ಪನ್ನೀರ್ ತಿಂದು ತೂಕ ಕಡಿಮೆ ಮಾಡಿರಿ

ಮನೆ ಮದ್ದು

ಪನ್ನೀರ್ ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಮೊದಲಿಗೆ ನಾವು ತೂಕವನ್ನು ಇಳಿಸಿ ಕೊಳ್ಳಲು ಪನ್ನೀರ್ ಹೇಗೆ ನೆರವಾಗುತ್ತದೆ ಅದ್ಭುತವಾದ ರುಚಿ ಹೊಂದಿರುವ ಪನ್ನೀರನಲ್ಲಿ ಪ್ರೊಟೀನ್ ಅಂಶ ಅಧಿಕವಾಗಿ ಇರುತ್ತದೆ ಮತ್ತು ಕಾಪ್ಸ್ ಕಡಿಮೆ ಇರುತ್ತದೆ ನಾವು ಸಸ್ಯಾಹಾರಿಗಳು ಆಗಿದ್ದರೆ ದಿನ ನಿತ್ಯದ ನಮ್ಮ ಆಹಾರ ಕ್ರಮದಲ್ಲಿ ಪ್ರೊಟೀನ್ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ನಮ್ಮ ದೇಹಕ್ಕೆ ಸೇವಿಸಬೇಕು ಈಗ ನಾವು ತೂಕ ಕಡಿಮೆ ಮಾಡುವುದಕ್ಕೆ ಪನ್ನೀರ್ ಯಾವ ರೀತಿ ನೆರವಾಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ 100 ಗ್ರಾಮ್ ಪನ್ನೀರನಲ್ಲಿ ಕೇವಲ 1.2 ಗ್ರಾಮ್ ನಷ್ಟು ಕಪ್ಸ್ ಮಾತ್ರ ಇರುತ್ತದೆ ಮತ್ತು 72 ಕ್ಯಾಲೋರಿ ಇರುತ್ತದೆ

ಇದರಿಂದ ತೂಕ ಇಳಿಸಿಕೊಳ್ಳಲು ಇದನ್ನು ನಮ್ಮ ಆಹಾರ ಕ್ರಮಗಳಲ್ಲಿ ಸೇರಿಸಬಹುದು. ಹಾಗೇನೇ ಆರೋಗ್ಯಕರ ಕೊಬ್ಬು ಹೊಂದಿರುವ ಆಹಾರ ಈ ಒಂದು ಪನ್ನೀರ್ ದೇಹದ ತೂಕ ಇಳಿಸಿಕೊಳ್ಳಲು ಆರೋಗ್ಯಕರ ಕೊಬ್ಬು ಅತಿ ಅಗತ್ಯವಾಗಿ ಬೇಕಾಗುತ್ತದೆ ದೇಹದಲ್ಲಿ ಒಳ್ಳೆಯ ಕೊಬ್ಬು ಇದ್ದಾಗ ಮಾತ್ರ ಪನ್ನೀರ್ ಇದನ್ನು ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತದೆ ಇದರಿಂದ ತೂಕ ಇಳಿಯುತ್ತದೆ. ಹೊಟ್ಟೆ ತುಂಬುವಂತೆ ಮಾಡುತ್ತದೆ ಈ ಪನ್ನೀರ್ ಪನ್ನೀರ್ ತಿಂದಾಗ ಧೀರ್ಘಕಾಲದ ವರೆಗೂ ಹೊಟ್ಟೆ ತುಂಬಿದಂತೆ ಅನಿಸುತ್ತದೆ ಇದು ನಮ್ಮ ಹಸಿವಿನ ಬಯಕೆ ಮತ್ತು ಹೊರಗಿನ ತಿಂಡಿಯ ಸೇವನೆಯನ್ನು ಕಡಿಮೆ ಮಾಡುತ್ತದೆ ಇದರಿಂದ ಹೆಚ್ಚು ಪಾಸ್ಟ್ ಫುಡ್ ಸೇವನೆಯಿಂದ ಬರುವಂತಹ ಕೆಲವು ಅನಾರೋಗ್ಯಕರ ಸಮಸ್ಯೆಗಳನ್ನು ನಾವು ದೂರ ಮಾಡಿ ಕೊಳ್ಳಬಹುದು.

