ಅಂದದ ತುಟಿಗಳು ಕೂಡ ನಮ್ಮ ಸೌಂದರ್ಯದಲ್ಲಿ ಒಂದು ಪ್ರಮುಖವಾದ ಭಾಗ ಅದಕ್ಕೆ ನಾವು ಹೆಚ್ಚಿನ ಆಧ್ಯತೆ ನೀಡಬೇಕಾಗುತ್ತದೆ ತುಟಿ ಒಣಗಿ ಹೊಳಪು ಕಳೆದುಕೊಂಡರೆ ಮುಖ ಎಷ್ಟೇ ಆಕರ್ಷಣೀಯ ಆಗಿದ್ದರೂ ಏನೋ ಒಂದು ಕಳೆದುಕೊಂಡ ರೀತಿ ಇರುತ್ತದೆ ನಮ್ಮ ತುಟಿಗಳ ಆರೋಗ್ಯ ಅಂದರೆ ಅದಕ್ಕೆ ಹೆಚ್ಚಿನ ರಾಸಾಯನಿಕಗಳನ್ನು ಬಳಸಬಾರದು. ತುಟಿಗೆ ನಾವು ಬಳಸುವ ಲಿಪ್ಸ್ಟಿಕ್ ಆಗಿರಬಹುದು ಲಿಪ್ ಗ್ಲೋಸ್ ಮುಂತಾದ ರಾಸಾಯನಿಕ ವಸ್ತುಗಳು ಕಳಪೆ ಮಟ್ಟದ್ದು ಆಗಿರುತ್ತದೆ ನಮ್ಮ ತುಟಿ ಏನೋ ಒಂದು ಕಳೆದುಕೊಂಡಂತೆ ಒಂದೊಂದು ದಿನ ನಮ್ಮ ತುಟಿಗೆ ಹೆಚ್ಚಿನ ಪ್ರಭಾವ ಬೀರುತ್ತದೆ ಈ ರಾಸಾಯನಿಕಗಳು. ನಾವು ಧೂಮಪಾನ ಮತ್ತು ಮಧ್ಯಪಾನ ಹೆಚ್ಚು ಮಾಡುವುದರಿಂದ ತುಟಿ ಕಪ್ಪು ಬಣ್ಣಕ್ಕೆ ತಿರುಗುವುದು ಸಹಜವಾಗಿ ಬಿಟ್ಟಿದೆ ಕಪ್ಪು ತುಟಿಯ ಬದಲು ಕೆಂಪು ತುಟಿ ನಮ್ಮದಾಗಬೇಕು ಎಂದರೆ ನಾವು ಏನು ಮಾಡಬೇಕು ನೈಸರ್ಗಿಕವಾಗಿ ಕೆಲವು ಸಲಹೆ ಅನುಸರಿಸುವ ಮೂಲಕ ತುಟಿಯ ಅಂದವನ್ನು ಇನ್ನಷ್ಟು ನಾವು ಸೊಗಸಾಗಿ ಇರುವುದರ ಮೂಲಕ
ತುಟಿಯ ಸೌಂದರ್ಯ ವೃದ್ಧಿಸಿ ಕೊಳ್ಳಬಹುದು. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಒಂದು ಬಟ್ಟಲಲ್ಲಿ ದಾಳಿಂಬೆ ಬೀಜಗಳನ್ನು ಹಾಕಿಕೊಂಡು ಅದನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು ನಂತರ ಹಾಲಿನ ಕೆನೆಯೊಂದಿಗೆ ಬೆರೆಸಿ ನಾವು ತುಟಿಗಳಿಗೆ ಹಚ್ಚಬೇಕು ಸ್ವಲ್ಪ ಸಮಯದ ನಂತರ ಅದನ್ನು ತೆಗೆಯಬೇಕು ಇದರ ಫಲಿತಾಂಶ ನಮಗೆ ಬೇಗ ತಿಳಿಯುವುದಿಲ್ಲ ನಿಯಮಿತವಾಗಿ ಹೀಗೆ ಮಾಡುವುದರಿಂದ ನಮ್ಮ ತುಟಿಗಳು ಹೊಳೆಯುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನಮ್ಮ ತುಟಿಗಳ ಮೇಲೆ ಉಜ್ಜುವುದರಿಂದ ತುಟಿಗಳ ಅಂದ ಹೆಚ್ಚಾಗುತ್ತದೆ ಹಾಗಾಗಿ ಕಿತ್ತಳೆ ಹಣ್ಣನ್ನು ಸೇವಿಸುವಾಗ ಇದನ್ನು ಸ್ವಲ್ಪ ನೆನಪಿನಲ್ಲಿ ಇಟ್ಟುಕೊಳ್ಳಿ ಅಲ್ಲದೆ ಕ್ಯಾರೆಟ್ ರಸ ಬಿಟ್ರೂಟ್ ರಸವನ್ನು ತುಟಿಗಳ ಮೇಲೆ ಲೇಪಿಸುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಕಾಣುತ್ತದೆ.
