ಹಲ್ಲು ನೋವು ಬರಬಾರದು ಎಂದರೆ ಹೀಗೆ ಮಾಡಿ

ಮನೆ ಮದ್ದು

ಮನುಷ್ಯನ ಮುಖದ ಸೌಂದರ್ಯಕ್ಕೆ ಮೆರಗು ನೀಡುವುದು ನಮ್ಮ ಹಲ್ಲುಗಳು ಅವುಗಳನ್ನು ನಾವು ಆದಷ್ಟು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಇಲ್ಲದಿದ್ದರೆ ಹಲ್ಲುನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ ಪ್ರತಿಯೊಬ್ಬರು ಸಹ ಈ ಹಲ್ಲುನೋವಿನ ಸಮಸ್ಯೆಯನ್ನು ಅನುಭವಿಸಿರುತ್ತಾರೆ ಉಳಿದೆಲ್ಲ ನೋವುಗಳಿಗಿಂತ ಈ ಹಲ್ಲುನೋವು ವಿಪರೀತ ಹಲ್ಲುನೋವು ಬಂದರೆ ಅದರ ಬಾದೆ ತಡೆಯಲು ಆಗುವುದಿಲ್ಲ ಹಾಗಾದರೆ ಈ ಹಲ್ಲುನೋವು ಏಕೆ ಬರುತ್ತದೆ ಹೇಗೆ ಬರುತ್ತದೆ ಅದರಲ್ಲೂ ನಮ್ಮ ಹಲ್ಲುಗಳ ರಚನೆ ಹೇಗಿದೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಹಲ್ಲಿನ ಒಳಭಾಗ ಮತ್ತು ಹೊರ ಭಾಗ ವಿಭಿನ್ನವಾಗಿ ರೂಪಗೊಂಡಿದೆ ಹಲ್ಲಿನ ಹೊರ ಪದರವನ್ನು ಏನಾಮಲ್ ಎನ್ನುತ್ತಾರೆ ಇದು ನಮ್ಮ ಇಡೀ ದೇಹದಲ್ಲಿಯೇ ಅತ್ಯಂತ ಖಠಿಣವಾದ ವಸ್ತುವಾಗಿದೆ.

ಹಾಗೇನೇ ಒಳ ಪದರವು ಗಡುಸಾದ ಡಂಟೈನ್ ಅಥವಾ ದಂತದ್ರವ್ಯವನ್ನು ಒಳಗೊಂಡಿದೆ ಡಂಟೈನ್ ಒಳಭಾಗದಲ್ಲಿ ನರದ್ರವ್ಯದ ಕುಹರವಿದ್ದು ಅಲ್ಲಿ ನರಗಳು ರಕ್ತನಾಳಗಳು ಕೊನೆಗೊಂಡಿರುತ್ತವೆ ನಮಗೆ ಹಲ್ಲುನೋವು ಬರಲು ಮುಖ್ಯ ಕಾರಣ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಎಲ್ಲರಿಗೂ ಗೊತ್ತಿರುವಂತೆ ನಮ್ಮ ಬಾಯಲ್ಲಿ ಯಾವಾಗಲೂ ಬ್ಯಾಕ್ಟೀರಿಯಾಗಳು ಇರುತ್ತವೆ ಆದರೆ ಸಾಮಾನ್ಯವಾಗಿ ಇವುಗಳಿಗೆ ಹಲ್ಲು ನೋವು ತರುವಂತಹ ಶಕ್ತಿ ಇರುವುದಿಲ್ಲ ನಾವು ಏನನ್ನಾದರೂ ತಿಂದಾಗ ನಾವು ತಿಂದ ಆಹಾರದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಉಪಯೋಗಿಸಿ ಕೊಂಡು ಬ್ಯಾಕ್ಟೀರಿಯಾಗಳು ಆಸಿಡ್ ಉತ್ಪತ್ತಿ ಮಾಡುತ್ತವೆ ಆ ಆಸಿಡ್ ನಮ್ಮ ಹಲ್ಲಿನ ಏನಾಮಲ್ ಅನ್ನು ಕರಗಿಸುತ್ತದೆ ಒಂದು ವೇಳೆ ನಾವು ಆಹಾರ ತಿಂದು ಬಾಯನ್ನು ತೊಳೆಯದೆ ಇದ್ದರೆ ಬಾಯಲ್ಲಿ ಉಳಿದಂತಹ ಆಹಾರದ ಕಣಗಳ ಕಾರಣದಿಂದ ಆ ಬ್ಯಾಕ್ಟೀರಿಯಾಗಳ ಕೆಲಸ ಇನ್ನು ಸುಲಭವಾಗುತ್ತದೆ.

