ಸ್ತ್ರೀಯರಿಗೆ ಸಂಜೀವಿನಿ ಈ ಬಾಳೆಹೂವು

ಮನೆ ಮದ್ದು

ನಾವು ಹಿತ್ತಲಲ್ಲಿ ಬೆಳೆಯುವ ಪ್ರತಿಯೊಂದು ಸಸ್ಯ ಗಿಡ ಮರಗಳು ಕೂಡ ಒಂದಲ್ಲ ಒಂದು ಔಷಧಿ ರೂಪದಲ್ಲಿ ನಮಗೆ ಉಪಯೋಗಕ್ಕೆ ಬರುತ್ತದೆ ಆದರೆ ಅದು ನಮಗೆ ತಿಳಿದಿರುವುದಿಲ್ಲ ಹಾಗೇನೇ ಈ ಬಾಳೆಹೂವು ಕೂಡ ಒಂದು. ವರ್ಷದ ಎಲ್ಲ ಕಾಲದಲ್ಲೂ ಹೂ ಬಿಟ್ಟು ಹಣ್ಣು ಕೊಡುವ ಗಿಡವೆಂದರೆ ಅದು ಬಾಳೆಗಿಡ ಈ ಬಾಳೆಗಿಡ ತುದಿಯಿಂದ ಹಿಡಿದು ಅದರ ಬುಡದ ವರೆಗೂ ಉಪಯೋಗಕ್ಕೆ ಬರುವಂತಹದ್ದು ಆಗಿದೆ ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು ಬಾಳೆಹೂವು ಬಾಳೆಎಲೆ ಕೂಡ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಬಾಳೆಹೂವು ಎ ಈ ಸಿ ಜೀವಸತ್ವವಷ್ಟೇ ಅಲ್ಲದೆ ಪೊಟ್ಯಾಶಿಯಂ ಫೈಬರ್ ಕ್ಯಾಲ್ಸಿಯಂ ಮೆಗ್ನೇಶಿಯಂ ಮುಂತಾದ ಪೋಷಕಾಂಶಗಳಿಂದಲೂ ಶ್ರೀಮಂತವಾಗಿದೆ.

ಇನ್ನು ಒಂದು ಸಂಗತಿಯನ್ನು ಹೇಳಬೇಕೆಂದರೆ ಸ್ತ್ರೀಯರ ಪಾಲಿಗಂತು ಈ ಬಾಳೆಹೂವು ಸಂಜೀವಿನಿಯೇ ಎಂದು ಹೇಳಬಹುದು ಆದರೆ ಎಷ್ಟೋ ಮಂದಿಗೆ ಬಾಳೆಹೂವಿನ ಔಷಧಿಯ ಗುಣಗಳು ಏನು ಎಂಬುದೇ ತಿಳಿದಿಲ್ಲ ಹಾಗಾದರೆ ಈ ಬಾಳೆಹೂವಿನ ಒಂದು ಉಪಯೋಗ ಏನು ಎಂಬುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಬಾಳೆಹೂವಿನ ರಸ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭಗಳಿವೆ ಎನ್ನುವುದು ನಿಮಗೆ ಗೊತ್ತಾ ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೇನೇ ಬಾಳೆಹೂವಿನ ರಸವನ್ನು ಸೇವಿಸುವುದರಿಂದ ಗರ್ಭಾಶಯಕ್ಕೆ ಶಕ್ತಿ ಕೊಡುತ್ತದೆ ಜೊತೆಗೆ ಸ್ತನ್ಯಪಾನ ಮಾಡಿಸುವ ತಾಯಂದಿರಲ್ಲಿ ಹಾಲನ್ನು ಹೆಚ್ಚಿಸುತ್ತದೆ.

