ಲವಂಗ ವಿವಿಧ ಔಷಧಿ ಗುಣಗಳನ್ನು ಕೂಡ ಹೊಂದಿದೆ

ಮನೆ ಮದ್ದು

ಅಡುಗೆಗೆ ಬಳಸುವ ಲವಂಗ ವಿವಿಧ ಔಷಧಿ ಗುಣಗಳನ್ನು ಕೂಡ ಹೊಂದಿದೆ. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಮಸಾಲಾ ಪಧಾರ್ಥಗಳೂ ಬಹು ಮುಖ್ಯ ಸ್ಥಾನವನ್ನು ಹೊಂದಿವೆ ಅವುಗಳಲ್ಲಿ ಏಲಕ್ಕಿ ಲವಂಗ ಚೆಕ್ಕೆ ಮಗ್ಗೆ ಹೀಗೆ ಹಲವಾರು ಸಾಮಗ್ರಿಗಳು ಇವೆ ಇವುಗಳು ಕೇವಲ ಅಡುಗೆಗೆ ರುಚಿ ಕೊಡುವುದು ಅಷ್ಟೇ ಅಲ್ಲದೆ ತಮ್ಮಲ್ಲಿ ಹಲವಾರು ಔಷಧಿ ಗುಣಗಳನ್ನು ಕೂಡ ಹೊಂದಿವೆ ಹಾಗಾದರೆ ಈ ಲವಂಗ ತನ್ನಲ್ಲಿ ಯಾವ ಔಷಧಿ ಗುಣಗಳನ್ನು ಹೊಂದಿದೆ ಎನ್ನುವುದನ್ನು ಈಗ ತಿಳಿಯೋಣ ಬನ್ನಿ. ಲವಂಗವನ್ನು ಅಡುಗೆಗೆ ಬಳಸುತ್ತಾರೆ ಎನ್ನುವುದನ್ನು ಬಿಟ್ಟರೆ ಹಲ್ಲುನೋವಿಗೆ ಲವಂಗ ಬಳಸುತ್ತೇವೆ ಆದರೆ ಈ ಲವಂಗವನ್ನು ಬಳಸಿ ವಿವಿಧ ಸಮಸ್ಯೆಗಳನ್ನು ಹೇಗೆ ನಿವಾರಿಸಿ ಕೊಳ್ಳಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಅತಿಯಾಗಿ ಸುಸ್ತಾದಾಗ ನಮಗೆ ಸೋಮಾರಿತನ ಉಂಟಾಗುತ್ತದೆ ಈ ಸೋಮಾರಿತನ ನಮ್ಮ ಆರೋಗ್ಯದ ಮೇಲೆ ಹಾನಿ ಉಂಟು ಮಾಡುತ್ತದೆ ಈ ಸಮಯದಲ್ಲಿ ನಾವು ಲವಂಗದ ಎಣ್ಣೆಯನ್ನು ಆರೋಗ್ಯಕರ ಪಾನಿಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸುವುದರಿಂದ ನಮಗೆ ಸುಸ್ತು ದೂರವಾಗುತ್ತದೆ ನಮಲ್ಲಿ ಚೈತನ್ಯ ಮೂಡುತ್ತದೆ ಲವಂಗದ ಎಣ್ಣೆಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಮನೆಯ ತುಂಬಾ ಚಿಮುಕಿಸುವುದರಿಂದ ಮನೆ ಸುಗಂಧ ಬರಿತವಾಗಿ ಇರುತ್ತದೆ ಮಳೆಗಾಲದಲ್ಲಿ ಬಟ್ಟೆಗಳು ಹಸಿವಾಸನೆ ಹೋಗದೆ ಇದ್ದಾಗ ಈ ದುರ್ಗಂಧ ದೂರವಾಗುತ್ತದೆ ಅಡುಗೆ ಮನೆಯಲ್ಲಿ ಯಾವುದಾದರೂ ಕೆಟ್ಟ ವಾಸನೆ ತುಂಬಿದ್ದರೆ ನೀರಿನಲ್ಲಿ ಲವಂಗ ಹಾಕಿ ಕುದಿಸಿ ನೀರು ಆವಿಯಾದಂತೆ ಲವಂಗದ ವಾಸನೆ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.