ನಮ್ಮ ಹಲ್ಲಿನಲ್ಲಿರುವ ಏನಾಮಲ್ ನಾಶವಾದರೆ ಹಲ್ಲು ಹುಳುಕಾಗುತ್ತವೆ ಅಥವಾ ಹಲ್ಲು ಹಾಳಾಗುತ್ತವೆ ಏನಾಮಲ್ ನಾಶವಾದರೆ ಬ್ಯಾಕ್ಟೀರಿಯಗಳಿಗೆ ಹಲ್ಲಿನ ಒಳ ಪದರದ ಡೆಂಟೈನ್ ಪ್ರವೇಶ ಸುಲಭವಾಗುತ್ತದೆ ಅವು ಆಗ ಡೆಂಟೈನ್ ಪ್ರವೇಶಿಸಿ ನರದ್ರವ್ಯದ ಕುಹರವನ್ನು ತಲುಪಿ ಅಲ್ಲಿ ದಾಳಿ ಮಾಡುತ್ತವೆ ಆಗ ವಿಪರೀತ ನೋವು ಪ್ರಾರಂಭವಾಗುತ್ತವೆ ಅದೇ ಜಾಗದಲ್ಲಿ ರ ಕ್ತನಾಳಗಳು ಮತ್ತು ನರಗಳು ಕೊನೆಗೊಂಡಿರುವುದರಿಂದ ನೋವು ಇನ್ನು ಹೆಚ್ಚಾಗುತ್ತದೆ ಇದರ ಅರ್ಥ ಇಷ್ಟೇ ನೋಡಿ ನೀವು ಹೆಚ್ಚು ಹಲ್ಲುನೋವು ಬರಬೇಕು ಅಂದರೆ ಆಹಾರ ತಿಂದ ತಕ್ಷಣ ಬಾಯಿ ತೋಳಿಬೇಡಿ ಸಿಹಿ ತಿಂದಾಗಲಂತೂ ತೊಳೆಯೊದೆ ಬಿಟ್ಟುಬಿಡಿ ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವಾಗ ಹಲ್ಲು ನೋವು ಬರಬಾರದು ಅಂದರೆ

ಈಗ ಹೇಳಿದ್ದನೆಲ್ಲ ಮಾಡಬೇಡಿ ಅಂದರೆ ಬೆಳಿಗ್ಗೆ ಮತ್ತು ರಾತ್ರಿ ನಿಯಮಿತವಾಗಿ ಹಲ್ಲುಜ್ಜಿ ಅದರಲ್ಲೂ ಸಿಹಿ ಪಧಾರ್ಥವನ್ನು ಸೇವಿಸಿದ ತಕ್ಷಣ ಬಾಯನ್ನು ತೊಳೆದು ಕೊಂಡು ಹಲ್ಲುಜ್ಜಿ ಆಗ ಹಲ್ಲುನೋವು ಬರುವ ಸಾಧ್ಯತೆ 90ರಷ್ಟು ಕಡಿಮೆ ಆಗುತ್ತದೆ. ಆದ್ದರಿಂದ ನಾವು ನಮ್ಮ ಹಲ್ಲನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಯಾವುದೇ ವಿಧವಾದ ನೋವು ಸಹ ಬರುವುದಿಲ್ಲ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಈ ರೀತಿಯ ಒಂದು ವೈಜ್ಞಾನಿಕ ಉಪಯುಕ್ತ ಮಾಹಿತಿ ಮತ್ತಷ್ಟು ಪಡೆಯಲು ನಮ್ಮೆ ಫೆಸ್ಬುಲ್ ಪೇಜ್ ಲೈಕ್ ಮಾಡುವುದು ಮರೆಯಲೇ ಬೇಡಿ.

Leave a Reply

Your email address will not be published.