ಕೀಲು ನೋವಿನಿಂದ ಮುಕ್ತಿ ಪಡೆಯಲು ಮನೆ ಮದ್ದು

ಮನೆ ಮದ್ದು

ಕೀಲು ನೋವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಮಾಡಿ ನೋಡಿ. ವಯಸ್ಸು 30 ದಾಟಿದ ನಂತರ ಪ್ರತಿಯೊಬ್ಬರಿಗೆ ಇರುವ ಸಮಸ್ಯೆ ಎಂದರೆ ಅದು ಕೀಲುನೋವು ಈ ಕೀಲು ನೋವನ್ನು ತಡೆಯಲಾರದೆ ಆಸ್ಪತ್ರೆಯಲ್ಲಿ ಅರ್ಧ ಜೀವನವನ್ನು ಸಾಗಿಸಿದವರು ತುಂಬಾ ಜನ ಇದ್ದಾರೆ. ಇಂತವ ರಿಗಾಗಿಯೇ ಕೀಲು ನೋವನ್ನು ದೂರ ಮಾಡುವುದಕ್ಕಾಗಿ ಮನೆಮದ್ದನ್ನು ಈ ಲೇಖನದಲ್ಲಿ ಈಗ ನಿಮಗೆ ನಾನು ತಿಳಿಸಿ ಕೊಡುತ್ತೇನೆ. ಇದು ತುಂಬಾ ಸುಲಭವಾದ ಒಂದು ಮನೆ ಮದ್ದಾಗಿದೆ ಹಾಗೇನೇ ನಿಮ್ಮ ಕೀಲುನೋವನ್ನು ಹೋಗಲಾಡಿಸುತ್ತದೆ ಜೊತೆಗೆ ನಿಮ್ಮ ಶರೀರಕ್ಕೆ ಇದು ರಾಮಬಾಣ ವಿದ್ದಂತೆ ಇದಕ್ಕೆ ಮೂಲ ಪಧಾರ್ಥ ಎಂದರೆ ಬೆಳ್ಳುಳ್ಳಿ ಆದರೆ ಈ ಕೀಲುನೋವು ಯಾವರೀತಿ ಬರುತ್ತದೆ ಎಂದು ತುಂಬಾ ಜನರಿಗೆ ಗೊತ್ತಿರುವುದಿಲ್ಲ ತುಂಬಾ ಜನರು ಗಣಕಯಂತ್ರದ ಮುಂದೆ ಕುಳಿತು ಕೆಲಸ ಮಾಡುತ್ತಾರೆ

ಹಾಗೇನೇ ತುಂಬಾ ಹೊತ್ತು ಕುಳಿತಲ್ಲೇ ಕುಳಿತು ವಾಹನ ಚಾಲನೆ ಮಾಡುತ್ತಾರೆ ಅಷ್ಟೇ ಅಲ್ಲದೆ ತುಂಬಾ ಸಮಯ ಕುಳಿತು ಪ್ರಯಾಣ ಬೆಳೆಸುತ್ತಾರೆ ಇದರಿಂದ ನಮ್ಮ ಮೊಣಕಾಲಿನ ಮೇಲೆ ತುಂಬಾ ಒತ್ತಡ ಬೀಳುತ್ತದೆ ಇದರಿಂದ ಕೀಲುನೋವು ಬರಲು ಪ್ರಮುಖ ಒಂದು ಕಾರಣವಾಗುತ್ತದೆ. ಮತ್ತೆ ನಮ್ಮ ಶರೀರದಲ್ಲಿ ಮಿನೇರಲ್ಸ್ ಕಡಿಮೆ ಆಗುವುದರಿಂದ ಹಾಗೇನೇ ರಕ್ತ ಕಡಿಮೆ ಆಗುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸಮಸ್ಯೆಗಳನ್ನು ಹೀಗೂ ಸಹ ಹೋಗಲಾಡಿಸಬಹುದು ಅಂದರೆ ಅರಿಷಿಣ ಮತ್ತು ಬೆಳ್ಳುಳ್ಳಿಯ ಸಹಾಯದಿಂದ. ಈ ಎರಡು ಪಧಾರ್ಥಗಳಲ್ಲಿಯೂ ಸಹ ಆಂಟಿಇಂಫ್ಲೋಮೆಟರಿ ಇರುತ್ತದೆ ಇದು ತುಂಬಾ ಸುಲಭವಾಗಿ ಕೀಲುನೋವನ್ನು ಹೋಗಲಾಡಿಸಲು ಸಹಕರಿಸುತ್ತದೆ.