ಕಾಫಿ ಮತ್ತು ಚಹಾ ಬೇರೆ ರೀತಿಯ ಪಾನಿಯಗಳನ್ನು ಪ್ಲಾಸ್ಕನಲ್ಲಿ ಇಟ್ಟು ಸೇವಿಸುತ್ತೇವೆ ನಾವು ಎಷ್ಟೇ ತೊಳೆದರು ಅದರಲ್ಲಿರುವ ವಾಸನೆ ಹೋಗುವುದಿಲ್ಲ ಆಗ ಆ ಸಮಯದಲ್ಲಿ ಅದರ ಒಳಗೆ ಒಂದು ಲವಂಗ ಹಾಕಿ ಮುಚ್ಚಿಡಬೇಕು ಬೇಕಾದಾಗ ಲವಂಗ ತಗೆದು ಅದನ್ನು ನಾವು ಬಳಸಬಹುದು ಇದರಿಂದ ಪ್ಲಾಸ್ಕನ ಒಳಗಿನ ದುರ್ಗಂಧ ದೂರವಾಗುತ್ತದೆ ಚರ್ಮಕ್ಕೆ ಸ್ವಲ್ಪ ಲವಂಗದ ಎಣ್ಣೆಯನ್ನು ಲೇಪಿಸುವುದರಿಂದ ಚರ್ಮ ಕಾಂತಿಯುತವಾಗುತ್ತದೆ ಸ್ವಲ್ಪ ಹಚ್ಚಬೇಕು ಹೆಚ್ಚು ಲವಂಗದ ಎಣ್ಣೆಯನ್ನು ಹಚ್ಚಿದರೆ ಹಾನಿಯಾಗುತ್ತದೆ ನಿತ್ಯ ಲವಂಗ ಸೇವಿಸುವುದರಿಂದ ರಕ್ತದೊತ್ತಡವನ್ನು ನಾವು ನಿಯಂತ್ರಿಸಿಕೊಳ್ಳಬಹುದು ರಕ್ತ ಸಂಚಲನೆಗೆ ಈ ಲವಂಗ ನಮ್ಮ ದೇಹದಲ್ಲಿ ಸಹಕರಿಸುತ್ತದೆ.

ಒಂದು ಹನಿ ಲವಂಗದ ಎಣ್ಣೆಯನ್ನು ದಾಲ್ಚಿನ್ನಿ ತೈಲ ಮತ್ತು ನೀರಿನೊಂದಿಗೆ ಮಿಶ್ರಣ ಮಾಡಿ ಮನೆಯಲ್ಲಿ ಇರುವೆಗಳು ಬಂದಾಗ ಸಿಂಪಡಿಸಬೇಕು ಇದರಿಂದ ಇರುವೆಗಳ ಕಾಟದಿಂದ ಮುಕ್ತಿ ಪಡೆಯಬಹುದು ಅರ್ಧ ಲೋಟ ಲವಂಗವನ್ನು ಒಂದು ಲೋಟ ಆಲಿವ್ ಎಣ್ಣೆಯೊಂದಿಗೆ ಸೇರಿಸಿ 24 ಗಂಟೆ ಹಾಗೆ ಬಿಟ್ಟರೆ ಲವಂಗದ ಎಣ್ಣೆ ತಯಾರಾಗುತ್ತದೆ ಅದನ್ನು ಈಗ ಹೇಳಿರುವ ರೀತಿಗಳಲ್ಲಿ ವಿವಿಧ ಉಪಯೋಗಗಳಿಗೆ ಬಳಸಬಹುದು. ಈ ಲವಂಗ ಕೇವಲ ಆಹಾರ ಪಧಾರ್ಥಗಳಿಗೆ ರುಚಿಯನ್ನು ಮಾತ್ರ ನೀಡುವುದಿಲ್ಲ ನಮ್ಮ ಮನೆಗೆ ಮತ್ತು ನಮ್ಮ ದೇಹಕ್ಕೆ ತುಂಬಾ ಲಾಭಗಳನ್ನೇ ನೀಡುತ್ತದೆ. ಈ ಒಂದು ಚಿಕ್ಕ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.