ದೇವರ ಪೂಜೆ ಸಮಯದಲ್ಲಿ ಗಂಟೆ ಬಾರಿಸುವುದು ಈ ಕಾರಣಕ್ಕೆ

ದೇವರು

ದೇವರ ಪೂಜೆ ಸಮಯದಲ್ಲಿ ಗಂಟೆ ಬಾರಿಸುವುದು ಈ ಕಾರಣಕ್ಕೆ. ಸ್ನೇಹಿತರೆ ಈ ಲೇಖನದಲ್ಲಿ ವಿಶೇಷವಾಗಿ ದೇವರಿಗೆ ಪೂಜೆ ಮಾಡುವಾಗ ಗಂಟೆಯನ್ನು ಏಕೆ ಬಾರಿಸಬೇಕು ಇದರ ಹಿಂದೆ ಇರುವ ವೈಜ್ಞಾನಿಕ ಕಾರಣ ಆದರೂ ಏನು ಈ ವಿಷಯ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನಾವು ಪೂಜೆ ಮಾಡುವ ಮುನ್ನ ಗಂಟೆ ಏಕೆ ಬಾರಿಸಬೇಕು ಎಂದರೆ ಎರಡು ಲೋಹಗಳು ಒಂದಕ್ಕೊಂದು ಪರಸ್ಪರ ಡಿಕ್ಕಿ ಹೊಡೆದಾಗ ಶಬ್ಧ ತರಂಗಗಳು ಉಂಟಾಗುತ್ತದೆ ಈ ಶಬ್ಧ ತರಂಗಗಳು ಕಿವಿಯ ಹೊರಗಿನಿಂದ ಮೆದುಳನ್ನು ಸೇರುತ್ತದೆ ಸಾಮಾನ್ಯವಾಗಿ ಗಂಟೆಗಳನ್ನು ಕಂಚು ಪಂಚ ಲೋಹ ಬೆಳ್ಳಿ ಅಥವಾ ಹಿತ್ತಾಳೆ ಯಿಂದ ಮಾಡಿರುತ್ತದೆ. ಹಾಗೆಯೇ ಪೂಜೆ ಮಾಡುವಾಗ ಹೊರಗಿನ ಎಲ್ಲಾ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸಬೇಕು ಕಂಚಿನ ಗಂಟೆಯ ಸದ್ದು ಅಂದರೆ ಗಂಟೆಯ ತರಂಗಗಳ ಶಬ್ಧಗಳು ಕಿವಿಯಲ್ಲಿ ಗುಯ್ ಗುಡುತ್ತ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿಬಿಡುತ್ತದೆ.

ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿ ಇರುತ್ತದೆ ಈ ಸಮಯದಲ್ಲಿ ಮಾಡುವ ಆಲೋಚನೆ ಸಫಲ ಆಗುತ್ತದೆ ಹಾಗೇ ಗಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರಬರುವ ತರಂಗಗಳಿಂದ ಶುದ್ಧ ಆಗುತ್ತದೆ ಪೂಜೆಗೆ ಕಂಚಿನ ಗಂಟೆ ಶ್ರೇಷ್ಟ ಎಂದು ಹೇಳಿದ್ದಾರೆ. ದೇವರಿಗೆ ಗಂಟೆ ಬಾರಿಸುವುದರ ಇನ್ನೊಂದು ಕಾರಣ ಏನು ಅಂದರೆ ದೇವರಿಗೆ ಪೂಜೆ ಮಾಡುವಾಗ ಯಾವುದೇ ರೀತಿಯ ಕೆಟ್ಟ ದೃಷ್ಟಿಗಳು ಕೆಟ್ಟ ಶಕ್ತಿಗಳು ಒಳಗೆ ಪ್ರವೇಶ ಮಾಡಬಾರದು ಎಂಬ ಕಾರಣದಿಂದಾಗಿ ಈ ಗಂಟೆಯನ್ನು ಬಾರಿಸುತ್ತಾರೆ. ಈ ಗಂಟೆಯ ನಾದ ದಿಂದ ದೇವಸ್ಥಾನದ ಒಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ಬಾರದೆ ಜನರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಎಲ್ಲರ ಮನಸ್ಸಿನಲ್ಲಿ ಇರುವ ಗೊಂದಲವೂ ಹೋಗಿ ಮನಸ್ಸಿನ ಚಂಚಲತೆ ದೂರವಾಗುತ್ತದೆ ಒಂದು ರೀತಿಯ ಶಾಂತಿ ಸಿಕ್ಕಿ ಮನಸ್ಸು ಉಲ್ಲಾಸ ಆಗುತ್ತದೆ.

ಈ ಗಂಟೆಯ ನಾಲಿಗೆಯಲ್ಲಿ ಸರಸ್ವತಿಯು ಮುಖದಲ್ಲಿ ಬ್ರಹ್ಮನೂ ಹೊಟ್ಟೆಯಲ್ಲಿ ರುದ್ರನು ದಂಡದಲ್ಲಿ ವಾಸುಕಿಯು ತುದಿಯಲ್ಲಿ ಚಕ್ರವು ಅಧಿ ದೇವತೆಯಾಗಿ ನೆಲಸಿರುತ್ತಾರೆ. ಗಂಟೆಯ ಸರ್ವ ಮಂಗಳ ವಾದ್ಯಗಳ ಪ್ರತೀಕವಾಗಿದೆ. ಘಂಟೆಯನ್ನು ಬಾರಿಸಿದರೆ ಓಂಕಾರ ನಾದ ಕೇಳಿ ಬರುತ್ತದೆ ಈ ಗಂಟೆ ನಾದ ಮಾನಸಿಕ ಚಿಂತೆಯನ್ನು ದೂರ ಮಾಡಿ ಮನಸ್ಸು ದೇವರ ಮೇಲೆ ಏಕಾಗ್ರತೆ ಬರುವಂತೆ ಮಾಡುತ್ತದೆ. ಈ ನಾದ ಭಕ್ತರ ಕಿವಿಯಲ್ಲಿ ಪ್ರಣವ ನಾದವಾಗಿ ಕೇಳಿಸುತ್ತದೆ. ದೇಹವನ್ನು ವಿಗ್ರಹದ ಒಳಗೆ ಆಹ್ವಾನಿಸಲು e ಗಂಟೆಯನ್ನು ಬಾರಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಮನೆಯಲ್ಲಿ ಪೂಜೆ ಮಾಡುವಾಗ ಗಂಟೆಯನ್ನು ಹೋಡೆದರೆ ದುಷ್ಟ ಶಕ್ತಿಗಳು ನಮ್ಮ ಹತ್ತಿರ ಬರುವುದಿಲ್ಲ ದೇವಸ್ಥಾನದಿಂದ ಹಿಂತಿರುಗಿ ಬರುವಾಗ ಗಂಟೆಯನ್ನು ಹೊಡೆಯುವುದು ಅಶುಭದ ಸಂಕೇತ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಆಪ್ತರಿಗೆ ಶೇರ್ ಮಾಡಿರಿ.

Leave a Reply

Your email address will not be published.