ಹಿಂದೂ ಪುರಾಣ ಪ್ರಕಾರ ವಿಷ್ಣು ಈ ಸಮಯದಲ್ಲಿ ಕಲ್ಕಿ ಅವತಾರ ಎತ್ತುತ್ತಾರೆ

ದೇವರು

ಕಲಿಯುಗದ ಅಂತ್ಯದಲ್ಲಿ ವಿಷ್ಣು ಕಲ್ಕಿ ಅವತಾರ ಎತ್ತುವುದು ನಿಜಾನಾ ಈಗಾಗಲೇ ಭೂಮಿ ಮೇಲೆ ಕಲ್ಕಿ ಅವತಾರ ಎತ್ತಿ ಆಗಿದೆಯಾ ಈ ಬಗ್ಗೆ ಹಿಂದೂ ಧರ್ಮ ಪುರಾಣ ಏನು ಹೇಳುತ್ತದೆ ಎಲ್ಲವನ್ನೂ ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಸ್ನೇಹಿತರೆ ವಿಷ್ಣು ಪುರಾಣದ ಪ್ರಕಾರ ಕಲ್ಕಿ ಅವತಾರ ವಿಷ್ಣುವಿನ 25 ನೆಯ ಅವತಾರ ಆಗಿದೆ ಅದೇ ಗರುಡ ಪುರಾಣದ ಪ್ರಕಾರ ಕಲ್ಕಿ ಅವತಾರ ವಿಷ್ಣುವಿನ 10 ನೆಯ ಅವತಾರ ಆಗಿದೆ ಕಲಿಯುಗದ ಅಂತ್ಯದಲ್ಲಿ ಅಧರ್ಮ ಮಿತಿ ಮೀರಿದಾಗ ಧರ್ಮ ಸ್ಥಾಪನೆಗಾಗಿ ಕಲ್ಕಿ ಅವತಾರ ಎತ್ತುತ್ತಾರೆ ಎಂದು ಭಾಗವತ್ ಪುರಾಣದಲ್ಲಿ ಕಲ್ಕಿ ಅವತಾರ ಕುರಿತು ಒಂದು ಶ್ಲೋಕವನ್ನು ಹೇಳಲಾಗಿದೆ. ಇದರಲ್ಲಿ ಕಲ್ಕಿ ಹೇಗೆ ಯಾವ ಸಮಯದಲ್ಲಿ ಜನ್ಮ ತಾಳುತ್ತಾರೆ ಎಂದು ಮಾಹಿತಿ ನೀಡಲಾಗಿದೆ.

ಇದರ ಪ್ರಕಾರ ಉತ್ತರ ಪ್ರದೇಶದ ಶಂಬಲ್ ಗ್ರಾಮದಲ್ಲಿ ಕಲಿ ಯುಗದ ಅಂತ್ಯದಲ್ಲಿ ಓರ್ವ ವಿಷ್ಣುವೇಶ್ ಎಂಬ ಬ್ರಾಹ್ಮಣ ಇರುತ್ತಾರೆ ಶ್ರಾವಣ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ ಯಂದು ಅವನು ಮತ್ತು ಅವನ ಪತ್ನಿ ಸುಮತಿಯ ಮಗನಾಗಿ ಜನಿಸುತ್ತಾರೆ ಈ ಅವತಾರ ನಿಷ್ಕಳಂಕ ಅವತಾರ ಎಂದು ಪ್ರಸಿದ್ಧಿ ಆಗಿದ್ದು ಎಲ್ಲಾ 64 ಕಲೆಗಳು ಈ ಅವತಾರದಲ್ಲಿ ಇರಲಿದೆ. ಕಲ್ಲಿಗೆ 3 ಅಣ್ಣಂದಿರು ಇರಲಿದ್ದು ಅವನ ಹೆಸರು ಸುಮನ್ ಕವಿ ಪ್ರಗ್ಯಾನ್ ಎಂದು ಇರಲಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಕಲ್ಕಿ ಗೆ ಪದ್ಮ ಮತ್ತು ರಮಾ ಎಂಬ ಇಬ್ಬರು ಪತ್ನಿಯರು ಇರಲಿದ್ದಾರೆ ಜಯ ವಿಜಯ ಮೇಘ ಮಾಲ ಮತ್ತು ಬಲಾಯಕ್ ಎಂಬ ಹೆಸರಿನ ಮಕ್ಕಳು ಇರುತ್ತಾರೆ ಅಲ್ಲದೆ ದೇವದತ್ತ ಎಂಬ ಹೆಸರಿನ ಬಿಳಿ ಕುದುರೆ ಏರಿ ಭೂಮಿ ಮೇಲಿನ ಪಾಪಿಗಳನ್ನು ನಾಶ ಮಾಡುತ್ತಾರೆ ಈ ಮೂಲಕ ಪುನಃ ಧರ್ಮ ಸ್ಥಾಪನೆ ಮಾಡುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಕಲ್ಕಿ ಪುರಾಣ ಕೇವಲ ಈ ಕಲ್ಕಿ ಅವತಾರದ ಬಗ್ಗೆಯೇ ಮಾಹಿತಿ ನೀಡುತ್ತದೆ ಶ್ರೀ ವಾಯು ಪುರಾಣದಲ್ಲಿ ಕೂಡ ಕಲ್ಕಿ ಅವತಾರದ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಅದೇ ರೀತಿ ಮತ್ಸ್ಯ ಪುರಾಣ ಬ್ರಹ್ಮ ವೈವರ್ಥ ಪುರಾಣ ಭಾಗವತ್ ಪುರಾಣ ಭಾಗವತ್ ಪುರಾಣ ಭವಿಷತ್ ಪುರಾಣ ಸೇರಿದಂತೆ ಹಲವು ಪುರಾಣಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ.ಹಿಂದೂ ಪುರಾಣದಲ್ಲಿ ಕಲ್ಕಿ ಅವತಾರದ ಬಗ್ಗೆ ಹೇಳುವ ವಿಚಾರಗಳನ್ನು ವಿಜ್ಞಾನಿಗಳು ಒಪ್ಪುವುದಿಲ್ಲ ಏಕೆಂದರೆ ಪುರಾಣದಲ್ಲಿ ವಿವರಿಸುವ ಕಲ್ಕಿಯ ಬಗೆಗಿನ ವಿವರಗಳನ್ನು ನಂಬಲು ವಿಜ್ಞಾನಿಗಳು ರೆಡಿ ಇಲ್ಲ ಏಕೆಂದರೆ ಕಲ್ಕಿ ಅವತಾರದಲ್ಲಿ ವಿಜ್ಞಾನದಲ್ಲಿ ಎರಡೆರಡು ಮಾಹಿತಿಗಳು ಇವೆ. ಬಹುತೇಕ ಪುರಾಣದಲ್ಲಿ ವಿಷ್ಣು ಕಲ್ಕಿ ಅವತಾರ ಎತ್ತುತ್ತಾರೆ ಎಂದು ಹೇಳಲಾಗಿದೆ. ಕಲ್ಕಿ ಪುರಾಣದಲ್ಲಿ ಕಲ್ಕಿ ಈಗಾಗಲೇ ಕಲ್ಕಿ ಅವತಾರ ಎತ್ತಿ ಆಗಿದೆ ಎಂದು ಹೇಳಲಾಗಿದೆ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿರಿ.

Leave a Reply

Your email address will not be published.