ಮದ್ವೆ ಆದ ತಕ್ಷಣ ಪ್ರಿಯಾ ಮಾಡಿದ ಕೆಲಸ

ಸುದ್ದಿ ಮನೆ

ಈ ಕಾರಣಕ್ಕೆ ಈ ಹುಡುಗಿ ಮದುವೆ ಆಗಿ 5 ನಿಮಿಷಕ್ಕೆ ತಾಳಿ ಕಿತ್ತು ಹಾಕಿದಳು ಈಕೆ. ಮದುವೆ ಅಂದರೆ ಅದೊಂತರ ಪವಿತ್ರ ಕಾರ್ಯ ಅಲ್ಲಿಂದಲೇ ಬದುಕಿಗೆ ಹೊಸ ಅರ್ಥ ಸಿಗುವುದು ಆದರೆ ಈ ಮದುವೆ ಅನ್ನುವುದು ಎಡವಟ್ಟಾಗಿ ಬಿಟ್ಟರೆ ಕಥೆ ಗೋವಿಂದಾ ನೇ ಇಲ್ಲಿ ಅಂತದೊಂದು ಒಂದು ಆಗಿದೆ. ಆ ಹುಡುಗಿ ಕಟ್ಟಿಸಿಕೊಂಡ ತಾಳಿಯನ್ನೂ ಐದೇ ನಿಮಿಷದಲ್ಲಿ ಕಿತ್ತು ವರನಿಗೆ ಬಿಸಾಕಿದ್ದಾಳೆ ಏಕೆ ಅಂತ ಹೇಳುತ್ತವೆ ಓದಿ. ಅವಳು ತಮಿಳುನಾಡಿನ ಪ್ರಿಯ ವಯಸ್ಸು 20 ವರ್ಷ ಸುಂದರವಾಗಿ ಇರುವ ಈ ಹುಡುಗಿಗೆ ಮದುವೆ ಆಗಲು ಮನೆಯಲ್ಲಿ ತುಂಬಾ ಒತ್ತಾಯ ಅವಳು ಒಪ್ಪಿಕೊಂಡಳು ಆದರೆ ಒಂದು ಕಂಡೀಷನ್ ಯಾವುದೇ ಕಾರಣಕ್ಕೂ ಮದುವೆ ಆಗುವ ಹುಡುಗ ಕುಡುಕ ಆಗಿರಬಾರದು ಆಗಾಗ ಕುಡಿಯುತ್ತೇನೆ ಸ್ವಲ್ಪ ಕುಡಿಯುತ್ತೇನೆ ಬಿಯರ್ ಮಾತ್ರ ಕುಡಿಯುತ್ತೇನೆ ಎನ್ನುವ ಗಂಡು ಸಹಾ ನಮಗೆ ಬೇಡ ಎಂದು ಅವಳು ಒಂದು ಕಂಡೀಷನ್ ಇಟ್ಟಿದ್ದಳು.