ಲಿನೊಲಿಕ್ ಎಂಬ ಆಮ್ಲ್ ಈ ಪನ್ನೀರ್ ನಲ್ಲಿ ಇರುತ್ತದೆ ಲಿನೊಲಿಕ್ ಆಮ್ಲ್ ಅಂದರೆ ಸಿಎಲ್ ಎ ನಮ್ಮ ದೇಹದ ತೂಕವನ್ನು ಕಳೆದುಕೊಳ್ಳಲು ಇರುವ ಸಾಮಾನ್ಯ ಅಂಶವಾಗಿರುತ್ತದೆ. ಇದನ್ನು ನಮ್ಮ ದೇಹವನ್ನು ಗಟ್ಟಿಯಾಗಿಸಲು ಮತ್ತು ನಮ್ಮ ದೇಹದ ತೂಕವನ್ನು ಇಳಿಸಲು ಬಳಸುತ್ತೇವೆ ಹಾಲಿನ ಉತ್ಪನ್ನಗಳಲ್ಲಿ ಈ ಒಂದು ಸಿಎಲ್ ಎ ಅಂಶವು ಅತ್ಯುತ್ತಮವಾಗಿ ಇತುತ್ತದೆ ಆದ್ದರಿಂದ ನಮ್ಮ ದೇಹದ ತೂಕವನ್ನು ಅತಿ ಬೇಗ ಕಡಿಮೆ ಮಾಡಿಕೊಳ್ಳಲು ಇದು ಸಹಕರಿಸುತ್ತದೆ. ಆದ್ರೆ ನಮ್ಮ ದೇಹದ ತೂಕವನ್ನು ಇಳಿಸಿ ಕೊಳ್ಳಲು ಈ ಪನ್ನೀರನ್ನು ಹೇಗೆ ಬಳಸಬೇಕು ಎನ್ನುವುದನ್ನು ಈಗ ನೋಡೋಣ. ಪನ್ನೀರನ್ನು ನಾವು ಕಾಳು ಮೆಣಸಿನ ಪುಡಿ ಮತ್ತು ಕಲ್ಲುಉಪ್ಪು ಹಾಕಿ ತಿಂದರೆ ಅದ್ಭುತ ರುಚಿ ನೀಡುತ್ತದೆ. ಇದನ್ನು ನಾವು ಬೇರೆ ಬೇರೆ ರೀತಿಯಲ್ಲೂ ಸಹ ನಾವು ತಯಾರಿಸಿಕೊಳ್ಳಬಹುದು.

ಆರೋಗ್ಯಕರ ಆಹಾರಕ್ಕಾಗಿ ನಾವು ನಮ್ಮ ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಇದನ್ನು ನಾವು ಬಳಸಿಕೊಳ್ಳಬಹುದು. ಇದು ಎಲ್ಲ ಆಹಾರಗಳಲ್ಲಿಯೂ ಹೊಂದಿಕೊಳ್ಳುತ್ತದೆ ಪನ್ನೀರ್ ಸಾಲೆಡ್ ಮತ್ತು ಗ್ರಿಲ್ ಮಾಡಿದ ಪನ್ನೀರ್ ನ್ನು ನಾವು ಬೀಜಗಳು ಮತ್ತು ಧಾನ್ಯಗಳ ಜೊತೆ ಸೇರಿಸಿ ತಿನ್ನಬಹುದು ಇದರ ರುಚಿ ಚೆನ್ನಾಗಿರುತ್ತದೆ ಇದನ್ನು ತಯಾರಿಸುವಾಗ ಯಾವುದೇ ಎಣ್ಣೆ ಅಥವಾ ಬೆಣ್ಣೆಯನ್ನು ಬಳಸಬಾರದು ತೂಕ ಇಳಿಸಲು ಬಯಸಿದಾಗ ನಾವು ಪನ್ನೀರ್ ತಿಕ್ಕ ಅಥವಾ ಪನ್ನೀರ್ ಬಟರ್ ಮಸಾಲ ಅಂತಹ ಖ್ಯಾಧ್ಯಾಗಳಿಂದ ದೂರವಿರಬೇಕು ಎಣ್ಣೆ ಬೆಣ್ಣೆ ಮತ್ತು ಮಸಾಲಾ ಪಧಾರ್ಥಗಳನ್ನು ಬಳಸದೆ ಈ ಪನ್ನೀರನ್ನು ಬಳಸಿದರೆ ಅತಿ ಬೇಗನೆ ನಾವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ

Leave a Reply

Your email address will not be published.