ಹಾಗೇನೇ ಅಮಶಂಕೆ ಬಿಳಿಸೆರಗಿನ ಸಮಸ್ಯೆ ಇದ್ದವರು ಬಾಳೆಹೂವಿನ ರಸಕ್ಕೆ ಮಜ್ಜಿಗೆ ಬೆರಸಿ ಕುಡಿದರೆ ತುಂಬಾ ಒಳ್ಳೆಯದು. ಹೀಗೆ ಈ ಬಾಳೆಹೂವು ಒಂದು ರೀತಿಯಲ್ಲಿ ತನ್ನ ಉಪಯೋಗವನ್ನು ನೀಡಿದರೆ ಬಾಳೆಹಣ್ಣು ಸಹ ನಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ. ಬಾಳೆಹಣ್ಣನ್ನು ದೇವರಿಗೆ ನೈವ್ಯದ್ಯವಾಗಿ ಬಳಸುತ್ತೇವೆ ನಂತರ ಅದನ್ನು ದೇವರ ಪ್ರಸಾದವೆಂದು ನಾವು ಸಹ ಸೇವಿಸುತ್ತೇವೆ ಹಾಗೇನೇ ಈ ಬಾಳೆಹಣ್ಣನ್ನು ಪ್ರತಿದಿನ ಒಂದರಂತೆ ತಿನ್ನುತ್ತಾ ಬಂದರೆ ಮಲಬದ್ಧತೆ ಸಮಸ್ಯೆಯನ್ನು ಕೂಡ ಇದು ಹೋಗಲಾಡಿಸುತ್ತದೆ. ಹಾಗೇನೇ ಬಾಳೆಎಲೆ ಈ ಬಾಳೆ ಎಲೆ ಕೂಡ ತುಂಬಾ ಉಪಯುಕ್ತವಾಗಿದೆ ಈಗಂತೂ ಹೋಟೆಲ್ ಗಳಲ್ಲಿ ಹೊರಗಡೆ ಸಣ್ಣ ಪುಟ್ಟ ತಿನಿಸಿ ಅಂಗಡಿಗಳಲ್ಲಿ ಈ ಬಾಳೆ ಎಲೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಇದರಲ್ಲಿ ಊಟ ಮಾಡುವುದರಿಂದ ಮನಸ್ಸಿಗೂ ಸಹ ಶಾಂತಿ ಸಿಗುತ್ತದೆ ಹಾಗೇನೇ ಬಾಳೆ ಎಲೆಯಲ್ಲಿ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಸಹ ತುಂಬಾನೇ ಉಪಯುಕ್ತವಾಗಿದೆ.

ಇನ್ನು ಬಾಳೆದಿಂಡು ಈ ಬಾಳೆದಿಂಡನ್ನು ಸಹ ಒಂದು ಆಹಾರ ಪಧಾರ್ಥವಾಗಿ ಬಳಸುತ್ತಾರೆ ಈ ಬಾಳೆದಿಂಡನ್ನು ಪ್ರತಿದಿನ ಊಟದಲ್ಲಿ ಬಳಸುವುದರಿಂದ ಮೂತ್ರಪಿಂಡದಲ್ಲಿರುವ ಕಲ್ಲನ್ನು ಕರಗಿಸಲು ಸಹಕರಿಸುತ್ತದೆ ಜೊತೆಗೆ ಈ ಬಾಳೆದಿಂಡಿನ ರಸವನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ಕೂಡ ಮೂತ್ರಪಿಂಡದ ಕಲ್ಲು ಕರಗುತ್ತದೆ. ಹೀಗೆ ಬಾಳೆಗಿಡವನ್ನು ಕೂಡ ಹಬ್ಬ ಹರಿದಿನಗಳಲ್ಲಿ ದೇವರ ಮುಂದೆ ಅಲಂಕಾರಕ್ಕಾಗಿ ಬಾಳೆ ಗಿಡವನ್ನು ಬಳಸುತ್ತಾರೆ ಒಟ್ಟಾರೆ ಹೇಳಬೇಕೆಂದರೆ ಕೇವಲ ಬಾಳೆಹೂವು ಅಷ್ಟೇ ಅಲ್ಲದೆ ಇಡೀ ಬಾಳೆ ಗಿಡದ ಪ್ರತಿಯೊಂದು ಭಾಗವು ಕೂಡ ತುಂಬಾ ಉಪಯುಕ್ತವಾಗಿದೆ ಎಂದು ಹೇಳಬಹುದು. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಕೂಡ ಇದರ ಒಂದು ಉಪಯೋಗವನ್ನು ತಿಳಿಸಿ

Leave a Reply

Your email address will not be published.