ನೂರಾರು ಹುಡುಗರನ್ನು ನೋಡಿದ್ದು ಆಯಿತು ಯಾವ ಹುಡುಗ ಕೂಡ ಸೆಟ್ ಆಗಲಿಲ್ಲ ಫೈನಲ್ ಆಗಿ ಒಬ್ಬ ಹುಡುಗ ಓಕೆ ಆದ ಅವನೇ ಚಲ್ಲಪಾಂಡಿ ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ನೋಡಲು ಕೂಡ ಚೆನ್ನಾಗಿ ಇದ್ದಾನೆ ಹಾಗಾಗಿ ಖುಷಿಯಾಗಿ ಒಪ್ಪಿಕೊಂಡಳು ಪ್ರಿಯ. ಮದುವೆ ದಿನ ಕೂಡ ಫಿಕ್ಸ್ ಆಯಿತು ಆದರೆ ಮದುವೆ ಮುಹೂರ್ತಕ್ಕೆ ಇನ್ನೇನು 10 ನಿಮಿಷ ಬಾಕಿ ಇದೆ ಎನ್ನುವಾಗ ಹುಡುಗ ಬರುತ್ತಾನೆ ಅದು ಬೆಳಗ್ಗೆ 7 ಗಂಟೆ ಶುಭ ಮುಹೂರ್ತ ಪ್ರಿಯಾಗೆ ಏನೋ ವಾಸನೆ ಬಂದ ಹಾಗೆ ಆಯಿತು ಆದರೂ ಸುಮ್ಮನಾಗುತ್ತಾರೆ ಅವನು ತಾಳಿ ಕಟ್ಟೆ ಬಿಡುತ್ತಾನೆ ಆಗ ಅವಳ ಮೂಗಿಗೆ ಚೆನ್ನಾಗಿ ವಾಸನೆ ಬಡಿದಿತ್ತು ಅವನು ಚೆನ್ನಾಗಿ ಕುಡಿದು ಬಂದಿದ್ದ ಇವಳ ಪಿತ್ತ ನೆತ್ತಿಗೆ ಏರಿತು ಆದರೂ ಮದುವೆ ಆಗು ಹೋಯಿತು. ಮುಂದೆ ಸರಿ ಮಾಡೋಣ ಎಂದುಕೊಂಡು ಸುಮ್ಮನಾದಳು ವರನ ಆಟ ಶುರು ಆಯಿತು.

ಕುಡಿದ ಮತ್ತಲ್ಲಿ ಏನೇನೋ ಮಾತನಾಡಲೂ ಶುರು ಮಾಡುತ್ತಾನೆ ವಧುವಿನ ಜೊತೆಗೆ ಎಲ್ಲರ ಎದುರು ಅಸಹ್ಯವಾಗಿ ವರ್ತಿಸುತ್ತಾನೆ ವಧುವಿನ ಕಡೆಯವರನ್ನು ಬಾಯಿಗೆ ಬಂದ ಹಾಗೆ ಬಯ್ಯುತ್ತಾನೆ ಆಗ ಪ್ರಿಯ ಗೆ ಕೋಪ ಹೆಚ್ಚಾಗಿ ಮುಖ ಮೂತಿ ನೋಡದೆ ಅವನು ಐದು ನಿಮಿಷದ ಹಿಂದೆ ಕಟ್ಟಿದ ತಾಳಿಯನ್ನು ಕಿತ್ತು ಅವನ ಮುಖದ ಮೇಲೆ ಎಸೆದಳು ಅವನು ಪ್ರಿಯ ಮೇಲೆ ಕೈ ಮಾಡಲು ಮುಂದಾದ ತಕ್ಷಣ ಪ್ರಿಯ ತಮ್ಮ ಸ್ನೇಹಿತರನ್ನು ಕರೆದುಕೊಂಡು ಹತ್ತಿರದ ಪೊಲೀಸ್ ಸ್ಟೇಶನ್ ಗೆ ಹೋಗಿ ದಾವೆ ಹೂಡುತ್ತಾಳೆ. ನಮ್ಮಲ್ಲಿ ಕೆಲವು ಜನ ಯುವತಿಯರು ಸಹ ಕುಡಿಯುತ್ತಾರೆ ಕೇಳಿದ್ರೆ ಕಾಲ ಬದಲಾಗಿದೆ ಅಂತಾರೆ ಆದ್ರೆ ಇಂತಹ ಸೂಕ್ಷ್ಮ ಸ್ವಭಾವದ ಹೆಣ್ಣುಮಕ್ಕಳನ್ನ ನಾವು ನೋಡಿ ಇಂತಹ ಕಾಲದಲ್ಲಿ ಸಹ ಹೀಗೂ ಸಹ ಇರ್ತ್ತಾರ ಎಂಬ ಪ್ರಶ್ನೆ ಉದ್ಭವ ಆಗಿದೆ. ಪ್ರಿಯ ಮಾಡಿದ್ದು ಎಷ್ಟೇ ಸರಿ ಎಷ್ಟು ತಪ್ಪು ನಿಮ್ಮ ಅನಿಸಿಕೆ ಮರೆಯದೆ ಕಾಮೆಂಟ್ ಮಾಡಿರಿ.

Leave a Reply

Your email address will not be published. Required fields are marked *