್ಯಂತ ದುರ್ಬಲರಾಗಿ ಬೆಳವಣಿಗೆ ಕಾಣುತ್ತಿದ್ದಾರೆ ದುರ್ಬಲ ಮಾಂಸಖಂಡಗಳು ವೀಕ್ ಮೂಳೆಗಳು ಈಗಿನ ಜನರೇಷನ್ ನನ್ನ ಬೆಂಡ್ ಮಾಡುತ್ತಿವೆ ಜಂಕ್ ಫುಡ್ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತು ಆದರೂ ನಾವು ಚೀಪ್ ಅಂಡ್ ಫಾಸ್ಟಾಗಿ ರೆಡಿಯಾಗುವ ಈ ತಿಂಡಿ-ತಿನಿಸುಗಳ ಮೋಹವನ್ನು ಬಿಡುವುದೇ ಇಲ್ಲ ಕಷ್ಟ ಪಡುವುದು ಬೇಡ ಕಡಿಮೆ ದುಡ್ಡಲ್ಲಿ ಎರಡು ನಿಮಿಷದಲ್ಲಿ ರೆಡಿಯಾಗುತ್ತೆ ಹೊಟ್ಟೆ ಕೂಡ ತುಂಬುತ್ತದೆ ಅಷ್ಟು ಸಾಕು ಅನ್ನುವುದು ಮೆಂಟಾಲಿಟಿ ಆಗಿಬಿಟ್ಟಿದೆ ಚಿಕ್ಕ ಮಕ್ಕಳ ಜೊತೆ ಬ್ಯಾಚುಲರ್ ಕೂಡ ಇನ್ಸ್ ಸ್ಟಂಟ್ ನೂಡಲ್ಸ್ ಹೆಚ್ಚೆಚ್ಚು ಬಳಸುತ್ತಿದ್ದಾರೆ ಇನ್ಸ್ ಸ್ಟಂಟ್ ನೂಡಲ್ಸ್ ಇಲ್ಲಾಂದ್ರೆ ಜೀವನವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ
ಆದರೆ ಅವರಿಗೆ ಗೊತ್ತಿಲ್ಲ ಇನ್ಸ್ ಸ್ಟಂಟ್ ನೂಡಲ್ಸ್ ಎಷ್ಟು ಡೇಂಜರ್ ಅಂತ ಅತಿ ಹೆಚ್ಚು ತಿನ್ನುವ ಏಷ್ಯಾ ರಾಷ್ಟ್ರದ ಮಕ್ಕಳಲ್ಲಿ ಹಲವು ರೀತಿಯ ಕಾಯಿಲೆಗಳಿಗೆ ಇನ್ಸ್ ಸ್ಟಂಟ್ ನೋಡಲ್ ಕಾರಣವಾಗುತ್ತಿದೆ ಕೆಲ ಮಕ್ಕಳು ವಿಪರೀತ ಸಣ್ಣ ಆದರೆ ಇನ್ನೂ ಕೆಲ ಮಕ್ಕಳು ಬೊಜ್ಜು ಬಜ್ಜು ಆಗುತ್ತಿದ್ದಾರೆ ಇನ್ಸ್ ಸ್ಟಂಟ್ ನೂಡಲ್ಸ್ ನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಮಿನರಲ್ಸ್ ಗಳು ಇರುವುದಿಲ್ಲ ಹೀಗಾಗಿ ಇದನ್ನು ತಿಂದು ಹೊಟ್ಟೆ ತುಂಬಿಸಿ ಕೊಳ್ಳುವುದರಿಂದ ಮಾಲ್ ನ್ಯೂಟ್ರಿಷನ್ ಸಮಸ್ಯೆ ಉಂಟಾಗುತ್ತದೆ ಅಥವಾ ಕೃಪೋಷಣೆ ಉಂಟಾಗುವ ಸಾಧ್ಯತೆಗಳಿವೆ ಯುನಿಸೆಫ್ ವರದಿಯ ಪ್ರಕಾರ ಹಸಿರು ತರಕಾರಿ ಸೊಪ್ಪು ಮೊಟ್ಟೆ ಮಾಂಸದಂತಹ ಪೌಷ್ಟಿಕ ಆಹಾರ ಕಡಿಮೆಯಾಗುತ್ತಿದೆ ನೂಡಲ್ಸ್ ಪಿಜ್ಜಾ ಬರ್ಗರ್ ನಂತಹ ಜಂಕ್ ಫುಡ್ ಗಳು ಜಾಸ್ತಿಯಾಗುತ್ತಿವೆ ಗ್ರಾಮೀಣ ಪ್ರದೇಶದ ಜನ ಕೆಲಸ ಹುಡುಕಿಕೊಂಡು ನಗರಗಳಿಗೆ ಬರುತ್ತಿದ್ದಾರೆ ಇನ್ಸ್ ಸ್ಟಂಟ್ ನೋಡಲ್ಸ್ ಸ್ಟ್ರೀಟ್ ಫುಡ್ ತಿನ್ನುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತ ಐದನೇ ಸ್ಥಾನವನ್ನು ಪಡೆದುಕೊಂಡಿದೆ