ಸಕ್ಕರೆ ಸ್ಫಟಿಕಗಳು ನಮ್ಮ ತುಟಿಗಳು ಅತ್ಯುತ್ತಮ ಸ್ವಲ್ಪ ಸಕ್ಕರೆಯನ್ನು ಆಲಿವ್ ಎಣ್ಣೆ ಅಥವಾ ಹಾಲಿನ ಕೆನೆಯೊಂದಿಗೆ ಬೆರೆಸಬೇಕು ಈ ಮಿಶ್ರಣವನ್ನು ನಮ್ಮ ತುಟಿಗಳ ಮೇಲೆ ಹಚ್ಚಿಕೊಳ್ಳಬೇಕು ಇದು ನಮ್ಮ ತುಟಿಗಳಲ್ಲಿ ನಿರ್ಜೀವ ತ್ವಜೆಯನ್ನು ನಿವಾರಿಸುತ್ತದೆ ಮತ್ತು ಅದೇ ಸಮಯಕ್ಕೆ ನಮ್ಮ ತುಟಿಗಳು ತೇವ ಆಗುತ್ತದೇ ಈ ಮಿಶ್ರಣವನ್ನು ನಮ್ಮ ತುಟಿಗಳ ಮೇಲೆ ಹಾಗೇ ಸ್ವಲ್ಪ ಕಾಲ ಇರಬೇಕು ಹಾಗೂ ಸ್ವಲ್ಪ ಸಮಯದ ನಂತರ ಅದನ್ನು ತೆಗೆಯಬೇಕು. ಪ್ರತಿ ದಿನ ರಾತ್ರಿ ಮಲಗುವ ಮುಂಚೆ ನಿಂಬೆ ರಸ ಮತ್ತು ಗ್ಲಿಸೇರ್ ಮಿಶ್ರಣವನ್ನು ನಮ್ಮ ತುಟಿಗಳಿಗೆ ಲೇಪಿಸಬೇಕು ಇದನ್ನು ರಾತ್ರಿ ಪೂರ್ತಿ ಹಾಗೆ ಬಿಡಬೇಕು ಮರುದಿನ ಬೆಳಗ್ಗೆ ಅದನ್ನು ತೊಳೆಯಬೇಕು ಇದು ನಮ್ಮ ತುಟಿಗಳಿಗೆ ಹೊಳಪು ನೀಡಲು ಸಹಾಯ ಮಾಡುತ್ತದೆ. ಈ ರೀತಿ ವಾರಕ್ಕೊಮ್ಮೆ ಬಳಸಿದರೆ ಸಾಕು ನೀವು ಹೊಳೆಯುವ ತುಟಿಗಳನ್ನು ನಾವು ಪಡೆಯಬಹುದು. ಇದಿಷ್ಟು ತುಟಿಗಳ ಬಗ್ಗೆ ಚಿಕ್ಕ ಮಾಹಿತಿ.