ಹಾಗಾದರೆ ಇದನ್ನು ತಯಾರಿಸುವ ವಿಧಾನ ಹೇಗೆ ಎಂಬುದನ್ನು ಈಗ ತಿಳಿಯೋಣ ಎರಡು ಲೋಟ ನೀರಿಗೆ ಅರ್ಧ ಚಮಚ ಅರಿಷಿಣ ಮತ್ತು ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಅದನ್ನು ಮಿಶ್ರಣ ಮಾಡಿ 8 ರಿಂದ 9 ನಿಮಿಷ ಬಿಸಿಮಾಡಬೇಕು ನಂತರ ಇದಕ್ಕೆ ಜೇನುತುಪ್ಪ ಬೆರಸಬೇಕು ಈ ಜೇನುತುಪ್ಪದಲ್ಲಿ ವಿಟಮಿನ್ ಎ ಕ್ಯಾಲ್ಸಿಯಂ ಪೊಟ್ಯಾಸಿಯಮ್ ನಮ್ಮ ಶರೀರವನ್ನು ಆರೋಗ್ಯವಾಗಿ ಇರಿಸುವುದಕ್ಕೆ ಸಹಕರಿಸುತ್ತದೆ. ಈ ಮಿಶ್ರಣವನ್ನು ದಿನಾ ಬೆಳಿಗ್ಗೆ ಸೇವಿಸುವುದರಿಂದ ನಮ್ಮ ಶರೀರದಲ್ಲಿ ತುಂಬಾ ಬದಲಾವಣೆ ಆಗುತ್ತದೆ. ಇನ್ನು ಎರಡನೆಯ ವಿಧಾನ ಇದಕ್ಕೆ ಬೇಕಾದ ಪಧಾರ್ಥಗಳು ಬೆಳ್ಳುಳ್ಳಿ ಹಾಲು ಮತ್ತು ನೀರು ನೂರು ಮಿಲಿಲೀಟರ್ ನೀರು ನೂರು ಮಿಲಿಲೀಟರ್ ಹಾಲು 10 ಬೆಳ್ಳುಳ್ಳಿ ಬೀಜಗಳನ್ನು ಹಾಕಿ ಬೇಯಿಸಬೇಕು ಹೀಗೆ ಬೇಯಿಸಿದ ನಂತರ

ಹಾಲು ಕುಡಿದು ಬೆಳ್ಳುಳ್ಳಿ ತಿನ್ನುವುದರಿಂದ ಕೀಲುನೋವಿನಿಂದ ಮುಕ್ತಿ ಪಡೆಯಬಹುದು. ತುಂಬಾ ಸುಲಭವಾಗಿ ನೋವನ್ನು ನಾವು ನಿವಾರಿಸಿಕೊಳ್ಳಬಹುದು. ಹಾಗೇನೇ ಬೇಳ್ಳುಳ್ಳಿ ಬೀಜಗಳನ್ನು ಎಣ್ಣೆಯಲ್ಲಿ ಬೇಯಿಸಿ ಕೀಲುನೋವು ಹೆಚ್ಚಾಗಿ ಇರುವ ಜಾಗದಲ್ಲಿ ಹಚ್ಚಿ ನಿಧಾನವಾಗಿ ಉಜ್ಜುವುದರಿಂದ ತುಂಬಾ ಬೇಗ ನೋವು ಕಡಿಮೆ ಆಗುತ್ತದೆ. ಈಗಿನ ಕಾಲದಲ್ಲಿ ಖಾರ ತಿನ್ನುವವರು ಬಹಳ ಕಡಿಮೆ ಜನರಿದ್ದಾರೆ ಈ ಕೀಲುನೋವು ಬರುವುದಕ್ಕೆ ಮೂಲ ಕಾರಣ ಇದೆ ಅಂತ ಹೇಳಬಹುದು. ಎರಡು ಚಮಚ ಕಾರದ ಪುಡಿಯನ್ನು ಎಣ್ಣೆಯಲ್ಲಿ ಹಾಕಿ ಬಿಸಿಮಾಡಿಕೊಂಡು ನೋವಿರುವ ಜಾಗಕ್ಕೆ ಹಚ್ಚಿ 10 ರಿಂದ 20 ನಿಮಿಷ ಇರಿಸಬೇಕು ಆದಾದ ನಂತರ ಕೆಲವೇ ಕ್ಷಣಗಳಲ್ಲಿ ನಿಮ್ಮ ನೋವು ಮಾಯವಾಗುತ್ತದೆ. ಹಾಗೇನೇ ಯಾವುದೇ ಮೂಳೆನೋವು ಕಾಣಿಸಿದರು ಸಹ ಈ ಮನೆಮದ್ದನ್ನು ಬಳಸಿ ಅತಿಬೇಗ ಕೀಲುನೋವನ್ನು ಕಡಿಮೆ ಮಾಡಿಕೊಳ್ಳಬಹುದು.

Leave a Reply

Your email address will not be published.