ಮೊದಲ ಸ್ಥಾನದಲ್ಲಿ ಚೀನಾ ಎರಡನೇ ಸ್ಥಾನದಲ್ಲಿ ಇಂಡೋನೇಷಿಯಾ ಮೂರನೇ ಸ್ಥಾನದಲ್ಲಿ ಜಪಾನ್ ನಾಲ್ಕನೇ ಸ್ಥಾನದಲ್ಲಿ ವಿಯೆಟ್ನಾಮ್ ಹಾಗೂ ಐದನೇ ಸ್ಥಾನದಲ್ಲಿ ಭಾರತ ನಮ್ಮ ದೇಶದ ಸಾಂಪ್ರದಾಯಿಕ ಪೌಷ್ಟಿಕ ಆಹಾರಗಳಾದ ದೋಸೆ ಇಡ್ಲಿ ಪುಳಿಯೋಗರೆ ಉಪ್ಪಿಟ್ಟು ಪಲಾವ್ ಹೀಗೆ ಹಲವಾರು ತಿಂಡಿಗಳನ್ನು ಬಿಟ್ಟು ನಾವು ಕಿತ್ತೋಗಿರೋ ಚೀನಿಯರ ನೂಡಲ್ಸ್ ಅನ್ನು ಯಾವ ರೀತಿ ನುಂಗಿ ಸ್ವಾಹ ಮಾಡುತ್ತಿದ್ದೇವೆ ನೋಡಿ ಯಾವ ಮಟ್ಟಿಗೆ ಎಂದರೆ 2015 ರಲ್ಲಿ ದೊಡ್ಡ ಕಂಪನಿಯೊಂದರ ಇನ್ಸ್ ಸ್ಟಂಟ್ ನ್ಯೂಡಲ್ಸ್ ನ್ನು ಅದರಲ್ಲಿ ಲೆಡ್ ಇದೆ ಎಂದು ಬ್ಯಾನ್ ಮಾಡಲಾಗಿತ್ತು ಆದರೂ ಒಂದೇ ವರ್ಷದ ಒಳಗೆ ಮತ್ತೆ ಕಂಪನಿ ಮಾರುಕಟ್ಟೆಗೆ ಬಂತು ಈಗ ಅದರ ಲಾಭ ಕಡಿಮೆಯಾಗುವ ಬದಲಾಗಿ 6 ಪರ್ಸೆಂಟ್ ಜಾಸ್ತಿನೇ ಆಗಿದೆ ಅಂದರೆ ಲೆಕ್ಕ ಹಾಕಿ ನ್ಯೂಡಲ್ಸ್
ಚಟ ಯಾವ ರೀತಿ ಭಾರತೀಯರಿಗೆ ಹತ್ತಿಕೊಂಡಿದೆ ಎಂದು ಲೆಡ್ ಇದ್ದರೇನು ಯಾವ ಅದೃಷ್ಯ ಅಂಶ ಇದ್ದರೇನು ಭಾರತೀಯರಿಗೆ ಮಾತ್ರ ಆ ವಿಚಿತ್ರ ವಾಸನೆಯ ನ್ಯೂಡಲ್ಸ್ ಬೇಕೇ ಬೇಕು ಭಾರತೀಯರು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಬೇಕು ಮಕ್ಕಳ ಮತ್ತು ನಿಮ್ಮ ಹೊಟ್ಟೆ ತುಂಬಿಸಿಕೊಳ್ಳುವುದು ಮುಖ್ಯವಲ್ಲ ಬದಲಾಗಿ ಪೌಷ್ಟಿಕಾಂಶ ತುಂಬಿದ ಆಹಾರದಿಂದ ಹೊಟ್ಟೆ ತುಂಬಿಸಿಕೊಳ್ಳುವುದು ಮುಖ್ಯ ಇಂತಹ ಮಾಹಿತಿಯ ಮೂಲಕ ನಾವು ದೇಸಿ ಆಹಾರವನ್ನೇ ಉಪಯೋಗಿಸಿ ದೇಸಿ ಆಹಾರವನ್ನೇ ತಿನ್ನಿ ಎಂದು ತಿಳಿಸಲು ಇಚ್ಚಿಸುತ್ತೇವೆ. ಆತ್ಮೀಯರೇ ಈ ಮಾಹಿತಿ ನಿಮಗೆ ಸರಿ ಎನಿಸಿದರೆ ಹಂಚಿಕೊಳ್ಳ ಬಹುದು.